Asianet Suvarna News Asianet Suvarna News

ವಿಮಾನದ ಬಾತ್ರೂಮ್‌ನಲ್ಲಿ ಕುಸಿದು ಬಿದ್ದು ಪೈಲಟ್ ಸಾವು: ವಿಮಾನ ತುರ್ತು ಲ್ಯಾಂಡಿಂಗ್

ವಿಮಾನದ ಬಾತ್‌ರೂಮ್‌ನಲ್ಲಿ ಪೈಲಟ್ ಕುಸಿದು ಬಿದ್ದು ಪ್ರಾಣ ಬಿಟ್ಟ ಪರಿಣಾಮ ವಿಮಾ ತುರ್ತು ಲ್ಯಾಂಡಿಂಗ್ ಆದ ಘಟನೆ ಅಮೆರಿಕಾದ ಪನಾಮದಲ್ಲಿ ನಡೆದಿದೆ.  

Pilot dies after collapsing in planes bathroom plane makes emergency landing at panama city akb
Author
First Published Aug 17, 2023, 1:08 PM IST

ಪನಾಮ: ವಿಮಾನದ ಬಾತ್‌ರೂಮ್‌ನಲ್ಲಿ ಪೈಲಟ್ ಕುಸಿದು ಬಿದ್ದು ಪ್ರಾಣ ಬಿಟ್ಟ ಪರಿಣಾಮ ವಿಮಾ ತುರ್ತು ಲ್ಯಾಂಡಿಂಗ್ ಆದ ಘಟನೆ ಅಮೆರಿಕಾದ ಪನಾಮದಲ್ಲಿ ನಡೆದಿದೆ.  ಖಾಸಗಿ ಪ್ಲೈಟೊಂದರಲ್ಲಿ ಈ ಘಟನೆ ನಡೆದಿದೆ.  ಮಿಯಾಮಿಯಿಂದ ಚಿಲಿಗೆ ಹೊರಟಿದ್ದ ಈ ಖಾಸಗಿ ಫ್ಲೈಟ್‌ನಲ್ಲಿ 271 ಜನರಿದ್ದರು. ಮೃತ ಪೈಲಟ್‌ನ್ನು ಇವಾನ್ ಅಂದೂರ್ ಎಂದು ಗುರುತಿಸಲಾಗಿದೆ ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ. 

ಈ ವಿಮಾನದವೂ ಲಾಟಾಮ್ ಏರ್‌ಲೈನ್ಸ್‌ಗೆ (LATAM Airlines flight)ಸೇರಿದ್ದಾಗಿದ್ದು, ವಿಮಾನವೂ ಮಿಯಾಮಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಮೂರು ಗಂಟೆಯ ನಂತರ ಅವರಿಗೆ ಪೈಲಟ್ ಅಸ್ವಸ್ಥಗೊಂಡಿದ್ದು, ವಿಮಾನದ ಬಾತ್‌ರೂಮ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಅವರಿಗೆ ವಿಮಾನದ ಸಿಬ್ಬಂದಿ ತುರ್ತು ಚಿಕಿತ್ಸೆ ನೀಡಿದರಾದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಹೀಗಾಗಿ ಸಹ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಗ್ ಮಾಡಿದ್ದಾರೆ. 

ವಿಮಾನವು ಪನಾಮ ಸಿಟಿಯ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ವೈದ್ಯಕೀಯ ತಜ್ಷರು ಪೈಲಟ್‌ನ್ನು ಪರಿಶೀಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಾಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಮೃತ ಪೈಲಟ್ ಇವಾನ್ ಅಂದೌರ್ (Ivan Andaur) ಅವರು 25 ವರ್ಷಗಳ ಅನುಭವ ಹೊಂದಿದ್ದ ಬಹಳ ಅನುಭವಿ ಪೈಲಟ್ ಆಗಿದ್ದರು. 

ಈ ಬಗ್ಗೆ ಲ್ಯಾಟಮ್ ಏರ್‌ಲೈನ್ಸ್ ಪ್ರಕಟಣೆ ಹೊರಡಿಸಿದ್ದೆ. 'ನಿನ್ನೆ ಮಿಯಾಮಿಯಿಂದ ಸ್ಯಾಂಟಿಯಾಗೊಗೆ ಹೊರಟಿದ್ದ  ಫ್ಲೈಟ್ LA505 ನ ಕಮಾಂಡ್ ಸಿಬ್ಬಂದಿಯ ಮೂವರು ಸದಸ್ಯರಲ್ಲಿ ಒಬ್ಬರಿಗೆ ವೈದ್ಯಕೀಯ ತುರ್ತುಸ್ಥಿತಿ ಉಂಟಾದ ಕಾರಣ ಪನಾಮದ ಟೊಕುಮೆನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ( Tocumen International Airport) ವಿಮಾನ ತುರ್ತಾಗಿ ಇಳಿಯುವಂತಾಯ್ತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನ ನಿಲ್ದಾಣದ ತುರ್ತು ಸೇವಾ ಸಿಬ್ಬಂದಿ ಸಹಾಯಕ್ಕೆ ಧಾವಿಸಿ ಬಂದರೂ ಪೈಲಟ್ ಜೀವ ಉಳಿಸಲಾಗಲಿಲ್ಲ ಎಂದು ಏರ್‌ಲೈನ್ಸ್ ತಿಳಿಸಿದೆ. 

ನಡೆದಿರುವ ಈ ದುರಂತದಿಂದ ನಮಗೂ ನೋವಾಗಿದೆ. ಅಕಾಲಿಕವಾಗಿ ಸಾವಿಗೀಡಾದ ನಮ್ಮ ಉದ್ಯೋಗಿಯ ಕುಟುಂಬಕ್ಕೆ ನಾವು ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ಸಮರ್ಪಣೆ, ವೃತ್ತಿಪರತೆ ಮತ್ತು ಸಮರ್ಪಣೆಯಿಂದ ಕೂಡಿದ್ದ ಅವರ 25 ವರ್ಷಗಳ ವೃತ್ತಿಜೀವನ ಹಾಗೂ ಅವರು ನೀಡಿದ ಅಮೂಲ್ಯ ಸೇವೆಗೆ ನಾವು ಕೃತಜ್ಞರಾಗಿರುತ್ತೇವೆ. ಹಾರಾಟದ ಸಮಯದಲ್ಲಿ ಅವರ ಜೀವ ಉಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯ್ತಾದ್ರೂ ಸಾಧ್ಯವಾಗಲಿಲ್ಲ ಎಂದು ಪ್ರಕಟಣೆ ಹೇಳಿದೆ.  ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮೃತರಾದ ಪೈಲಟ್ ಅಂಡೂರ್ ಅವರಿಗೆ 56 ವರ್ಷ ವಯಸ್ಸಾಗಿತ್ತು. 

Follow Us:
Download App:
  • android
  • ios