09:38 PM (IST) Apr 14

Karnataka News Live 14th April: ಶೃಂಗೇರಿಗೆ ಹೆಚ್ಚುವರಿ ₹50 ಕೋಟಿ ಅನುದಾನ - ಸಚಿವ ಸತೀಶ್ ಜಾರಕಿಹೊಳಿ ಭರವಸೆ

ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದ ನದಿಗೆ ಸೇತುವೆ ನೀರ್ಮಾಣ ಸೇರಿದಂತೆ ಶೃಂಗೇರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚುವರಿ ₹50 ಕೋಟಿ ನೀಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

Read Full Story
09:27 PM (IST) Apr 14

Karnataka News Live 14th April: ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿಗೆ ಗ್ಯಾರಂಟಿ ಯೋಜನೆಗಳೇ ಶ್ರೀರಕ್ಷೆ - ಸಲೀಂ ಅಹಮದ್‌

ಐದು ನಗರ ಪಾಲಿಕೆಗಳ ಚುನಾವಣೆಗೆ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ಧರಾಗಬೇಕು. ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳೇ ಪಕ್ಷದ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದೆ ಎಂದು ಸಲೀಂ ಅಹಮದ್‌ ತಿಳಿಸಿದರು.

Read Full Story
08:46 PM (IST) Apr 14

Karnataka News Live 14th April: ಚಿಕ್ಕಮಗಳೂರಲ್ಲೂ ಕೈ ಕಾರ್ಯಕರ್ತರ ಅಸಮಾಧಾನ - ಸಿಎಂ ಪ್ರತಿಮೆ ಅನಾವರಣ ಬೆನ್ನಲ್ಲೇ ಹೈಕಮಾಂಡ್‌ಗೆ ಸಚಿನ್ ಮೀಗಾ ಪತ್ರ!

ಚಿಕ್ಕಮಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರ ಪ್ರತಿಮೆ ಅನಾವರಣ ಕಾರ್ಯಕ್ರ, ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ, ಹೈಕಮಾಂಡ್‌ಗೆ ಪತ್ರ ಬರೆದಿದ್ದಾರೆ.

Read Full Story
08:23 PM (IST) Apr 14

Karnataka News Live 14th April: Watermelon - ಬೇಸಿಗೆಯಲ್ಲಿ ಕಲ್ಲಂಗಡಿ ತಿಂತೀರಾ? ಈ ಸಮಯದಲ್ಲಿ ತಿಂದರೆ ಆರೋಗ್ಯಕ್ಕೆ ಡೇಂಜರ್!

ಬೇಸಿಗೆಯಲ್ಲಿ ಆರೋಗ್ಯವಾಗಿರಲು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದೀರಾ? ಆದರೆ, ಯಾವ ಸಮಯದಲ್ಲಿ ತಿನ್ನುತ್ತಿದ್ದೀರಿ ಎಂಬುದು ಮುಖ್ಯ. ಕಲ್ಲಂಗಡಿ ತಿನ್ನಲು ಸರಿಯಾದ ಸಮಯ ಯಾವುದು? ಯಾವ ಸಮಯದಲ್ಲಿ ತಿನ್ನಬಾರದು? ಇಲ್ಲಿದೆ ಮಾಹಿತಿ.

Read Full Story
08:05 PM (IST) Apr 14

Karnataka News Live 14th April: ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ಬೇಕು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಏ.30ರೊಳಗೆ ಜಾಗದ ಕುರಿತಾದ ಸಮಸ್ಯೆ ಬಗೆಹರಿಸಿಕೊಡುವಂತೆ ರಾಜ್ಯ ಕೈಗಾರಿಕಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

Read Full Story
08:00 PM (IST) Apr 14

Karnataka News Live 14th April: ಲವ್‌ ಮಾಡಿದ್ದೆ, ಆದ್ರೆ ಅದೆಲ್ಲಾ ಈಗ ಹೇಳಲ್ಲ ಎನ್ನುತ್ತಲೇ 'ಭಾಗ್ಯ'ಳ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕಾಲೇಜು ದಿನಗಳ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ, ತಮ್ಮ ಪತ್ನಿಯ ಟೆಂಪಲ್ ರನ್ ಹಾಗೂ ತಮ್ಮ ಸರ್ಕಾರದ 'ಭಾಗ್ಯ' ಯೋಜನೆಗಳ ಹಿಂದಿನ ನಿಜವಾದ ಅರ್ಥವನ್ನು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
Read Full Story
07:49 PM (IST) Apr 14

Karnataka News Live 14th April: ಕುಂದಾಪುರ–ತೀರ್ಥಹಳ್ಳಿ ಸಂಪರ್ಕಿಸುವ ಬಾಳೆಬರೆ ಘಾಟಿ ಸಂಪೂರ್ಣ ಬಂದ್! ಪರ್ಯಾಯವಾಗಿ ಈ ಮಾರ್ಗ ಬಳಸಿ

ಉಡುಪಿಯ ಕುಂದಾಪುರ–ತೀರ್ಥಹಳ್ಳಿ ರಾಜ್ಯ ಹೆದ್ದಾರಿ 52ರಲ್ಲಿರುವ ಬಾಳೆಬರೆ ಘಾಟಿಯಲ್ಲಿ ಭೂಕುಸಿತ ಉಂಟಾದ ಕಾರಣ, ಸಾರ್ವಜನಿಕರ ಸುರಕ್ಷತೆಗಾಗಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
Read Full Story
07:20 PM (IST) Apr 14

Karnataka News Live 14th April: ಚಿಕ್ಕಮಗಳೂರು - ಪೇಷಂಟ್ ನೋಡ್ರಿ ಅಂದ್ರೆ ಆಸ್ಪತ್ರೆ ಬೆಡ್‌ ಮೇಲೆ ಮಲಗಿ ರೀಲ್ಸ್ ನೋಡೋ ನರ್ಸ್‌ಗಳು! ವಿಡಿಯೋ ವೈರಲ್

ಚಿಕ್ಕಮಗಳೂರಿನ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್‌ಗಳು ಕರ್ತವ್ಯ ನಿರ್ಲಕ್ಷಿಸಿ ಆಸ್ಪತ್ರೆಯ ಬೆಡ್ ಮೇಲೆ ರೀಲ್ಸ್ ನೋಡುತ್ತಿರುವುದು ಬೆಳಕಿಗೆ ಬಂದಿದೆ. ವೈದ್ಯರು ಸಹ ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದ ಕಾರಣ ರೋಗಿಗಳು ತೊಂದರೆ ಅನುಭವಿಸುತ್ತಿದ್ದು, ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Read Full Story
06:45 PM (IST) Apr 14

Karnataka News Live 14th April: ಬೆಂಗಳೂರಿನಿಂದ ಹುಬ್ಬಳ್ಳಿ ಮೂಲಕ ಪಶ್ಚಿಮ ಬಂಗಾಳಕ್ಕೆ ಬೇಸಿಗೆ ವಿಶೇಷ ಎಕ್ಸ್ ಪ್ರೆಸ್ ರೈಲು, ಎಷ್ಟು ದಿನ ಪ್ರಯಾಣ?

ಬೇಸಿಗೆ ರಜೆಯ ಪ್ರಯಾಣಿಕರ ಅನುಕೂಲಕ್ಕಾಗಿ, ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ಪಶ್ಚಿಮ ಬಂಗಾಳದ ಅಲಿಪುರ್ ದ್ವಾರ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಈ ರೈಲು (07323/07324) ಬೆಂಗಳೂರಿನ ಎಸ್ಎಂವಿಟಿ ಮತ್ತು ಯಲಹಂಕ ಮೂಲಕ ಒಂದು ಟ್ರಿಪ್ ಮಾತ್ರ ಸಂಚರಿಸಲಿದೆ. ಏಪ್ರಿಲ್ 15 ರಂದು ಹುಬ್ಬಳ್ಳಿಯಿಂದ ಮತ್ತು ಏಪ್ರಿಲ್ 19 ರಂದು ಅಲಿಪುರ್ ದ್ವಾರ್‌ನಿಂದ ಈ ರೈಲು ಹೊರಡಲಿದೆ.
Read Full Story
06:39 PM (IST) Apr 14

Karnataka News Live 14th April: Bael Juice Benefits - ಹೊಟ್ಟೆ ಉರಿ, ಸನ್‌ಸ್ಟ್ರೋಕ್‌ಗೆ ಬೇಸಿಗೆಯ ಬೆಸ್ಟ್ ಮದ್ದು ಬೇಲದ ಹಣ್ಣಿನ ಶರಬತ್ತು!

ಬೇಸಿಗೆ ಬಂತೆಂದರೆ ಸಾಕು, ಸುಡು ಬಿಸಿಲು, ಸನ್‌ಸ್ಟ್ರೋಕ್ ಭಯ ಹಾಗೂ ಹೊಟ್ಟೆ ಉರಿ ಶುರು. ಈ ಎಲ್ಲಾ ಸಮಸ್ಯೆಗಳಿಗೆ ಬೇಲದ ಹಣ್ಣಿನ ಶರಬತ್ತು ಒಂದು ಸೂಪರ್ ದೇಸಿ ಮದ್ದು. ಬೇಲದ ಹಣ್ಣಿನಲ್ಲಿ ದೇಹವನ್ನು ತಂಪಾಗಿಸುವ ಗುಣವಿದೆ.

Read Full Story
06:33 PM (IST) Apr 14

Karnataka News Live 14th April: RSS ವಿಷಸರ್ಪ ಎಂದವರಿಗೆ ಶಾಕ್ ನೀಡಿದ ಸ್ವಪಕ್ಷೀಯರು - ಕಾಂಗ್ರೆಸ್ ಹುದ್ದೆಗೆ RSS ಮುಖಂಡರ ಎಂಟ್ರಿ

ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಪದಾಧಿಕಾರಿಗಳ ಹುದ್ದೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಕೆಪಿಸಿಸಿಗೆ ದೂರು ಸಲ್ಲಿಕೆಯಾದ ನಂತರ, ಜಿಲ್ಲಾ ಸಮಿತಿಯು ವಿವಾದಿತ ನೇಮಕಾತಿಗಳಿಗೆ ತಡೆ ನೀಡಿದೆ. 

Read Full Story
06:14 PM (IST) Apr 14

Karnataka News Live 14th April: ಬೆಂಗಳೂರಲ್ಲಿ ಸರಣಿ ಕಳ್ಳತನ - 27 ಲಕ್ಷ ಮೌಲ್ಯದ ಚಿನ್ನ ಸಹಿತ ಬೆಲೆಬಾಳುವ ಹಲವು ವಸ್ತುಗಳು ಸಹಿತ ಆರೋಪಿಗಳು ವಶಕ್ಕೆ!

ಬೆಂಗಳೂರು ನಗರದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಆರ್‌ಟಿ ನಗರ, ಬಸವೇಶ್ವರ ನಗರ ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಕೈಗಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ನಗರದಲ್ಲಿ ಆತಂಕ ಸೃಷ್ಟಿಸಿದ್ದ ಕಳ್ಳತನದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.
Read Full Story
06:12 PM (IST) Apr 14

Karnataka News Live 14th April: ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನ ಬಲಿ ಪಡೆದಿದ್ದ ನೀರಾನೆ 'ಹಂಸಿನಿ'ಯೂ ಸಾವು! ಕಾರಣವೇನು ಗೊತ್ತಾ?

ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ 12 ವರ್ಷದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಈ ಹಿಂದೆ ಎರಡು ಬಾರಿ ಮರಿಗಳನ್ನು ಕಳೆದುಕೊಂಡಿದ್ದ ಹಂಸಿನಿಯ ಸಾವು ಮೃಗಾಲಯಕ್ಕೆ ನಷ್ಟವಾಗಿದೆ.

Read Full Story
05:47 PM (IST) Apr 14

Karnataka News Live 14th April: ಬಾಬಾ ಸಾಹೇಬರು ವಿಶ್ವ ಮೆಚ್ಚುವಂತಹ ಮಹಾನಾಯಕ - ನಟ ದುನಿಯಾ ವಿಜಯ್

ಬಾಬಾ ಸಾಹೇಬರು ವಿಶ್ವ ಮೆಚ್ಚುವಂತಹ ಮಹಾನಾಯಕ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆದಾಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಸಿಗುತ್ತದೆ ಎಂದು ನಟ ದುನಿಯಾ ವಿಜಯ್ ಹೇಳಿದರು.

Read Full Story
05:33 PM (IST) Apr 14

Karnataka News Live 14th April: ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ - ಗೃಹ ಸಚಿವ ಪರಮೇಶ್ವರ್‌

ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್‌ ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ತೀರ್ಮಾನ ತೆಗೆದುಕೊಂಡರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Read Full Story
05:24 PM (IST) Apr 14

Karnataka News Live 14th April: ವಿಜಯಪುರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು - ಗ್ರಾಮ ಪಂಚಾಯತ್ ಸದಸ್ಯನ ಭೀಕರ ಹತ್ಯೆ

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಗುಂಡು ಹಾರಿಸಿ ಗ್ರಾಮ ಪಂಚಾಯತ್ ಸದಸ್ಯನ ಕೊಲೆ ಮಾಡಲಾಗಿದೆ. ವಿಜಯಪುರ ನಗರದ ಹೊರವಲಯದ ಅಲಿಯಾಬಾದ್ ಬಳಿ ಘಟನೆ ನಡೆದಿದೆ.

Read Full Story
05:18 PM (IST) Apr 14

Karnataka News Live 14th April: ಮೋದಿ ರಾಜಕೀಯದಲ್ಲೂ ಮಹಿಳೆಯರಿಗೆ ಅವಕಾಶ ನೀಡ್ತಿದ್ದಾರೆ - ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಹಿಳಾ ಮೀಸಲಾತಿಯು ಒಂದು ಚರಿತ್ರಾರ್ಹ ನಿರ್ಣಯವಾಗಿದ್ದು, ಮಹಿಳೆಯರ ಜವಾಬ್ದಾರಿ ಹೆಚ್ಚಾಗುತ್ತಿದೆ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Read Full Story
05:07 PM (IST) Apr 14

Karnataka News Live 14th April: ಎರಡು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ - ಕೆ.ಎಸ್.ಈಶ್ವರಪ್ಪ ಭವಿಷ್ಯ

ಅಧಿಕಾರ ದಾಹ ಚಟುವಟಿಕೆಗಳಿಂದ ಬಳಲುತ್ತಿರುವ ರಾಜ್ಯ ಕಾಂಗ್ರೆಸ್‌ ಮುಖಂಡರ ನಡೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಎರಡು ತಿಂಗಳ ಒಳಗಾಗಿ ಸಾಕಷ್ಟು ಬದಲಾವಣೆಗಳಾಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.

Read Full Story
04:57 PM (IST) Apr 14

Karnataka News Live 14th April: Bengaluru ಪತಿ ಸಾವು,ನಾನು ಮುಟ್ಟೇ ಇಲ್ಲ ಅಂತಿರೋ ಪತ್ನಿ, ಆತ್ಮ*ಹ*ತ್ಯೆಯೋ, ಕೊ*ಲೆಯೋ? ಸತ್ಯ ಹೇಳಲಿದೆ ಆ ಪರೀಕ್ಷೆ!

ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದ ತೌಸಿಬ್ ಪಾಷ ಅವರ ಸಾವಿನ ಪ್ರಕರಣವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಗೊಂದಲ ಸೃಷ್ಟಿಸಿದೆ. ಪತ್ನಿ ಸೋಹನಾ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಿದರೆ, ಮೃತನ ದೇಹದಲ್ಲಿ ಚಾಕು ಇರಿತದ ಗುರುತುಗಳಿರುವುದರಿಂದ ಪೊಲೀಸರು ಸತ್ಯಾಸತ್ಯತೆ ತಿಳಿಯಲು ಆಕೆಯನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.
Read Full Story
04:42 PM (IST) Apr 14

Karnataka News Live 14th April: ಪೋಷಕರೇ ಮಕ್ಕಳಲ್ಲಿ 'ಪಂಚ' ಗುಣಗಳಿದ್ದರೆ, ನೀವು ಸೂಪರ್ ಕಿಡ್‌ ಹೊಂದಿದ್ದೀರಿ ಎಂದರ್ಥ

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ವಿಶೇಷವಾಗಿರಬೇಕು, ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಇರುವುದು ಸಹಜ. ಆದರೆ, ಬಾಲ್ಯದಿಂದಲೇ ಮಕ್ಕಳಲ್ಲಿ ಕಾಣಿಸುವ ಕೆಲವು ಗುಣಗಳು ಅವರ ಭವಿಷ್ಯದ ಪ್ರತಿಭೆಗೆ ಸಂಕೇತ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಆ ಗುಣಗಳು ಯಾವುವು ನೋಡೋಣ ಬನ್ನಿ.
Read Full Story