Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್‌ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್ ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್ ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ.
- Home
- News
- State
- Karnataka Political Live News: ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!
Karnataka Political Live News: ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!

ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಅವರು ಗುರುವಾರ ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದು, ಶುಕ್ರವಾರ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು ರಾಜೀನಾಮೆ ಅಂಗೀಕರಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ವರದಿ ತಿಳಿಸಿದೆ. ಇನ್ನೊಂದೆಡೆ ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಎರಡನೇ ಹಂತಕ್ಕೆ ಮಗ್ಗಲು ಬದಲಿಸಿದ್ದು, ಮುಂದಿನ ಸರ್ಕಾರದ ರೂಪರೇಷೆ ಹಾಗೂ ಸಂಪುಟ ಸರ್ಕಸ್ ಆರಂಭಿಸುವ ಸಲುವಾಗಿ ಹೈಕಮಾಂಡ್ ಜತೆ ಚರ್ಚೆ ನಡೆಸಲು ಸಿದ್ದರಾಮಯ್ಯ ಹಾಗೂ ಉಪ ಮುಖ್ಯಯಂತ್ರಿ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯಲ್ಲಿ ಉಭಯ ನಾಯಕರು ವರಿಷ್ಠರನ್ನು ಭೇಟಿ ಮಾಡಲಿದ್ದು, ಈ ಭೇಟಿಯ ವೇಳೆಯೇ ಶಾಸಕಾಂಗ ಪಕ್ಷದ ಸಭೆ ಯಾವಾಗ? ಹೊಸ ಮುಖ್ಯಮಂತ್ರಿ ಪ್ರಮಾಣ ವಚನದ ದಿನ ಯಾವುದು? ಪ್ರಮಾಣ ವಚನದ ವೇಳೆಯೇ ಹೊಸ ಸಿಎಂ ಸೇರಿ ಒಟ್ಟು 9 ಮಂದಿ ಸಂಪುಟ ಸೇರ್ಪಡೆಯಾಗಲಿದ್ದಾರೆಯೇ ಅಥವಾ ಒಂದೇ ಬಾರಿಗೆ ಪರಿಪೂರ್ಣ ಸಂಪುಟ ರಚನೆಯಾಗಲಿದೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ಪಷ್ಟತೆ ಮೂಡಲಿದೆ.
ಇನ್ನು ಸಿದ್ದರಾಮಯ್ಯ ಅವರಿಗೆ ರಾಹುಲ್ ಭೇಟಿಗೆ ಬೆಳಗ್ಗೆ 9 ಗಂಟೆ ಸಮಯ ನಿಗದಿಯಾಗಿದೆ. ಸೋನಿಯಾ ಗಾಂಧಿ ನಿವಾಸ ಜನಪತ್ -10 ನಲ್ಲಿ ಭೇಟಿಗೆ ಅವಕಾಶ ನೀಡಲಾಗಿದ್ದು, ಇಬ್ಬರನ್ನೂ ಸಿದ್ದರಾಮಯ್ಯ ಒಟ್ಟಿಗೆ ಭೇಟಿಯಾಗಲಿದ್ದಾರೆ.
Karnataka Political Live News:ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!
Karnataka Political Live News:ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ಫಿಕ್ಸ್, ಆರ್‌ಸಿಬಿ ನೆನಪಿಟ್ಟುಕೊಂಡು ಎಚ್ಚೆತ್ತ ಅಧಿಕಾರಿ ವರ್ಗ
ರಾಜ್ಯ ರಾಜಕಾರಣದಲ್ಲಿ ಎದ್ದ ಬಿರುಗಾಳಿ ಒಂದು ಹಂತಕ್ಕೆ ತಣ್ಣಗಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಇದರ ಬೆನ್ನಲ್ಲೇ ನೂತನ ಸಿಎಂ ಪ್ರಮಾಣವಚನಕ್ಕೆ ಸ್ಥಳ ನಿಗಧಿಯಾಗಿದೆ.
Karnataka Political Live News:ಇನ್ಮುಂದೆ ಸ್ಮಾರ್ಟ್ ಗ್ಲಾಸ್ ಹಾಕಂಗಿಲ್ಲ! ಆಟಗಾರರಿಗೆ ಬಿಸಿಸಿಐ ಖಡಕ್ ವಾರ್ನಿಂಗ್
Karnataka Political Live News:ಡಿಕೆಶಿ ಸಿಎಂ ಆಗಲೆಂದು ಒಬ್ಬೊಬ್ಬರದು ಒದೊಂದು ಸರಣಿ ಹರಕೆಗಳು, ಪ್ರಿಯಾಂಕ್ ಖರ್ಗೆ ಸಚಿವರಾಗಲಿ ಎಂದು ಈಡುಗಾಯಿ!
ಸಿದ್ದರಾಮಯ್ಯನವರ ರಾಜೀನಾಮೆ ನಂತರ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಅವರ ಬೆಂಬಲಿಗರು ತಿರುಪತಿಯಲ್ಲಿ ಮುಡಿ ನೀಡುವುದು ಸೇರಿದಂತೆ ರಾಜ್ಯದಾದ್ಯಂತ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇದೇ ವೇಳೆ, ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.
Karnataka Political Live News:ಡಿಕೆಶಿ ಮೌನಕ್ಕೆ ಕೊನೆಗೂ ಸಿಕ್ಕಿತು ಉತ್ತರ - 'ತೋಡಿದ ಬಾವಿಗೆ ಜಲವೇ ಸಾಕ್ಷಿ' ಎಂದದ್ಯಾಕೆ ನೊಣವೆಕೆರೆ ಅಜ್ಜಯ್ಯ
Karnataka Political Live News:₹75 ಲಕ್ಷ ವೆಚ್ಚದಲ್ಲಿ ಈದ್ಗಾ ಮೈದಾನ, ₹4 ಕೋಟಿ ವೆಚ್ಚದಲ್ಲಿ ಏರ್ ಕಂಡಿಷನ್ಡ್ ಶಾದಿಮಹಲ್.. ಸರ್ವೇ ಜನಃ ಸುಖಿನೋ ಭವಂತು ಎಂದ ಬಿಜೆಪಿ ಶಾಸಕ
Karnataka Political Live News:'ಇದು ಬೊಂಬೆಯಾಟವಯ್ಯ..' ನಿಜವಾಯ್ತು ಬೊಂಬೆ ಭವಿಷ್ಯ! ಸಿಎಂ ಕುರ್ಚಿ ಬದಲಾವಣೆಗೆ ಮುಂಚೆಯೇ ನುಡಿದಿತ್ತು ಭವಿಷ್ಯ!
ಧಾರವಾಡದ ಹನುಮನಕೊಪ್ಪ ಗ್ರಾಮದಲ್ಲಿ ಯುಗಾದಿ ದಿನ ಮಣ್ಣಿನ ಬೊಂಬೆ ನೀಡಿದ್ದ ಭವಿಷ್ಯ ಈಗ ನಿಜವಾಗ್ತಿದೆಯಾ? ಸಿಎಂ ಬದಲಾವಣೆ ಚರ್ಚೆ ನಡುವೆ ವೈರಲ್ ಆದ ಭಯಾನಕ ಸಂಪ್ರದಾಯದ ರೋಚಕ ಕಥೆ!
Karnataka Political Live News:Karnataka's Yuvan Nidhi - ಯುವ ನಿಧಿ ಅನುದಾನ ಗೃಹಲಕ್ಷ್ಮೀಗೆ ವರ್ಗಾವಣೆ? 3ತಿಂಗಳಿನಿಂದ ಪದವೀಧರರಿಗೆ ತಲುಪದ ನಿರುದ್ಯೋಗ ಭತ್ಯೆ!
Karnataka Political Live News:Siddaramaiah - ಸರ್ವ ಸಮುದಾಯದ ನಾಯಕ ಸಿದ್ದರಾಮಯ್ಯ - ಸಚಿವ ಈಶ್ವರ್ ಖಂಡ್ರೆ
Karnataka Political Live News:ವೈಭವ್ ಸೂರ್ಯವಂಶಿ ಎನ್ನುವ ವಜ್ರವನ್ನು ಹುಡುಕಿದ್ದು ದ್ರಾವಿಡ್ ಅಲ್ಲ, ಲಕ್ಷ್ಮಣ್ ಕೂಡಾ ಅಲ್ಲ! ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಕಥೆ ಗೊತ್ತಾ?
2025ರ ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ 13 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 1.10 ಕೋಟಿ ರುಪಾಯಿಗೆ ಖರೀದಿಸಿತ್ತು. ಇಂದು ವೈಭವ್ ಸೂರ್ಯವಂಶಿ ಆಟಕ್ಕೆ ಕ್ರಿಕೆಟ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಷ್ಟಕ್ಕೂ ವೈಭವ್ ಎನ್ನುವ ವಜ್ರವನ್ನು ಹುಡುಕಿದ್ದು ಯಾರು ಗೊತ್ತಾ?