ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು, ಪಕ್ಷದಲ್ಲಿನ ಗುಂಪುಗಾರಿಕೆ ಮತ್ತು ಒಗ್ಗಟ್ಟಿನ ಕೊರತೆಯನ್ನು ಸರಿಪಡಿಸಲು ಚುನಾವಣಾ ತಂತ್ರಜ್ಞ ಸುನೀಲ್ ಕನುಗೋಲು ಅವರನ್ನು ತಮ್ಮ ಸಾರ್ವಜನಿಕ ವ್ಯವಹಾರಗಳ ಸಲಹೆಗಾರರಾಗಿ ನೇಮಿಸಿಕೊಳ್ಳಲು ಯೋಜಿಸಿದ್ದಾರೆ.
ಹೈದರಾಬಾದ್: 2023ರ ಕರ್ನಾಟಕ ಮತ್ತು ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ(Congress party)ವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಜ್ಞ ಸುನೀಲ್ ಕನುಗೋಲು(Election strategist Sunil Kanugolu) ಅವರನ್ನು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ(Telangana CM Revanth reddy) ತಮ್ಮ ಸಾರ್ವಜನಿಕ ವ್ಯವಹಾರಗಳ ಸಲಹೆಗಾರರಾಗಿ ನೇಮಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಗುಂಪುಗಾರಿಕೆ ಮತ್ತು ಒಗ್ಗಟ್ಟಿನ ಕೊರತೆ ಎದುರಾಗಿದೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಅರ್ಧ ಅವಧಿ ತುಂಬುತ್ತಿರುವಾಗ ಪಕ್ಷದಲ್ಲಿ ಗುಂಪುಗಾರಿಕೆ ಮತ್ತು ಒಗ್ಗಟ್ಟಿನ ಕೊರತೆ ಎದುರಾಗಿದೆ. ಇದನ್ನು ಸರಿಪಡಿಸಲು ರೇವಂತ್, ಕನುಗೋಲು ಅವರನ್ನು ಸಾರ್ವಜನಿಕ ವ್ಯವಹಾರಗಳ ಸಲಹೆಗಾರ ಅಥವಾ ಇನ್ನೊಂದು ಪ್ರಮುಖ ಹುದ್ದೆಗೆ ನೇಮಿಸುವ ಯೋಜನೆಯಲ್ಲಿದ್ದಾರೆ. ನೇಮಕಾತಿ ಜೂನ್ ಮೊದಲ ವಾರ ಅಥವಾ ಕರ್ನಾಟಕ ರಾಜ್ಯಸಭಾ ಚುನಾವಣೆ ನಂತರ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: Congress Anti-OBC: ಕಾಂಗ್ರೆಸ್ ಒಬಿಸಿ ವಿರೋಧಿಗಳು: ಹಿಂದುಳಿದವರ ಬಗ್ಗೆ ರಾಹುಲ್ ರಾಹುಲ್ ಗಾಂಧಿ ಕಳಕಳಿ ಕೇವಲ ನಾಟಕ: ಬಿಜೆಪಿ
ತಂತ್ರಗರಿಕೆಯಲ್ಲಿ ಭಾರೀ ಜನಪ್ರಿಯರಾಗಿರುವ ಕನುಗೋಲು
ರಾಜಕೀಯ ತಂತ್ರಗಾರಿಕೆಯಲ್ಲಿ ಭಾರೀ ಜನಪ್ರಿಯರಾಗಿರುವ ಕನುಗೋಲು ಕರ್ನಾಟಕ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


