MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಡಿಕೆಶಿ ಸಿಎಂ ಆಗಲೆಂದು ಒಬ್ಬೊಬ್ಬರದು ಒದೊಂದು ಸರಣಿ ಹರಕೆಗಳು, ಪ್ರಿಯಾಂಕ್ ಖರ್ಗೆ ಸಚಿವರಾಗಲಿ ಎಂದು ಈಡುಗಾಯಿ!

ಡಿಕೆಶಿ ಸಿಎಂ ಆಗಲೆಂದು ಒಬ್ಬೊಬ್ಬರದು ಒದೊಂದು ಸರಣಿ ಹರಕೆಗಳು, ಪ್ರಿಯಾಂಕ್ ಖರ್ಗೆ ಸಚಿವರಾಗಲಿ ಎಂದು ಈಡುಗಾಯಿ!

ಸಿದ್ದರಾಮಯ್ಯನವರ ರಾಜೀನಾಮೆ ನಂತರ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲೆಂದು ಅವರ ಬೆಂಬಲಿಗರು ತಿರುಪತಿಯಲ್ಲಿ ಮುಡಿ ನೀಡುವುದು ಸೇರಿದಂತೆ ರಾಜ್ಯದಾದ್ಯಂತ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಇದೇ ವೇಳೆ, ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.

3 Min read
Author : Gowthami K
Published : May 29 2026, 01:36 PM IST
Share this Photo Gallery
  • FB
  • TW
  • Linkdin
  • Whatsapp
16
ಡಿಕೆಶಿ ಸಿಎಂ ಆಗಲೆಂದು ಹರಕೆ: ತಿರುಪತಿಯಲ್ಲಿ ರಾಜೀವ್‌ ಮುಡಿ
Image Credit : Asianet News

ಡಿಕೆಶಿ ಸಿಎಂ ಆಗಲೆಂದು ಹರಕೆ: ತಿರುಪತಿಯಲ್ಲಿ ರಾಜೀವ್‌ ಮುಡಿ

ಶಿಡ್ಲಘಟ್ಟ: ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಯಾವುದೇ ಅಡ್ಡಿ ಆತಂಕವಿಲ್ಲದೆ ಮುಖ್ಯಮಂತ್ರಿಯಾಗಲಿ ಎಂದು ಎಬಿಡಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಬಿ.ವಿ. ರಾಜೀವ್‌ಗೌಡ ಅವರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸಿ ಮುಡಿ ಅರ್ಪಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ಮುಡಿಯನ್ನು ಅರ್ಪಿಸುವುದಾಗಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹರಕೆ ಹೊತ್ತಿದ್ದರಂತೆ. ಅದರಂತೆ ರಾಜೀವ್ ಗೌಡ ಅವರು ಕುಟುಂಬದವರು,ಬೆಂಬಲಿಗರೊಂದಿಗೆ ಗುರುವಾರ ತಿರುಪತಿಗೆ ಮೆಟ್ಟಿಲು ಮೂಲಕ ಹತ್ತಿ ಅಲ್ಲಿ ಕೇಶ ಮುಡಿ ನೀಡಿ ನಂತರ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ರಾಜೀವ್‌ಗೌಡ ಅವರು, ಡಿ.ಕೆ ಶಿವಕುಮಾರ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದು ಈ ನಾಡಿನ ಕೋಟ್ಯಂತರ ಯುವಕರು, ರಾಜಕಾರಣಿಗಳು, ಸಮುದಾಯದವರು ಹಾಗೂ ಅವರ ಬೆಂಬಲಿಗರ ಕನಸಾಗಿತ್ತು. ಇದೀಗ ಅಂತಹ ಅಪರೂಪದ ಕ್ಷಣ ಹತ್ತಿರವಾಗುತ್ತಿದ್ದು ಯಾವುದೇ ವಿಘ್ನಗಳು ಎದುರಾಗದಂತೆ ಡಿಕೆಶಿ ಅವರು ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಮೆಟ್ಟಿಲು ಹತ್ತಿಕೊಂಡು ಬಂದು ಕೇಶ ಮುಡಿ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದರು. ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್‌ಗೌಡ, ಕಾಂಗ್ರೆಸ್ ಮುಖಂಡ ವರದಣ್ಣ ಸೇರಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಡಿಕೆಶಿ ಸಿಎಂ ಆಗೋವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ವ್ಯಕ್ತಿ ಹರಕೆ
Image Credit : Asianet News

ಡಿಕೆಶಿ ಸಿಎಂ ಆಗೋವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ವ್ಯಕ್ತಿ ಹರಕೆ

ಮದ್ದೂರು: ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಅಭಿಮಾನಿಯೊಬ್ಬರು ಮದ್ದೂರಮ್ಮದೇವಿ ಬಳಿ ಹರಕೆ ಕಟ್ಟಿಕೊಂಡು 6 ತಿಂಗಳಿನಿಂದ ಬರಿಗಾಲಿನಲ್ಲಿ ಓಡಾಡುತ್ತಿದ್ದಾರೆ. ನಗರದ ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ವರ್ತಕರಾಗಿರುವ ಅಶೋಕ್ ಡಿಕೆಶಿ ಅವರ ಅಭಿಮಾನಿಯಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಆಸೆ ಪಟ್ಟಿದ್ದರು. ಆದರೆ, ಸಿದ್ದರಾಮಯ್ಯ ಸಿಎಂ ಆದರು. 2.5 ವರ್ಷಗಳ ನಂತರವೂ ಡಿ.ಕೆ.ಶಿವಕುಮಾರ್ ಸಿಎಂ ಆಗದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳ ಹಿಂದೆ ನಗರದ ಶಕ್ತಿ ದೇವತೆ ಮದ್ದೂರಮ್ಮ ದೇವಿ ಬಳಿ ಡಿಕೆಶಿ ಅವರು ಸಿಎಂ ಆಗುವವರೆಗೂ ಚಪ್ಪಲಿ ತೊಡುವುದಿಲ್ಲ ಎಂದು ಅಭಿಮಾನಿ ಅಶೋಕ್‌ ಹರಕೆ ಕಟ್ಟಿಕೊಂಡಿದ್ದರು.

Related Articles

Related image1
ಸಿದ್ದರಾಮಯ್ಯ, ಡಿಕೆ ಶಿವಕುಮಾರ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ; ಮುಂದಿನ ಸಿಎಂ ಯಾರು? ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ?
Related image2
Siddaramaiah: ಸರ್ವ ಸಮುದಾಯದ ನಾಯಕ ಸಿದ್ದರಾಮಯ್ಯ - ಸಚಿವ ಈಶ್ವರ್ ಖಂಡ್ರೆ
36
ನೂತನ ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನಿಗಳ ಪೂಜೆ
Image Credit : Asianet News

ನೂತನ ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನಿಗಳ ಪೂಜೆ

ಮೈಸೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಲಿ ಎಂದು ಪ್ರಾರ್ಥಿಸಿ ಮೈಸೂರು ಮತ್ತು ಕೆ.ಆರ್‌.ಪೇಟೆಗಳಲ್ಲಿ ಅವರ ಅಭಿಮಾನಿಗಳು ಗುರುವಾರ ವಿಶೇಷ ಪೂಜೆ ಸಲ್ಲಿಸಿದರು. ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆಯಲ್ಲಿ ತಾಲೂಕು ಒಕ್ಕಲಿಗರ ವೇದಿಕೆ ಸದಸ್ಯರು ತಾಲೂಕಿನ ವಳಗೆರೆಮೆಣಸ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಡಿಕೆಶಿಯವರು ಶುಕ್ರವಾರವೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿ ಎಂದು ಪ್ರಾರ್ಥಿಸಿದರು. ಇದೇ ವೇಳೆ, ಮೈಸೂರಿನಲ್ಲಿ ಅಭಿಮಾನಿಗಳು ಅಗ್ರಹಾರದ ಗಣಪತಿಗೆ 101 ಈಡುಗಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

46
ಪ್ರಿಯಾಂಕ್‌ ಖರ್ಗೆಗೆ ಡಿಸಿಎಂ ಪಟ್ಟಕ್ಕಾಗಿ 101 ಈಡುಗಾಯಿ
Image Credit : Asianet News

ಪ್ರಿಯಾಂಕ್‌ ಖರ್ಗೆಗೆ ಡಿಸಿಎಂ ಪಟ್ಟಕ್ಕಾಗಿ 101 ಈಡುಗಾಯಿ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಭಾರಿ ಬದಲಾವಣೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಸಲ್ಲಿಕೆ ಬೆನ್ನಲ್ಲಿಯೇ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಕೋರಿ ಅವರ ಅಭಿಮಾನಿಗಳ ಬಳಗ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ‌ ಹೊನಗುಂಟಿ ನೇತೃತ್ವದಲ್ಲಿ ಶರಣಬಸವೇಶ್ವರರ ದೇವಸ್ಥಾನದಲ್ಲಿ ೧೦೧ ಈಡುಗಾಯಿ ಒಡೆದು ವಿಶೇಷ ಪೂಜೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

56
ಕೊತ್ತೂರಿಗೆ ಸಚಿವ ಸ್ಥಾನಕ್ಕಾಗಿ ಕೋಲಾರಮ್ಮ ದೇವಿಗೆ ವಿಶೇಷ ಪೂಜೆ
Image Credit : our own

ಕೊತ್ತೂರಿಗೆ ಸಚಿವ ಸ್ಥಾನಕ್ಕಾಗಿ ಕೋಲಾರಮ್ಮ ದೇವಿಗೆ ವಿಶೇಷ ಪೂಜೆ

ಕೋಲಾರ: ದೇಶದಲ್ಲಿಯೇ ಬುಡ್ಗ ಜಂಗಮ ಸಮುದಾಯದ ಏಕೈಕ ಶಾಸಕ ಕೊತ್ತೂರು ಮಂಜುನಾಥ್‌ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಹಾರೈಸಿ ಗುರುವಾರ ನಗರದ ಕೋಲಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ೧೦೧ ಈಡುಗಾಯಿ ಒಡೆಯುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಮಾಡಿದರು.

ರಾಜ್ಯ ವಾಲ್ಮೀಕಿ ಸಂಘದ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್ ಮಾತನಾಡಿ, ಕೊತ್ತೂರು ಮಂಜುನಾಥ್ ಕ್ಷೇತ್ರದ ಅಭಿವೃದ್ಧಿ, ಜನಪರ ಕಾಳಜಿ ಅವರ ರಾಜಕೀಯ ಸಾಧನೆ ಪರಿಗಣಿಸಬೇಕು. ಅತಿ ಹಿಂದುಳಿದ ವರ್ಗದ ಬುಡ್ಗ ಜಂಗಮ ಸಮುದಾಯದಿಂದ ಬಂದವರಾಗಿದ್ದಾರೆ. ಉತ್ತಮ ಸಮಾಜ ಸೇವಕನಾಗಿ ಸಮಾಜದಲ್ಲಿನ ಬಡವರಿಗೆ, ವಿದ್ಯಾರ್ಥಿಗಳಿಗೆ, ಅನಾರೋಗ್ಯದ ವ್ಯಕ್ತಿಗಳಿಗೆ ನೆರವು ಕಲ್ಪಿಸುವ ಮುಖಾಂತರ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾಯಕದಲ್ಲಿ ಪ್ರಮುಖರಾಗಿದ್ದಾರೆ. ಇಂತಹ ವ್ಯಕ್ತಿಗೆ ಸಚಿವ ಸ್ಥಾನ ನೀಡುವುದರಿಂದ ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ತಳ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸಿದಂತಾಗುತ್ತದೆ. ಸಚಿವ ಸ್ಥಾನ ನೀಡಿದರೆ ಮುಂದೆ ೧೦೦೧ ಈಡಗಾಯಿ ಹೊಡೆದು ದೇವಸ್ಥಾನ ಬಳಿ ೧೦ ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

66
ಐದನೇ ಬಾರಿಗೆ ಸಿಎಂ ಗಾದಿ
Image Credit : Social Media

ಐದನೇ ಬಾರಿಗೆ ಸಿಎಂ ಗಾದಿ

kರುನಾಡಿಗೆ ನಾಲ್ವರು ಮುಖ್ಯಮಂತ್ರಿಗಳನ್ನು ಕೊಡುಗೆಯಾಗಿ ನೀಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೂಲಕ ಐದನೇ ಬಾರಿಗೆ ಸಿಎಂ ಗಾದಿ ಒಲಿಯುತ್ತಿದೆಯೇ ಎಂಬ ಕುತೂಹಲ ಮೂಡಿದೆ.ರಾಜ್ಯದಲ್ಲಿ ಹಲವು ತಿಂಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗೆ ಕೊನೆಗೂ ಇತಿಶ್ರೀ ಹಾಡಲಾಗಿದೆ. ಸಚಿವರೊಂದಿಗೆ ಬ್ರೇಕ್ ಪಾಸ್ಟ್ ಮೀಟಿಂಗ್ ಮುಗಿದ ಬಳಿಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬ ಸಂದೇಶ ನೀಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಹೊಸ್ತಿಲಲ್ಲಿ ನಿಂತಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗುರುವಾರವೂ ಸಮಚಿತ್ತದಿಂದ ಕಾಣಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏರ್ಪಡಿಸಿದ್ದ ಉಪಹಾರ ಸಭೆಯಿಂದ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಿ, ಸುದ್ದಿಗೋಷ್ಠಿಯಲ್ಲಿ ನಡೆಸುವವರೆಗೆ ಅವರ ಜತೆಗೆ ಕಾಣಿಸಿಕೊಂಡ ಡಿ.ಕೆ. ಶಿವಕುಮಾರ್‌, ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ ನೀಡದೆ ಮೌನವಹಿಸಿದ್ದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಪ್ರಿಯಾಂಕ್ ಖರ್ಗೆ
ಡಿ.ಕೆ. ಶಿವಕುಮಾರ್
ಸಿದ್ದರಾಮಯ್ಯ
ಕರ್ನಾಟಕ ರಾಜಕೀಯ

Latest Videos
Recommended Stories
Recommended image1
ಡಿಕೆಶಿ ಮೌನಕ್ಕೆ ಕೊನೆಗೂ ಸಿಕ್ಕಿತು ಉತ್ತರ: 'ತೋಡಿದ ಬಾವಿಗೆ ಜಲವೇ ಸಾಕ್ಷಿ' ಎಂದದ್ಯಾಕೆ ನೊಣವೆಕೆರೆ ಅಜ್ಜಯ್ಯ
Recommended image2
₹75 ಲಕ್ಷ ವೆಚ್ಚದಲ್ಲಿ ಈದ್ಗಾ ಮೈದಾನ, ₹4 ಕೋಟಿ ವೆಚ್ಚದಲ್ಲಿ ಏರ್‌ ಕಂಡಿಷನ್ಡ್ ಶಾದಿಮಹಲ್.. ಸರ್ವೇ ಜನಃ ಸುಖಿನೋ ಭವಂತು ಎಂದ ಬಿಜೆಪಿ ಶಾಸಕ
Recommended image3
ಜನರು ಎಸೆದ ಮಾಂಸದ ತುಂಡುಗಳನ್ನು ತಿಂದು ಹೆಚ್ಚಾಯ್ತು ಹೆಬ್ಬಾವುಗಳ ಹಾವಳಿ; ಚರಂಡಿ, ಪೊದೆಗಳಲ್ಲಿ ಹೆಬ್ಬಾವುರಾಶಿ!
Related Stories
Recommended image1
ಸಿದ್ದರಾಮಯ್ಯ, ಡಿಕೆ ಶಿವಕುಮಾರ ಪ್ರತ್ಯೇಕವಾಗಿ ದೆಹಲಿಗೆ ಪ್ರಯಾಣ; ಮುಂದಿನ ಸಿಎಂ ಯಾರು? ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ?
Recommended image2
Siddaramaiah: ಸರ್ವ ಸಮುದಾಯದ ನಾಯಕ ಸಿದ್ದರಾಮಯ್ಯ - ಸಚಿವ ಈಶ್ವರ್ ಖಂಡ್ರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved