ಕ್ಯಾನ್ಸರ್ ಟ್ಯೂಮರ್ ನಿಯಂತ್ರಿಸುತ್ತೆ ಕೋವಿಡ್ ವೈರಸ್, ಅಚ್ಚರಿ ಹುಟ್ಟಿಸಿದ ವೈದ್ಯರ ಸಂಶೋಧನೆ!

ಕೋವಿಡ್ 19 ಸೃಷ್ಟಿಸಿದ ಅವಾಂತರ ಒಂದೆರೆಲ್ಲ. ಭಯ ಹುಟ್ಟಿಸಿದ ಕೋವಿಡ್ ವೈರಸ್ ಕ್ಯಾನ್ಸರ್ ರೋಗಕ್ಕೆ ವರದಾನ ಅನ್ನೋದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ವೈದ್ಯರ ಅಧ್ಯಯನ ಇದೀಗ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಆಯಾಮ ನೀಡಿದೆ.
 

Doctors Study says Covid 19 virus ability to fight against cancer tumour ckm

ನ್ಯೂಯಾರ್ಕ್(ನ.18) ಕೋವಿಡ್ ವೈರಸ್ ಹೆಸರು ಕೇಳಿದರೂ ವಿಶ್ವವೇ ಬೆಚ್ಚಿ ಬೀಳುತ್ತೆ. ಕೋಟ್ಯಾಂತರ ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆರೋಗ್ಯವಾಗಿದ್ದರೂ ಕೋವಿಡ್ ವೈರಸ್‌ಗೆ ಸಿಕ್ಕಿ ನರಳಾಡಿದ್ದಾರೆ. ಆಸ್ಪತ್ರೆ ಸಿಗದೆ, ಚಿಕಿತ್ಸೆ ಸಿಗದೆ, ಆಪ್ತರಿಂದಲೇ ದೂರವಿರಬೇಕಾದ ಪರಿಸ್ಥಿತಿಯನ್ನು ಹತ್ತಿರದಿಂದ ಭಾರತ ನೋಡಿದೆ. ಲಾಕ್‌ಡೈನ್,ಸೀಲ್‌ಡೌನ್ ಸೇರಿದಂತೆ ಹಲವು ನಿರ್ಬಂಧ ಎಲ್ಲವೂ ಜೀವನದ ತಾಳ ತಪ್ಪಿಸಿತ್ತು. ಕೋವಿಡ್ ಬಳಿಕವೂ ಹೃದಯಾಘಾತ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಬೆಳಕೆಗೆ ಬಂದಿದೆ. ಆದರೆ ಕೋವಿಡ್ ವೈರಸ್‌ನಿಂದ  ಬೆಚ್ಚಿ ಬೀಳುವ ಮಂದಿಗೆ ಇದೀಗ ವೈದ್ಯರ ಸಂಶೋಧನಾ ವರದಿ ಅಚ್ಚರಿ ಹುಟ್ಟಿಸಿದೆ. ಕಾರಣ ಕ್ಯಾನ್ಸರ್ ಟ್ಯೂಮರ್ ವಿರುದ್ಧ ಕೋವಿಡ್ ವೈರಸ್ ಪರಿಣಾಮಕಾರಿ ಅನ್ನೋದು ಅಧ್ಯಯನದಲ್ಲಿ ಪತ್ತೆಯಾಗಿದೆ.

ನಾರ್ತ್‌ವೆಸ್ಟರ್ನ್ ಮೆಡಿಸನ್ ಕ್ಯಾನಿಂಗ್ ಥೊರಾಸಿಕ್ ಸಂಸ್ಥೆ ನಡೆಸಿದ ಅಧ್ಯಯನವನ್ನು ತನ್ನ ಜರ್ನಲ್‌ನಲ್ಲಿ ಪ್ರಕಟಿಸಿದೆ. ಈ ವರದಿಯಲ್ಲಿ ಕೆಲ ಅಂಶಗಳು ಜಗತ್ತನ್ನೇ ಬೆರಗಾಗಿಸಿದೆ. ಕಾರಣ ಕೋವಿಡ್ 19 ವೈರಸ್ ದಾಳಿಗೆ ಒಳಗಾದ ಕ್ಯಾನ್ಸರ್ ರೋಗಿಗಳು ತೀವ್ರ ಅಸ್ವಸ್ಥರಾಗಿದ್ದರು. ಆದರೆ ಈ ಕ್ಯಾನ್ಸರ್ ರೋಗಿಗಳ ಟ್ಯೂಮರ್ ಕುಗ್ಗಿದೆ. ವೇಗವಾಗಿ ಬೆಳೆಯುತ್ತಿದ್ದ ಕೆಲವರ ಕ್ಯಾನ್ಸರ್ ಟ್ಯೂಮರ್ ನಿಧಾನವಾಗಿದೆ. ಬೆಳವಣಿಗೆ ಕುಂಠಿತಗೊಂಡಿದೆ. ಕೋವಿಡ್ ವೈರಸ್‌ಗೆ ತುತ್ತಾದ ಕ್ಯಾನ್ಸರ್ ರೋಗಿಗಳಲ್ಲಿ ಈ ಬೆಳವಣಿಗೆ ಕಂಡಿದೆ ಎಂದು ಈ ವರದಿ ಹೇಳಿದೆ.

ಕೋವಿಡ್ ವೇಳೆ ಯಮರಾಜನಾಗಿ ಜಾಗೃತಿ ಮೂಡಿಸಿದ್ದ ಪೊಲೀಸ್ ಪೇದೆ ದುರಂತ ಅಂತ್ಯ!

ಕೋವಿಡ್ ವೈರಸ್‌ಗೆ ತುತ್ತಾದವರ ದೇಹದಲ್ಲಿ ಪ್ರತಿರೋಧ ಶಕ್ತಿ ಕುಂದುತ್ತದೆ. ರೋಗ ನಿರೋಧಕ ಶಕ್ತಿ ಕಳೆದುಕೊಂಡು ತೀವ್ರ ಅಸ್ವಸ್ಥರಾದ ಹಲವು ಘಟನೆಗಳು, ಉದಾಹರಣಗಳು ಕಣ್ಣ ಮುಂದಿದೆ. ಕೋವಿಡ್ ವೇಳೆ ರೋಗ ನಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ಭಾರತೀಯ ಸಾಂಪ್ರದಾಯಿಕ ಶೈಲಿಯ ಆಹಾರ, ಪಾನಿಯಗಳ ಸೇವೆನೆಗೆ ಸಲಹೆ ನೀಡಲಾಗಿತ್ತು. ಕೋವಿಡ್ ವೈರಸ್‌ನ ಈ ಗಣ ಕ್ಯಾನ್ಸರ್ ಟ್ಯೂಮರ್ ವಿರುದ್ದ ಹೋರಾಡುವಲ್ಲಿ ಸಶಕ್ತವಾಗಿದೆ ಅನ್ನೋದು ಅದ್ಯಯನದಿಂದ ತಿಳಿದಿದೆ.

ಕೋವಿಡ್ ವೈರಸ್‌ನಿಂದ ಕ್ಯಾನ್ಸರ್ ಸೆಲ್ ನಿಯಂತ್ರಿಸಲು ಸಾಧ್ಯವೇ? ಕೋವಿಡ್ ವೈರಸ್ ಕ್ಯಾನ್ಸರ್ ಟ್ಯೂಮರ್ ಸೆಲ್ ಕೊಲ್ಲುತ್ತಾ? ಈ ಕುರಿತು ಸ್ಪಷ್ಟ ಮಾಹಿತಿಗೆ ಮತ್ತಷ್ಟು ಅಧ್ಯಯನ ಅಗತ್ಯ ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಕೋವಿಡ್ ಬಾಧಿಸಿದ ಕ್ಯಾನ್ಸರ್ ರೋಗಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಕುಗ್ಗಿರುವುದು, ಟ್ಯೂಮರ್ ಕುಗ್ಗಿರುವುದು ಸುಳ್ಳಲ್ಲ ಎಂದು ವರದಿ ಹೇಳುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಕೋವಿಡ್ ವೈರಸ್ ಬಳಕೆ ಮಾಡುವ ಕುರಿತು ಅಧ್ಯಯನಗಳು ನಡೆಯಬೇಕು ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ. 

ವೈದ್ಯ ಭರತ್ ಈ ಕುರಿತು ಕೆಲ ಅಂಶಗಳ ಬೆಳಕು ಚೆಲ್ಲಿದ್ದಾರೆ. SARS-CoV-2 ವೈರಸ್ ದಾಳಿ ಮಾಡಿದ ಮನುಷ್ಯನ ದೇಹದಲ್ಲಿ ಮೊನೋಸೈಟ್ ಇಮ್ಯೂನ್ ಸೆಲ್ಸ್ ವಿಶೇಷ ರೀತಿಯಲ್ಲಿ ವರ್ತಿಸುತ್ತದೆ. ರಕ್ತದ ಮೂಲಕ ಚಲಿಸುವ ವೈರಸ್ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಈ ವೇಳ ಕೆಲ ಮೋನೋಸೈಟ್‌ಗಳು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಡಾ ಭರತ್ ಹೇಳಿದ್ದಾರೆ. 

ಕೋವಿಡ್ ವೈರಸ್‌ನಲ್ಲಿರುವ ಕೋಶಗಳ ಪೈಕಿ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ವೈರಸ್ ತೆಗೆದು ಕ್ಯಾನ್ಸರ್ ವಿರುದ್ದ ಹೋರಾಡಲು ಬಳಸುವ ಸಾಧ್ಯತೆ ಸ್ಪಷ್ಟವಾಗುತ್ತಿದೆ ಎಂದು ಸಂಶೋಧನಾ ವರದಿ ಹೇಳುತ್ತಿದೆ. ಈ ಕುರಿತ ಹೆಚ್ಚಿನ ಅಧ್ಯಯನ ಭವಿಷ್ಯದಲ್ಲಿ ಹೊಸ ಚಿಕಿತ್ಸಾ ವಿಧಾನಕ್ಕೆ ದಾರಿ ಮಾಡಿಕೊಡಲಿದೆ ಎಂದು ಹೇಳುತ್ತಿದೆ.
 

Latest Videos
Follow Us:
Download App:
  • android
  • ios