ದೆಹಲಿ ಮೆಟ್ರೋದಲ್ಲಿ ಅಷ್ಟೇ ಅಲ್ಲ ಕ್ಯಾಬ್‌ನಲ್ಲೂ ಇನ್ಮುಂದೆ ರೊಮ್ಯಾನ್ಸ್ ಮಾಡಂಗಿಲ್ಲ!
ಮೆಟ್ರೋದಲ್ಲಿ ಅಹಿತಕರ ಘಟನೆಗಳು ಆಗಿಂದಾಗೆ ನಡೆಯುತ್ತಲೇ ಇರುತ್ತವೆ. ಹೀಗಾಗಿ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮ ಇತ್ತೀಚಗೆ ಹೇಳಿಕೆ ನೀಡಿದೆ. ಇದ್ರ ಬೆನ್ನಲ್ಲೇ ಉಬರ್ ಚಾಲಕರೊಬ್ಬರು ತಮ್ಮ ಕ್ಯಾಬ್‌ನಲ್ಲಿ ರೊಮ್ಯಾನ್ಸ್‌ಗೆ ಅವಕಾಶವಿಲ್ಲ ಎಂದು ಬೋರ್ಡ್ ಲಗತ್ತಿಸಿದ್ದಾರೆ.
ದೆಹಲಿ ಮೆಟ್ರೋ ಇತ್ತೀಚಿಗೆ ವಿಚಿತ್ರ ಘಟನೆಗಳಿಂದಾನೇ ಹೆಚ್ಚು ಸುದ್ದಿಯಾಗ್ತಿದೆ. ಹುಡುಗರು ಸ್ಕರ್ಟ್ ತೊಟ್ಟು ಮೆಟ್ರೋದಲ್ಲಿ ಪ್ರಯಾಣಿಸಿರೋದು, ವ್ಯಕ್ತಿ ಹಸ್ತಮೈಥುನ ಮಾಡಿಕೊಂಡ ವೀಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಅದೇ ರೀತಿ ಕಪಲ್ಸ್ ಸಾರ್ವಜನಿಕವಾಗಿ ಚುಂಬಿಸುವ ಮತ್ತು ಪ್ರೀತಿಯನ್ನು ಪ್ರದರ್ಶಿಸುವ ಹಲವಾರು ವೀಡಿಯೊಗಳು ವೈರಲ್ ಆಗಿವೆ. ಹೀಗಾಗಿ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸುವಂತೆ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಇತ್ತೀಚಗೆ ಹೇಳಿಕೆ ನೀಡಿದೆ. ಆದರೂ, ಯುವಕರು ರೀಲ್ಸ್‌ಗಳು ಮತ್ತು ಡ್ಯಾನ್ಸ್ ವೀಡಿಯೊಗಳನ್ನು ಮಾಡುವುದನ್ನು ಮುಂದುವರೆಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚುಂಬನದ ವೀಡಿಯೊಗಳು ವೈರಲ್ ಆಗುತ್ತಿವೆ.
ಈ ಮಧ್ಯೆ ದೆಹಲಿ ಮೂಲದ ಉಬರ್ ಚಾಲಕರೊಬ್ಬರು (Uber driver) ತಮ್ಮ ಕ್ಯಾಬ್‌ನಲ್ಲಿ ರೊಮ್ಯಾನ್ಸ್ ಗೆ ಅವಕಾಶವಿಲ್ಲ ಎಂದು ಬೋರ್ಡ್ ಲಗತ್ತಿಸಿದ್ದಾರೆ. ಅನುಚಿತ ವರ್ತನೆಯ ಕುರಿತು ಕ್ಯಾಬ್ ಚಾಲಕನ ಕಟ್ಟುನಿಟ್ಟಿನ ನಿಯಮದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಪ್ರಯಾಣಿಕನೊಬ್ಬ ಕ್ಯಾಬ್‌ನಲ್ಲಿ ಸವಾರಿ ಮಾಡುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.
ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಬಂದು ಎಲ್ಲರೂ ಕತ್ತು ಕೊಂಕಿಸಿ ನೋಡುವಂತೆ ಮಾಡಿದ ಹುಡುಗರು
ಉಬರ್ ಕ್ಯಾಬ್‌ನಲ್ಲಿ ನೋ ರೊಮ್ಯಾನ್ಸ್ ಬೋರ್ಡ್
'ಈ ಕ್ಯಾಬ್‌ನಲ್ಲಿ ರೊಮ್ಯಾನ್ಸ್ ಗೆ ಅವಕಾಶವಿಲ್ಲ' ಎಂದು ಬರೆದಿರುವ ಬೋರ್ಡ್ ನೋಡಿದ ಪ್ರಯಾಣಿಕರು 'ಅಚ್ಚಾ ಹುವಾ ಮೇ ಅಪ್ನಿ ಗರ್ಲ್‌ಫ್ರೆಂಡ್ ಕೆ ಸಾಥ್ ನಹಿಂ ಆಯಾ (ನನ್ನ ಗೆಳತಿಯನ್ನು ನನ್ನೊಂದಿಗೆ ಕರೆತರದಿದ್ದು ಒಳ್ಳೆದಾಯ್ತು) ಎಂದು ಹೇಳುತ್ತಾನೆ. ಕೂಡಲೇ ಉಬರ್ ಡ್ರೈವರ್ ಹಿಂದೆ ತಿರುಗಿ 'ಸರ್, ಆಪ್ಕಿ ಭಿ ಗರ್ಲ್ ಫ್ರೆಂಡ್ ಹೈ? (ಸರ್ ನಿಮಗೂ ಗರ್ಲ್‌ಫ್ರೆಂಡ್ ಇದ್ದಾಳಾ) ಎಂದು ಪ್ರಶ್ನಿಸುತ್ತಾನೆ. ಆನ್‌ಲೈನ್‌ನಲ್ಲಿ ಶೇರ್ ಮಾಡಿದಾಗಿನಿಂದ ಈ ವೀಡಿಯೋ ಸಾಕಷ್ಟು ವೈರಲ್ ಆಗ್ತಿದೆ. ವೀಡಿಯೋ ಇಲ್ಲಿಯವರೆಗೆ 203K ಲೈಕ್ಸ್‌ಗಳನ್ನು ಗಳಿಸಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಸಹ ಮಾಡಿದ್ದಾರೆ.
ಒಬ್ಬ ವ್ಯಕ್ತಿ 'ಉಬರ್‌ನಲ್ಲಿ ಈ ರೀತಿ ಹಾಕಿರುವುದು ಬೇಸರ ತರಿಸುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ 'ನೀವು ಸಿಂಗಲ್ ಆಗಿದ್ದಾಗ ಇಂಥಾ ಪೋಸ್ಟರ್‌ಗಳಿಂದ ನಿಮಗೇನು ತೊಂದರೆಯಾಗುವುದಿಲ್ಲ' ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಹೀಗೆಲ್ಲಾ ಮಾಡುವುದರಿಂದ ಜನರ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ' ಎಂದು ತಿಳಿಸಿದ್ದಾರೆ.
ದೆಹಲಿ ಮೆಟ್ರೋದಲ್ಲೇ ಹಸ್ತ ಮೈಥುನ ಮಾಡ್ಕೊಂಡ ವ್ಯಕ್ತಿ ವಿರುದ್ಧ ದೂರು ದಾಖಲು
ದೆಹಲಿ ಮೆಟ್ರೋದಲ್ಲಿ ಜೋಡಿಯ ಲಿಪ್‌ಲಾಕ್, ಪೋರ್ನ್‌ಹಬ್ ಮಾಡ್ಬಿಡಿ ಎಂದು ಕಿಡಿಕಾರಿದ ನೆಟ್ಟಿಗರು
ಜನನಿಬಿಡ ದೆಹಲಿಯ ಮೆಟ್ರೋ ಕೋಚ್‌ನಲ್ಲಿ ಜೋಡಿ ಲಿಪ್‌ಲಾಕ್ (Couple liplock) ಮಾಡುವ ವೀಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮೆಟ್ರೋ ರೈಲಿನಲ್ಲಿ ಸಾರ್ವಜನಿಕವಾಗಿ ಕಿಸ್ ಮಾಡುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ದೆಹಲಿ ಮೆಟ್ರೋವು ಪ್ರಯಾಣದ (Travel) ಹೊರತಾಗಿ ಇತರ ಚಟುವಟಿಕೆಗಳ ತಾಣವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದರು.
ವೈರಲ್ ಆಗಿರುವ ವೀಡಿಯೋದಲ್ಲಿ ಹುಡುಗ, ತನ್ನ ಮಡಿಲಲ್ಲಿ ತಲೆಯಿಟ್ಟು ಮಲಗಿರುವ ಹುಡುಗಿಗೆ ಕಿಸ್ ಮಾಡುವ ದೃಶ್ಯ ಕಾಣಿಸುತ್ತದೆ. ಮೆಟ್ರೋ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಇದೆಲ್ಲದರ ಮಧ್ಯೆಯೂ ಜೋಡಿ ಮೈ ಮರೆತು ಲಿಪ್‌ಲಾಕ್ ಮಾಡಿದ್ದಾರೆ. ಈ ವೀಡಿಯೋ ನೋಡಿ ನೆಟಿಜನ್‌ಗಳು ತಮ್ಮ ಆಕ್ರೋಶವನ್ನು (Angry) ವ್ಯಕ್ತಪಡಿಸಿದ್ದರು..
ಒಬ್ಬರು, 'ನೀವು ದೆಹಲಿ ಮೆಟ್ರೋದ ಹೆಸರನ್ನು P0rnHub ಎಂದು ಏಕೆ ಬದಲಾಯಿಸಬಾರದು' ಎಂದು ವ್ಯಂಗ್ಯವಾಡಿದ್ದರು. ಮತ್ತೊಬ್ಬರು. 'OMG WHAT' ಇದು ಅಚ್ಚರಿ ವ್ಯಕ್ತಪಡಿಸಿದ್ದರು. ಮತ್ತೊಬ್ಬ ವ್ಯಕ್ತಿ, 'ಸಾರ್ವಜನಿಕರು (Public) ಸಂಚರಿಸುವ ಮೆಟ್ರೋದಲ್ಲಿ ಈ ರೀತಿಯ ಘಟನೆ ನಡೆದರೂ ಜನರು ಯಾಕೆ ಮೌನವಾಗಿದ್ದಾರೆ. ಅವರ ವಿರುದ್ಧ ಒಂದು ಮಾತನ್ನೂ ಹೇಳುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ. ಮೂರನೇ ಬಳಕೆದಾರರು, 'ಇದು ನಿಜವಾದ ಪ್ರೀತಿಯೇ ಅಥವಾ ವೈರಲ್ ಆಗಲು ಮಾಡುತ್ತಿರುವ ಉಪಾಯವೇ' ಎಂದಿದ್ದಾರೆ.