ಮುಂಬೈ ಇಂಡಿಯನ್ಸ್‌ ವಿರುದ್ಧ ಎಂಎಸ್‌ ಧೋನಿ ಆಡಿದ ಇನ್ನಿಂಗ್ಸ್‌ಗೆ ಸೋಶಿಯಲ್‌ ಮೀಡಿಯಾ ಫಿದಾ ಆಗಿದೆ. ಇದಕ್ಕೆ ಮಹೀಂದ್ರಾ & ಮಹೀಂದ್ರಾ ಗ್ರೂಪ್‌ ಚೇರ್ಮನ್‌ ಆನಂದ್‌ ಮಹೀಂದ್ರಾ ಕೂಡ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಮುಂಬೈ (ಏ.14): ಮುಂಬೈ ಇಂಡಿಯನ್ಸ್ ವಿರುದ್ಧ ಭಾನುವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ದರ್ಶನವಾಗಿದ್ದು ವಿಂಟೇಜ್‌ ಎಂಎಸ್‌ ಧೋನಿ ಬ್ಯಾಟಿಂಗ್‌. ಎಂಎಸ್‌ ಧೋನಿ ವೃತ್ತಿಬದುಕಿನ ಆರಂಭದಲ್ಲಿ ಆಡುತ್ತಿದ್ದ ರೀತಿಯಲ್ಲೇ ಈ ಬಾರಿ ಬ್ಯಾಟಿಂಗ್‌ ಮಾಡಿದರು. ಕೊನೇ ಓವರ್‌ನಲ್ಲಿ ಡೇರಿಲ್‌ ಮಿಚೆಲ್‌ ಔಟಾದ ಬಳಿಕ ಕ್ರೀಸ್‌ಗೆ ಇಳಿದಿದ್ದ ಎಂಎಸ್ ಧೋನಿ ಎದುರಿಸಿದ ಸತತ ಮೂರು ಎಸೆತಗಳಲ್ಲ ಮೂರು ಸಿಕ್ಸರ್‌ ಹಾಗೂ ಕೊನೇ ಎಸೆತದಲ್ಲಿ 2 ರನ್‌ ಸಿಡಿಸುವ ಮೂಲಕ 4 ಎಸೆತಗಳಲ್ಲಿ ಅಜೇಯ 20 ರನ್‌ ಸಿಡಿಸಿದರು. ಇದರ ಬೆನ್ನಲ್ಲಿಯೇ ಸೋಶಿಯಲ್‌ ಮೀಡಿಯಾದಲ್ಲಿ ಧೋನಿ ಕುರಿತಾಗಿ ಬಹುಪರಾಕ್‌ ಆರಂಭವಾಗಿದೆ. ಇದರಲ್ಲಿ ಪ್ರಮುಖವಾಗಿ ಮಹೀಂದ್ರಾ & ಮಹೀಂದ್ರಾ ಗ್ರೂಪ್‌ನ ಚೇರ್ಮನ್‌ ಆನಂದ್‌ ಮಹೀಂದ್ರಾ ಅವರ ಟ್ವೀಟ್‌ ಗಮನಸೆಳೆದಿದೆ. ತಮ್ಮ ಹೆಸರಿನಲ್ಲಿ Mahi-ndra ಎಂದು ಇರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.

'ಅವಾಸ್ತವಿಕ ನಿರೀಕ್ಷೆಗಳು ಮತ್ತು ಒತ್ತಡದ ಮೇಲೆ ಈ ವ್ಯಕ್ತಿಗಿಂತ ಹೆಚ್ಚು ಎಂಟರ್‌ಟೇನ್‌ ಮಾಡುವ ಒಬ್ಬ ಕ್ರೀಡಾಪಟುವನ್ನು ನನಗೆ ತೋರಿಸಿ. ಇದು ಅವರಲ್ಲಿರುವ ಬೆಂಕಿಗೆ ಇಂಧನವನ್ನು ಬೆರೆಸುವಂತೆ ನನಗೆ ತೋರುತ್ತಿದೆ. ಇಂದು, ನನ್ನ ಹೆಸರು Mahi-ndra ಎಂದು ಇರಲು ನಾನು ಕೃತಜ್ಞನಾಗಿದ್ದೇನೆ' ಎಂದು ಆನಂದ್‌ ಮಹೀಂದ್ರಾ ಬರೆದಿದ್ದಾರೆ.

ಇನ್ನು ಆನಂದ್‌ ಮಹೀಂದ್ರಾ ಅವರ ಟ್ವೀಟ್‌ಗೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 'ಸರ್ ನೀವು ಅವರನ್ನು ನಿಮ್ಮ ಕಂಪನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಮಾಡಬೇಕು. ಹೇಗಿದ್ದರೂ ಅವರ ಹೆಸರಿನಲ್ಲಿಯೇ ಮಹೀ ಇದೆ. ಅವರು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನೋಡಿ' ಎಂದು ಒಬ್ಬರು ಪೋಸ್ಟ್‌ ಮಾಡಿದ್ದಾರೆ. 'ಧೋನಿ ತನ್ನ ಕರ್ತವ್ಯವನ್ನು ‘ನಿಷ್ಕಾಮ ಕರ್ಮ’ ಎಂದು ನೋಡುವ ಅತಿಮಾನುಷ ಸಾಮರ್ಥ್ಯವನ್ನು ಹೊಂದಿದ್ದಾರೆ. ಆ ಸಮಚಿತ್ತವು ಬಹಳ ಅಪರೂಪ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಇವರು ಲಜೆಂಡ್‌ ಥಲಾ ಆಗಿರೋದಕ್ಕೆ ಇದೇ ರೀಸನ್‌ ಎಂದು ಇನ್ನೊಬ್ಬರು ಬರೆದಿದ್ದಾರೆ. ಮಹೀ ಅನ್ನೋದು ಗ್ರೇಟೆಸ್ಟ್‌ ಹೆಸರು. ಕ್ಯಾಪ್ಟನ್‌ ಕೂಲ್‌ ಎಂದು ಮತ್ತೊಬ್ಬರು ಪೋಸ್ಟ್‌ ಮಾಡಿದ್ದಾರೆ. ವಾಂಖಡೆ ಹಾಗೂ ಮಹೀ ನಡುವೆ ಇಂಥ ರಿಲೇಷನ್‌ಷಿಪ್‌ಅನ್ನು ನಾವು ಹಿಂದೆಯೇ ನೋಡಿದ್ದೇವಲ್ವ ಎನ್ನುವ ಮೂಲಕ 2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಧೋನಿಯ ಫಿನಿಶಿಂಗ್‌ಅನ್ನು ಅಭಿಮಾನಿಗಳು ನೆನಪು ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ ಕಂಡ ಗ್ರೇಟೆಸ್ಟ್‌ ಫಿನಿಶರ್‌ ಎಂಎಸ್‌ ಧೋನಿ. ಅವರು ಇದೇ ಸ್ಥಾನದಲ್ಲಿಯೇ ಮುಂದುವರೀತಾರೆ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.

ಯೂಟ್ಯೂಬರ್ ಆಗಿ ಮನೆ ಖರೀದಿಸಿದ ಟ್ರಕ್ ಡ್ರೈವರ್; ಇದಕ್ಕಿಂತ ಸ್ಪೂರ್ತಿ ಇನ್ನೇನು ಅಂದ್ರು ಆನಂದ್ ಮಹೀಂದ್ರ

ಎಂಎಸ್‌ ಧೋನಿ ಅವರ ಹ್ಯಾಟ್ರಿಕ್‌ ಸಿಕ್ಸರ್‌ನ ವಿಡಿಯೋವನ್ನು ಐಪಿಎಲ್‌ನ ಎಕ್ಸ್‌ ಪೇಜ್‌ನಲ್ಲೂ ಹಾಕಲಾಗಿದ್ದು, ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ಇಲ್ಲಿಯವರೆಗೂ 3.20 ಲಕ್ಷ ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. 20 ಸಾವಿರ ಮಂದಿ ಲೈಕ್‌ ಮಾಡಿದ್ದರೆ 6 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್‌ ಮಾದಿದ್ದಾರೆ.

ಸರ್ಫ್ರಾಜ್‌ ಖಾನ್‌ ತಂದೆಗೆ ಥಾರ್‌ ಕಾರ್‌ ಉಡುಗೊರೆ ನೀಡಿದ ಆನಂದ್‌ ಮಹೀಂದ್ರಾ

Scroll to load tweet…