ಭಾರತದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸೋಕೆ ಈ ಸ್ಥಳಗಳು ಬೆಸ್ಟ್!
ಪ್ರಿ ವೆಡ್ಡಿಂಗ್ ಫೋಟೋಶೂಟ್‌ಗಾಗಿ ದೇಶದ ಬೇರೆ ಬೇರೆ ನಗರಗಳಿಗೆ ಹೋಗುವುದರಿಂದ 2 ಲಾಭ. ಹೊಸ ಜೋಡಿಗೆ ಮದುವೆಗೆ ಮುಂಚೆಯೇ ಒಟ್ಟಿಗೇ ತಿರುಗಿ ಅರಿತುಕೊಳ್ಳಲು, ಜೊತೆಯಾಗಿ ಒಂದಿಷ್ಟು ಸಮಯ ಕಳೆಯಲು ಅವಕಾಶ. ಮತ್ತೊಂದು ಅದ್ಭುತ ಬ್ಯಾಕ್‌ಗ್ರೌಂಡ್‌ನಲ್ಲಿ ಸಿಗುವ ಸುಂದರ ಫೋಟೋಗಳು.
ಪ್ರಿ ವೆಡ್ಡಿಂಗ್ ಫೋಟೋಗ್ರಫಿ ಈಗ ಟ್ರೆಂಡ್. ಕೇವಲ ಫೋಟೋಗ್ರಫಿಯಲ್ಲ, ಮೂವಿ ಸಾಂಗ್‌ನಂತೆ ವಿಡಿಯೋ ಚಿತ್ರೀಕರಣ ಕೂಡಾ ಮಾಡಿಸುತ್ತಾರೆ. ಇದು ಕೇವಲ ಶ್ರೀಮಂತರ ಕನಸಲ್ಲ. ಮಧ್ಯಮವರ್ಗದ ಕುಟುಂಬಗಳಲ್ಲೂ ಮದುವೆ ಎಂದ ಕೂಡಲೇ ಫೋಟೋಶೂಟ್ ಸಾಮಾನ್ಯವಾಗಿದೆ.
ವೀಕೆಂಡ್ ಟ್ರಿಪ್‌ಗೆ ಬೆಂಗಳೂರಿನ ಸುತ್ತ ಇರೋ ಈ ಸ್ಥಳಗಳು ಬೆಸ್ಟ್
ಮದುವೆ ನಿಗದಿಯಾದ ಜೋಡಿಯು ಯಾವುದಾದರೂ ಉದ್ಯಾನದಲ್ಲೋ, ದೇವಸ್ಥಾನದ ಅಂಗಳದಲ್ಲೋ, ಪ್ರಕೃತಿಯ ಸೌಂದರ್ಯ ಸೊಗಸಾಗಿರುವ ಕಡೆ ಹೋಗಿ ಮೂರ್ನಾಲ್ಕು ಬಟ್ಟೆ ಬದಲಿಸಿ, ಫೋಟೋಶೂಟ್ ಮಾಡಿಸಿ, ತಮ್ಮ ಬದುಕಿನ ಚಿತ್ರದ ಹೀರೋ ಹೀರೋಯಿನ್ ಆಗಿ ಸಂಭ್ರಮಿಸಲೊಂದು ಅವಕಾಶ. ಭಾರತದಲ್ಲಿ ಇಂಥ ಫೋಟೋಶೂಟ್‌ಗೆ ಬೆಸ್ಟ್ ಎನ್ನಿಸುವಂಥ ಸ್ಥಳಗಳೊಂದಿಷ್ಟು ಇಲ್ಲಿವೆ.
ಉಮೈದ್ ಭವನ್ ಪ್ಯಾಲೇಸ್, ಉದಯ್‌ಪುರ
Pre-Wedding Shoot: ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಪೊಲೀಸ್!
ಅರಾವಳಿ ಪರ್ವತಗಳ ಸಾಲು ಹಾಗೂ ಸುಂದರವಾದ ಕೆರೆಗಳಿಂದಾಗಿ ಉದಯ್‌ಪುರ ನಗರದ ಸೌಂದರ್ಯ ವರ್ಣಿಸಲಸದಳ. ಇಂಥ ಸೌಂದರ್ಯದ ನಡುವೆ ನಿಂತ ಉಮೈದ್ ಭವನ ಅರಮನೆ ಸ್ವರ್ಗದ ತುಂಡೊಂದು ಧರೆಗುರುಳಿದಂತೆನಿಸುತ್ತದೆ. ಉದಯಪುರದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಎಲ್ಲಿ ಮಾಡಿಸಿದರೂ ಸೊಗಸಾಗೇ ಇರುತ್ತದೆ. ಆದರೆ, ಸುಮಾರು 26 ಎಕರೆ ವಿಸ್ತೀರ್ಣದಲ್ಲಿ ನಿಂತ ಈ ಅರಮನೆಯಲ್ಲಿ ಮಾಡಿದರೆ ರಾಯಲ್ ಆಗಿರುತ್ತದೆ. ಮಹಾರಾಜ ಉಮೈದ್ ಸಿಂಗ್‌ನ ಉತ್ತರಾಧಿಕಾರಿ ಮಹಾರಾಜ ಗಜ ಸಿಂಗ್ ಇನ್ನೂ ಇಲ್ಲಿದ್ದಾರೆ.
ಹುಮಾಯೂನ್ಸ್ ಟೋಂಬ್, ದೆಲ್ಲಿ
ರಾಜಾ ಹೂಮಾಯೂನ್ ಸಮಾಧಿಗಾಗಿ ಕಟ್ಟಿಸಿದ ಈ ಭವ್ಯ ಕಟ್ಟಡ, ನಿಮ್ಮ ರೊಮ್ಯಾಂಟಿಕ್ ಸ್ಟೋರಿಗೆ ಸರಿಯಾದ ಮೊಘಲ್ ಬ್ಯಾಕ್‌ಗ್ರೌಂಡ್ ಒದಗಿಸಿಕೊಡುತ್ತದೆ. ಪರ್ಶಿಯನ್ಸ್ ಹಾಗೂ ಮೊಘಲ್ಸ್ ವಿನ್ಯಾಸಪಡಿಸಿದ ಇಸ್ಲಾಮಿಕ್ ವಾಸ್ತುಶೈಲಿಯ ಈ ಕಟ್ಟಡದ ಸುತ್ತ ದೊಡ್ಡ ಉದ್ಯಾನಗಳು ಹಾಗೂ ಇತರೆ ಸ್ಮಾರಕಗಳಿವೆ. ಹಾಗಾಗಿ, ಹಲವಾರು ರೀತಿಯ ಬ್ಯಾಕ್‌ಗ್ರೊಂಡ್‌ಗಳು ಫೋಟೋಗೆ ಲಭ್ಯ. ಹಾಗಂತ ಇಲ್ಲಿ ಶೂಟ್ ಮಾಡಲು ಹೆಚ್ಚಿಗೆ ಹಣವೇನೂ ತೆರಬೇಕಾಗಿಲ್ಲ.
20 ರು. ನೋಟಿನಲ್ಲಿದೆ ಅಂಡಮಾನ್‌ನ ದೃಶ್ಯ; ಹಿಂದಿದೆ ಇಂಟ್ರೆಸ್ಟಿಂಗ್ ಕಾರಣ!
ನೀಮ್ರಾಣಾ ಕೋಟೆ, ಅಲ್ವರ್
ತಮ್ಮ ಪ್ರೇಮಕತೆಯ ಆರಂಭಕ್ಕೆ ರಜಪೂತರ ವೈಭವ ನೀಡುವ ಬಯಕೆ ಇರುವವರು ಪ್ರಿ ವೆಡ್ಡಿಂಗ್ ಶೂಟ್‌ಗೆ ಅಲ್ವರ್‌ನ ನೀಮ್ರಾಣಾ ಕೋಟೆ ಆಯ್ದುಕೊಳ್ಳಬಹುದು. ಇಲ್ಲಿ ಅತ್ಯುತ್ತಮ ಉದ್ಯಾನಗಳು, ಸ್ವಿಮ್ಮಿಂಗ್ ಪೂಲ್, ಹ್ಯಾಂಗಿಂಗ್ ಗಾರ್ಡನ್ಸ್, ಹಾಗೂ ಕೋಟೆಯ ವೈಭೋಗ ಎಲ್ಲವೂ ಫೋಟೋವನ್ನು ಚೆಂದಗಾಣಿಸುತ್ತವೆ. ನೀವು ಅರಮನೆಯಲ್ಲಿ ಮದುವೆಯಾಗಲು ಸಾಧ್ಯವಾಗದಿದ್ದರೂ, ಪ್ರಿ ವೆಡ್ಡಿಂಗ್ ಫೋಟೋಗ್ರಫಿ ಮೂಲಕ ಅಂಥದೊಂದು ರಾಯಲ್ ನೆನಪನ್ನು ನಿಮ್ಮ ಜೊತೆ ಸದಾ ಕೊಂಡೊಯ್ಯಬಹುದು. ಇಲ್ಲಿ ಜೋಡಿಗೆ ಲಂಚ್ ಹಾಗೂ ಡಿನ್ನರ್ ಜೊತೆಗೆ ಬಟ್ಟೆ ಬದಲಿಸಲು, ಮೇಕಪ್ ಮಾಡಿಕೊಳ್ಳಲು ಪ್ರತ್ಯೇಕ ಕೋಣೆಗಳು ಕೂಡಾ ಲಭ್ಯ.
ಫ್ರೆಂಚ್ ಕಾಲೋನಿ, ಪಾಂಡಿಚೆರಿ
ಪಾಂಡಿಚೆರಿಯು ಸುಂದರ ಬೀಚ್‌ಗಳ, ರೋಡ್ ಟ್ರಿಪ್ ಫ್ರೆಂಡ್ಲಿ ಹೈವೇಗಳ, ಉತ್ತಮ ಆಹಾರ ಹಾಗೂ ಪಾರ್ಟಿಗಳ ಫುಲ್ ಪ್ಯಾಕೇಜ್. ಅತ್ಯಂತ ಸ್ವಚ್ಛವಾದ ನಗರ ಎಂಬ ಹೆಗ್ಗಳಿಕೆ ಜೊತೆ ಫ್ರೆಂಚ್ ವಾಸ್ತುಶಿಲ್ಪದ ಸುಂದರ ಮನೆಗಳು ಇಲ್ಲಿನ ರಸ್ತೆಗಳಿಗೆ ಚೆಂದದ ಲುಕ್ ಕೊಟ್ಟಿವೆ. ಕಟ್ಟಡಗಳ ವರ್ಣರಂಜಿತ ಬಣ್ಣಗಳು ಹಾಗೂ ವಿನ್ಯಾಸವು ಭಾರತದಲ್ಲೇ ಮಿನಿ ಫ್ರ್ಯಾನ್ಸ್ ತಂದು ನಿಲ್ಲಿಸಿದಂತೆ ಕಾಣುತ್ತದೆ. ನಿಮ್ಮ ಜಂಟಿ ಬಾಳ ಪಯಣದ ಆರಂಭವನ್ನು ಸುಂದರವಾಗಿಸುವ ತಾಕತ್ತು ಪಾಂಡಿಚೆರಿಯ ಸೌಂದರ್ಯಕ್ಕಿದೆ.
ದೇಶದಲ್ಲೇ ಅತಿ ಉದ್ದದ ರೈಲುಗಳಿವು; ನೀವು ಪಯಾಣಿಸಿದ್ದೀರಾ?
ತಾಜ್‌ಮಹಲ್, ಆಗ್ರಾ
ಪ್ರಿ ವೆಡ್ಡಿಂಗ್ ಶೂಟ್‌ಗೆ ತಾಜ್‌ಮಹಲ್‌ಗಿಂತ ಹೆಚ್ಚು ರೊಮ್ಯಾಂಟಿಕ್ ಎನ್ನಿಸುವಂತ ತಾಣ ಭಾರತದಲ್ಲಿ ಇನ್ನೊಂದಿರಲಾರದು. ಏಕೆಂದರೆ, ಇದು ಪ್ರೇಮಸೌಧವೆಂದೇ ಖ್ಯಾತಿ ಪಡೆದಿದೆ. ಇಂದು ಪ್ರೀತಿಯ ಸಂಕೇತ. ತಾಜ್‌ಮಹಲ್‌ನ ನ್ಯಾಚುರಲ್ ಸೆಟ್ಟಿಂಗ್ ಒಂದೇ ಸಾಕು, ನಿಮ್ಮ ಫೋಟೋಗಳಿಗೆ ರೊಮ್ಯಾನ್ಸ್ ತುಂಬಲು. ಹಿಂದಿರುವ ಮೆಹ್ತಾಬ್ ಪಾರ್ಕ್ ತಾಜ್‌ಮಹಲ್‌ನ ಕ್ಲಿಯರ್ ವ್ಯೂನೊಂದಿಗೆ ಪ್ರಿ ವೆಡ್ಡಿಂಗ್ ಶೂಟನ್ನು ಪ್ರೇಮಗೀತೆಯಾಗಿಸುವುದರಲ್ಲಿ ಅನುಮಾನವಿಲ್ಲ.
ಮದುವೆ ಫೊಟೊ ಶೂಟ್ ವೇಳೆ ನದಿಗೆ ಬಿದ್ದ ಜೋಡಿ : ವಿಡಿಯೋ ವೈರಲ್!
ಸೋಲಂಗ್ ವ್ಯಾಲಿ, ಮನಾಲಿ
ಕುಲು ಮನಾಲಿಗೆ ಹನಿಮೂನ್‌ಗೆ ಹೋಗುವುದು ಹಳತಾಯಿತು. ಪ್ರಿ ವೆಡ್ಡಿಂಗ್ ಶೂಟ್‌ಗಾಗಿ ಹೋಗುವುದು ಸಧ್ಯದ ಟ್ರೆಂಡ್. ಇಲ್ಲಿನ ಸೋಲಂಗ್ ವ್ಯಾಲಿ ನೀಡುವ ಹಿಮಚ್ಛಾದಿತ ಪರ್ವತಗಳು, ಸುಂದರ ನದಿಗಳು ಬ್ಯಾಕ್‌ಗ್ರೌಂಡ್ ನಿಮ್ಮ ಫೋಟೋಗಳಿಗೆ ಪರ್ಫೆಕ್ಟ್ ಲುಕ್ ಕೊಡುತ್ತವೆ. ನಯನ ಮನೋಹರ ತಾಣದಲ್ಲಿ ಪ್ರೀತಿಯ ಪಲ್ಲವಿ ಹಾಡುವ ಹೊಸ ಜೋಡಿಯ ರೊಮ್ಯಾನ್ಸ್ ಅದ್ಭುತ ಫೋಟೋಶೂಟ್ ಆಗದಿರಲು ಸಾಧ್ಯವಾದರೂ ಹೇಗೆ?