Asianet Suvarna News Asianet Suvarna News

ವೀಕೆಂಡ್ ಟ್ರಿಪ್‌ಗೆ ಬೆಂಗಳೂರಿನ ಸುತ್ತ ಇರೋ ಈ ಸ್ಥಳಗಳು ಬೆಸ್ಟ್

ಬೆಂಗಳೂರಿನ ಗಡಿಬಿಡಿಯ ಸಮಯ ಸಾಲದ ಬದುಕಲ್ಲಿ ಮಿಂದವರಿಗೆ ಎದ್ದು ಎಲ್ಲಾದರೂ ಸಮಯ ನಿಂತಂತ, ಹೆಚ್ಚು ಜನರಿಲ್ಲದ, ಸುಂದರ ಪರಿಸರದ ನಡುವೆ ಒಂದೆರಡು ದಿನವಾದರೂ ಇದ್ದು ಬರಬೇಕೆನ್ನಿಸುವುದು ಸಹಜ. ಅಂಥವರಿಗಾಗಿ ಇಲ್ಲಿವೆ ಕೆಲ ಆಫ್ ಬೀಟ್ ಸ್ಥಳಗಳು. 

Off Beat Places To Explore Near Bengaluru For Some Peace In Life
Author
Bengaluru, First Published Oct 23, 2019, 11:59 AM IST

ನೀವು ಬೆಂಗಳೂರಿನಲ್ಲಿರುವವರಾಗಿದ್ದು, ವೀಕೆಂಡ್ ಸುತ್ತಾಟಕ್ಕೆ ಸ್ಥಳ ಹುಡುಕುತ್ತಿದ್ದರೆ, ಅಥವಾ ಕೆಲ ಕಾಲ ಬೆಂಗಳೂರಿನಲ್ಲಿದ್ದು ಸುತ್ತಮುತ್ತ ತಿರುಗಾಡಬೇಕೆಂಬ ಬಯಕೆಯಿದ್ದು, ಜನಸಂದಣಿ ಕಡಿಮೆ ಇರುವ ಸ್ಥಳಗಳಿಗಾಗಿ ಅರಸುತ್ತಿದ್ದರೆ ಇಲ್ಲೊಂದಿಷ್ಟು ಆಫ್ ಬೀಟ್ ಸ್ಥಳಗಳಿವೆ. ಬ್ಯುಸಿ ಬದುಕಿನ ನಡುವೆ ಅದರ ಗೊಡವೆ ತಮಗಿನ್ನೂ ಅಂಟಿಲ್ಲವೆಂದು ಹಾಯಾಗಿರುವ ಸುಂದರ ತಾಣಗಳಿವು. ಒಂದು ದಿನದ ಭೇಟಿಗೆ ಹೇಳಿ ಮಾಡಿಸಿದಂಥ ಈ ಪ್ರದೇಶಗಳು ನಿಮ್ಮ ವೀಕೆಂಡನ್ನು ನೆನಪಿನ ಖಾತೆಗೆ ಸೇರಿಸಬಲ್ಲವು. 

ರಾಮನಗರ

Off Beat Places To Explore Near Bengaluru For Some Peace In Life
ಕಲ್ಲಿನ ಬೆಟ್ಟಗಳಿಂದ ತುಂಬಿರುವ ರಾಮನಗರದಲ್ಲಿ ಅಷ್ಟೇ ಹಸಿರೂ ಇದೆ. ಮೈಸೂರ್ ಸಿಲ್ಕ್‌ಗೆ ರೇಶ್ಮೆ ಒದಗಿಸುವ ಈ ರೇಶ್ಮೆ ನಗರದ ಗ್ರಾನೈಟ್ ಬೆಟ್ಟಗಳ ಮೇಲೆ ಒಂದು ದಿನದ ಚಾರಣ ಬಹಳ ಮೋಜಿನಿಸುತ್ತದೆ. ಅದರಲ್ಲೂ ಬೆಳಗಿನ ಜಾವ ರಾಮದೇವರ ಬೆಟ್ಟವೇರಿ ಪಕ್ಷಿವೀಕ್ಷಣೆ ನಡೆಸುವುದು ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೆ, ಸೂರ್ಯನ ಉರಿಮುಖವೂ ಇರುವುದಿಲ್ಲ. ಅಂದ ಹಾಗೆ, 'ಶೋಲೆ' ಯ ಗಬ್ಬರ್ ಸಿಂಗ್ ಹಾಗೂ ಗ್ಯಾಂಗ್ ಕೂರುತ್ತಿದ್ದುದು ಇಲ್ಲಿಯೇ. ಬೆಂಗಳೂರಿನಿಂದ 50 ಕಿಲೋಮೀಟರ್‌ಗಳ ಅಂತರದಲ್ಲಿರುವ ರಾಮನಗರಕ್ಕೆ ಬಂದಾಗ ಸಮಯವಿದ್ದರೆ ಮಂಚಿನಬೆಲೆ ಡ್ಯಾಂ ಹಾಗೂ ಜಾನಪದ ಲೋಕ ಮ್ಯೂಸಿಯಂಗೆ ಕೂಡಾ ಹೋಗಬಹುದು. ಬೈಕಾದರೆ ರೈಡ್ ಬಹಳ ಮಜವಾಗಿರುತ್ತದೆ. ನಿಮಗೆ ಆಸಕ್ತಿ ಇದ್ದರೆ ಇಲ್ಲಿನ ರೇಶ್ಮೆ ಮಾರುಕಟ್ಟೆಯನ್ನೂ ಒಮ್ಮೆ ಸುತ್ತಾಡಿ ಬರಬಹುದು. ಏಕೆಂದರೆ ಇದು ವಿಶ್ವದ ಅತಿ ದೊಡ್ಡ ರೇಶ್ಮೆ ಮಾರುಕಟ್ಟೆ. ಪ್ರತಿ ದಿನ ಸುಮಾರು 50 ಟನ್ ರೇಶ್ಮೆ ಮೊಟ್ಟೆಗಳು ಇಲ್ಲಿ ವ್ಯಾಪಾರವಾಗುತ್ತವೆ. 

ಸಾವನದುರ್ಗ

Off Beat Places To Explore Near Bengaluru For Some Peace In Life
ನೀವು ಚಾರಣಪ್ರಿಯರಾದರೆ, ಬೆಂಗಳೂರಿನಿಂದ 60 ಕಿಲೋಮೀಟರ್ ದೂರದಲ್ಲಿರುವ ಸಾವನ್‌ದುರ್ಗಕ್ಕೊಮ್ಮೆ ಹೋಗಲೇಬೇಕು. ಇದು ಏಷ್ಯಾದಲ್ಲೇ ಅತಿ ದೊಡ್ಡ ಏಕಶಿಲಾ ಬೆಟ್ಟ. ಇಲ್ಲಿ ಕಪ್ಪು ಹಾಗೂ ಬಿಳಿ ಬೆಟ್ಟಗಳಿವೆ. ಬಹಳಷ್ಟು ಅಳಿವಿನಂಚಿನಲ್ಲಿರುವ ಪಕ್ಷಿಗಳು ಹಾಗೂ ಸುಂದರವಾದ ಚಿಟ್ಟೆಗಳನ್ನಿಲ್ಲಿ ಕಣ್ತುಂಬಿಕೊಳ್ಳಬಹುದು. ರಾತ್ರಿ ಹೊತ್ತಾದರೆ ಅದೃಷ್ಟವಿದ್ದರೆ ಚಿರತೆ ಹಾಗೂ ಕರಡಿಯನ್ನೂ ನೋಡಬಹುದು. ಇಲ್ಲಿ ಕೂಡಾ ಬೆಳಗ್ಗೆ 5ರ ಹಾಗೆ ತಲುಪಿ ಚಾರಣ ಆರಂಭಿಸಿದರೆ ಸೂರ್ಯೋದಯವನ್ನು ಮೇಲಿನಿಂದಲೇ ಕಣ್ತುಂಬಿಕೊಳ್ಳಬಹುದು, ಗಾಳಿಯೂ ತಂಪಾಗಿರುತ್ತದೆ. 10 ಗಂಟೆಯ ಬಳಿಕ ಬಿಸಿಲು ಹೆಚ್ಚುವುದರಿಂದ ಸಮಯವನ್ನು ಸರಿಯಾಗಿ ಯೋಜಿಸಿಕೊಳ್ಳುವುದು ಅಗತ್ಯ. ಇಲ್ಲಿ ಯಾವುದೇ ಮೆಟ್ಟಿಲುಗಳಿಲ್ಲವಾದ ಕಾರಣ ಮಕ್ಕಳನ್ನು ಜೊತೆಗೆ ಕರೆದೊಯ್ಯದಿರುವುದು ಉತ್ತಮ. 

ಮಧ್ಯರಾತ್ರಿ ಬ್ಯಾಂಕಾಂಕ್‌ನಲ್ಲಿ ಅಲೆದಾಡಿದ ಅಮೂಲ್ಯ

ಗಾಳಿಬೊರೆ

Off Beat Places To Explore Near Bengaluru For Some Peace In Life
ಫಿಶಿಂಗ್ ಆಸಕ್ತಿಯಿರುವವರು ಬೆಂಗಳೂರಿನಿಂದ 102 ಕಿಲೋಮೀಟರ್ ದೂರದಲ್ಲಿರುವ ಗಾಳಿಬೊರೆಯ ಕಾವೇರಿ ತೀರದಲ್ಲಿ ಕ್ಯಾಂಪಿಂಗ್ ಮಾಡಬಹುದು. ಇಲ್ಲಿನ ಶಾಂತ ಪರಿಸರದ ನಡುವೆ ನೇಚರ್ ವಾಕ್ ಮನಸ್ಸನ್ನು ರಿ ಎನರ್ಜೈಸ್ ಮಾಡುತ್ತದೆ. 

ಅಂತರಗಂಗೆ

Off Beat Places To Explore Near Bengaluru For Some Peace In Life
ಬೆಂಗಳೂರಿನಿಂದ 80 ಕಿಲೋಮೀಟರ್ ದೂರದಲ್ಲಿರುವ ಅಂತರಗಂಗೆಯ ಬೆಟ್ಟವೇರಲು ಈಗ ಪರ್ಫೆಕ್ಟ್ ಸಮಯ. ಬೆಟ್ಟದ ಮಧ್ಯೆ ಚೆಂದದೊಂದು ಈಶ್ವರ ದೇವಸ್ಥಾನವೂ ಇದೆ. ಇಲ್ಲಿ ಕಲ್ಲಿನ ಮೂತಿಯಿಂದ ವರ್ಷ ಪೂರ್ತಿ ನೀರು ಹರಿವ ಕಲರವ ಕೇಳಲು ಇಂಪು. ಕೋಲಾರದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿರುವ ಅಂತರಗಂಗೆಯಲ್ಲಿ ಕಲ್ಲಿನ ಗುಹೆಗಳೂ ಕೈ ಬೀಸಿ ಕರೆಯುತ್ತವೆ. ಇಲ್ಲಿ ಸ್ಥಳೀಯ ಗೈಡ್‌ಗಳ ಸಹಾಯ ಪಡೆದರೆ ರಾತ್ರಿ ಹೊತ್ತು ಕೂಡಾ ಚಾರಣ ಮಾಡಬಹುದು. ಆದರೆ, ಕಲ್ಲು ಬಹಳ ತಣ್ಣಗಾಗಿರುವುದರಿಂದ ದಪ್ಪನೆಯ ಜಾಕೆಟ್ ಹಾಗೂ ಬೆಚ್ಚಗಿರಲು ಇತರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನೂ ಹೆಚ್ಚಿನ ಸಮಯವಿದ್ದರೆ ಕೋಲಾರದ ಕೋಲಾರಮ್ಮ ಹಾಗೂ ವಿಜಯನಗರ ಕಾಲದ ಸೋಮೇಶ್ವರ ದೇವಾಲಯಗಳಿಗೆ ಭೇಟಿ ನೀಡಬಹುದು. 

ಮರೆಯಲಾಗದ ಮಾಸ್ಕೋ ಪ್ರವಾಸ

ಗುಡಿಬಂಡೆ

Off Beat Places To Explore Near Bengaluru For Some Peace In Life
ಬೆಂಗಳೂರಿನಿಂದ ಶನಿವಾರದ ಡ್ರೈವ್‌ ಗುಡೆಬಂಡೆಯತ್ತ ಸಾಗಿದರೆ ಒಂದೆರಡು ಗಂಟೆಯಲ್ಲಿ ಅಲ್ಲಿರುತ್ತೀರಿ. ಇಲ್ಲಿ 400 ವರ್ಷ ಹಳೆಯ ಭೈರೆಗೌಡರು ಕಟ್ಟಿಸಿದ ಗುಡಿಬಂಡ ಕೋಟೆಯಿದೆ. ಕಲ್ಲಿನ ಬೆಟ್ಟವನ್ನೇ ಕೊರೆದು ಕೋಟೆಯಾಗಿಸಿದ್ದರಿಂದ ನೋಡಲು ಸೊಗಸೆನಿಸುತ್ತದೆ. ಮೆಟ್ಟಿಲುಗಳಿದ್ದರೂ ಸುತ್ತಲ ಹಳ್ಳಿ, ಬೆಟ್ಟ ದೃಶ್ಯಗಳಿಂದಾಗಿ ಇದೊಂದು ಚಾರಣದ ಅನುಭವವನ್ನೇ ನೀಡುತ್ತದೆ. 

ಕುಂತಿ ಬೆಟ್ಟ

Off Beat Places To Explore Near Bengaluru For Some Peace In Life
ನೀವು ಸಾಹಸ ಪ್ರಿಯರಾದರೆ ಕುಂತಿಬೆಟ್ಟ ನಿಮ್ಮನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತದೆ. ಬೆಂಗಳೂರಿನಿಂದ 130 ಕಿಲೋಮೀಟರ್ ದೂರದಲ್ಲಿರುವ ಕುಂತಿಬೆಟ್ಟದಲ್ಲಿ ರಾಕ್ ಕ್ಲೈಂಬಿಂಗ್, ನೈಟ್ ಟ್ರೆಕಿಂಗ್ ಹಾಗೂ ಕ್ಯಾಂಪಿಂಗ್ ಮಾಡಲು ಅವಕಾಶಗಳಿದ್ದು, ಖಂಡಿತವಾಗಿಯೂ ಜೀವಮಾನದಲ್ಲಿ ಮರೆಯದ ಅುಭವ ನೀಡುವ ಶಕ್ತಿ ಈ ಸ್ಥಳಕ್ಕಿದೆ. 

ದೊಡ್ಡಮಾಕಳಿ

Off Beat Places To Explore Near Bengaluru For Some Peace In Life
ಪ್ರಕೃತಿ ಪ್ರಿಯರ ಮನಸ್ಸಿಗೆ ಸಮಾಧಾನ ನೀಡುವ ಸ್ವರ್ಗ ದೊಡ್ಡಮಾಕಳಿ. ಶಾಂತವಾಗಿ ಕಾಣುವ ಕಾವೇರಿ, ಅದರ ಸುತ್ತ ಹಬ್ಬಿರುವ ಹಸಿರು- ಅದರ ನಡುವೆ ಕ್ಯಾಂಪಿಂಗ್‌ನ ಸುಖ ನಿಮ್ಮನ್ನು ಮುದಗೊಳಿಸುತ್ತದೆ. 'ಪಕ್ಷಿಗಳ ಸ್ವರ್ಗ' ಎಂದೇ ಕರೆಸಿಕೊಳ್ಳುವ ಈ ಸ್ಥಳದಲ್ಲಿ ಬೆಳಗಿನ ಜಾವ ಹಾಗೂ ಸಂಜೆಯ ಹೊತ್ತಿನಲ್ಲಿ ಹಲವಾರು ಪಕ್ಷಿಗಳ ಇಂಚರ ಖುಷಿಪಡಿಸುತ್ತದೆ. ಅಂದ ಹಾಗೆ ಇದು ಬೆಂಗಳೂರಿನಿಂದ 114 ಕಿಲೋಮೀಟರ್ ದೂರದಲ್ಲಿದೆ. 

Follow Us:
Download App:
  • android
  • ios