ಸತ್ತ ವ್ಯಕ್ತಿ ಎದ್ದು ಬಂದ! ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಎದ್ದ ಯುವಕ- ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ಚಿತೆಗೆ ಬೆಂಕಿ ಇಡುವಷ್ಟರಲ್ಲಿಯೇ ಅಲುಗಾಡಿದ ಯುವಕ! ರಾಜಸ್ಥಾನದಲ್ಲಿ ನಡೆದ ಈ ಘಟನೆ ವೈದ್ಯರು ಹಾಗೂ ಆಸ್ಪತ್ರೆಗಳ ನಿರ್ಲಕ್ಷ್ಯದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಆಗಿದ್ದೇನು?
ವೈದ್ಯಲೋಕಕ್ಕೆ ಸವಾಲು ಎಸಗುವ ಹಲವಾರು ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ ಕಳೆದ ಕೆಲವು ವರ್ಷಗಳಿಂದ ವಿಚಿತ್ರ ಎನ್ನುವಂಥ ಘಟನೆಗಳು ನಡೆಯುತ್ತಿವೆ. ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ ಬಳಿಕ, ಆ ವ್ಯಕ್ತಿಗಳು ಜೀವಂತ ಇರುವುದು ತಿಳಿದು ಬರುತ್ತಿದೆ. ಇದು ವೈದ್ಯರ ಬಗ್ಗೆ ಸಾಕಷ್ಟು ಅನುಮಾನ ಮೂಡುವಂತೆ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಕೆಲ ದಿನಗಳ ಹಿಂದಷ್ಟೇ ಬಿಹಾರ ಷರೀಫ್‌ನ ಸದರ್ ಆಸ್ಪತ್ರೆಯಲ್ಲಿ ಇಂಥ ಘಟನೆ ನಡೆದಿತ್ತು. ಪೋಸ್ಟ್ ಮಾರ್ಟಮ್‌ಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಜೀವಂತ ಆಗಿರುವುದು ತಿಳಿದಿತ್ತು. ಇದಕ್ಕೂ ಮೊದಲು ಇಂಥ ಘಟನೆಗಳು ಹಲವಾರು ನಡೆದಿವೆ. ಇದೀಗ ರಾಜಸ್ಥಾನದಲ್ಲಿಯೂ ಇಂಥ ಘಟನೆ ನಡೆದಿರುವುದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ಸರಿಯಾಗಿ ಪರೀಕ್ಷೆ ಮಾಡದೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸುತ್ತಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನಿಸುವಂತಾಗಿದೆ. ಅದೆಷ್ಟು ಮಂದಿ ಜೀವಂತ ಇರುವವರನ್ನೇ ಕುಟುಂಬದವರು ವೈದ್ಯರ ಮಾತು ಕೇಳಿ ಸುಟ್ಟು ಹಾಕಿದ್ದಾರೋ, ಹೂತು ಹಾಕಿದ್ದಾರೋ ಎನ್ನುವ ಮಾತೂ ಕೇಳಿಬರುತ್ತಿದೆ.
ಇನ್ನು ರಾಜಸ್ಥಾನದ ಈ ಘಟನೆಗೆ ಬರುವುದಾದರೆ, ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆ ಇದಾಗಿದೆ. ಇಲ್ಲಿ 25 ವರ್ಷದ ಯುವಕ ರೋಹಿತಾಶ್ ಎಂಬಾತ ಜಿಲ್ಲಾಸ್ಪತ್ರೆ ಚಿಕಿತ್ಸೆ ವೇಳೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ವಯಸ್ಸಿಗೆ ಬಂದ ಯುವಕನ ಸಾವಿನಿಂದ ಕುಟುಂಬಸ್ಥರ ಗೋಳು ಕೇಳುವವರೇ ಇಲ್ಲವಾದರು. ವೈದ್ಯರು ಘೋಷಿಸಿದ ಬಳಿಕ ಮುಂದಿನ ಪ್ರಕ್ರಿಯೆಗಾಗಿ ಎರಡು ಮೂರು ಗಂಟೆಗಳ ಕಾಲ ದೇಹವನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಪಂಚನಾಮ ಪ್ರಕ್ರಿಯೆ ಮುಗಿಸಲಾಯಿತು. ಕೊನೆಗೆ 'ಮೃತದೇಹ'ವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.
ನೋಡಲು ಥೇಟ್ ಬಾಲ್ಯದ ಅಪ್ಪು ಈ ಬಾಲಕ! ದನಿ ಕೂಡ ಸೇಮ್ ಟು ಸೇಮ್... ಅವನ ಮಾತು ಕೇಳಿ...
'ಶವ'ವನ್ನು ಅಂತಿಮ ವಿಧಿವಿಧಾನಗಳಿಗೆ ತೆಗೆದುಕೊಂಡು ಹೋದರು. ಆದರೆ, ಚಿತೆ ಹೊತ್ತಿ ಉರಿಯುವ ಸ್ವಲ್ಪ ಹೊತ್ತಿನ ಮೊದಲು ಯುವಕನ ದೇಹ ಅಲ್ಲಾಡಿತು. ಆತಂಕಗೊಂಡ ಮನೆಯವರು, ನೋಡಿದಾಗ ಆತ ಜೀವಂತ ಇರುವುದು ತಿಳಿದಿದೆ. ಕುಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ಲಕ್ಷ್ಯ ಪ್ರಕರಣದಲ್ಲಿ ಮೂವರು ವೈದ್ಯರನ್ನು ಅಮಾನತುಗೊಳಿಸಿದ್ದು, ಪ್ರಕರಣದ ತನಿಖೆಗೆ ಆದೇಶಿಸಿದೆ.
ರೋಹಿತಾಶ್ ಮಾನಸಿಕ ಅಸ್ವಸ್ಥ ಮತ್ತು ವಿಶೇಷ ಸಾಮರ್ಥ್ಯವುಳ್ಳ ಯುವಕ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ಚಿಕಿತ್ಸೆಗಾಗಿ ಬಿಡಿಕೆ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಆತನನ್ನು ದಾಖಲಿಸಲಾಗಿತ್ತು. ಆದರೆ, ವೈದ್ಯರು ರೋಹಿತಾಶ್ ಮೃತಪಟ್ಟಿರುವುದಾಗಿ ಘೋಷಿಸಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದರು. ಪೊಲೀಸರು ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯುವ ಮೊದಲು, ಶವಾಗಾರದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಟ್ಟಿದ್ದರು. ಕೊನೆಗೆ ಆತ ಜೀವಂತ ಇರುವುದು ತಿಳಿದಿದೆ. ಘಟನೆಯ ಮಾಹಿತಿ ಪಡೆದ ರಾಜ್ಯ ಸರ್ಕಾರದ ಅಧಿಕಾರಿಗಳು, ಜಿಲ್ಲೆಯ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಯನ್ನು ತನಿಖೆಗೆ ಕಳುಹಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಗುತ್ತಿದೆ. ಜಿಲ್ಲಾಧಿಕಾರಿ ರಾಮಾವತಾರ್ ಮೀನಾ ಅವರು ಘಟನೆಯನ್ನು ಗಂಭೀರ ನಿರ್ಲಕ್ಷ್ಯವೆಂದು ಪರಿಗಣಿಸಿ ತನಿಖಾ ವರದಿಯನ್ನು ರಾಜಸ್ಥಾನ ಆರೋಗ್ಯ ಇಲಾಖೆಗೆ ಕಳುಹಿಸಿದ್ದಾರೆ, ನಂತರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಪಚಾರ್ ಮತ್ತು ಅವರ ಇಬ್ಬರು ಸಹೋದ್ಯೋಗಿಗಳಾದ ಯೋಗೇಶ್ ಜಾಖರ್ ಮತ್ತು ನವನೀತ್ ಅವರನ್ನು ಅಮಾನತುಗೊಳಿಸಿದ್ದಾರೆ. ಮೂವರು ವೈದ್ಯರ ವಿರುದ್ಧ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ.
ಸೀತಾರಾಮದ ಸುಲೋಚನಾ ಪಾತ್ರದಿಂದ ಜೀವನದಲ್ಲಿ ಫಸ್ಟ್ ಟೈಮ್ ಮಾಸ್ಕ್ ಹಾಕ್ಕೊಂಡು ತಿರಗ್ತಾ ಇದ್ದೇನೆ!