20 ಕೋಟಿ ಬಂಗಲೆ ಕೊಳ್ಳಲು ಯೂರೂ ಇಲ್ಲ, 60 ವರ್ಷದಿಂದ ಖಾಲಿ ಇರೋ ಇಲ್ಲಿ ದೆವ್ವದ ಕಾಟವೇ?
ಜಗತ್ತಿನಲ್ಲಿ ಆಸಕ್ತಿಕರ ಸಂಗತಿಗಳು ಸಾಕಷ್ಟಿದೆ. ಕೆಲವೊಂದು ಅಚ್ಚರಿ ಹುಟ್ಟಿಸುತ್ತವೆ. ಕಡಿಮೆ ಬೆಲೆಗೆ ಮನೆ ಇದ್ರೂ ಖರೀದಿ ಮಾಡಿ ವಾಸ ಮಾಡೋ ಜನರಿಲ್ಲದೆ ಖಾಲಿ ಇರುವ ಮನೆಗಳೂ ನಮ್ಮಲ್ಲಿ ಸಾಕಷ್ಟಿದೆ.
ಕಡಿಮೆ ಬೆಲೆಗೆ ಮನೆ ಸಿಗುತ್ತೆ ಅಂದ್ರೆ ಯಾರು ಬೇಡ ಅಂತಾರೆ ಹೇಳಿ? ಈಗಿನ ಕಾಲದಲ್ಲಿ ಸ್ವಂತ ಮನೆ ಖರೀದಿ,ಸುವ ಪ್ಲಾನ್ ಪ್ರತಿಯೊಬ್ಬರಿಗೂ ಇದೆ. ಕೋಟ್ಯಾಂತರ ರೂಪಾಯಿ ಹಣ ನೀಡಿ ಮನೆ ಖರೀದಿ ಮಾಡುವವರ ಸಂಖ್ಯೆ ಕೂಡ ದೊಡ್ಡ ಮಟ್ಟದಲ್ಲಿಯೇ ಇದೆ. ಬಂಗಲೆಯಂತಹ ಮನೆ ನಿಮಗೆ ಕಡಿಮೆ ಬೆಲೆಗೆ ಸಿಗುತ್ತೆ ಅಂದ್ರೆ ಜನರು ಕ್ಯೂನಲ್ಲಿ ನಿಲ್ಲುತ್ತಾರೆ. ಆದ್ರೆ ಬಂಗಲೆಯೊಂದು ಅರವತ್ತು ವರ್ಷಗಳಿಂದ ಖಾಲಿ ಇದೆ. 20 ಕೋಟಿ ರೂಪಾಯಿ ಮೌಲ್ಯದ ಈ ಮಹಲನ್ನು ಖರೀದಿ ಮಾಡೋರೇ ಇಲ್ಲ. ಹಲವು ಬಾರಿ ಈ ಮಹಲನ್ನು ಮಾರಾಟಕ್ಕೆ ಇಡಲಾಗಿದೆ. ಇದ್ರ ಬೆಲೆಯನ್ನು ನಿರಂತರವಾಗಿ ಕಡಿಮೆ ಕೂಡ ಮಾಡಲಾಗ್ತಿದೆ. ಆದ್ರೂ ಜನರು ಈ ಬಂಗಲೆ ಖರೀದಿ ಮಾಡೋಕೆ ಮುಂದೆ ಬರ್ತಿಲ್ಲ. ಕೆಲವರು ಬಂಗಲೆ ಖರೀದಿ ಏನೂ ಮಾಡ್ತಾರೆ, ಆದ್ರೆ ಅದರಲ್ಲಿ ನಾಲ್ಕೈದು ತಿಂಗಳು ಕೂಡ ವಾಸಿಸೋದಿಲ್ಲ. ಮತ್ತೆ ಈ ಬಂಗಲೆ ಮಾರಾಟಕ್ಕೆ ಬಂದಿರುತ್ತದೆ. ಅಷ್ಟಕ್ಕೂ ಆ ಬಂಗಲೆ ಯಾವುದು? ಅದು ಮಾರಾಟವಾಗದಿರಲು ಕಾರಣ ಏನು ಎಂಬುದನ್ನು ಹೇಳ್ತೇವೆ.
ಈ ಬಂಗಲೆ (Bungalow) ಕ್ಯಾಲಿಫೋರ್ನಿಯಾದಲ್ಲಿದೆ. ಐಷಾರಾಮಿ ಮಹಲನ್ನು ಲಾಸ್ ಏಂಜಲೀಸ್ (Los Angeles) ಬೆಟ್ಟದ ಮೇಲೆ ಕಟ್ಟಲಾಗಿದೆ. ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಮನೆ ಇದು. ಇದ್ರಲ್ಲಿ ಒಂಭತ್ತು ಬೆಡ್ ರೂಮಿದೆ. ಮಾರುಕಟ್ಟೆಯಲ್ಲಿ ಈ ಮಹಲಿನ ಬೆಲೆ ಐವತ್ತು ಕೋಟಿಗಿಂತ ಹೆಚ್ಚಿದೆ. 5000 ಚದರ ಅಡಿ ವಿಸ್ತಾರದಲ್ಲಿ ಇದನ್ನು ನಿರ್ಮಿಸಲಾಗಿದೆ. 60 ವರ್ಷಗಳಿಂದ ಈ ಬಂಗಲೆ ಖರೀದಿ, ಮಾರಾಟ ನಡೆಯುತ್ತಲೇ ಇದೆ. ಈ ಬಂಗಲೆ ಮಾರುಕಟ್ಟೆ ಬೆಲೆ ಐವತ್ತು ಕೋಟಿಯಾದ್ರೂ ಅದನ್ನು ಇಪ್ಪತ್ತು ಕೋಟಿಗೆ ಇಳಿಸಲಾಗಿದೆ. ಆದ್ರೆ ಬೆಲೆ ಇಷ್ಟು ಇಳಿಕೆ ಮಾಡಿದ್ರೂ ಜನರು ಅದನ್ನು ಖರೀದಿ ಮಾಡಿ, ಆ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸೋದಿಲ್ಲ. ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಅದನ್ನು ಜನರು ಮಾರಾಟ ಮಾಡಲು ಒಂದು ಕಾರಣವಿದೆ.
ಮದುವೆಯಾದ ಕೆಲವೇ ದಿನಗಳಲ್ಲಿ ಸಾಯ್ತಾರೆ ಪುರುಷರು... ಈ ವಿಧವೆ ಗ್ರಾಮದ ರಹಸ್ಯವೇನು?
ಮರ್ಡರ್ ಮ್ಯಾನ್ಷನ್ ಈ ಮನೆ : ಇಷ್ಟು ದೊಡ್ಡ ಐಷಾರಾಮಿ ಮನೆಯನ್ನು ಖರೀದಿ ಮಾಡದಿರಲು ಕಾರಣ ಆ ಮನೆಯ ಹಿನ್ನೆಲೆ. ಈ ಬಂಗಲೆಗೆ ರಕ್ತದ ಕಲೆ ಅಂಟಿದೆ. ಒಂದಾದ್ಮೇಲೆ ಒಂದರಂತೆ ಕೊಲೆಗಳು ಈ ಮನೆಯಲ್ಲಿ ನಡೆದಿವೆ. ಹಾಗಾಗಿಯೇ ಜನರು ಈ ಮನೆಗೆ ಬರಲು ಭಯಪಡುತ್ತಾರೆ. ಮನೆ ಖರೀದಿ ಮಾಡಿದವರು ಕೂಡ ಅಲ್ಲಿ ವಾಸಮಾಡೋದಿಲ್ಲ.
1925 ರಲ್ಲಿ ಈ ಮನೆ ಕಟ್ಟಲಾಯ್ತು. ಹೆರಾಲ್ಡ್ ಮತ್ತು ಫ್ಲಾರೆನ್ಸ್ ಶುಮಾಕರ್ ಈ ಮನೆಯ ಮಾಲೀಕರಾಗಿದ್ದರು. ಮನೆಯಲ್ಲಿ ವಾಸ ಮಾಡಲು ಶುರು ಮಾಡಿ ಎರಡು ವರ್ಷದಲ್ಲೇ ಇಬ್ಬರೂ ಸಾವನ್ನಪ್ಪಿದ್ದರು. ಇದಾದ್ಮೇಲೆ ನಿಯತಕಾಲಿಕದ ಸಂಪಾದಕ ವೆಲ್ಫೋರ್ಡ್ ಬೀಟರ್ ಮತ್ತು ಅವರ ಮಗ ಡೊನಾಲ್ಡ್ ಇಲ್ಲಿ ವಾಸಿಸಲು ಶುರು ಮಾಡಿದ್ದರು. ಡೊನಾಲ್ಡ್ ಗೆ ಮಾರಣಾಂತಿಕ ಸೋಂಕು ಕಾಣಿಸಿಕೊಂಡು ಅವರು ಇಪ್ಪತ್ತೊಂದನೇ ವಯಸ್ಸಿನಲ್ಲೇ ಸಾವನ್ನಪ್ಪಿದ್ರು. ಅದಾದ್ಮೇಲೆ ಮನೆ ಬಿಟ್ಟ ವೆಲ್ಫೋರ್ಡ್, ತಾವು ದಿವಾಳಿಯಾಗಿರೋದಾಗಿ ಘೋಷಿಸಿದ್ದರು.
ಇವು ಅತ್ಯಂತ ಅಪಾಯಕಾರಿ ದೇಶಗಳು; ಹೋಗೋಕೆ ಮುನ್ನ 10 ಬಾರಿ ಯೋಚಿಸಿ
1956ರಲ್ಲಿ ನಡೆದಿತ್ತು ಭಯಾನಕ ಘಟನೆ : 1956ರಲ್ಲಿ ಹೆರಾಲ್ಡ್ ಪೆರೆಲ್ಸನ್ ಈ ಮನೆ ಖರೀದಿ ಮಾಡಿದ್ದರು. ತಮ್ಮ ಪತ್ನಿ ಮತ್ತು ಮೂವರು ಮಕ್ಕಳ ಜೊತೆ ಅವರು ಇಲ್ಲಿ ವಾಸಿಸಲು ಶುರು ಮಾಡಿದ್ದರು. ಈ ಮನೆಗೆ ಬರ್ತಿದ್ದಂತೆ ಕುಟುಂಬಸ್ಥರಲ್ಲಿ ಒಗ್ಗಟ್ಟು ಕಡಿಮೆಯಾಯ್ತು, ವಿವಾದ ಶುರುವಾಗಿತ್ತು. 1959 ರಲ್ಲಿ ಹೆರಾಲ್ಡ್ ತನ್ನ ಹೆಂಡತಿ ಲಿಲಿಯನ್ ರನ್ನು ಬಾಲ್ ಪಿನ್ ಸುತ್ತಿಗೆಯಿಂದ ದಾಳಿ ಮಾಡಿದ್ದರು, ಪುತ್ರರ ಮೇಲೂ ಹಲ್ಲೆಗೆ ಯತ್ನಿಸಿದ್ದರು. ಮಕ್ಕಳ ಕೂಗು ಕೇಳಿ ಪಕ್ಕದ ಮನೆಯ ವ್ಯಕ್ತಿ ಸ್ಥಳಕ್ಕೆ ಬಂದು, ಪೊಲೀಸರಿಗೆ ಮಾಹಿತಿ ತಿಳಿಸುವ ಮೊದಲು ಹೆರಾಲ್ಡ್ 31 ವಿಷಕಾರಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ವೈದ್ಯಕೀಯ ಪರೀಕ್ಷೆಯಲ್ಲಿ ಹೆರಾಲ್ಡ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಎಂಬುದು ಗೊತ್ತಾಗಿತ್ತು. ಈ ಎಲ್ಲ ಘಟನೆ ತಣ್ಣಗಾದ ಒಂದು ವರ್ಷದಲ್ಲೇ ಇದನ್ನು ಎಮಿಲಿ ಮತ್ತು ಜೂಲಿಯನ್ ಎಂಬುವವರು ಖರೀದಿ ಮಾಡಿದ್ದರು. ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅವರು 1994 ರಲ್ಲಿ ನಿಧನರಾದ ಮೇಲೆ ಆಸ್ತಿಯನ್ನು ಮಗ ರೂಡಿಗೆ ವರ್ಗಾಯಿಸಲಾಗಿದೆ. ಇದ್ರ ನಂತ್ರ ಮನೆ ಖರೀದಿ ಮಾಡೋರೇ ಇಲ್ಲದಂತಾಗಿದೆ.