ತಿರುವನಂತಪುರ : ಮದುವೆ ಫೊಟೊಶೂಟ್ ಮಾಡುವಾಗ ಜೋಡಿಯೊಂದು ನದಿಗೆ ಉರುಳಿ ಬಿದ್ದ ಘಟನೆ ಕೇರಳದಲ್ಲಿ ನಡೆದಿದೆ. 

 ಪರ್ಫೆಕ್ಟ್  ಆಗಿ ಫೊಟೊ ಶೂಟ್ ಮಾಡುವ ಸಲುವಾಗಿ ಫೊಟೊಗ್ರಾಫರ್ ಸುಂದರ ತಾಣದಲ್ಲಿ ಫೊಟೊ ಶೂಟ್ ಮಾಡುವಾಗ ಈ ಘಟನೆ ನಡೆದಿದೆ. 

ಜೋಡಿ ನದಿಗೆ ಉರಳಿ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. 

ತಿಜಿನ್ ಹಾಗೂ ಶಿಲ್ಪಾ ಎಂಬ ಜೋಡಿ ನದಿಯಲ್ಲಿ ದೋಣಿಯಲ್ಲಿ ಕುಳಿತು ಫೊಟೊ ಶೂಟ್ ಮಾಡಿಸಿಕೊಳ್ಳುತ್ತಿದ್ದರು.  ಪಂಬಾ ನದಿಯಲ್ಲಿ ಎಲೆ ಹಿಡಿದು ಫೊಟೊಶೂಟ್ ಮಾಡುವಾಗ ದೋಣಿ ಮಗುಚಿದೆ. ಆದರೆ ಆಳವಾದ ಪ್ರದೇಶವಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. 

ಈ ರೀತಿ ಫೊಟೊ ಶೂಟ್ ಮಾಡುವುದು ಸ್ಟುಡಿಯೋ ಯೋಜನೆಯಾಗಿದ್ದು, ಈ ಬಗ್ಗೆ ಜೋಡಿಗೆ ಮುಂಚಿತವಾಗಿ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದೆ.