ಡಿಜಿಟಲ್‌ ಟ್ರಾವೆಲ್‌ ಟ್ರೆಂಡ್‌: ಡಿಜಿ ಯಾತ್ರಾ ಅಪ್ಲಿಕೇಶನ್‌ ಬಳಕೆಯಲ್ಲಿ ದೆಹಲಿ, ಬೆಂಗಳೂರು ನಂ.1

2022ರ ಡಿಸೆಂಬರ್‌ನಲ್ಲಿ ಪ್ರಾರಂಭ ಮಾಡಲಾಗಿದ್ದ ಡಿಜಿ ಯಾತ್ರಾ ಅಪ್ಲಿಕೇಶನ್‌ ಅನ್ನು ಬೆಂಗಳೂರು ಮತ್ತು ದೆಹಲಿಯ ಪ್ರಯಾಣಿಕರು ಅಭೂತಪೂರ್ವವಾಗಿ ಅಳವಡಿಸಿಕೊಂಡಿದ್ದಾರೆ. ಇದರ ಮೂಲಕ ವಿಮಾನ ನಿಲ್ದಾಣದಲ್ಲಿ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.
 

1-4 crore passengers using Digi-Yatra app since launch Delhi, Bengaluru lead san

ನವದೆಹಲಿ (ಫೆ.20): ಬೆಂಗಳೂರು ಮತ್ತು ದೆಹಲಿ ಪ್ರಯಾಣಿಕರು ಡಿಜಿ-ಯಾತ್ರಾ ಅಪ್ಲಿಕೇಶನ್‌ನ ಲಾಭವನ್ನು ಬಳಸಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಗಮನಾರ್ಹ ಸಂಖ್ಯೆಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ಸುಗಮಗೊಳಿಸಿದ್ದಾರೆ. ಡಿಸೆಂಬರ್ 2022 ರಲ್ಲಿ ಪರಿಚಯಿಸಲಾದ ಈ ನವೀನ ಫೇಸ್-ಸ್ಕ್ಯಾನ್ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಈಗಾಗಲೇ ಈ ಎರಡು ನಗರದ ಜನ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ. ಡಿಜಿ ಯಾತ್ರಾ ಅಪ್ಲಿಕೇಶನ್‌ ಪ್ರಾರಂಭವಾದ ಕೇವಲ 14 ತಿಂಗಳ ಒಳಗಾಗಿ 1.4 ಕೋಟಿ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಭಾರತದ ತಾಂತ್ರಿಕ ಪ್ರಗತಿಯ ಪುರಾವೆ ಎನಿಸಿಕೊಂಡಿರುವ ರೀತಿಯಲ್ಲಿ ಅಭಿವೃದ್ಧಿಯಾಗಿರುವ ಡಿಜಿ-ಯಾತ್ರಾ ಅಪ್ಲಿಕೇಶನ್, ದೇಶಾದ್ಯಂತ ಲಕ್ಷಾಂತರ ಜನರ ಪ್ರಯಾಣದ ದಿನಚರಿಯಲ್ಲಿ ವ್ಯಾಪಕ ಪ್ರಶಂಸೆ ಗಳಿಸಿದೆ. ಭಾರತದಾದ್ಯಂತ 13 ವಿಮಾನ ನಿಲ್ದಾಣಗಳಲ್ಲಿ ಪ್ರಸ್ತುತ ಇದು ಲಭ್ಯವಿದೆ. ಡಿಜಿ-ಯಾತ್ರಾ ಅಪ್ಲಿಕೇಶನ್ ಸ್ಥಿರವಾಗಿ ಜನರ ನಡುವೆ ಪ್ರಚಾರವಾಗುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳ ಪ್ರಕಾರ, ದೆಹಲಿ ಮತ್ತು ಬೆಂಗಳೂರಿನಲ್ಲಿ ಅತಿಹೆಚ್ಚಿ ಡಿಜಿ-ಯಾತ್ರಾ ಬಳಕೆದಾರರನ್ನು ಹೊಂದಿವೆ. ಅಪ್ಲಿಕೇಶನ್‌ನ ಜನಪ್ರಿಯತೆ ಹಾಗೂ ಇದು ಜನರ ಉಪಯೋಗಕ್ಕೆ ಪರಿಣಾಮಕಾರಿಗಯಾಗಿದೆ ಎನ್ನುವುದನ್ನು ಸಾಬೀತು ಮಾಡಿದೆ.

ಆರಂಭದಲ್ಲಿ ಡಿಸೆಂಬರ್ 2022 ರಲ್ಲಿ ದೆಹಲಿ, ಬೆಂಗಳೂರು ಮತ್ತು ವಾರಣಾಸಿಯಲ್ಲಿ ಇದನ್ನು ಪ್ರಾರಂಭ ಮಾಡಲಾಗಿತ್ತು. ಡಿಜಿ-ಯಾತ್ರಾ ಅಪ್ಲಿಕೇಶನ್‌ನ ವ್ಯಾಪ್ತಿಯು ವಿಜಯವಾಡ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆಯಲ್ಲಿ 2023ರ ಏಪ್ರಿಲ್‌ನಲ್ಲಿ ವಿಸ್ತರಣೆ ಮಾಡಲಾಗಿತ್ತು. ಮುಂಬೈ ವಿಮಾನ ನಿಲ್ದಾಣವು ಆಗಸ್ಟ್ 2023 ರಲ್ಲಿ ಟರ್ಮಿನಲ್ 2 ನಲ್ಲಿ ಮಾತ್ರ ಈ ಅಪ್ಲಿಕೇಶನ್‌ಗೆ ಅವಕಾಶ ನೀಡಿದೆ. ಫೆಬ್ರವರಿ 11ರಂದು ಮುಂಬೈ T2 ನಲ್ಲಿ ಸುಮಾರು 3 ಲಕ್ಷ ಬಳಕೆದಾರರನ್ನು ಡಿಜಿ ಯಾತ್ರಾ ದಾಖಲೆ ಮಾಡಿದೆ. ಮೊದಲ ವರ್ಷದ ಕೊನೆಯಲ್ಲಿ ಅಚ್ಚರಿ ಎನ್ನುವಂತೆ 1.1 ಕೋಟಿ ಪ್ರಯಾಣಿಕರು ಭಾರತದಾದ್ಯಂತ ಡಿಜಿ-ಯಾತ್ರಾ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದ್ದಾರೆ, ವಿಮಾನ ನಿಲ್ದಾಣಗಳ ಮೂಲಕ ಇದು ನೀಡುವ ತಡೆರಹಿತ ಪ್ರಯಾಣದ ಅನುಭವವನ್ನು ಆನಂದಿಸಿದ್ದಾರೆ.

ಇದ್ಯಾವ್‌ ನ್ಯಾಯ ಸ್ವಾಮಿ..ಫುಟ್‌ಪಾತ್‌ನಲ್ಲಿ ಬೆಸ್ಕಾಂ ತಂತಿ ತಗುಲಿ ಹೆಣವಾದ ತಾಯಿ ಮಗುವಿಗೆ 5 ಲಕ್ಷ, ಕೇರಳ ವ್ಯಕ್ತಿಗೆ 15 ಲಕ್ಷ!

ವೆಂಚರ್ ಕ್ಯಾಪಿಟಲ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ತೇಜ್ ಕಪೂರ್ ಈ ಕುರಿತಾಗಿ ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಡಿಜಿ-ಯಾತ್ರಾ ಗೇಟ್ ತನ್ನ ಅಮೂಲ್ಯ ಸಮಯವನ್ನು ಹೇಗೆ ಉಳಿಸಿತು ಎಂಬುದನ್ನು ಅವರು ಬರೆದುಕೊಂಡಿದ್ದಾರೆ. ಇದೇ ರೀತಿಯ ಭಾವನೆಗಳನ್ನು ತಂತ್ರಜ್ಞರಾದ ಆಶಿಶ್ ನಥಾನಿ ಅವರು ಹಂಚಿಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಪ್ರತಿ ಡಿಜಿ-ಯಾತ್ರಾ ಪ್ರಯಾಣಿಕರಿಗೆ ಗೇಟ್‌ನಲ್ಲಿ ಪ್ರಕ್ರಿಯೆಯ ಸಮಯ ಕೇವಲ 3 ಸೆಕೆಂಡುಗಳಾಗಿದೆ. ಈ ತ್ವರಿತ ಪ್ರಕ್ರಿಯೆಯು ಬೋರ್ಡಿಂಗ್ ಪಾಸ್‌ನಲ್ಲಿ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವುದು, ಮುಖ ಗುರುತಿಸುವಿಕೆ ಮತ್ತು ಇ-ಗೇಟ್ ಮೂಲಕ ತಡೆರಹಿತ ಪ್ರವೇಶವನ್ನು ಒಳಗೊಂಡಿರುತ್ತದೆ.

'ಆನೆ ದಾಳಿಯಿಂದ ರಾಜ್ಯದ ವ್ಯಕ್ತಿ ಸತ್ರೆ 5 ಲಕ್ಷ, ಕೇರಳ ವ್ಯಕ್ತಿ ಸತ್ತರೆ 15 ಲಕ್ಷ..' ರಾಜ್ಯ ಸರ್ಕಾರದ ವಿರುದ್ಧ ನಾಯಕರ ಕಿಡಿ!

Latest Videos
Follow Us:
Download App:
  • android
  • ios