ಮದುವೆಯಾದ ಕೆಲವೇ ದಿನಗಳಲ್ಲಿ ಸಾಯ್ತಾರೆ ಪುರುಷರು... ಈ ವಿಧವೆ ಗ್ರಾಮದ ರಹಸ್ಯವೇನು?

ಮದುವೆಯಾದ ಕೆಲವೇ ವರ್ಷದಲ್ಲಿ ಪತಿ ಸಾವು. ಮಕ್ಕಳ ಜವಾಬ್ದಾರಿ ಜೊತೆ ದುಡಿಯುವ ಸಮಸ್ಯೆ ಎದುರಿಸುವ ಮಹಿಳೆಯರಿಗೆ ಆರ್ಥಿಕ ಸಹಾಯ ಕೂಡ ಸಿಗೋದಿಲ್ಲ. ವಿಧವೆ ಗ್ರಾಮವೆಂದೇ ಹೆಸರಾಗಿರುವ ಇದ್ರ ಬಗ್ಗೆ ಮಾಹಿತಿ ಇಲ್ಲಿದೆ. 
 

Widows Village Seventy Five Percent Women Husband Dies After Marriage roo

ಮಗಳು ಹುಟ್ಟಿದ ಮೇಲೆ ಆಕೆಯನ್ನು ಬೇರೆ ಮನೆಗೆ ಕಳಿಸಬೇಕು. ಅದು ಎಲ್ಲ ಪಾಲಕರಿಗೆ ತಿಳಿದಿರೋ ವಿಷ್ಯ. ಈಗ ಜಗತ್ತು ಬದಲಾಗ್ತಿದ್ದರೂ ಬಹುತೇಕ ಹುಡುಗಿಯರು ವಿವಾಹವಾಗಿ ತಮ್ಮ ಪತಿ ಮನೆಗೆ ಹೋಗ್ತಾರೆ.  ಮದುವೆಯಾದ್ಮೇಲೆ ಮಗಳು ಖುಷಿಯಾಗಿರಬೇಕು ಎಂದು ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಊರೆಲ್ಲ ಹುಡುಕಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡ್ತಾರೆ. ಇಬ್ಬರಿಗೂ ದೀರ್ಘಾಯಸ್ಸು ಸಿಗಲಿ ಎಂದು ಬಯಸ್ತಾರೆ ಕೂಡ. ಆದ್ರೆ ಈ ಗ್ರಾಮಕ್ಕೆ ಮಗಳನ್ನು ಮದುವೆ ಮಾಡಿಕೊಡುವ ಪಾಲಕರು ಭಯದಲ್ಲಿಯೇ ಇರ್ತಾರೆ. ಯಾವಾಗ ಮಗಳು ಒಂಟಿಯಾಗಿ ಬದುಕುವ ಪರಿಸ್ಥಿತಿ ಬರುತ್ತೋ ಎನ್ನುವ ಹೆದರಿಕೆ ಅವರಿಗಿರುತ್ತದೆ. ಇದಕ್ಕೆ ಕಾರಣ ಈ ಗ್ರಾಮದ ಸ್ಥಿತಿ. ಈಗ ನಾವು ಹೇಳುತ್ತಿರುವ ಗ್ರಾಮದಲ್ಲಿ ಬಹುತೇಕ ವಿಧವೆಯರಿದ್ದಾರೆ. ಮದುವೆಯಾಗಿ ಒಂದೆರಡು ವರ್ಷದಲ್ಲೇ ಪತಿಯಾದವನು ಸಾವನ್ನಪ್ಪುತ್ತಾನೆ. ಇದ್ರಿಂದಾಗಿ ಮಕ್ಕಳ ಜೊತೆ ಕಷ್ಟದ ಜೀವನ ನಡೆಸೋದು ಮಹಿಳೆಯರಿಗೆ ಅನಿವಾರ್ಯವಾಗುತ್ತದೆ.

ರಾಜಸ್ಥಾನ (Rajasthan) ದ ಬುಂದಿ ಜಿಲ್ಲೆಯಲ್ಲಿರುವ ಬುಧಪುರ ಗ್ರಾಮವನ್ನು ವಿಧವೆಯರ ಗ್ರಾಮ ಎಂದೇ ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ವಾಸಿಸುವ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ವಿಧವೆ (widow) ಯರು. ಈ ಗ್ರಾಮದಲ್ಲಿ ನೀವು ವಿಧವೆ ಮಹಿಳೆ ಹಾಗೂ ಆಕೆ ಮಕ್ಕಳನ್ನು ಮಾತ್ರ ಕಾಣಲು ಸಾಧ್ಯ. ಈ ಗ್ರಾಮ (Village) ಕ್ಕೆ ಶಾಪವಿದೆ ಅಥವಾ ಪುರುಷರು ಸಾಯಲು ನಿಗೂಢ ಕಾರಣವಿದೆ ಎಂದು ನೀವು ಭಾವಿಸಬಹುದು. ಆದ್ರೆ ಈ ಗ್ರಾಮಕ್ಕೆ ಯಾವುದೇ ಶಾಪವಿಲ್ಲ.  ಈ ಗ್ರಾಮಕ್ಕೆ ಗಣಿಗಾರಿಕೆಯೇ ಶಾಪವಾಗಿದೆ.

ಸಹನಾ ಸತ್ತೇ ಹೋದ್ಲಾ? ಮನೆಗೆ ಬಂದಾಕೆಗೆ ಹೆಚ್ಚು ಭಾಷಣ ಬಿಗಿದ್ರೆ ಹೀಗೆ ಆಗೋದು... ಪುಟ್ಟಕ್ಕನ ವಿರುದ್ಧ ಆಕ್ರೋಶ

ಬುಧಪುರ ಗ್ರಾಮದಲ್ಲಿ ಗಣಿಗಾರಿಕೆ ನಡೆಯುತ್ತದೆ. ಅದ್ರಲ್ಲಿ ಈ ಗ್ರಾಮದ ಪುರುಷರು ಕೆಲಸ ಮಾಡ್ತಿದ್ದಾರೆ. ಅವರಿಗೆ ಸಿಲಿಕೋಸಿಸ್ ಎಂಬ ಖಾಯಿಲೆ ಕಾಡುತ್ತಿದೆ. ಸಿಲಿಕೋಸಿಸ್ ಎಂಬುದು ಗಣಿಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಬರುವ ಖಾಯಿಲೆ. ಸಿಲಿಕೋಸಿಸ್‌ ಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿಲ್ಲದವರು ಸಾವನ್ನಪ್ಪುತ್ತಾರೆ. 

ಈ ಗ್ರಾಮದ ವಿಧವೆಯರಿಗೆ ಯಾವುದೇ ರೀತಿಯ ಸಹಾಯ ಸಿಗ್ತಿಲ್ಲ. ಹಣಕಾಸಿನ ಸೌಲಭ್ಯವಿಲ್ಲ. ಮಕ್ಕಳನ್ನು ಸಾಕಲು ತಮ್ಮ ಹೊಟ್ಟೆಪಾಡಿಗೆ ಮಹಿಳೆಯರು ಕೂಡ ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಮರಳುಗಲ್ಲು ಒಡೆಯುವ ಕೆಲಸವನ್ನು ಅಲ್ಲಿ ಮಾಡಲಾಗುತ್ತದೆ. ಇದನ್ನು ಒಡೆಯಲು ದೀರ್ಘ ಸಮಯಬೇಕು. ಈ ಕಲ್ಲನ್ನು ಕೆತ್ತುವಾಗ ಧೂಳು ಹೊರಗೆ ಬರುತ್ತದೆ. ಅದನ್ನು ಉಸಿರಾಡುವುದ್ರಿಂದ ಸಿಲಿಕೋಸಿಸ್‌ ಸಮಸ್ಯೆ ಕಾಡುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಿರುತ್ತದೆ. ಆದ್ರೆ ಗಣಿಯಲ್ಲಿ ಕೆಲಸ ಮಾಡುವ ಜನರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗೋದಿಲ್ಲ. ಹಾಗಾಗಿ ಅಲ್ಲಿನ ಕೆಲಸಗಾರರು ಸಣ್ಣ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. 

ರೇಪ್​ ಮಾಡಿಸಿಕೊಳ್ಳಲು ಹುಡುಗಿಯರ ಕ್ಯೂ: ಫಿಲ್ಮ್​ ಇಂಡಸ್ಟ್ರಿಯ ಭಯಾನಕ ರೂಪ ಎಕ್ಸ್​ಪೋಸ್​ ಮಾಡಿದ ರಾಖಿ!

ಸಿಲಿಕೋಸಿಸ್‌ ಎಂದರೇನು? :  ಸಿಲಿಕೋಸಿಸ್ ಎನ್ನುವುದು ಶ್ವಾಸಕೋಶದ ಕಾಯಿಲೆ (Lungs Related Issue). ಸಿಲಿಕಾನ್ ಡೈಆಕ್ಸೈಡ್ ಅಥವಾ ಸಿಲಿಕಾದ ಅತ್ಯಂತ ಚಿಕ್ಕ ಸ್ಫಟಿಕದಂತಹ ಕಣಗಳನ್ನು ಉಸಿರಾಡುವುದರಿಂದ ಉಂಟಾಗುತ್ತದೆ. ಕೆಮ್ಮು, ಉರಿಯೂತ ಮತ್ತು ಫೈಬ್ರೋಸಿಸ್ (Fibrosis) ಈ ರೋಗದ ಲಕ್ಷಣವಾಗಿದೆ.  ಇದನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟ. ಸಾಮಾನ್ಯ ಕೆಮ್ಮು, ಉಸಿರಾಟದ ತೊಂದರೆ ಎಂದು ಜನರು ರೋಗಲಕ್ಷಣವನ್ನು ನಿರ್ಲಕ್ಷ್ಯ ಮಾಡ್ತಾರೆ. ಸಿಲಿಕೋಸಿಸ್‌ ಗೆ ಯಾವುದೇ ನಿರ್ದಿಷ್ಟ ಪರೀಕ್ಷೆಯಿಲ್ಲ. ರೋಗನಿರ್ಣಯಕ್ಕೆ ವೈದ್ಯನ್ನು ಭೇಟಿಯಾಗುವ ಜೊತೆಗೆ ಕೆಲ ಪರೀಕ್ಷೆಗೆ ಒಳಗಾಗಬೇಕು. ವಿಶೇಷವೆಂದ್ರೆ ಸಿಲಿಕೋಸಿಸ್‌ ಗೆ ಯಾವುದೇ ಪ್ರತ್ಯೇಕ ಚಿಕಿತ್ಸೆ ಇಲ್ಲ. ವೈದ್ಯರು ಇನ್ಹೇಲ್ ಸ್ಟೀರಾಯ್ಡ್‌ ನೀಡಿ,  ಶ್ವಾಸಕೋಶದಲ್ಲಿ ಲೋಳೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸುತ್ತಾರೆ. 45-59 ವಯಸ್ಸಿನ ಜನಸಂಖ್ಯೆಯು ಸಿಲಿಕೋಸಿಸ್‌ಗೆ ಹೆಚ್ಚು ಒಳಗಾಗುತ್ತದೆ. 80 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಸಿಲಿಕೋಸಿಸ್‌ ಗೆ ಸಾವನ್ನಪ್ಪುವ ಅಪಾಯ ಹೆಚ್ಚಿರುತ್ತದೆ.

Latest Videos
Follow Us:
Download App:
  • android
  • ios