MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!

ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್‌ನಿಂದ ಐಷಾರಾಮಿ ಕಾರು ಉಡುಗೊರೆ ಪಡೆದ ಕರವೇ ಜಿಲ್ಲಾಧ್ಯಕ್ಷಗೆ ಸಿಐಡಿ ನೋಟಿಸ್‌!

ಶಿವಂ ಅಸೋಸಿಯೇಟ್ಸ್‌ನ ₹4500 ಕೋಟಿ ಠೇವಣಿ ವಂಚನೆ ಪ್ರಕರಣವು ಹೊಸ ತಿರುವು ಪಡೆದಿದೆ. ಸಾರ್ವಜನಿಕರ ಹಣದಿಂದ ಪ್ರಭಾವಿ ವ್ಯಕ್ತಿಯೊಬ್ಬರಿಗೆ ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ ಶಂಕೆ ವ್ಯಕ್ತವಾಗಿದ್ದು, ಸಿಐಡಿ ಈ ಕುರಿತು ತನಿಖೆ ನಡೆಸುತ್ತಿದೆ.  

2 Min read
Author : Gowthami K
Published : May 19 2026, 05:37 PM IST
Share this Photo Gallery
  • FB
  • TW
  • Linkdin
  • Whatsapp
16
 ಸಾರ್ವಜನಿಕರ ಠೇವಣಿ ಹಣದಿಂದ ಐಷಾರಾಮಿ ಕಾರು ಉಡುಗೊರೆ
Image Credit : Asianet News

ಸಾರ್ವಜನಿಕರ ಠೇವಣಿ ಹಣದಿಂದ ಐಷಾರಾಮಿ ಕಾರು ಉಡುಗೊರೆ

ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧದ ₹4500 ಕೋಟಿ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದ್ದು, ಸಾರ್ವಜನಿಕರ ಠೇವಣಿ ಹಣದಿಂದ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆಯೇ ಎಂಬ ಅನುಮಾನ ಮೂಡಿದೆ. ಇದನ್ನು ಸಿಐಡಿ ಗಂಭೀರವಾಗಿ ಪರಿಗಣಿಸಿದೆ.

Add Asianetnews Kannada as a Preferred SourcegooglePreferred
26
₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆ
Image Credit : Asianet News

₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆ

ಕಳೆದ ಡಿ.27ರಂದು ಬೆಳಗಾವಿಯ ಸರದಾರ್ಸ್ ಕಾಲೇಜು ಮೈದಾನದಲ್ಲಿ ನಡೆದ ಬೆಳಗಾವಿ ಉತ್ಸವ ಕಾರ್ಯಕ್ರಮವನ್ನು ಶಿವಂ ಅಸೋಸಿಯೇಟ್ಸ್ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾಧ್ಯಕ್ಷ ಆರ್.ಅಭಿಲಾಷ್‌ಗೆ ಸುಮಾರು ₹1.5 ಕೋಟಿ ಮೌಲ್ಯದ ಐಷಾರಾಮಿ ಕಾರು ಉಡುಗೊರೆಯಾಗಿ ನೀಡಲಾಗಿದೆ ಎನ್ನಲಾಗಿದೆ. ಈ ಕಾರು ಸಾರ್ವಜನಿಕರ ಠೇವಣಿ ಹಣದಿಂದ ಖರೀದಿಸಿ ನೀಡಲಾಗಿದೆಯೇ ಎಂಬ ಶಂಕೆ ಹಿನ್ನೆಲೆಯಲ್ಲಿ ಕಾರಿನ ಮೂಲ, ಹಣದ ಹರಿವು ಹಾಗೂ ಉಡುಗೊರೆ ವ್ಯವಹಾರದ ಕುರಿತು ತನಿಖೆ ನಡೆಸಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.

Related Articles

Related image1
ಬೆಳಗಾವಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ರೂ ಹಗರಣ ಸಿಐಡಿಗೆ, ಪ್ರಕರಣ ಬೆಳಕಿಗೆ ಬರಲು ಕಾರಣ 15 ಸಾವಿರ ಬಂದೂಕು!
Related image2
ಶಿವಂ ಅಸೋಸಿಯೇಟ್ಸ್ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!
36
ಕಾರ್‌ನ್ನು ಸಿಐಡಿಗೆ ಒಪ್ಪಿಸಲು ಸೂಚನೆ
Image Credit : Asianet News

ಕಾರ್‌ನ್ನು ಸಿಐಡಿಗೆ ಒಪ್ಪಿಸಲು ಸೂಚನೆ

ಸಿಐಡಿ ಅಧಿಕಾರಿಗಳು ಕಾರ್‌ನ ತನಿಖೆಗೆ ಅಗತ್ಯವಾಗಬಹುದು. ಆದ್ದರಿಂದ ಅದನ್ನು ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕೆಂದು ಆರ್.ಅಭಿಲಾಷ್‌ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಐಷಾರಾಮಿ ಕಾರ್‌ ಸ್ವೀಕರಿಸಿದ ಸಂದರ್ಭದ ಫೋಟೋ ಹಾಗೂ ವಿಡಿಯೋಗಳನ್ನು ಅಭಿಲಾಷ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಆದರೆ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆ ಪೋಸ್ಟ್‌ಗಳನ್ನು ಅಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಆಯೋಜಿಸಿದ್ದ ಸ್ವಚ್ಛ ಬೆಳಗಾವಿ ಸಂಭ್ರಮ ಕಾರ್ಯಕ್ರಮದಲ್ಲಿಯೂ ಆಯೋಜಕರಿಗೆ ಕಾರು ಉಡುಗೊರೆ ನೀಡುವುದಾಗಿ ಶಿವಾನಂದ ನೀಲಣ್ಣವರ ಭರವಸೆ ನೀಡಿದ್ದರು. ಆ ಭರವಸೆ ಪ್ರಕಾರ ಕಾರು ನೀಡಲಾಗಿದೆಯೇ? ಅಥವಾ ಕೇವಲ ಘೋಷಣೆಯಷ್ಟೇ ಆಗಿತ್ತೇ? ಎಂಬುದರ ತನಿಖೆ ವೇಳೆ ಪರಿಶೀಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

46
ಹಣದ ಹಾದಿ ಪತ್ತೆಗೆ ಸಿಐಡಿ ಕಸರತ್ತು
Image Credit : Asianet News

ಹಣದ ಹಾದಿ ಪತ್ತೆಗೆ ಸಿಐಡಿ ಕಸರತ್ತು

ಸಿಐಡಿ ಅಧಿಕಾರಿಗಳು ಈಗ ಶಿವಂ ಅಸೋಸಿಯೇಟ್ಸ್ ಮೂಲಕ ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಬಳಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಣ ಬಳಸಲಾಗಿದೆಯೇ? ಉಡುಗೊರೆಗಳ ರೂಪದಲ್ಲಿ ಪ್ರಭಾವಿ ವ್ಯಕ್ತಿಗಳಿಗೆ ವಿತರಿಸಲಾಗಿದೆಯೇ? ಎಂಬ ಅಂಶಗಳನ್ನೂ ತನಿಖೆ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ವಹಿವಾಟಿನ ಶಂಕೆ ವ್ಯಕ್ತವಾಗಿದ್ದು, 35 ಸಾವಿರಕ್ಕೂ ಹೆಚ್ಚು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಶಿವಾನಂದ ನೀಲಣ್ಣವರ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

56
 ಚಿಕ್ಕಮಗಳೂರು ಕಡೂರು ಪೊಲೀಸರು ಠಾಣೆಗೆ ನೀಡಿದ್ದ ನಾಮಫಲಕದಲ್ಲಿದ್ದ ನೀಲಣ್ಣವರ್ ಹೆಸರು ಮಾಯ!
Image Credit : Asianet News

ಚಿಕ್ಕಮಗಳೂರು ಕಡೂರು ಪೊಲೀಸರು ಠಾಣೆಗೆ ನೀಡಿದ್ದ ನಾಮಫಲಕದಲ್ಲಿದ್ದ ನೀಲಣ್ಣವರ್ ಹೆಸರು ಮಾಯ!

ಶಿವಾನಂದ ನೀಲಣ್ಣನವರ್ ವಿರುದ್ಧ ಬೆಳಗಾವಿ ಪೊಲೀಸರು ಅಲರ್ಟ್ ಆಗಿ ಈತನ ಅಕ್ರಮಗಳನ್ನು ಬಯಲಿಗೆಳೆಯುತ್ತಿದ್ದಂತೆ ಎಚ್ಚೆತ್ತ ಕಡೂರು ಪೊಲೀಸರು ಠಾಣೆಗೆ ನೀಡಿದ್ದ ನಾಮಫಲಕದಲ್ಲಿದ್ದ ಶಿವಾನಂದ ನೀಲಣ್ಣವರ್ ಹೆಸರನ್ನು ಅಳಿಸಿ ಪೊಲೀಸ್ ಇಲಾಖೆ ಸಹಾಯವಾಣಿ ತುರ್ತು ಸಂಖ್ಯೆಗಳನ್ನು ನಮೂದಿಸಿದೆ. 2 ತಿಂಗಳ ಹಿಂದಷ್ಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಯುವ ಜಾಗೃತಿ ಹೆಸರಲ್ಲಿ ದೊಡ್ಡ ಕಾರ್ಯಕ್ರಮವನ್ನು ಶಿವಾನಂದ ನೀಲಣ್ಣವರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪಟ್ಟಣದ ಪ್ರಮುಖ ರಸ್ತೆಗಳ ವೃತ್ತಗಳಲ್ಲಿ ಶಿವಾನಂದ ನೀಲಣ್ಣವರ್ ಫ್ಲೆಕ್ಸ್ ಗಳು ರಾರಾಜಿಸುತ್ತಿತ್ತು.

66
ನಾನು ರಾಜ್ಯದ ಸಿ.ಎಂ. ಆಗಬಲ್ಲೆ ಎಂಬ ಶಿವಾನಂದ ಮಾತುಗಳು ಸಾಕಷ್ಟು ವೈರಲ್
Image Credit : Asianet News

ನಾನು ರಾಜ್ಯದ ಸಿ.ಎಂ. ಆಗಬಲ್ಲೆ ಎಂಬ ಶಿವಾನಂದ ಮಾತುಗಳು ಸಾಕಷ್ಟು ವೈರಲ್

ಅಂದಿನ ವೇದಿಕೆ ಕಾರ್ಯಕ್ರಮದಲ್ಲಿ ಮನಸ್ಸು ಮಾಡಿದರೆ 224 ಕ್ಷೇತ್ರಗಳಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ಹಾಕಿಸಿ ನಾನು ರಾಜ್ಯದ ಸಿ.ಎಂ. ಆಗಬಲ್ಲೆ ಎಂಬ ಶಿವಾನಂದ ನೀಲಣ್ಣವರ್ ಮಾತುಗಳು ಸಾಕಷ್ಟು ವೈರಲ್ ಆಗಿತ್ತು.ಕೆಲ ದಿನಗಳ ಹಿಂದೆ ಕಡೂರುಠಾಣೆಗೆ ಬೋರ್ಡ್ ನೀಡಿ ಕೊಡುಗೆ ಶಿವಾನಂದ ನೀಲಣ್ಣವರ್, ಸಮಾಜ ಸೇವಕ ಎಂದು ಬರೆಸಲಾಗಿತ್ತು. ವಂಚನೆ ಪ್ರಕರಣದ ಹಿನ್ನಲೆಯಲ್ಲಿ ಎಚ್ಚೆತ್ತ ಪೊಲೀಸರು ಆತನ ಹೆಸರಿನ ಜಾಗಕ್ಕೆ ರೇಡಿಯಂ ಸ್ಟಿಕರ್ ನಿಂದ ಮುಚ್ಚಿ, ತುರ್ತು ಕರೆ 112 ಮತ್ತು ಮಕ್ಕಳ ಸಹಾಯವಾಣಿ 1098 ನಂಬರ್ ಬರೆಸಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಹಗರಣ
ಬೆಳಗಾವಿ
ಚಿಕ್ಕಮಗಳೂರು

Latest Videos
Recommended Stories
Recommended image1
ಯುರೋಪ್‌ ಈಗ ಮತ್ತಷ್ಟು ಹತ್ತಿರ: ಬೆಂಗಳೂರು - ಜ್ಯೂರಿಕ್‌ ನೇರ ವಿಮಾನ ಆರಂಭ, ಸ್ವಿಸ್ ಏರ್‌ಲೈನ್ಸ್‌ ಸಿಹಿ ಸುದ್ದಿ
Recommended image2
ನೀ ತಾನೇ ನನ್ನ ಜೀವ.. ಎಂದು ಪತ್ನಿ-ಮಗನನ್ನು ಅಪ್ಪಿ ಹಣೆಗೆ ಮುತ್ತಿಟ್ಟ ಕೊಲೆ ಆರೋಪಿ ದರ್ಶನ್‌
Recommended image3
ಸೋಮಾಲಿಯಾ ಜೆಟ್ ವೇವ್ಸ್ ಮೂಲಕ ಕರಾವಳಿಗೆ ಮುಂಗಾರು ಮಳೆ ಎಂಟ್ರಿ, ಸಮುದ್ರ ಅಬ್ಬರದ ಆತಂಕ ಜಲಕ್ರೀಡೆ ಸ್ಥಗಿತ!
Related Stories
Recommended image1
ಬೆಳಗಾವಿ ಶಿವಂ ಅಸೋಸಿಯೇಟ್ಸ್ 4500 ಕೋಟಿ ರೂ ಹಗರಣ ಸಿಐಡಿಗೆ, ಪ್ರಕರಣ ಬೆಳಕಿಗೆ ಬರಲು ಕಾರಣ 15 ಸಾವಿರ ಬಂದೂಕು!
Recommended image2
ಶಿವಂ ಅಸೋಸಿಯೇಟ್ಸ್ ₹4,500 ಕೋಟಿ ಹಗರಣ, ಕೋರ್ಟ್‌ನಲ್ಲಿ ಕಣ್ಣೀರು, ಬೆಳಗಾವಿಯಿಂದ ಬೆಂಗಳೂರಿಗೆ ಆರೋಪಿ ಶಿಫ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved