2 ದಿನದಲ್ಲಿ 2 ಭಾರತೀಯ ಪೈಲಟ್‌ಗಳ ಸಾವು: ಒಬ್ಬ ಏರ್‌ಪೋರ್ಟಲ್ಲಿ, ಇನ್ನೊಬ್ಬ ವಿಮಾನದಲ್ಲಿ ಬಲಿ
2 ದಿನಗಳ ಅಂತರದಲ್ಲಿ ಇಬ್ಬರು ಭಾರತೀಯ ಪೈಲಟ್‌ಗಳು ಮೃತಪಟ್ಟಿದ್ದಾರೆ ಒಬ್ಬ ಏರ್‌ಪೋರ್ಟಲ್ಲಿ, ಇನ್ನೊಬ್ಬ ವಿಮಾನದಲ್ಲಿ ಅಸುನೀಗಿದ್ದಾರೆ. ಅಮೆರಿಕದಲ್ಲಿ ಒಬ್ಬ ಪೈಲಟ್ ಶೌಚಾಲಯದಲ್ಲಿ ಕುಸಿದು ಮೃತಪಟ್ಟ ಘಟನೆಯ ಬೆನ್ನಲ್ಲೇ ಈ 2 ಆತಂಕಕಾರಿ ಪ್ರಸಂಗಗಳು ನಡೆದಿವೆ.

ನವದೆಹಲಿ: ಬುಧವಾರ ಮತ್ತು ಗುರುವಾರದ 2 ದಿನಗಳ ಅಂತರದಲ್ಲಿ ಇಬ್ಬರು ಭಾರತೀಯ ಪೈಲಟ್‌ಗಳು ಮೃತಪಟ್ಟಿದ್ದಾರೆ ಒಬ್ಬ ಏರ್‌ಪೋರ್ಟಲ್ಲಿ, ಇನ್ನೊಬ್ಬ ವಿಮಾನದಲ್ಲಿ ಅಸುನೀಗಿದ್ದಾರೆ. ಅಮೆರಿಕದಲ್ಲಿ ಒಬ್ಬ ಪೈಲಟ್ ಶೌಚಾಲಯದಲ್ಲಿ ಕುಸಿದು ಮೃತಪಟ್ಟ ಘಟನೆಯ ಬೆನ್ನಲ್ಲೇ ಈ 2 ಆತಂಕಕಾರಿ ಪ್ರಸಂಗಗಳು ನಡೆದಿವೆ. ಇಂಡಿಗೋ ಪೈಲಟ್ ಒಬ್ಬರು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮತ್ತು ಮತ್ತೊಬ್ಬರು ಕತಾರ್ ಏರ್‌ವೇಸ್‌ನ ಪೈಲಟ್ ಒಬ್ಬರು ದೆಹಲಿ- ದೋಹಾ ವಿಮಾನದಲ್ಲೇ ಸಾವನ್ನಪ್ಪಿದ್ದಾರೆ.
ನಾಗ್ಪುರದಿಂದ ಪುಣೆಗೆ ಹೋಗಬೇಕಿದ್ದ ಇಂಡಿಗೋ ವಿಮಾನವನ್ನು ಚಲಾಯಿಸಬೇಕಿದ್ದ ಪೈಲಟ್ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಅಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ವಿಮಾನದ ಬಾತ್ರೂಮ್‌ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು: ವಿಮಾನ ತುರ್ತು ಲ್ಯಾಂಡಿಂಗ್
ಇನ್ನು ದೆಹಲಿಯಿಂದ ದೋಹಾಗೆ ಪ್ರಯಾಣಿಸುತ್ತಿದ್ದ ಕತಾರ್ ಏರ್‌ವೇಸ್ ವಿಮಾನದ ಹೆಚ್ಚುವರಿ ಸಿಬ್ಬಂದಿಯಾಗಿ ಹೋಗಿದ್ದ ಪೈಲಟ್‌ವೊಬ್ಬರು ಹೃದಯ ಸ್ತಂಭನಕ್ಕೆ ತುತ್ತಾಗಿ ವಿಮಾನದಲ್ಲೇ ನಿಧನರಾಗಿದ್ದಾರೆ. ಕೂಡಲೇ ವಿಮಾನವನ್ನು ದುಬೈಗೆ ಮಾರ್ಗ ಬದಲಿಸಿ ಭೂಸ್ಪರ್ಶ ಮಾಡಲಾಗಿದೆ.