ಸತ್ತ ಬಳಿಕ ದೇಹದಲ್ಲಿ ಏನೇನಾಗುತ್ತದೆ? ಹಂತ ಹಂತದ ಮೈ ಝುಂ ಎನ್ನುವ ಮಾಹಿತಿ ನೀಡಿದ ನರ್ಸ್

ಸತ್ತ ಬಳಿಕ ಏನಾಗುತ್ತದೆ? ದೇಹದಲ್ಲಿ ಯಾವೆಲ್ಲಾ ಬದಲಾವಣೆ ಆಗುತ್ತದೆ? ದೇಹ ಹಾಗೆಯೇ ಬಿಟ್ಟರೆ ಹಂತ ಹಂತವಾಗಿ ಆಗೋದೇನು?  ಮೈ ಝುಂ ಎನ್ನುವ ಮಾಹಿತಿ ನೀಡಿದ ನರ್ಸ್
 

What Happens To Your Body After Death Hospice Nurse Explains step by step suc

ಸಾವು ‌ಎನ್ನುವುದು ಎಲ್ಲರಲ್ಲಿಯೂ ಒಂದು ರೀತಿಯ ಭಯ ಹುಟ್ಟಿಸುವುದು ಸಹಜವೇ. ಎಷ್ಟೇ ವಯಸ್ಸಾಗಿರಲಿ ಸಾವು ಎಂದಾಕ್ಷಣ ಅರೆಕ್ಷಣ ಬೆಚ್ಚಿಬೀಳಬಹುದು. ಆದರೆ ಹುಟ್ಟಿದ ಮೇಲೆ ಸಾಯಲೇಬೇಕು ಎನ್ನುವುದು ಅಷ್ಟೇ ದಿಟ. ಹಾಗಿದ್ದರೆ ಸತ್ತ ಮೇಲೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳೇನು ಎನ್ನುವುದನ್ನು ತಿಳಿಯುವ ಕುತೂಹಲ ಎಲ್ಲರಲ್ಲಿಯೂ ಇದ್ದೇ ಇರುತ್ತದೆ. ಆದರೆ ಅದನ್ನು ಅನುಭವಿಸುವುದಕ್ಕಂತೂ ಸಾಧ್ಯವಿಲ್ಲ. ಸತ್ತ ಮೇಲೆ ಏನಾಗಬಹುದು ಎನ್ನುವುದನ್ನು ಊಹೆ ಮಾಡಿಕೊಳ್ಳಲಿಕ್ಕಷ್ಟೇ ಸಾಧ್ಯ. ಆದರೆ ಇದೀಗ ನರ್ಸ್ ಒಬ್ಬರ ಸತ್ತ ತಕ್ಷಣ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಹಂತ ಹಂತವಾಗಿ ವಿವರಿಸಿದ್ದಾರೆ.
  
ಅಮೆರಿಕದ ಹಿರಿಯ ನರ್ಸ್ ಜೂಲಿ ಮ್ಯಾಕ್‌ಫ್ಯಾಡೆನ್ ಸಾವಿನ ನಂತರ ಮಾನವ ದೇಹದಲ್ಲಿ ಸಂಭವಿಸುವ ದೈಹಿಕ ಬದಲಾವಣೆಗಳನ್ನು ವಿವರಿಸಿದ್ದಾರೆ. ಅವರ ಪ್ರಕಾರ ಸಾವಿನ ನಂತರ ದೇಹವು ವಿಶ್ರಾಂತ ಸ್ಥಿತಿಯಲ್ಲಿರುತ್ತದೆಯಾದರೂ ಸತ್ತ ತಕ್ಷಣ ದೇಹದಿಂದ ದ್ರವಗಳು ಹೊರಬರುತ್ತವೆ. ಶರೀರದಲ್ಲಿ ನೀರಿನ ಅಂಶ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸತ್ತ ಬಳಿಕ ದೇಹದ ಎಲ್ಲಾ ಭಾಗಗಳಿಂದಲೂ ನೀರು ಬರುತ್ತವೆ.  ಕೆಲವೊಮ್ಮೆ ಕಣ್ಣು, ಮೂಗು, ಕಿವಿಗಳಿಂದಲೂ ನೀರು ಬರುತ್ತವೆ. ದೇಹ ಸಂಪೂರ್ಣ ಶಾಂತವಾಗಿರುವ ಹಿನ್ನೆಲೆಯಲ್ಲಿ ದೇಹದಲ್ಲಿ ಉಳಿದುಕೊಂಡಿರುವ ಮೂತ್ರ ಮತ್ತು  ಮಲ ಕೂಡ ಕೆಲವೊಮ್ಮೆ ಹೊರಕ್ಕೆ ಬರುತ್ತದೆ. ಇದನ್ನು ನೋಡಿ ಕುಟುಂಬಸ್ಥರು ಭಯ ಪಡುವ ಅಗತ್ಯವಿಲ್ಲ ಎಂದಿದ್ದಾರೆ.

ದಿನವೊಂದಕ್ಕೆ 16 ಬಾರಿ ಸೂರ್ಯೋದಯ, ಸೂರ್ಯಾಸ್ತ: ಬಾಹ್ಯಾಕಾಶದ ಕೌತುಕ ತೆರೆದಿಟ್ಟ ಸುನಿತಾ ವಿಲಿಯಮ್ಸ್​

ಸಾವನ್ನಪ್ಪಿದ ಬಳಿಕ, ದೇಹದ ಉಷ್ಣತೆಯು ಇಳಿಯುವ ಕಾರಣದಿಂದ  ಗುರುತ್ವಾಕರ್ಷಣೆ ಉಂಟಾಗಿ ಇದು  ರಕ್ತವನ್ನು ಹಿಂದಕ್ಕೆ ಎಳೆಯುತ್ತದೆ. ಇದೆ ಕಾರಣದಿಂದಾಗಿ  ದೇಹದ ಕೆಳಭಾಗವು ನೇರಳೆಯಾಗುತ್ತದೆ. ಒಂದೆರಡು ಗಂಟೆಗಳಲ್ಲಿ ದೇಹ ಬಿಗಿತಗೊಳ್ಳುತ್ತದೆ. ದೇಹದ ಚಯಾಪಚಯ ಕ್ರಿಯೆಯು ನಿಲ್ಲುತ್ತದೆ. ಇದನ್ನು ರಿಗರ್ ಮೋರ್ಟಿಸ್  ಎನ್ನುತ್ತಾರೆ.  ಕೆಲವೊಮ್ಮೆ 24 ರಿಂದ 30 ಗಂಟೆ ಹಾಗೆಯೇ ಇಟ್ಟರೆ ಶರೀರ ಸಡಿಲಗೊಳ್ಳುತ್ತದೆ.  ದೇಹದ ಉಷ್ಣತೆಯು ಸಾಮಾನ್ಯವಾಗಿ ಪ್ರತಿ ಗಂಟೆಗೆ 1.5 ಡಿಗ್ರಿಗಳಷ್ಟು ಕಡಿಮೆಯಾಗುತ್ತದೆ. ಇದನ್ನು ಅಲ್ಗೋರ್ ಮೋರ್ಟಿಸ್ ಎನ್ನುತ್ತಾರೆ ಎಂದಿದ್ದಾರೆ. 
 
 ದೇಹವನ್ನು ಹಾಗೆಯೇ ಬಿಟ್ಟರೆ ಬ್ಯಾಕ್ಟೀರಿಯಾಗಳು ಅಂಗಾಂಶಗಳನ್ನು ತಿನ್ನುತ್ತವೆ. ಇದರಿಂದ ದೇಹ ಉಬ್ಬಿಕೊಳ್ಳಲು ಶುರು ಮಾಡುತ್ತವೆ. ಹಾಗೆಯೇ ಬಿಟ್ಟರೆ ಯಕೃತ್ತು, ಹೃದಯ, ಮೆದುಳಿಗೂ ಈ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಮುಂದಿನ ಹಂತದಲ್ಲಿ ದೇಹವು ಅಮೋನಿಯಂ ಮತ್ತು ಮಿಥೇನ್‌ದಂಥ  ಅನಿಲ ಹೊರಹಾಕುತ್ತವೆ. ಆಗ ದೇಹ ಕೊಳೆಯಲು ಶುರುವಾಗಿ  ವಾಸನೆ ಬರಲು ಶುರುವಾಗುತ್ತದೆ.  10 ರಿಂದ 20 ದಿನ ಹಾಗೆಯೇ ಇದ್ದರೆ  ದೇಹ ಕಪ್ಪು ಬಣ್ಣಕ್ಕೆ ತಿರುಗಿ ಮತ್ತಷ್ಟು ಉಬ್ಬಿಕೊಳ್ಳುತ್ತದೆ. ಮತ್ತಷ್ಟು ದ್ರವಗಳು ಹೊರಹೊಮ್ಮಿ ಅತ್ಯಂತ ಕೆಟ್ಟ ವಾಸನೆ ಬರುತ್ತದೆ ಎಂದು ನರ್ಸ್‌ ಹೇಳಿದ್ದಾರೆ. 

ಮರಭೂಮಿಯಲ್ಲಿ ಹಿಮಪಾತ! ಹಿಂದೆಂದೂ ಕಂಡು ಕೇಳರಿಯದ ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಯ್ತು ಸೌದಿ... ವಿಡಿಯೋ ವೈರಲ್​

Latest Videos
Follow Us:
Download App:
  • android
  • ios