ಜಗತ್ತಿನ ಐದನೇ ಅತಿ ದೊಡ್ಡ ಖಂಡವಾಗಿರುವ ಅಂಟಾರ್ಟಿಕಾ ಬಗ್ಗೆ ಅದು ತಣ್ಣಗೆ ಕೊರೆವ ಐಸ್‌ನಿಂದ ತುಂಬಿದೆ, ಅಲ್ಲಿ ಪೆಂಗ್ವಿನ್‌ಗಳು ಹೆಚ್ಚಾಗಿ ವಾಸಿಸುತ್ತವೆ ಎಂಬುದರ ಹೊರತಾಗಿ ಬಹುತೇಕರಿಗೆ ಬೇರೇನೂ ತಿಳಿದಿಲ್ಲ. ಬಹಳಷ್ಟು ಅಚ್ಚರಿಗಳನ್ನು ಅಡಗಿಸಿಕೊಂಡಿರುವ ಅಂಟಾರ್ಟಿಕಾದ ಕುರಿತ ಕೆಲ ಆಸಕ್ತಿಕರ ಮಾಹಿತಿಗಳು ನಿಮಗಾಗಿ. 
ಮುಂಚೆ ದಟ್ಟಾರಣ್ಯವಾಗಿತ್ತು!

ಅಂಟಾರ್ಟಿಕಾವು ಅಮೆರಿಕಾ ಸಂಯುಕ್ತ ಸಂಸ್ಥಾನದ ಒಂದೂವರೆ ಪಟ್ಟು ದೊಡ್ಡದಾಗಿದೆ. ಅಂದರೆ ಇಲ್ಲಿನ ಭೂಮಿಯನ್ನು ವಿಭಾಗಿಸಲು ಬಹಳ ವಿಸ್ತೀರ್ಣವೇ ಇದೆ ಎಂದಾಯಿತು. ಈ ಭೂಭಾಗವನ್ನು ಪೂರ್ವ ಹಾಗೂ ಪಶ್ಚಿಮ ಅಂಟಾರ್ಟಿಕಾ ಎಂದು ವಿಭಾಗಿಸಲಾಗಿದೆ. ಜಗತ್ತಿನ ಅತಿ ಉದ್ದದ ಪರ್ವತಗಳೇ ಈ ಭೂಮಿಯನ್ನು ವಿಭಾಗಿಸುತ್ತವೆ. ಇಲ್ಲಿ 252ರಿಂದ 66 ದಶಲಕ್ಷ ವರ್ಷಗಳ ಹಿಂದೆ ದೊಡ್ಡ ದೊಡ್ಡ ಕಾಡಿತ್ತು, ಪ್ರಾಣಿಗಳು ತುಂಬಿ ತುಳುಕುತ್ತಿದ್ದವು ಎಂದರೆ ನಂಬುತ್ತೀರಾ? ಹೌದು, ಡೈನಾಸರ್ ಕೂಡಾ ಇಲ್ಲಿ ವಾಸಿಸುತ್ತಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಪಳೆಯುಳಿಕೆಗಳು ಸಿಕ್ಕಿವೆ. ಈ ಪರ್ವತಗಳ ಮೇಲೆ ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಕಂಡುಬರುವ ನೈಸ್-ಗ್ರಾನ್ಯುಲೈಟ್ ಶಿಲೆಗಳೇ ದೊಡ್ಡ ಪ್ರಮಾಣದಲ್ಲಿವೆ. ಇವು 570 ದಶಲಕ್ಷ ವರ್ಷಗಳಿಗೂ ಹಿಂದಿನವು.

ಬರುವ ವರ್ಷಕ್ಕೆ ಈಗಲೇ ಮಾಡಿಕೊಳ್ಳಿ ಟ್ರಾವೆಲ್ ಪ್ಲಾನ್- ಇಲ್ಲಿದೆ ಗೈಡ್

ಹಿಮದ ಮರುಭೂಮಿ

ಮರುಭೂಮಿ ಕೆಟಗರಿಯಿಂದ ಹೊರಗುಳಿಯಲು ವರ್ಷಕ್ಕೆ ಕನಿಷ್ಠ 50 ಸೆಂಟಿಮೀಟರ್‌ನಷ್ಟಾದರೂ ಮಳೆ ಅಥವಾ ಹಿಮ ಏನಾದರೂ ಬೀಳಬೇಕು. ಆದರೆ ಅಂಟಾರ್ಟಿಕಾದಲ್ಲಿ 5ರಿಂದ 15 ಸೆಂ.ಮೀ.ಯಷ್ಟು ಮಾತ್ರ ಈ ರೀತಿಯ ಮಳೆಯಾಗುತ್ತದೆ. ಅಂಟಾರ್ಟಿಕಾವೂ ಪೂರ್ತಿ ಡ್ರೈಯಾಗಿದೆ. ಇಲ್ಲಿನ ಅತಿ ಒಣ ಕಣಿವೆಗಳು ಜಗತ್ತಿನಲ್ಲೇ ಅತಿ ಒಣಪ್ರದೇಶವಾಗಿದ್ದು, 2 ದಶಲಕ್ಷ ವರ್ಷಗಳಿಂದ ಇಲ್ಲಿ ಮಳೆಯಾಗಲೀ, ಹಿಮವಾಗಲೀ ಬಿದ್ದಿಲ್ಲ ! ಆದರೂ ಕೂಡಾ ಈ ಖಂಡವು ಭೂಮಿಯ ಮೇಲಿನ ಶೇ.70ರಷ್ಟು ಸಿಹಿ ನೀರನ್ನು ಹಿಮದ ರೂಪದಲ್ಲಿ ಕೂಡಿಟ್ಟುಕೊಂಡಿದೆ. ಅಂದರೆ 20 ದಶಲಕ್ಷ ವರ್ಷಗಳ ಹಿಂದೆ ಹಿಮ ಯುಗ ಮುಗಿದರೂ ಇಲ್ಲಿದ್ದ ಹಿಮ ಮಾತ್ರ ಕರಗಲಿಲ್ಲ. ಇಲ್ಲಿನ ಹಿಮವೇನಾದರೂ ಕರಗಿದರೆ ಜಾಗತಿಕ ಸಾಗರದ ಮಟ್ಟ 50 ರಿಂದ 65 ಮೀ. ಏರುತ್ತದೆಂದು ಅಂದಾಜು. ಹಿಮದ ಭಾರಕ್ಕೆ ಧ್ರುವಪ್ರದೇಶ 540 ಮೀ. ಆಳಕ್ಕೆ ಕುಸಿದಿದೆ. 

ತಾಪಮಾನ ಹಾಗೂ ವಾಯುವೇಗ

ಖಂಡ, ವಾಯುಗುಣದ ವೈಪರೀತ್ಯಕ್ಕೆ ಹೆಸರುವಾಸಿಯಾಗಿದೆ. ದಕ್ಷಿಣ ಧ್ರುವದ ಬಳಿ ರಷ್ಯ ಸ್ಥಾಪಿಸಿರುವ ವೋಸ್ಟಾಕ್ ಎಂಬ ಕೇಂದ್ರದ ಬಳಿ 1983ರಲ್ಲಿ -89 ಡಿಗ್ರಿ ಸೆಂ. ಉಷ್ಣತೆಯನ್ನು ದಾಖಲಿಸಲಾಗಿದೆ. ಭೂಮಿಯ ಯಾವುದೇ ಭಾಗದಲ್ಲೂ ಉಷ್ಣತೆ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ಇದುವರೆಗೂ ದಾಖಲಾಗಿಲ್ಲ. ಇಲ್ಲಿ ಗಾಳಿಯು ಗಂಟೆಗೆ 100 ಕಿ.ಮೀ. ವೇಗದಲ್ಲಿ ಬೀಸುತ್ತದೆ. ಅಂದರೆ ಇದು ಬರಿ ಗಾಳಿಯಲ್ಲ, ಸದಾ ಬಿರುಗಾಳಿಯೇ. 

ಸೌಂದರ್ಯವೇ ಧರೆಗಿಳಿದಂತೆ: ಹಿಮದ ಹೊದಿಕೆ ಹೊದ್ದ ಹಿಮಾಚಲ!

ಅಂತಾರಾಷ್ಟ್ರೀಯ ಕಾನೂನು

1959ರ ಡಿಸೆಂಬರ್ 1ರಂದು ಅಂಟಾರ್ಟಿಕ್ ಟ್ರೀಟಿಗೆ 12 ದೇಶಗಳು ಸಹಿ ಹಾಕಿವೆ. ಅದರಂತೆ ಈ ಖಂಡದಲ್ಲಿ ಯಾವುದೇ ಮಿಲಿಟರಿ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಮೈನಿಂಗ್ ಇಲ್ಲ, ನ್ಯೂಕ್ಲಿಯರ್ ತ್ಯಾಜ್ಯ ಹಾಗೂ ಸ್ಫೋಟಕಗಳನ್ನು ಇಲ್ಲಿ ಇರಿಸುವಂತಿಲ್ಲ. ಇಲ್ಲಿಗೆ ಹೋಗಬೇಕೆಂದರೆ ಒಂದೇ ದಾರಿ ಇರುವುದು- ಅದೆಂದರೆ ನ್ಯಾಷನಲ್ ಜಿಯೋಗ್ರಾಫಿಕ್ ಹಾಗೂ ಇಂಡ್‌ಬಾಲ್ಡ್ ಎಕ್ಸ್‌ಪೆಡಿಶನ್ ಮೂಲಕ. 

ಇಲ್ಲೂ ಈಜಬಹುದೇ?

ಎಂಥೆಂಥ ಸಾಹಸಿಗರೆನಿಸಿಕೊಂಡವರೇ ಹೆದರುವಂಥ ಸಾಹಸವೊಂದನ್ನು 48 ವರ್ಷದ ಅಮೆರಿಕನ್ ಲೂಯಿಸ್ ಪಗ್ ಮಾಡಿ ತೋರಿಸಿದ್ದಾರೆ. ಹೌದು, ಜಗತ್ತಿನಲ್ಲೇ ಅತಿ ಅಪಾಯಕಾರಿ ಎನಿಸಿಕೊಂಡಂಥ ಈಜೊಂದನ್ನು ಇವರು ಮುಗಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಗೆದ್ರೆ ಪಟ್ಟ, ಸೋತ್ರೆ ಚಟ್ಟ ಎಂದುಕೊಂಡೇ ಅಂಟಾರ್ಟಿಕ್ ಸಾಗರಕ್ಕಿಳಿದ ಈತ 2 ಡಿಗ್ರಿ ಸೆಲ್ಶಿಯಸ್ ಇದ್ದ ನೀರಿನಲ್ಲಿ 19 ನಿಮಿಷಗಳ ಕಾಲ 1 ಕಿಲೋಮೀಟರ್ ಈಜಿ ದಾಖಲೆ ಮಾಡಿದ್ದಾರೆ.

ಕೈಲಾಸ ಪರ್ವತದ ನಿಗೂಢ ವಿಷಯಗಳನ್ನು ಕೇಳಿದ್ರೆ ಅಲ್ಲಿ ದೇವರಿರೋದನ್ನ ನಂಬ್ಲೇಬೇಕು!

ದಕ್ಷಿಣ ಜಾರ್ಜಿಯಾದ ಕಿಂಗ್ ಎಡ್ವರ್ಡ್ ಕವರ್ ಬಳಿ ಸಾಗರಕ್ಕಿಳಿದ ಪಗ್ ಧರಿಸಿದ್ದು ಕೇವಲ ಶಾರ್ಟ್ಸ್ ಮಾತ್ರ. 2014ರ ನ್ಯಾಷನಲ್ ಜಿಯೋಗ್ರಾಫಿಕ್ ಸಾಗಸಿಗ ಎಂಬ ಹೆಸರು ಗಳಿಸಿರುವ ಪಗ್, ತಮ್ಮ ಬದುಕನ್ನು ಸಾಗರಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಮುಡಿಪಾಗಿಟ್ಟಿದ್ದಾರೆ. ಸಾಗರಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವನ್ನು ಪರಿಹರಿಸಲು ಸಹಾಯ ಯಾಚಿಸುತ್ತಿದ್ದಾರೆ. ಇಷ್ಟೊಂದು ತಣ್ಣನೆಯ ಐಸ್‌ನಂಥ ನೀರಿಗಿಳಿದಾಗ, ನೀರಿನ ತಾಪಮಾನದ ಹೊರತಾಗಿ ದಾರಿಯಲ್ಲಿ ಸಿಕ್ಕ ಎರಡು ಸೀಲ್‌ಗಳನ್ನು ಕೂಡಾ ಎದುರಿಸಿ, ಗುರಿ ಮುಟ್ಟಿದ್ದು ಪಗ್ ಸಾಹಸಕ್ಕೆ ಮತ್ತಷ್ಟು ರೋಮಾಂಚನಕಾರಿ ಟ್ವಿಸ್ಟ್ ನೀಡಿತ್ತು. ಆತನ ಸ್ನೇಹಿತರು ಈ ವಿಡಿಯೋವನ್ನು ಫೇಸ್‌ಬುಕ್ ಲೈವ್ ಮಾಡಿದ್ದರು. 

ಪ್ರಾಣಿಪಕ್ಷಿಗಳು

ವರ್ಷದಲ್ಲಿ ಆರು ತಿಂಗಳು ಕತ್ತಲು, ಆರು ತಿಂಗಳು ಬೆಳಕು ಇರುವುದರಿಂದ ಈ ಖಂಡ ಜೀವಿಗಳನ್ನು ಪೋಷಿಸಿಲ್ಲ. ಇಲ್ಲಿರುವ ಕೆಲವೇ ಜೀವಿಗಳೂ ಈ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಂಡು ಬಾಳುವೆ ಮಾಡುತ್ತವೆ. ಅವುಗಳಲ್ಲಿ ಪೆಂಗ್ವಿನ್, ಸೀಲ್, ನೀಲಿ ತಿಮಿಂಗಿಲಗಳನ್ನು ಇಲ್ಲಿ ಕಾಣಬಹುದು. 

ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?