- Home
- Entertainment
- TV Talk
- ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!
ಮೆಜೆಸ್ಟಿಕ್‌ನಲ್ಲಿ ಮೈ ಮಾರಿಕೊಳ್ಳೋ ಆ ಮಹಿಳೆಯರು; ಕಣ್ಣಿಗೆ ಕಾಣಿಸದ ಸತ್ಯ ತೋರಿಸಿದ ನಟಿ ಕಾವ್ಯಾ ಶಾ!
Actress Kaavya Sha: ಸಂಜೆಯಾಗುತ್ತಿದ್ದಂತೆ ಮೆಜೆಸ್ಟಿಕ್‌ನಲ್ಲಿ ಕೆಲ ಹುಡುಗಿಯರು ಅತಿಯಾಗಿ ಮೇಕಪ್ ಮಾಡಿಕೊಂಡು, ಆ ಕಡೆಯಿಂದ ಈ ಕಡೆಗೆ ಓಡಾಡುತ್ತಿರುತ್ತಾರೆ. ಅವರ ನಡವಳಿಕೆ ನೋಡಿದ್ರೆ, ಅವ್ರ ಉದ್ದೇಶ ಏನು ಎನ್ನೋದು ಗೊತ್ತಾಗುತ್ತದೆ. ಸಿಂಗಲ್ ಆಗಿ ಓಡಾಡುವ ಹುಡುಗರ ಕಡೆಗೆ ಅವರ ಗಮನ ಹೆಚ್ಚಿರುತ್ತದೆ.

ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿರೋ ನಟಿ!
ನಟಿ ಕಾವ್ಯಾ ಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ದಿನಕ್ಕೊಂದು ವಿಷಯಗಳನ್ನು ಇಟ್ಟುಕೊಂಡು ವಿಡಿಯೋ ಮಾಡುತ್ತಾರೆ. ಒಟ್ಟಿನಲ್ಲಿ ಒಂದಿಷ್ಟು ಸಂದೇಶ, ಸಾಮಾಜಿಕ ಕಳಕಳಿ ಮೂಡಿಸುವ ಕೆಲಸವನ್ನು ಮಾಡುತ್ತಿರೋದು ಖುಷಿಯ ವಿಷಯ. ಈಗ ಮೆಜೆಸ್ಟಿಕ್‌ನಲ್ಲಿರುವ ಆ ಮಹಿಳೆಯರ ಕುರಿತು ವಿಡಿಯೋ ಮಾಡಿದ್ದಾರೆ.
500, 1000 ರೂಪಾಯಿಗೂ ಸಿಗ್ತಾರೆ!
ಮೆಜೆಸ್ಟಿಕ್‌ನಲ್ಲಿ 500, 1000, 3000 ರೂಪಾಯಿಗೆ ದೇಹ ಮಾರಿಕೊಳ್ಳುವ ಮಹಿಳೆಯರಿದ್ದಾರೆ. ಕಾರ್‌ನಲ್ಲೋ, ಹೋಟೆಲ್‌ನಲ್ಲೋ ಗಂಟೆಗೆ ಇಂತಿಷ್ಟು ಎಂದು ಹಣ ಕೊಡಬೇಕು. ಮೊದಲೇ ಹೋಟೆಲ್‌ನಲ್ಲಿ ಮಾತನಾಡಿಕೊಳ್ಳೋದುಂಟು, ಆ ಹೋಟೆಲ್‌ನಲ್ಲಿ ಕೂಡ ಹೈ ಕ್ಲಾಸ್, ಲೋ ಕ್ಲಾಸ್ ಎಂದು ಕೂಡ ಇರುವುದು.
ಕಾವ್ಯಾ ಶಾ ರೀಲ್ಸ್‌ಗೆ ಮೆಚ್ಚುಗೆ
ಒಟ್ಟಿನಲ್ಲಿ ಕಾವ್ಯಾ ಶಾ ಅವರು ಕಂಟೆಂಟ್ ಕ್ರಿಯೇಟರ್ ಆಗಿ ಈ ಬಾರಿ ಧೈರ್ಯದಿಂದ ಕಂಟೆಂಟ್ ಆಯ್ಕೆ ಮಾಡಿಕೊಂಡು, ಎಲ್ಲರ ಮನಸ್ಸು ನಾಟುವಂತೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಮಾಡಿದ ಒಂದೇ ದಿನಕ್ಕೆ 6000 ಕ್ಕೂ ಅಧಿಕ ಜನರು ಕಾಮೆಂಟ್ ಮಾಡಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.
ಬೈಯ್ಯುವ ಜನರಿದ್ದಾರೆ!
ದುಡ್ಡಿರೋನು ಬಂದರೆ ಸಾಕು, ಒಂದು ಗಂಟೆಯಲ್ಲಿ ಹಣ ಸಿಕ್ಕರೆ ಸಾಕು ಎಂದು ಮೆಜೆಸ್ಟಿಕ್‌ನಲ್ಲಿ ಗಂಟೆಗೆ ಇಂತಿಷ್ಟು ಎಂದು ಹಣ ಪಡೆಯುವ ಆ ಮಹಿಳೆ ಅಂದುಕೊಳ್ತಾರೆ. ಅದನ್ನು ನೋಡಿದ ಕೆಲವರು ಇಂಥವ್ರದ್ದೊಂದು ಜನ್ಮಾನಾ? ಬದುಕೋ ಬದಲು ಸತ್ತೋಗೋದು ಒಳ್ಳೆಯದು, ಕಾಸಿಗೋಸ್ಕರ ಮಾರಿಕೊಳ್ತಾರೆ ಎಂದು ಬೈಯ್ದುಕೊಳ್ತಾರೆ.
ಸತ್ಯಾಂಶ ಏನಾಗಿರುತ್ತದೆ?
“ಹುಟ್ಟಿದಾಗಿನಿಂದ ಈಗಿನವರೆಗೂ ತುಂಬ ಸಲ ಸತ್ತು ಹೋದೆ, ಇನ್ನೂ ಎಷ್ಟು ಸಲ ಸತ್ತೋಗಲಿ? ಭಿಕ್ಷೆ ಬೇಡ್ತಿಲ್ಲ, ಇದು ಕೆಲಸವೇ. ಹದಿನೈದು ವರ್ಷಕ್ಕೆ ಅಪ್ಪ ಎಂದುಕೊಂಡವನು ಯಾವುದೋ ಮುದುಕನಿಗೆ ಮಾರಿದ, ಆಮೇಲೆ ಅವನು, ಅವನ ಮಗ, ಸಂಬಂಧಿಕರು ಯಾರೂ ಕೂಡ ನನ್ನ ಬಿಡಲಿಲ್ಲ. ನ್ಯಾಯವಾಗಿ ನನ್ನನ್ನು ಮಾರಿದ ಅವನ ತಂದೆ ಸಾಯಬೇಕು, ಆ ಮುದುಕನ ಮಗ, ಸಂಬಂಧಿಕರು ಸಾಯಬೇಕು, ಅವನು ಸತ್ತೋದ ಎಂದ ಬೇರೆಯವ್ರನ್ನು ಮದುವೆಯಾದರೆ, ಅವನು ಕೂಡ ನನ್ನನ್ನು ಮೆಜೆಸ್ಟಿಕ್‌ಗೆ ತಂದು ಕೂರಿಸಿದ, ಅವನು ಸಾಯಬೇಕು ಅಲ್ವಾ? ಮನೆಯಲ್ಲಿ ಹೆಂಡ್ತಿ ಇದ್ರೂ ಕೂಡ ನನ್ನ ಜೊತೆ ಮಲ್ಕೊಂಡ ನೀನು ಸಾಯಬೇಕು ಅಲ್ವಾ? ಸಮಾಜದಲ್ಲಿ ಯಾರೇ ತಪ್ಪು ಮಾಡಿದ್ರೂ, ಅವಮಾನ, ಶಿಕ್ಷೆ ಹೆಣ್ಣಿಗೆ ಮಾತ್ರಾನಾ? ಇದಕ್ಕೆಲ್ಲ ತಲೆಕೆಡಿಸಿಕೊಂಡ್ರೆ ಬದುಕೋಕೆ ಆಗೋದಿಲ್ಲ” ಎಂದು ಆ ಮಹಿಳೆ ಮನಸ್ಸಿನಲ್ಲಿ ಅಂದುಕೊಳ್ತಾಳೆ.
ಕಾರಣ ಬೇರೆ ಬೇರೆ ಇರುತ್ತದೆ!
ಒಟ್ಟಿನಲ್ಲಿ ಮೆಜೆಸ್ಟಿಕ್ ಮೈ ಮಾರಿಕೊಳ್ಳುವ ಕೆಲ ಮಹಿಳೆಯರ ಹಿಂದೆ ಒಂದಿಷ್ಟು ಕರಾಳ ಕತೆಗಳು ಇರುತ್ತವೆ, ಭಾವನಾತ್ಮಕ ಕತೆಯೂ ಇರುತ್ತದೆ, ಅವು ಎಲ್ಲರಿಗೂ ಗೊತ್ತಾಗೋದಿಲ್ಲ ಎನ್ನೋದನ್ನು ನಟಿ ಕಾವ್ಯಾ ಶಾ ಅವರು ರೀಲ್ಸ್ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

