ಲೋಕಸಭಾ ಚುನಾವಣೆಗೂ ಮುನ್ನ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಕಲೆ ವಿಡಿಯೋಗಳು ವೈರಲ್ ಆಗಿದ್ದವು. ವಿದೇಶದಿಂದ ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಬೆಂಗಳೂರು: ಲೋಕಸಭಾ ಚುನಾವಣೆಗೂ 6 ದಿನಗಳ ಮುಂಚೆಯೇ ಹಾಸನದ ಹಾಲಿ ಸಂಸದನಾಗಿದ್ದ, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಕಲೆ ವಿಡಿಯೋ ತುಣುಕುಗಳು ಸ್ಥಳೀಯವಾಗಿ ವೈರಲ್ ಆಗಿದ್ದವು. ಕೆಲವೇ ದಿನಗಳಲ್ಲಿ ಈ ವಿಡಿಯೋ ರಾಜ್ಯಾದ್ಯಂತ ಹರಿದಾಡಿದ್ದವು. ಲೋಕಸಭಾ ಚುನಾವಣೆ ಮತದಾನದ ಬಳಿಕ ಅಪರಾಧಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಎಸ್ಕೇಪ್ ಆಗಿದ್ದನು. ವಿಡಿಯೋ ವೈರಲ್ ಬೆನ್ನಲ್ಲೇ ಕರ್ನಾಟಕ ಸರ್ಕಾರಕ್ಕೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿತ್ತು. ನಂತರ ರಾಜ್ಯ ಸರ್ಕಾರ ವೈರಲ್ ಆಗಿರುವ ವಿಡಿಯೋ ಸಂಬಂಧ ತನಿಖೆ ನಡೆಸಲು ಎಸ್‌ಐಟಿ ತಂಡವನ್ನು ರಚಿಸಿತ್ತು.

ಎಸ್‌ಐಟಿ ತಂಡ ತನಿಖೆ ಆರಂಭಿಸುತ್ತಿದ್ದಂತೆ ಸಾಮಾಜಿಕಜ ಜಾಲತಾಣದಲ್ಲಿ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದನು. ಮೇ 31ರ ರಾತ್ರಿ ಮ್ಯೂನಿಚ್‌ನಿಂದ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. 

ಪ್ರಜ್ವಲ್ ರೇವಣ್ಣ ಪ್ರಯಾಣಿಸುತ್ತಿದ್ದ ವಿಮಾನದ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿತ್ತು. ಹಾಗಾಗಿ ಮಾಧ್ಯಮಗಳು ವಿಮಾನವನ್ನು ಲೈವ್ ಟ್ರ್ಯಾಕ್ ಮಾಡಲಾಗಿತ್ತು. ಆರಂಭದಲ್ಲಿ ಸುಮಾರು 2 ಸಾವಿರಕ್ಕೂ ಮಹಿಳೆಯರ ಮೇಲೆ ದೌರ್ಜ*ನ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ರಾಷ್ಟ್ರೀಯ, ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗಿತ್ತು.

ಮಹಿಳಾಧಿಕಾರಿಗಳಿಂದಲೇ ಬಂಧನ, ಮಾಜಿ ಸಂಸದನಿಗೆ ಬಿಗ್‌ ಶಾಕ್

ಪ್ರಜ್ವಲ್ ರೇವಣ್ಣ ಕೇಸ್‌ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಯೂ ಮೂಡಿತ್ತು. ಈ ಹಿನ್ನೆಲೆ ವಿದೇಶದಿಂದ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್ ರೇವಣ್ಣನನ್ನು ಮಹಿಳಾಧಿಕಾರಿಗಳ ತಂಡವೇ ಬಂಧಿಸಿತ್ತು. ಮಹಿಳಾ ಅಧಿಕಾರಿಗಳ ತಂಡವೇ ಅಪರಾಧಿಯನ್ನು ಕರೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಇಷ್ಟು ಮಾತ್ರ ವೈದ್ಯಕೀಯ ತಪಾಸಣೆಗೂ ಮಹಿಳಾ ಅಧಿಕಾರಿಗಳೇ ಅಪರಾಧಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಧಿಕಾರದ ಮದದಲ್ಲಿ ಮಹಿಳೆಯರ ಮೇಲೆ ದೌರ್ಜ*ನ್ಯ ನಡೆಸಿದ ಮಾಜಿ ಸಂಸದನಿಗೆ ಎಸ್‌ಐಟಿ ಈ ಮೂಲಕ ಮುಟ್ಟಿ ನೋಡಿಕೊಳ್ಳುವಂತೆ ಶಾಕ್ ನೀಡಿತ್ತು.

Scroll to load tweet…

ಸಂತ್ರಸ್ತೆಯ ಅಪಹರಣ, ಮಗನಿಂದ ದೂರು

ಎಸ್‌ಐಟಿ ತಂಡ ಪ್ರಕರಣದ ತನಿಖೆ ಆರಂಭಿಸುತ್ತಿದ್ದಂತೆ ಕೆ.ಆರ್.ನಗರ ಮೂಲದ 48 ವರ್ಷ ವಯಸ್ಸಿನ ಸಂತ್ರಸ್ತೆ ನಾಪತ್ತೆಯಾಗಿದ್ದರು. ಈ ಸಂಬಂಧ ಸಂತ್ರಸ್ತೆಯ ಪುತ್ರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ 2024ರ ಮೇ 2ರಂದು ಪ್ರಜ್ವಲ್ ರೇವಣ್ಣ ತಂದೆ, ಮಾಜಿ ಸಚಿವ, ಶಾಸಕ ಹೆಚ್‌ಡಿ ರೇವಣ್ಣ ಮತ್ತು ಸಂಬಂಧಿ ಬಾಬಣ್ಣ ಎಂಬವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. 

ಇದನ್ನೂ ಓದಿ: ರಮ್ಯಾ ಮತ್ತೊಂದು ಪೋಸ್ಟ್; ಪ್ರಜ್ವಲ್ ದೋಷಿ ತೀರ್ಪು ಬೆನ್ನಲ್ಲೇ 'ನ್ಯಾಯ ಸಿಕ್ಕಿತು' ಎಂದ ನಟಿ

ತನಿಖೆ ನಡೆಸಿದ ಪೊಲೀಸರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಾಳೇನಹಳ್ಳಿ ರೇವಣ್ಣನ ಆಪ್ತ ರಾಜಗೋಪಾಲ್ ಎಂಬವರ ತೋಟದ ಮನೆಯಲ್ಲಿದ್ದ ಸಂತ್ರಸ್ತೆಯನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಇದೇ ಪ್ರಕರಣದಲ್ಲಿ ಹೆಚ್‌ಡಿ ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

Scroll to load tweet…