09:26 PM (IST) Aug 02

Karnatata Latest News Live 2nd Agust 2025ಭಟ್ಕಳ ಅಳ್ವೇಕೋಡಿ ದೋಣಿ ದುರಂತ, ಮತ್ತಿಬ್ಬರು ಮೀನುಗಾರರ ಮೃತದೇಹ ಪತ್ತೆ!

ಭಟ್ಕಳದ ತೆಂಗಿನಗುಂಡಿ ಬಳಿ ದೋಣಿ ಮಗುಚಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದ ಘಟನೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಜುಲೈ 30 ರಂದು ನಡೆದ ಈ ದುರಂತದಲ್ಲಿ ಇಬ್ಬರನ್ನು ರಕ್ಷಿಸಲಾಗಿತ್ತು.
Read Full Story
09:02 PM (IST) Aug 02

Karnatata Latest News Live 2nd Agust 2025ತುಳು ಭಾಷೆಗೆ ಅಧಿಕೃತ ಸ್ಥಾನಮಾನ - ಸರ್ಕಾರದಿಂದ ಸಮಿತಿ ರಚನೆ, ಆಂಧ್ರಕ್ಕೆ ಹೊರಟ ಅಧ್ಯಯನ ತಂಡ

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಸಾಧ್ಯತೆಗಳ ಕುರಿತು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ಆಂಧ್ರಪ್ರದೇಶದಲ್ಲಿ ಅನುಸರಿಸಿದ ಮಾದರಿಯನ್ನು ಅಧ್ಯಯನ ಮಾಡಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ.

Read Full Story
08:48 PM (IST) Aug 02

Karnatata Latest News Live 2nd Agust 2025ಈ ಶಿಕ್ಷೆ ಪಾಠವಾಗಲಿ - ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆಗೆ ನಜ್ಮಾ ನಜೀರ್ ಪ್ರತಿಕ್ರಿಯೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪಿಗೆ ಕಾಂಗ್ರೆಸ್ ವಕ್ತಾರೆ ನಜ್ಮಾ ನಜೀನ್ ಚಿಕ್ಕನೇರಳೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರದ ಮದದಿಂದ ತೂರಾಡುವವರಿಗೆ ಈ ಶಿಕ್ಷೆ ಪಾಠವಾಗಲಿ ಎಂದು ಅವರು ಹೇಳಿದ್ದಾರೆ.
Read Full Story
08:37 PM (IST) Aug 02

Karnatata Latest News Live 2nd Agust 2025ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಮತ್ತೊಬ್ಬ ಭೀಮ, ಭಾರೀ ಆರೋಪ ಮಾಡಿದ ದೂರುದಾರ!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಬಗ್ಗೆ 'ಭೀಮ' ಎಂಬುವವರ ದೂರಿನ ತನಿಖೆ ನಡೆಯುತ್ತಿರುವಾಗಲೇ, ಹೊಸ ದೂರು ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಜಯನ್ ಟಿ, 15 ವರ್ಷಗಳ ಹಿಂದೆ ಹೆಣ್ಣು ಮಗಳ ಅನುಮಾನಾಸ್ಪದ ಸಾವಿನ ಬಗ್ಗೆ ದೂರು ನೀಡಿದ್ದಾರೆ. 

Read Full Story
08:35 PM (IST) Aug 02

Karnatata Latest News Live 2nd Agust 2025ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಹೆಗ್ಗಳಿಕೆ, ಎಸಿಐನಿಂದ ಲೆವೆಲ್ 4 ಮಾನ್ಯತೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರಾಹಕ ಅನುಭವದಲ್ಲಿ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಷನಲ್‌ನಿಂದ ಲೆವೆಲ್-4 ಮಾನ್ಯತೆ ಪಡೆದಿದೆ. ಫೆಬ್ರವರಿಯಲ್ಲಿ ಲೆವೆಲ್-3 ಪಡೆದಿದ್ದ ವಿಮಾನ ನಿಲ್ದಾಣವು ಈಗ ಮುಂದಿನ ಹಂತಕ್ಕೆ ಏರಿದೆ. 

Read Full Story
08:02 PM (IST) Aug 02

Karnatata Latest News Live 2nd Agust 2025ಪೆನ್‌ಡ್ರೈವ್‌ ಹಂಚಿಕೆಯಿಂದ ಜೀವಾವಧಿ ಶಿಕ್ಷೆಯವರೆಗೆ - ಪ್ರಜ್ವಲ್‌ ರೇವಣ್ಣ ಪ್ರಕರಣದ ಟೈಮ್‌ಲೈನ್‌!

ಈ ಪ್ರಕರಣವು 2021 ರಲ್ಲಿ ಹಾಸನದ ಗನ್ನಿಕಾಡಾದ ಫಾರ್ಮ್‌ಹೌಸ್‌ನಲ್ಲಿ ಮತ್ತು ಬೆಂಗಳೂರಿನ ಪ್ರಜ್ವಲ್ ಅವರ ನಿವಾಸದಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದೆ.

Read Full Story
08:01 PM (IST) Aug 02

Karnatata Latest News Live 2nd Agust 202514 ಲಕ್ಷ ರೂ ಪರಿಹಾರ ಪಾವತಿಸದ ಪುತ್ತೂರು ಕಮಿಷನರ್ ಕಚೇರಿಯ ಸೊತ್ತು ಜಪ್ತಿಗೆ ಕೋರ್ಟ್ ಆದೇಶ

ಮಾಣಿ-ಮೈಸೂರು ರಾಜ್ಯ ಹೆದ್ದಾರಿ 88ರ ರಸ್ತೆ ಅಗಲೀಕರಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಕಾರಣ ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿಯ ಸೊತ್ತುಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ. ಭೂಮಾಲಕ ಶಿವಶಂಕರ ಭಟ್ ಅವರಿಗೆ ನ್ಯಾಯಾಲಯದ ಆದೇಶದಂತೆ 14,93,438 ರೂ. ಪರಿಹಾರ ನೀಡಬೇಕಿತ್ತು.
Read Full Story
07:43 PM (IST) Aug 02

Karnatata Latest News Live 2nd Agust 2025ಮಾಡಿದ್ದುಣ್ಣೋ ಮಾರಾಯ, ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ

Prajwal Revanna Case Judgement: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿಗೆ ಕಾಂಗ್ರೆಸ್ 'ಮಾಡಿದ್ದುಣ್ಣೋ ಮಾರಾಯ' ಎಂದು ಪ್ರತಿಕ್ರಿಯಿಸಿದೆ. ನ್ಯಾಯಾಲಯವು 11.5 ಲಕ್ಷ ದಂಡವನ್ನೂ ವಿಧಿಸಿದೆ.

Read Full Story
07:35 PM (IST) Aug 02

Karnatata Latest News Live 2nd Agust 2025ಕರ್ನಾಟಕಕ್ಕೆ ಏಮ್ಸ್‌ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದ ಕೇಂದ್ರ ಸರ್ಕಾರ!

ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ರಾಜ್ಯ ಸರ್ಕಾರ ಪದೇ ಪದೇ ಮನವಿ ಮಾಡಿದ್ದರೂ, ಕೇಂದ್ರದಿಂದ ಇನ್ನೂ ಸ್ಪಂದನೆ ಸಿಕ್ಕಿಲ್ಲ. 

Read Full Story
07:01 PM (IST) Aug 02

Karnatata Latest News Live 2nd Agust 2025ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ? ಯುವರ್ ಆನರ್, ಪ್ರಕಾಶ್ ರೈ ಪ್ರಶ್ನೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆಯಾದರೂ, ಅಪರಾಧ ಮುಚ್ಚಿಟ್ಟವರಿಗೆ ಶಿಕ್ಷೆಯಾಗದಿರುವುದನ್ನು ಪ್ರಶ್ನಿಸಿ ನಟ ಪ್ರಕಾಶ್ ರೈ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. 

Read Full Story
06:35 PM (IST) Aug 02

Karnatata Latest News Live 2nd Agust 2025ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ - ನಟ ಚೇತನ್ ಪ್ರತಿಕ್ರಿಯೆ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪಿನ ಕುರಿತು ನಟ ಚೇತನ್ ಕುಮಾರ್ ಮತ್ತು ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆ ಪುನಃಸ್ಥಾಪನೆಯಾಗಿದೆ ಎಂದು ಚೇತನ್ ಹೇಳಿದ್ದಾರೆ.

Read Full Story
06:31 PM (IST) Aug 02

Karnatata Latest News Live 2nd Agust 2025ಕೊನೆ ಉಸಿರು ಇರೋ ತನಕ ಪ್ರಜ್ವಲ್ ರೇವಣ್ಣ ಹೊರಬರಲ್ಲ, ವಿಡಿಯೋ ಹರಿಬಿಟ್ಟವರ ಬಗ್ಗೆ ಗೊತ್ತಾಗಿದೆ - ಎಸ್ಐಟಿ ಸ್ಪಷ್ಟನೆ

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ1ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಎಸ್ಐಟಿ ತಂಡವು ತನಿಖೆಯ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. ಸಂತ್ರಸ್ಥೆಯ ಸಹಕಾರದಿಂದ ನ್ಯಾಯ ದೊರಕಿದೆ ಎಂದು ಎಸ್ಐಟಿ ಮುಖ್ಯಸ್ಥರು ತಿಳಿಸಿದ್ದಾರೆ.

Read Full Story
06:25 PM (IST) Aug 02

Karnatata Latest News Live 2nd Agust 2025ಮೆಟ್ರೋದಲ್ಲಿ ಲಿವರ್ ಸಾಗಣೆ ಮಾಡಿ, ರೋಗಿಯ ಜೀವ ಉಳಿಸಿದ ಸವಾಲು ಹೇಗಿತ್ತು? ಪ್ರತಿ ಹಂತದ ಮಾಹಿತಿ ಇಲ್ಲಿದೆ!

ಬೆಂಗಳೂರಿನಲ್ಲಿ ಮೆಟ್ರೋ ಮೂಲಕ ದಾನಿಯ ಅಂಗಾಂಗವನ್ನು ಸಾಗಿಸಿ ಯುವಕನಿಗೆ ಯಕೃತ್ ಕಸಿ ಮಾಡುವ ಮೂಲಕ ಜೀವದಾನ ನೀಡಲಾಗಿದೆ. ಸಂಚಾರ ದಟ್ಟಣೆಯನ್ನು ತಪ್ಪಿಸಲು ಮೆಟ್ರೋವನ್ನು ಬಳಸಲಾಯಿತು. ಲಿವರ್ ಸಾಗಣೆ ಪ್ರತಿ ಹೆಜ್ಜೆ ಹೇಗಿತ್ತು ನೋಡಿ…

Read Full Story
06:17 PM (IST) Aug 02

Karnatata Latest News Live 2nd Agust 2025ಯಾವುದೇ ವಿಡಿಯೋದಲ್ಲಿ ಮುಖ ತೋರಿಸದೇ ಇದ್ದರೂ ಪ್ರಜ್ವಲ್‌ ರೇವಣ್ಣ ಸಿಕ್ಕಿಬಿದ್ದಿದು ಹೇಗೆ?

ಹೆಚ್ಚಿನ ವೀಡಿಯೊಗಳನ್ನು ಪ್ರಜ್ವಲ್ ಸ್ವತಃ ತಮ್ಮ ಬಲಗೈಯಿಂದ ಚಿತ್ರೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ತಂಡವು ಜಪಾನ್ ಮತ್ತು ಟರ್ಕಿಯಂತಹ ದೇಶಗಳಲ್ಲಿ ಯಶಸ್ವಿಯಾಗಿ ಬಳಸಲಾಗುವ ತನಿಖಾ ತಂತ್ರಗಳನ್ನು ಎರವಲು ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

Read Full Story
06:04 PM (IST) Aug 02

Karnatata Latest News Live 2nd Agust 2025ವಿದೇಶದಿಂದ ಬರುತ್ತಲೇ ಪ್ರಜ್ವಲ್‌ ರೇವಣ್ಣಗೆ ಮುಟ್ಟಿ ನೋಡಿಕೊಳ್ಳುವಂತೆ ಬಿಗ್ ಶಾಕ್ ನೀಡಿತ್ತು SIT

ಲೋಕಸಭಾ ಚುನಾವಣೆಗೂ ಮುನ್ನ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಕಲೆ ವಿಡಿಯೋಗಳು ವೈರಲ್ ಆಗಿದ್ದವು. ವಿದೇಶದಿಂದ ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

Read Full Story
05:22 PM (IST) Aug 02

Karnatata Latest News Live 2nd Agust 2025ಕೆಆರ್‌ಐಡಿಎಲ್‌ನಲ್ಲಿ ₹72 ಕೋಟಿ ಹಗರಣದ ಕರಿನೆರಳು, ಸಿಎಂ ಕೊಪ್ಪಳ ಪ್ರವಾಸ ಮುಂದೂಡಿಕೆ

ಕೆಆರ್‌ಐಡಿಎಲ್‌ನಲ್ಲಿ ₹72 ಕೋಟಿ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೊಪ್ಪಳ ಜಿಲ್ಲಾ ಪ್ರವಾಸ ಮುಂದೂಡಲಾಗಿದೆ. ಲೋಕಾಯುಕ್ತ ತನಿಖೆ ಆರಂಭವಾಗಿದ್ದು, ತನಿಖೆ ಪೂರ್ಣಗೊಂಡ ನಂತರವೇ ಸಿಎಂ ಭೇಟಿ ನೀಡುವ ಸಾಧ್ಯತೆ ಇದೆ.
Read Full Story
05:13 PM (IST) Aug 02

Karnatata Latest News Live 2nd Agust 2025ಮಗನ ಬರ್ತ್‌ಡೇ ಸಂಭ್ರಮಿಸುವ ಖುಷಿಯಲ್ಲಿದ್ದ ತಾಯಿ ಭವಾನಿ ರೇವಣ್ಣಗೆ ಜೀವಾವಧಿ ಶಿಕ್ಷೆ ಕೇಳಿ ಶಾಕ್‌!

ಪ್ರಜ್ವಲ್‌ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ರೇವಣ್ಣ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ. ಮಗನ ಜನ್ಮದಿನದ ಸಂಭ್ರಮದಲ್ಲಿದ್ದ ಕುಟುಂಬದ ಮೇಲೆ ದುಃಖದ ಮುಸುಕು ಆವರಿಸಿದೆ.
Read Full Story
05:12 PM (IST) Aug 02

Karnatata Latest News Live 2nd Agust 2025ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ - ನಟಿ ರಮ್ಯಾ ಹೇಳಿದ್ದು ಇಷ್ಟು

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನಟಿ ರಮ್ಯಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

Read Full Story
04:16 PM (IST) Aug 02

Karnatata Latest News Live 2nd Agust 2025Breaking ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಕೆ.ಆರ್. ನಗರದ ಮನೆಗೆಲಸದವಳ ಮೇಲಿನ ಅತ್ಯಾ1ಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತಾಗಿದೆ. ಶಿಕ್ಷೆ ಪ್ರಮಾಣ ಪ್ರಕಟವಾಗಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ತಿಳಿಯಿರಿ.

Read Full Story
03:00 PM (IST) Aug 02

Karnatata Latest News Live 2nd Agust 2025ಶಾಲೆಗಳಿಗೆ ದೀರ್ಘಾವಧಿ ರಜೆ; ಮುಂದಿನ ವಾರ ಸತತವಾಗಿ 3 ದಿನ ರಜೆ ಸಂಭ್ರಮ!

ಆಗಸ್ಟ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸಾಲು ಸಾಲು ರಜೆಗಳು ಬರುತ್ತಿವೆ. ಮುಂದಿನ ವಾರ ಕೇವಲ 4 ದಿನಗಳು ಮಾತ್ರ ಶಾಲೆಗಳು ನಡೆಯಲಿದ್ದು, 3 ದಿನಗಳು ರಜಾ ದಿನಗಳಾಗಿವೆ. ಯಾವ ದಿನ ಏಕೆ ರಜೆ? ಇದೆ ಎಂದು ಇಲ್ಲಿ ತಿಳಿದುಕೊಳ್ಳೋಣ.

Read Full Story