10:19 PM (IST) May 19

Karnataka News Liveಲಕ್ಷ್ಮೀ ಹೆಬ್ಬಾಳ್ಕರ್​ಗೆ ಪಂಗನಾಮ ಹಾಕಿದ ಬುರ್ಖಾಧಾರಿ ಮನವಿಗೆ ಸಿಗತ್ತಾ ಮನ್ನಣೆ? ಆದೇಶದ ಗತಿಯೇನು? ಬಿಸಿಬಿಸಿ ಚರ್ಚೆ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೋಮು ಸೌಹಾರ್ದತೆಯ ದ್ಯೋತಕವೆಂದು ಭಾವಿಸಿ ಹಿಂದೂ ವಿಧವೆಯೊಬ್ಬರಿಗೆ ಮನೆ ಕೊಡಿಸಲು ಬಂದ ಬುರ್ಖಾಧಾರಿ ಮಹಿಳೆಯರಿಗೆ ಸಹಾಯ ಮಾಡಲು ಮುಂದಾದರು. ಆದರೆ, ಆ ಬುರ್ಖಾಧಾರಿ ಮಹಿಳೆಯರಲ್ಲಿ ಒಬ್ಬರು ಆ ವಿಧವೆಯ ಮತಾಂತರಗೊಂಡ ಮಗಳೇ ಎಂಬ ಸತ್ಯ ಬಯಲಾಗಿದೆ, ಮುಂದೇನು?

Read Full Story
09:27 PM (IST) May 19

Karnataka News Liveವಿಜಯವಾಡ ಟು ಬೆಂಗಳೂರು ಜಸ್ಟ್ 6 ಗಂಟೆ - ಶೀಘ್ರದಲ್ಲೇ ಲಭ್ಯವಾಗಲಿದೆ ನೂತನ ಗ್ರೀನ್‌ಫೀಲ್ಡ್ ಹೈವೇ

ಬೆಂಗಳೂರು ಮತ್ತು ವಿಜಯವಾಡ ನಡುವೆ ನಿರ್ಮಾಣವಾಗುತ್ತಿರುವ ಹೊಸ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಹೆದ್ದಾರಿ (NH-544G) ಕಾಮಗಾರಿ ಅಂತಿಮ ಹಂತದಲ್ಲಿದೆ. ಈ 6 ಪಥದ ಹೆದ್ದಾರಿಯು 2027ರ ವೇಳೆಗೆ ಪೂರ್ಣಗೊಳ್ಳಲಿದ್ದು, ಉಭಯ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 6 ಗಂಟೆಗಳಿಗೆ ಇಳಿಸಲಿದೆ.
Read Full Story
09:22 PM (IST) May 19

Karnataka News Liveಯಶ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ - ಈ ದಿನದಂದು ತೆರೆ ಮೇಲೆ 'ಟಾಕ್ಸಿಕ್' ಸಿನಿಮಾ ಬರೋದು ಫಿಕ್ಸ್?

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಚಿತ್ರದ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್‌ಡೇಟ್ ಒಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಈ ಹಿಂದೆ ಹಲವು ಬಾರಿ ಮುಂದೂಡಲಾಗಿತ್ತು.

Read Full Story
08:48 PM (IST) May 19

Karnataka News Live'ಗಂಡನ ಬಿಟ್ಟು ಇರಲಾರೆ, ತವರಿನಲ್ಲೂ ಉಳಿಯಲಾರೆ..' ಅತ್ತೆಯ ಕಿರುಕುಳಕ್ಕೆ ಬೇಸತ್ತು ಸಾವು ಕಂಡ ಗೃಹಿಣಿ

ಬಳ್ಳಾರಿಯ ಕಂಪ್ಲಿಯಲ್ಲಿ, ಪತಿ ಮತ್ತು ಅತ್ತೆಯ ಮಾನಸಿಕ ಕಿರುಕುಳಕ್ಕೆ ಬೇಸತ್ತು ಐಶ್ವರ್ಯ ಎಂಬ ಗೃಹಿಣಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದರೂ, ನಿರಂತರ ಗೃಹಹಿಂಸೆಯಿಂದ ನೊಂದು ತವರುಮನೆಯಲ್ಲಿ ನೇಣಿಗೆ ಶರಣಾಗಿದ್ದು, ಡೆತ್‌ನೋಟ್ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Read Full Story
08:27 PM (IST) May 19

Karnataka News Liveಗಂಗಾವತಿ ಕಾಂಗ್ರೆಸ್‌ನಲ್ಲಿ ಭಿನ್ನಮತ? ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಗಂಭೀರ ಆರೋಪ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಸ್ಥಳೀಯ ಮುಖಂಡರನ್ನು ಕಡೆಗಣಿಸುತ್ತಿದ್ದಾರೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
07:41 PM (IST) May 19

Karnataka News Liveದುಬಾರೆ ಘಟನೆ ಬೆನ್ನಲ್ಲೇ ಬಿಗ್ ಆಕ್ಷನ್ - ಮೈಸೂರು ದಸರಾದಿಂದ ಕಂಜನ್ ಆನೆ ಶಾಶ್ವತ ವಜಾ

ದುಬಾರೆ ಆನೆ ಶಿಬಿರದಲ್ಲಿ ಸಹ ಆನೆ 'ಮಾರ್ತಾಂಡ'ನ ಸಾವಿಗೆ ಕಾರಣವಾದ 'ಕಂಜನ್' ಆನೆಯನ್ನು, ಅದರ ಆಕ್ರಮಣಕಾರಿ ನಡವಳಿಕೆಯಿಂದಾಗಿ ಮುಂಬರುವ ಮೈಸೂರು ದಸರಾ ಮಹೋತ್ಸವದಿಂದ ಶಾಶ್ವತವಾಗಿ ನಿಷೇಧಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
Read Full Story
06:20 PM (IST) May 19

Karnataka News Liveಬೀದರ್-ಬೆಂಗಳೂರು ನೇರ ವಿಮಾನಯಾನ ಜೂನ್ 1 ರಿಂದ ಆರಂಭ, ವೇಳಾಪಟ್ಟಿ ಬಿಡುಗಡೆ, ಚೆಕ್ ಮಾಡಿಕೊಳ್ಳಿ

ಜೂನ್ 1 ರಿಂದ ಬೀದರ್-ಬೆಂಗಳೂರು ನಡುವಿನ ನೇರ ವಿಮಾನ ಸೇವೆ ಸ್ಟಾರ್ ಏರ್ ಮೂಲಕ ಪುನರಾರಂಭಗೊಳ್ಳಲಿದೆ. ಬೆಂಗಳೂರಿನಿಂದ ಬೆಳಿಗ್ಗೆ 6:30ಕ್ಕೆ ಮತ್ತು ಬೀದರ್‌ನಿಂದ 8:15ಕ್ಕೆ ವಿಮಾನಗಳು ಹೊರಡಲಿದ್ದು, ಈ ಸೇವೆಯು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
Read Full Story
06:17 PM (IST) May 19

Karnataka News Liveಬಾದಾಮಿ ಗುಹಾಂತರ ದೇವಾಲಯದ ಒಳಗೆ ಚಪ್ಪಲಿ ಧರಿಸಿ ಬಂದ ಮುಸ್ಲಿಂ ಮಹಿಳೆ, ತರಾಟೆಗೆ ತೆಗೆದುಕೊಂಡ ಟೂರಿಸ್ಟ್‌!

ಬಾಗಲಕೋಟೆಯ ಪ್ರಸಿದ್ಧ ಬಾದಾಮಿ ಗುಹಾಂತರ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿದ್ದ ಮುಸ್ಲಿಂ ಮಹಿಳೆಯನ್ನು ಇನ್ನೊಬ್ಬ ಮಹಿಳಾ ಪ್ರವಾಸಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
05:37 PM (IST) May 19

Karnataka News Liveಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!

ಶಿವಂ ಅಸೋಸಿಯೇಟ್ಸ್‌ನ ₹4500 ಕೋಟಿ ಠೇವಣಿ ವಂಚನೆ ಪ್ರಕರಣವು ಹೊಸ ತಿರುವು ಪಡೆದಿದೆ. ಸಾರ್ವಜನಿಕರ ಹಣದಿಂದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ.

Read Full Story
05:35 PM (IST) May 19

Karnataka News Liveಚೆಪಾಕ್‌ನ ಕೊನೆಯ ಐಪಿಎಲ್‌ ಪಂದ್ಯದಲ್ಲೂ ಆಡಲಿಲ್ಲ ಧೋನಿ! IPL ಗೆ ಗುಡ್‌ ಬೈ ಹೇಳ್ತಾರಾ ಮಹಿ?

ಗಾಯದ ಸಮಸ್ಯೆಯಿಂದಾಗಿ ಎಂ.ಎಸ್‌.ಧೋನಿ ಚೆಪಾಕ್‌ನ ಕೊನೆಯ ಲೀಗ್ ಪಂದ್ಯದಿಂದ ಹೊರಗುಳಿದಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪ್ಲೇ ಆಫ್ ಹಾದಿ ಬಹುತೇಕ ಅಂತ್ಯಗೊಂಡಿದೆ.
Read Full Story
05:28 PM (IST) May 19

Karnataka News Liveವಿಜಯಲಕ್ಷ್ಮೀ, ನಿಖಿತಾ, ಪವಿತ್ರಾ ಗೌಡರಿಂದ ಜೈಲುವರೆಗೆ - ದರ್ಶನ್ ಜೀವನದ ವಿವಾದಗಳು ಏನೇನಿದೆ ಗೊತ್ತಾ?

ಮನಸಾರೆ ಪ್ರೀತಿಸಿ, ಮನೆಯವರನ್ನೂ ಒಪ್ಪಿಸಿ ಧರ್ಮಕ್ಷೇತ್ರದಲ್ಲಿ ಮದುವೆಯೂ ಆಗಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದ ದರ್ಶನ್​​ರ ಮುದ್ದು ರಾಕ್ಷಸಿ ವಿಜಯಲಕ್ಷ್ಮೀ ಜೀವನ ಬೀದಿಗೆ ಬಂದಿದ್ದು 2011ರಲ್ಲಿ. 

Read Full Story
05:10 PM (IST) May 19

Karnataka News Liveವಿಶೇಷ ದಿನಕ್ಕೆ ದರ್ಶನ್ ಬೇಡಿಕೆ.. ಎಸ್‌ಪಿಗೆ ಪತ್ರ - ಗಂಡನ ನೆನಪಲ್ಲಿ ಒಡೆದ ಹೃದಯ.. ವಿಜಯಲಕ್ಷ್ಮೀ ಭಾವುಕ!

ಎಂತದ್ದೇ ಕಷ್ಟಗಳು ಎದುರಾದ್ರು, ಎದೆಗುಂದದೆ ಇಷ್ಟು ವರ್ಷಗಳಿಂದ ಸಂಸಾರದ ದೋಣಿಯನ್ನ ಮುನ್ನಡೆಸುತ್ತಿರೋ ದರ್ಶನ್​ ವಿಜಯಲಕ್ಷ್ಮೀಗೆ ಇದೇ ಮೊದಲ ಭಾರಿಗೆ ದೂರಾಗಿ ವಿವಾಹ ವಾರ್ಷಿಕೋತ್ಸವ ಮಾಡಿಕೊಳ್ಳಬೇಕಿದೆ.

Read Full Story
04:48 PM (IST) May 19

Karnataka News Liveಯುರೋಪ್‌ ಈಗ ಮತ್ತಷ್ಟು ಹತ್ತಿರ - ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಆರಂಭ, ಸ್ವಿಸ್ ಏರ್‌ಲೈನ್ಸ್‌ ಸಿಹಿ ಸುದ್ದಿ

ಸ್ವಿಸ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್, 2026ರ ಅಕ್ಟೋಬರ್‌ನಿಂದ ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸಲಿದೆ. ವಾರದಲ್ಲಿ ಐದು ದಿನ ಲಭ್ಯವಿರುವ ಈ ಸೇವೆಯು, ದಕ್ಷಿಣ ಭಾರತದ ಪ್ರಯಾಣಿಕರಿಗೆ ಯುರೋಪ್ ಮತ್ತು ಉತ್ತರ ಅಮೆರಿಕಾಗೆ ಸುಲಭ ಸಂಪರ್ಕ ಕಲ್ಪಿಸಲಿದೆ.
Read Full Story
04:45 PM (IST) May 19

Karnataka News Liveನೀ ತಾನೇ ನನ್ನ ಜೀವ.. ಎಂದು ಪತ್ನಿ-ಮಗನನ್ನು ಅಪ್ಪಿ ಹಣೆಗೆ ಮುತ್ತಿಟ್ಟ ಕೊಲೆ ಆರೋಪಿ ದರ್ಶನ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, 8 ತಿಂಗಳ ನಂತರ ಮೊದಲ ಬಾರಿಗೆ ತಮ್ಮ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. 23ನೇ ಮದುವೆ ವಾರ್ಷಿಕೋತ್ಸವದಂದು ನಡೆದ ಈ ವಿಶೇಷ ಮುಖಾಮುಖಿಗೆ ಅವಕಾಶ ನೀಡಲಾಗಿತ್ತು.

Read Full Story
04:38 PM (IST) May 19

Karnataka News LiveBTS Fan - ಕೊರಿಯನ್ ಬಾಯ್‌ಫ್ರೆಂಡ್ ಬೇಕಿತ್ತು.. ತಂಗಿ-ಅಮ್ಮನ ಬಗ್ಗೆ ಶಾಕಿಂಗ್ ಸೀಕ್ರೆಟ್ ಬಿಚ್ಚಿಟ್ಟ ನಟಿ ಅಹಾನಾ

ತನ್ನ ತಂಗಿ ಹಂಸಿಕಾಳಿಗೆ ಕೊರಿಯನ್ ಬಾಯ್‌ಫ್ರೆಂಡ್ ಬೇಕು ಅನ್ನೋ ಆಸೆ ಇದೆ. ಅಷ್ಟೇ ಅಲ್ಲ, ಅಮ್ಮನಿಗೂ ಕೊರಿಯನ್ ಅಳಿಯ ಬೇಕು ಅನ್ನೋ ಆಸೆ ಬಂದಿತ್ತು ಅಂತ ನಟಿ ಅಹಾನಾ ಕೃಷ್ಣ ಹೇಳಿಕೊಂಡಿದ್ದಾರೆ.

Read Full Story
04:24 PM (IST) May 19

Karnataka News Liveಸೋಮಾಲಿಯಾ ಜೆಟ್ ವೇವ್ಸ್ ಮೂಲಕ ಕರಾವಳಿಗೆ ಮುಂಗಾರು ಮಳೆ ಎಂಟ್ರಿ, ಸಮುದ್ರ ಅಬ್ಬರದ ಆತಂಕ ಜಲಕ್ರೀಡೆ ಸ್ಥಗಿತ!

ಹವಾಮಾನ ಇಲಾಖೆಯ ಚಂಡಮಾರುತ ಹಾಗೂ ಭಾರೀ ಮಳೆಯ ಮುನ್ಸೂಚನೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜಲಸಾಹಸ ಕ್ರೀಡೆ ಮತ್ತು ಪ್ರವಾಸಿ ಬೋಟಿಂಗ್ ಅನ್ನು ನಿಷೇಧಿಸಲಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಗೋಕರ್ಣ, ಮುರುಡೇಶ್ವರ, ಮತ್ತು ನೇತ್ರಾಣಿ ದ್ವೀಪದಂತಹ ಪ್ರಮುಖ ತಾಣಗಳಲ್ಲಿ ನಿರ್ಬಂಧ.

Read Full Story
04:19 PM (IST) May 19

Karnataka News Liveರಾಜ್ಯದ 10 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' - 48 ಗಂಟೆಗಳ ಕಾಲ ಮಳೆ ಅಬ್ಬರ, ಮನೆ ಬಿಡುವ ಮುನ್ನ ಎಚ್ಚರ!

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದು, ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 10 ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಹಾಗೂ ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದ್ದುದೆ.

Read Full Story
03:47 PM (IST) May 19

Karnataka News Liveಶಿವಂ ಹಗರಣ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!

‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ₹4,500 ಕೋಟಿ ವಂಚನೆ ಪ್ರಕರಣದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್‌ನನ್ನು 10 ದಿನಗಳ ಸಿಐಡಿ ಕಸ್ಟಡಿಗೆ ನೀಡಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಹೂಡಿಕೆದಾರರಿಂದ ಮೊದಲ ಅಧಿಕೃತ ದೂರು ದಾಖಲಾಗಿದೆ.
Read Full Story
02:51 PM (IST) May 19

Karnataka News Liveಭಾರತದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ ಬಲ - ಗೇಟ್ಸ್ ಫೌಂಡೇಶನ್ ಜೊತೆ ವಾಧ್ವಾನಿ ಫೌಂಡೇಶನ್ ಮಹತ್ವದ ಒಪ್ಪಂದ

ವಾಧ್ವಾನಿ ಫೌಂಡೇಶನ್ ಮತ್ತು ಗೇಟ್ಸ್ ಫೌಂಡೇಶನ್ ಭಾರತದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಒಪ್ಪಂದ ಮಾಡಿಕೊಂಡಿವೆ. ಈ ಸಹಭಾಗಿತ್ವವು 'ನ್ಯಾಷನಲ್ ಇನ್ನೋವೇಶನ್ ನೆಟ್‌ವರ್ಕ್' (NIN) ಮೂಲಕ ಆರೋಗ್ಯ, ಪೌಷ್ಟಿಕಾಂಶದಂತಹ ಕ್ಷೇತ್ರಗಳಲ್ಲಿನ ಶೈಕ್ಷಣಿಕ ಸಂಶೋಧನೆಗಳನ್ನು ಸಮಾಜಮುಖಿ ಪರಿಹಾರಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಿದೆ.
Read Full Story
02:30 PM (IST) May 19

Karnataka News Liveಗಮನಿಸಿ, ಮೇ 20 ರಿಂದ ಜೂನ್ 2ರವರೆಗೆ ಮಂಗಳೂರಿನಿಂದ ಹೊರಡುವ ಎಲ್ಲಾ ರೈಲುಗಳ ಸಂಚಾರ ಮಾರ್ಗದಲ್ಲಿ ಭಾರೀ ಬದಲಾವಣೆ!

ನೈಋತ್ಯ ರೈಲ್ವೆಯ ತಿರುವನಂತಪುರಂ ವಿಭಾಗದಲ್ಲಿ ಹಳಿ ನಿರ್ವಹಣೆ ಹಿನ್ನೆಲೆ, ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ವಿಜಯಪುರ ಎಕ್ಸ್‌ಪ್ರೆಸ್ ಭಾಗಶಃ ರದ್ದಾಗಿದ್ದು, ಅಂತ್ಯೋದಯ ಮತ್ತು ಮಾವೇಲಿ ಎಕ್ಸ್‌ಪ್ರೆಸ್ ಸೇರಿದಂತೆ ಇತರ ರೈಲುಗಳನ್ನು ಬೇರೆ ಮಾರ್ಗದಲ್ಲಿ ಓಡಿಸಲಾಗುವುದು ಅಥವಾ ನಿರ್ಬಂಧಿಸಲಾಗುವುದು.
Read Full Story