'ಮಾಯನ್' ನಾಗರೀಕತೆಯ ಈ ವಿಷಯಗಳು ಅಚ್ಚರಿಗೊಳಿಸುವುದರಲ್ಲಿ ಅನುಮಾನವಿಲ್ಲ !

2000 ವರ್ಷಗಳಿಗೂ ಹಿಂದೆ ಇದ್ದ ಮಾಯನ್ ನಾಗರಿಕತೆ ಆಗಲೇ ಎಷ್ಟೆಲ್ಲ ಮುಂದುವರಿದಿತ್ತು ಎಂಬುದು ಅಚ್ಚರಿಗೊಳಿಸುತ್ತದೆ. ಅವರ ವಾಸ್ತುಶಿಲ್ಪ, ಕಲೆ, ಫ್ಯಾಶನ್ ಸೆನ್ಸ್, ನಂಬಿಕೆಗಳ ಕುರಿತು ಇಲ್ಲಿ ಹೊಳಹು ನೀಡಲಾಗಿದೆ. 

9 Surprising Facts About the Mayans

ಸಾವಿರಾರು ವರ್ಷಗಳ ಹಿಂದೆಯೇ ಅವರು ತಮ್ಮದೇ ಆದ ಲಿಖಿತ ಭಾಷೆ ಅಭಿವೃದ್ಧಿಪಡಿಸಿದ್ದರು, ತಮ್ಮದೇ ವಾಸ್ತುಶಿಲ್ಪ ಹೊಂದಿದ್ದರು, ಗಣಿತ ಹಾಗೂ ಜ್ಯೋತಿಷ್ಯ ಶಾಸ್ತ್ರದ ಅರಿವು ಅವರಲ್ಲಿತ್ತು. ಅಷ್ಟಾಗಿಯೂ ಮೀಸೋ ಅಮೆರಿಕನ್ ನಾಗರಿಕತೆ ಎನಿಸಿಕೊಂಡ ಮಾಯನ್ ನಾಗರೀಕತೆ 2000 ವರ್ಷಗಳ ಹಿಂದೆ ಕಣ್ಮರೆಯಾಯಿತು. ಅವರ ಬಳಿ ಶ್ರೀಮಂತವಾದ ಇತಿಹಾಸವಿದೆ. ಮೂರು ಸಾವಿರ ವರ್ಷಗಳ ಹಿಂದೆಯೇ ಅವರೆಷ್ಟು ಮುಂದುವರಿದಿದ್ದರು ಎಂಬುದು ತಿಳಿದರೆ ಅಚ್ಚರಿ ಪಡುತ್ತೀರಿ. 

1. ಮಾಯನ್ ನಾಗರೀಕರು ಇನ್ನೂ ಇದ್ದಾರೆ!

ಮಾಯನ್ನರೆಲ್ಲರೂ ಮರೆಯಾಗಿಲ್ಲ. ಆ ನಾಗರಿಕತೆಯ ಕೆಲ ತಲೆಮಾರುಗಳು ಇಂದಿಗೂ ಜೀವಿಸುತ್ತಿದ್ದಾರೆ. ಸುಮಾರು 7 ದಶಲಕ್ಷ ಮಾಯನ್ನರು ತಮ್ಮ ಪೂರ್ವಜರಿದ್ದ ಪ್ರದೇಶದಲ್ಲೇ ನೆಲೆ ಕಂಡುಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ಇನ್ನೂ ತಮ್ಮ ಪ್ರಾಚೀನ ಬೇರನ್ನು ಮರೆತಿಲ್ಲ. ಮಾಯನ್ ಭಾಷೆಯನ್ನೇ ಮಾತನಾಡುತ್ತಾರೆ.

ಅಪಾಯಕಾರಿ ಅಂಟಾರ್ಟಿಕ ಸಾಗರದಲ್ಲಿ ಈಜಬಹುದೇ? ಈ ಸಾಧಕನನ್ನೇ ಕೇಳಿ!

2. ನಾಮಕರಣ

ಮಾಯನ್ ಕ್ಯಾಲೆಂಡರ್‌ಗೆ ಅನುಗುಣವಾಗಿ ಮಕ್ಕಳಿಗೆ ಹೆಸರಿಡಲಾಗುತ್ತದೆ. ಯಾವ ದಿನ ಹುಟ್ಟಿದ ಗಂಡು ಹಾಗೂ ಹೆಣ್ಣು ಮಗುವಿಗೆ ಯಾವ ಹೆಸರಿಡಬೇಕೆಂಬುದನ್ನು ಕ್ಯಾಲೆಂಡರ್ ಹೇಳುತ್ತದೆ. ಅದರಂತೆಯೇ ಈಗಲೂ ಮಕ್ಕಳಿಗೆ ಹೆಸರಿಡಲಾಗುತ್ತದೆ. ಅಂದರೆ ಒಂದೇ ದಿನಾಂಕದಲ್ಲಿ ಹುಟ್ಟಿದ ಎಲ್ಲ ಗಂಡು ಮಕ್ಕಳಿಗೂ ಒಂದೇ ಹೆಸರಿರುತ್ತದೆ. ಹಾಗೆಯೇ ಹೆಣ್ಣು ಮಕ್ಕಳಿಗೆ ಕೂಡಾ. 

3. ಬ್ಯೂಟಿ ಸ್ಟ್ಯಾಂಡರ್ಡ್ಸ್

ಸೌಂದರ್ಯ ಎಂಬುದು ಕಾಲಾತೀತವಾಗಿ ಪ್ರಾಮುಖ್ಯತೆ ಪಡೆದುಕೊಂಡೇ ಬಂದಿದೆ. ಹಾಗೆಯೇ ಮಾಯನ್ನರಿಗೆ ಕೂಡಾ ಅದು ಬಹಳ ಮುಖ್ಯವಾಗಿತ್ತು. ಆದರೆ, ಅವರ ಲೆಕ್ಕದಲ್ಲಿ ಸೌಂದರ್ಯ ಎಂಬುದರ ಮಾನದಂಡ ಬೇರೆಯೇ ಆಗಿತ್ತು. ಅವರಿಗೆ ಉದ್ದನೆಯ ತಲೆ ಬಹಳ ಆಕರ್ಷಕ ಎಂಬ ನಂಬಿಕೆ ಇತ್ತು. ಹಾಗಾಗಿ, ಅವರು ಮಗುವಿನ ತಲೆ ಮೇಲೆ ಬೋರ್ಡ್ ಇಟ್ಟು ಚಪ್ಪಟೆ ಹಣೆ ಆಗುವಂತೆ ನೋಡಿಕೊಳ್ಳುತ್ತಿದ್ದರು. ಅದರಲ್ಲೂ ಈ ಪದ್ಧತಿ ಮೇಲ್ವರ್ಗದವರಲ್ಲಿ ಹೆಚ್ಚಾಗಿತ್ತು. ಮಹಿಳೆಯರಿಗೆ ಮೆಳ್ಳೆಗಣ್ಣು ಇದ್ದರೆ ಹೆಚ್ಚು ಸೌಂದರ್ಯ ಎಂದು ಪರಿಗಣಿಸುತ್ತಿದ್ದರು. ಜೊತೆಗೆ ಉದ್ದನೆಯ ಮೂಗೆಂದರೆ ಮಾಯನ್ನರಿಗೆ ಅಚ್ಚುಮೆಚ್ಚು. ಕೆಲವರು ತಮ್ಮ ಮೂಗು ಉದ್ದ ಕಾಣಲೆಂದು ಮಣ್ಣನ್ನು ಕೂಡಾ ಮೂಗಿಗೆ ಮೆತ್ತಿಕೊಳ್ಳುತ್ತಿದ್ದರು.

4. ಮನುಷ್ಯರ ಬಲಿ

ಪ್ರಾಚೀನ ಮಾಯನ್ನರು ಧಾರ್ಮಿಕ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ರಕ್ತತರ್ಪಣ ನೀಡುತ್ತಿದ್ದರು. ರಕ್ತವು ದೇವರಿಗೆ ನೀಡುವ ಅತಿ ಪವರ್‌ಫುಲ್ ಕೊಡುಗೆ ಎನಿಸಿಕೊಳ್ಳುತ್ತಿತ್ತು. ಬಲಿ ಕೊಡುವ ಮುನ್ನ ಹಲವು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು. ಅಷ್ಟೇ ಅಲ್ಲ, ಹಲವು ರೀತಿಯಲ್ಲಿ ಬಲಿ ಕೊಡುತ್ತಿದ್ದರು. ಅದರಲ್ಲಿ ಬಡಿಯುತ್ತಿರುವ ಹೃದಯವನ್ನೇ ತೆಗೆದುಕೊಡುವುದು, ತಲೆಯನ್ನು ದೇಹದಿಂದ ಬೇರ್ಪಡಿಸಿ ಕೊಡುವುದು ಬಹಳ  ಪ್ರಸಿದ್ಧವಾದುದು. ಆದರೆ, ಹೈ ಸ್ಟೇಟಸ್‌ನ ಜನರನ್ನು ಮಾತ್ರ ಬಲಿ ಕೊಡುತ್ತಿದ್ದರು. ಉಳಿದವರನ್ನು ಕಾರ್ಮಿಕರಾಗಿಟ್ಟುಕೊಳ್ಳುತ್ತಿದ್ದರು.

ಬರುವ ವರ್ಷಕ್ಕೆ ಈಗಲೇ ಮಾಡಿಕೊಳ್ಳಿ ಟ್ರಾವೆಲ್ ಪ್ಲಾನ್- ಇಲ್ಲಿದೆ ಗೈಡ್

5. ನೋವುನಿವಾರಕ ಬಳಕೆ

ಮಾಯನ್ನರು ಹ್ಯಾಲುಸಿನೇಶನ್ ಉಂಟು ಮಾಡುವ ಡ್ರಗ್ಸ್‌ಗಳನ್ನು ಧಾರ್ಮಿಕ ಕಾರ್ಯ ಸಂದರ್ಭಗಳಲ್ಲಿ ಬಳಸುತ್ತಿದ್ದರು. ಅವರು ಈ ಡ್ರಗ್ಸ್‌ನ್ನು ನೋವು ನಿವಾರಕವಾಗಿಯೂ ಬಳಸುತ್ತಿದ್ದರು. 

6. ಅತ್ಯುತ್ತಮ ಮೆಡಿಕಲ್ ಪ್ರಾಕ್ಟೀಸ್

ಮಾಯನ್ನರ ವೈದ್ಯಕೀಯ ಪದ್ಧತಿಯಲ್ಲಿ ದೇಹ, ಧಾರ್ಮಿಕತೆ, ವಿಜ್ಞಾನ ಹಾಗೂ ನಂಬಿಕೆಗಳು ಮಿಳಿತವಾಗಿದ್ದವು. ಆಯ್ದ ಕೆಲವರಷ್ಟೇ ವೈದ್ಯ ಶಿಕ್ಷಣ ಅಭ್ಯಸಿಸಲು ಅವಕಾಶವಿತ್ತು. ಇರನ್ನು ಶಮನ್ ಎಂದು ಕರೆಯಲಾಗುತ್ತಿತ್ತು. ಇವರು ಭೌತಿಕ ಹಾಗೂ ಸ್ಪಿರಿಟ್ ಲೋಕದ ನಡುವೆ ಸಂಪರ್ಕ ಸೇತುವಾಗಿರುತ್ತಿದ್ದರು.

7. ಅಮೂಲ್ಯ ಹಲ್ಲುಗಳು

ಮಾಯನ್ನರ ನಗು ಅಕ್ಷರಶಃ ಕಾಂತಿಯುತವಾಗಿತ್ತು. ಏಕೆಂದರೆ ಅವರು ತಮ್ಮ ಹಲ್ಲುಗಳಿಗೆ ಅಮೂಲ್ಯ ಹವಳಗಳನ್ನು ಹಾಕಿಕೊಳ್ಳುತ್ತಿದ್ದರು. ಇದು ಬಹಲ ಫ್ಯಾಷನೇಬಲ್ ಎನಿಸಿಕೊಂಡಿತ್ತು. ಇದಕ್ಕಾಗಿ ಹಲ್ಲುಗಳ ಮಧ್ಯೆ ಕೊರೆದು ಅಲ್ಲಿ ಹರಳು ಕೂರಿಸಿ, ನೈಸರ್ಗಿಕ ಗಮ್ ಬಳಸಿ ಅಂಟಿಸಲಾಗುತ್ತಿತ್ತು. 

8. ವಾಸ್ತುಶಿಲ್ಪ

ಮಾಯನ್ ವಾಸ್ತುಶಿಲ್ಪವು ಇಂದಿಗೂ ತನ್ನ ಶ್ರೀಮಂತಿಕೆಗಾಗಿ ಹೆಸರಾಗಿದೆ. ಅವರು ಬಹಳ ದೊಡ್ಡ ದೇವಾಲಯಗಳು, ಶಿಲಾಕೆ್ತನೆಗಳು ಹಾಗೂ ಕಲ್ಲಿನ ಪಿರಮಿಡ್‌ಗಳನ್ನು ನಿರ್ಮಿಸಿದ್ದಾರೆ. 

ಭಾರತದಲ್ಲಿದೆ ಜಗತ್ತಿನ ಏಕೈಕ ತೇಲುವ ವನ್ಯಜೀವಿ ಅಭಯಾರಣ್ಯ !

9. ಬಗೆಹರಿಯದ ರಹಸ್ಯ

ಇಷ್ಟೆಲ್ಲ ಶ್ರೀಮಂತವಾಗಿದ್ದ, ಮುಂದುವರಿದಿದ್ದ ಮಾಯನ್ ನಾಗರೀಕತೆ 9ನೇ ಶತಮಾನದಲ್ಲಿ ಅವಸಾನವಾಗಿದುದಕ್ಕೆ ಕಾರಣವೇನು ಎಂಬುದು ಇಂದಿಗೂ ತಿಳಿದುಬಂದಿಲ್ಲ. ಜನಸಂಖ್ಯಾಸ್ಫೋಟ, ವಿದೇಶಿಯರ ಆಕ್ರಮಣ, ಬರ, ಸಾಂಕ್ರಾಮಿಕ ಕಾಯಿಲೆ, ಪ್ರಾಕೃತಿಕ ವಿಕೋಪ ಹಾಗೂ ಪ್ರಮುಖ ವ್ಯಾಪಾರಿ ಮಾರ್ಗಗಳ ವಿನಾಶ ಕಾರಣವಿರಬಹುದು ಎಂದೆಣಿಸಲಾಗಿದೆ. 

Latest Videos
Follow Us:
Download App:
  • android
  • ios