ಗೋವಾ ಪ್ರಿಯರಿಗೆ ಬ್ಯಾಡ್‌ ನ್ಯೂಸ್‌: ಮಸಾಜ್‌ ಪಾರ್ಲರ್‌ಗಳಿಗೆ ಗೋ ಗೋ ಎಂದ ಗೋವಾ

ಗೋವಾ: ಪ್ರವಾಸೋದ್ಯಮ ಹಾಗೂ ಮಸಾಜ್ ಪಾರ್ಲರ್‌ಗಳಿಂದಲೇ ಜನಪ್ರಿಯವಾಗಿರುವ ಪುಟ್ಟ ಕರಾವಳಿ ರಾಜ್ಯದಲ್ಲಿ ಇಂದಿನಿಂದ  (ಜೂನ್ 6) ಎಲ್ಲಾ ಮಸಾಜ್‌ ಪಾರ್ಲರ್‌ಗಳನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪ್ರಮೋದ್ ಸಾವಂತ್ (Pramod Sawant) ಹೇಳಿದ್ದಾರೆ.

All massage parlours will be shut down in Goa from June 6 goa cm akb

ಗೋವಾ: ಪ್ರವಾಸೋದ್ಯಮ ಹಾಗೂ ಮಸಾಜ್ ಪಾರ್ಲರ್‌ಗಳಿಂದಲೇ ಜನಪ್ರಿಯವಾಗಿರುವ ಪುಟ್ಟ ಕರಾವಳಿ ರಾಜ್ಯದಲ್ಲಿ ಇಂದಿನಿಂದ  (ಜೂನ್ 6) ಎಲ್ಲಾ ಮಸಾಜ್‌ ಪಾರ್ಲರ್‌ಗಳನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ (Chief Minister) ಪ್ರಮೋದ್ ಸಾವಂತ್ (Pramod Sawant) ಹೇಳಿದ್ದಾರೆ. ರಾಜ್ಯದಲ್ಲಿ ಕ್ರಾಸ್ ಮಸಾಜ್‌ಗಳನ್ನು ಸಹ ಅನುಮತಿಸಲಾಗುವುದಿಲ್ಲ ಎಂದು ಹೇಳಿದರು. ಸಿಎಂ ಹೇಳಿದ್ದಾರೆ. (ಕ್ರಾಸ್‌ ಮಸಾಜ್ ಎಂದರೆ ಮಹಿಳೆಯರು ಪುರುಷರಿಗೆ ಮಾಡುವ ಮಸಾಜ್‌)

ಉತ್ತರ ಗೋವಾದ ಮಾಪುಸಾ ಪಟ್ಟಣದಲ್ಲಿ (Mapusa town) ಮಹಾರಾಷ್ಟ್ರದ (Maharashtra) 11 ಪ್ರವಾಸಿಗರನ್ನು ಮಸಾಜ್ ಪಾರ್ಲರ್ (massage parlour) ನಿರ್ವಾಹಕರು ಅಮಾನುಷವಾಗಿ ಥಳಿಸಿದ ಕೆಲ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಹೀಗಾಗಿ ನೋಂದಾಯಿತ ಆಯುರ್ವೇದಿಕ್ ಸ್ಪಾಗಳೊಂದಿಗೆ ರಾಜ್ಯದಲ್ಲಿ ಸ್ಪಾಗಳು ಮತ್ತು ಬ್ಯೂಟಿ ಪಾರ್ಲರ್‌ಗಳು ಮಾತ್ರ ಕಾರ್ಯನಿರ್ವಹಿಸಲು ಪರವಾನಗಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್ ಹೇಳಿದ್ದಾರೆ. ಗೋವಾದಲ್ಲಿ ಮಸಾಜ್ ಪಾರ್ಲರ್‌ಗಳು ಆರೋಗ್ಯ ಸೇವೆಗಳ ಸೋಗಿನಲ್ಲಿ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಿಎಂ ಹೇಳಿದರು.

ಬಲವಂತ ಮತಾಂತರ: ಗೋವಾದಲ್ಲಿ ಧರ್ಮ ಪ್ರಚಾರಕ ದಂಪತಿ ಬಂಧನ

ನಾಳೆಯಿಂದ ಎಲ್ಲಾ ಅಕ್ರಮ ಮಸಾಜ್ ಪಾರ್ಲರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆಲವು ಮಸಾಜ್ ಪಾರ್ಲರ್‌ಗಳು ಯಾವುದೇ  ವರ್ಗದ ಅಡಿಯಲ್ಲೂ ಪರವಾನಗಿ ಪಡೆದಿಲ್ಲ.  ಸ್ಪಾಗಳನ್ನು ನೋಂದಾಯಿಸಿದ್ದರೂ, ಯಾವುದೇ ಅಕ್ರಮ ಮಸಾಜ್ ಪಾರ್ಲರ್‌ಗಳಿದ್ದರೆ  ಅವುಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ, ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಕೇವಲ ಬ್ಯೂಟಿ ಪಾರ್ಲರ್, ಸ್ಪಾಗಳನ್ನು ಅವರು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದರೆ ಮತ್ತು ಯಾವುದೇ ಕ್ರಾಸ್ ಮಸಾಜ್‌ಗಳಿಲ್ಲದಿದ್ದರೆ  ಅಂತಹ ಪಾರ್ಲರ್‌ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಆಯುರ್ವೇದ ಸ್ಪಾಗಳನ್ನು ಅಧಿಕೃತವಾಗಿ ನೋಂದಾಯಿಸಿಕೊಳ್ಳಬೇಕು ಮತ್ತು ನೋಂದಾಯಿತ ವೈದ್ಯರು ಅವುಗಳನ್ನು ಅನುಮತಿಸಬೇಕು ಎಂದು ಅವರು ಹೇಳಿದರು. ಅಕ್ರಮವಾಗಿ ಮಸಾಜ್ ಪಾರ್ಲರ್‌ಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಆ ಪ್ರದೇಶದ ಪೊಲೀಸ್ ಠಾಣೆ ವ್ಯಾಪ್ತಿಯ ಠಾಣೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

Goa Trip ಹೊರಟಿದ್ದರೆ ಈ Tips ಮರೀಬೇಡಿ

ಒಂದು ವೇಳೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಮಸಾಜ್‌ ಪಾರ್ಲರ್‌ಗಳು ಕಂಡು ಬಂದಲ್ಲಿ ಆಯಾ ಪೊಲೀಸ್‌ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ (ಠಾಣೆಯ ಉಸ್ತುವಾರಿ) ಜವಾಬ್ದಾರರಾಗಿರುತ್ತಾರೆ. ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಎಲ್ಲ ಅಕ್ರಮಗಳನ್ನು ತಡೆಯಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ಗೋವಾವನ್ನು ಸುರಕ್ಷಿತ ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರವಾಸಿಗರು ಪಾವತಿ ಮಾಡಿ ಸೆಕ್ಸ್‌ಗೆ ಮನವಿ ಮಾಡುತ್ತಿರುವ ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಸಾವಂತ್, ರಾಜ್ಯದಲ್ಲಿ ವೇಶ್ಯಾವಾಟಿಕೆ (prostitution) ಚಟುವಟಿಕೆಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದರು. ಈ ಬಗ್ಗೆ ಪೊಲೀಸರು ನಿಗಾ ವಹಿಸುತ್ತಿದ್ದಾರೆ ಮತ್ತು ಸಕ್ರಿಯವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮುಂದಿನ ಪ್ರವಾಸೋದ್ಯಮ ಋತುವಿನಲ್ಲಿ ಪೊಲೀಸರು ನಾಗರಿಕ ಉಡುಪುಗಳಲ್ಲಿ ಇಂತಹ ಚಟುವಟಿಕೆಗಳ ಮೇಲೆ ಕಣ್ಣಿಡುತ್ತಾರೆ ಎಂದು ಸಾವಂತ್ ಹೇಳಿದರು.
 

Latest Videos
Follow Us:
Download App:
  • android
  • ios