ಬ್ರಹ್ಮಾಂಡದ ಅತ್ಯಂತ ಪುರಾತನ ಬಿಳಿ ಕುಬ್ಜ ನಕ್ಷತ್ರ ಪತ್ತೆ| ಧೂಳಿನ ಕಣಗಳ ಬಳೆಗಳನ್ನು ಹೊಂದಿರುವ ನಕ್ಷತ್ರ| LSPM J0207+3331 ಅಥವಾ J0207 ಹೆಸರಿನ ನಕ್ಷತ್ರ|  ಬಿಲಿಯನ್ ವರ್ಷಕ್ಕೂ ಹಿಂದೆ ರಚಿತವಾದ ಬಳೆಗಳು| ನಾಸಾ ಕಣ್ಣಿಗೆ ಬಿತ್ತು ಬ್ರಹ್ಮಾಂಡದ ಅಪರೂಪದ ನಕ್ಷತ್ರ|

ವಾಷಿಂಗ್ಟನ್(ಫೆ.20): ಕೆಲವರಿಗೆ ಭೂಮಿಯ ಮೇಲಿನ ಆಗುಹೋಗುಗಳ ಚಿಂತೆ. ಇನ್ನೂ ಕೆಲವರಿಗೆ ಬ್ರಹ್ಮಾಂಡದ ಆಗುಹೋಗುಗಳ ಚಿಂತೆ. ಬ್ರಹ್ಮಾಂಡದ ಅಗಾಧತೆಯನ್ನು ಅಳೆದು ತೂಗುವಲ್ಲಿ ನಿರತವಾಗಿರುವ ನಾಸಾ, ದಿನಕ್ಕೊಂದು ಅಚ್ಚರಿಯನ್ನು ಖಗೋಳ ಪ್ರೀಯರಿಗೆ ನೀಡುತ್ತಿದೆ.

ಅದರಂತೆ ಬ್ರಹ್ಮಾಂಡದ ಅತ್ಯಂತ ಪುರಾತನ White Dwarf(ಬಿಳಿ ಕುಬ್ಜ) ನಕ್ಷತ್ರವನ್ನು ಕಂಡು ಹಿಡಿಯುವಲ್ಲಿ ನಾಸಾ ಯಶಸ್ವಿಯಾಗಿದೆ. ಭೂಮಿಯ ಗಾತ್ರದಷ್ಟಿರುವ ಈ ಚಿಕ್ರ ನಕ್ಷತ್ರಕ್ಕೆ ಧೂಳಿನ ಕಣಗಳಿಂದ ರಚಿತವಾದ ಬಳೆ ಇರುವುದು ಕೂಡ ವಿಶೇಷ.

Scroll to load tweet…

LSPM J0207+3331 ಅಥವಾ J0207 ಎಂಬ ಹೆಸರಿನ ಈ ನಕ್ಷತ್ರ ಗ್ರಹಕಾಯಗಳ ಮಾನವನ ಜ್ಞಾನವನ್ನೇ ಪ್ರಶ್ನಿಸುವಂತಿದ್ದು, ಇದರ ಬಳೆಗಳೇ ಬಿಲಿಯನ್ ವರ್ಷಕ್ಕೂ ಹಿಂದೆ ರಚಿತವಾದವು ಎಂದು ನಾಸಾ ತಿಳಿಸಿದೆ.