ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ1ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಎಸ್ಐಟಿ ತಂಡವು ತನಿಖೆಯ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದೆ. ಸಂತ್ರಸ್ಥೆಯ ಸಹಕಾರದಿಂದ ನ್ಯಾಯ ದೊರಕಿದೆ ಎಂದು ಎಸ್ಐಟಿ ಮುಖ್ಯಸ್ಥರು ತಿಳಿಸಿದ್ದಾರೆ.

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಗಂಭೀರ ಅತ್ಯಾ1ಚಾರ ಪ್ರಕರಣ ಸಾಭೀತಾಗಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 11.5ಲಕ್ಷ ರೂ ದಂಡವನ್ನು ವಿಧಿಸಿದೆ. ಇದರ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ತಂಡ ಸುದ್ದಿಗೋಷ್ಠಿ ನಡೆಸಿದೆ. ಸಿಐಡಿ ಎಡಿಜಿಪಿ .ಬಿ.ಕೆ.ಸಿಂಗ್ ನೇತೃತ್ವ ಮಾಧ್ಯಮಗೋಷ್ಠಿಯಲ್ಲಿ ಮಹಿಳಾ ತನಿಖಾಧಿಕಾರಿಗಳಾದ ಎಸ್ ಐಟಿ .ಐಓ. ಶೋಭಾ, ಐಪಿಎಸ್ ಅಧಿಕಾರಿ ಸುಮನ್ನಾ ಡಿ ಪನ್ನೇಕರ್ ಭಾಗಿಯಾಗಿದ್ದರು.

ಹಾಸನ ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಪಿನ್ ಡ್ರೈವ್ ಸರಬರಾಜು ಮಾಡಲಾಗಿತ್ತು. ಈ ಹಿನ್ನಲೆ ರಾಜ್ಯ ಸರ್ಕಾರ ನಮ್ಮ‌ ನೇತೃತ್ವದಲ್ಲಿ ಎಸ್ ಐಟಿ ಮಾಡಲಾಗಿತ್ತು. ಕಳೆದ ವರ್ಷ ಏಪ್ರಿಲ್ ನಲ್ಲಿ ಪಾರ್ಲಿಮೆಂಟ್ ಎಲೆಕ್ಷನ್ ವೇಳೆ ಪೆನ್ ಡ್ರೈವ್ ವಿತರಿಸಿದ್ರು ಅದರಲ್ಲಿ ಬಹಳ ಹೆಣ್ಣು ಮಕ್ಕಳು ಅಶ್ಲೀಲ ವಿಡಿಯೋ ಇತ್ತು. ಇದರಿಂದ ಸರ್ಕಾರ SIT ರಚನೆ ಮಾಡಿತ್ತು. ಆ ಸಮಯದಲ್ಲಿ ನಾಲ್ಕು ಸಂತ್ರಸ್ಥರು ದೂರು ನೀಡಿದ್ರು. ಆರು ಕೇಸ್ ಗಳು ಒಟ್ಟು ರಿಜಿಸ್ಟರ್ ಆಗಿದ್ವು . ಹೊಳೆನರಸೀಪುರದಲ್ಲಿ ಒಂದು ಕೇಸ್, ಮೂರು ಸಿಐಡಿಯಲ್ಲಿ ರಿಜಿಸ್ಟರ್ ಆಗಿತ್ತು. 5 ಕೇಸ್ ತನಿಖೆ ಪೂರ್ಣಗೊಂಡಿದೆ, ಚಾರ್ಜ್ ಶೀಟ್ ಆಗಿದೆ. ಕಳೆದ ಡಿಸೆಂಬರ್ 31 ಟ್ರಯಲ್‌ ಕೋರ್ಟ ಗೆ ಹಸ್ತಾಂತರ ಆಗಿತ್ತು. ಜ.3 ರಿಂದ ಒಂದು ಕೇಸ್ ನಿಂದ ಟ್ರಯಲ್ ಪ್ರಾರಂಭವಾಯ್ತು ಎಂದು ಮಾಹಿತಿ ನೀಡಿದ್ದಾರೆ.

ಕೊನೆ ಉಸಿರು ಇರೋ ತನಕ ಜೈಲೇ ಗತಿ:ಎಸ್‌ಐಟಿ

ಕೊನೆ ಉಸಿರು ಇರೋ ತನಕ ಅಪರಾಧಿ ಹೊರಗೆ ಬರುವಂತಿಲ್ಲ. ಈ ಎಲ್ಲಾ ಶಿಕ್ಷೆಗಳು ಕಠಿಣ ಶಿಕ್ಷೆಯಾಗಿವೆ. ಸಂತ್ರಸ್ರೆ ಸಾಮಾಜಿಕವಾಗಿ ಕೆಳಸ್ಥಾನದಲ್ಲಿ ಇದ್ರು, ಆರೋಪಿ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ. ನ್ಯಾಯ ಬೇಕು ಅಂತ ಸಂತ್ರಸ್ಥೆ ನಮ್ಮ ಜೊತೆ ನಿಂತು ಈ ರೀತಿಯ ತೀರ್ಪಿಗೆ ಕಾರಣೀಭೂತರಾಗಿದ್ದಾರೆ ಎಂದು ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಹೇಳಿಕೆ ನೀಡಿದ್ದಾರೆ.

ವಿಡಿಯೋ ಹರಿಬಿಟ್ಟವರ ಬಗ್ಗೆ ಗೊತ್ತಾಗಿದೆ: ಎಸ್‌ಐಟಿ

ನಮಗೆ ಒತ್ತಡ ಇತ್ತು ಎಂದು ಹೇಳಲ್ಲ ಆದರೆ ಸವಾಲುಗಳು ಇದ್ದವು. ನಾಲ್ಕು ವರ್ಷ ನಂತರ ಕೇಸ್ ನಮಗೆ ಬಂದಿತ್ತು. ವೈಜ್ಞಾನಿಕವಾಗಿ ಸಾಕ್ಷಿಗಳನ್ನ ಸಂಗ್ರಹಿಸಿದ್ದೇವೆ. ಬಳಿಕ ಸರಿಯಾದ ಕ್ರಮದಲ್ಲಿ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದ್ವಿ. ಪೆನ್ ಡ್ರೈವ್, ವಿಡಿಯೋ ಹರಿಬಿಟ್ಟವರ ಬಗ್ಗೆ ಪ್ರತ್ಯೇಕ ಕೇಸ್ ಆಗಿದೆ. ಅದು ಕೂಡ ಗೊತ್ತಾಗಿದೆ, ಚಾರ್ಜ್ ಶೀಟ್ ಆಗುತ್ತೆ.

ಹೈಕೋರ್ಟ್ ಗೆ ಅಪೀಲ್ ಮಾಡಲು ಅವಕಾಶವಿದೆ: ಎಸ್‌ಐಟಿ

ಅಪರಾಧಿ ಹೈಕೋರ್ಟ್ ನಲ್ಲಿ ಚಾಲೆಂಜ್ ಮಾಡೋಕೆ ಅವಕಾಶ ಇದೆ. ನಂತರ ಸುಪ್ರೀಂ ಕೋರ್ಟ್ ನಲ್ಲೂ ಚಾಲೆಂಜ್ ಮಾಡಬಹುದು. ಸುಪ್ರೀಂ ತೀರ್ಪಿನ ಪ್ರಕಾರ ಜನಪ್ರತಿನಿಧಿಗಳ ಕೇಸ್‌ನಲ್ಲಿ ಪ್ರತಿದಿನ ವಿಚಾರಣೆ ಆಗಬೇಕು ಅಂತಿದೆ. ಆರೋಪಿಗೆ ಬೇಲ್ ಸಿಗಲಿಲ್ಲ, ಟ್ರಯಲ್ ಬೇಗ ಆಗಿದೆ. ಯಾವುದೇ ರಾಜಕೀಯ ಒತ್ತಡ ಕೂಡ ಇರಲಿಲ್ಲ. ಸರ್ಕಾರ ವಹಿಸಿದ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇವೆ. ಕೋರ್ಟ್ ನಮ್ಮ ಚಾರ್ಜ್ ಶೀಟ್ ಎತ್ತಿಹಿಡಿದಿದೆ ಅದಕ್ಕೆ ಸಂತೋಷ ಇದೆ ಎಂದು ಎಸ್ ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಹೇಳಿಕೆ ನೀಡಿದ್ದಾರೆ.