ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ತಟ್ಟಲಿದೆ. ನಾಳೆಯಿಂದ ಖಾಸಗಿ ಬಸ್ ದರ ಏರಿಕೆಯಾಗುತ್ತಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಇದೀಗ ಖಾಸಗಿ ಬಸ್ ಆಪರೇಟರ್ಸ್ ಪ್ರಯಾಣ ದರ ಏರಿಕೆ ಮಾಡುತ್ತಿದ್ದಾರೆ.
- Home
- News
- State
- Karnataka News Live: ಪ್ರಯಾಣಿಕರಿಗೆ ಶಾಕ್, ನಾಳೆಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ, ಶೇ.8ರ ವರೆಗೆ ಬೆಲೆ ಪರಿಷ್ಕರಣೆ
Karnataka News Live: ಪ್ರಯಾಣಿಕರಿಗೆ ಶಾಕ್, ನಾಳೆಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ, ಶೇ.8ರ ವರೆಗೆ ಬೆಲೆ ಪರಿಷ್ಕರಣೆ

ಬೆಳಗಾವಿ: ರಾಜ್ಯ ಸಚಿವ ಸಂಪುಟದ ಎರಡನೇ ಹಂತದ ವಿಸ್ತರಣೆ ಶೀಘ್ರದಲ್ಲೇ ನಡೆಯಲಿದ್ದು, ಈ ತಿಂಗಳೊಳಗೆ ಸಚಿವ ಸಂಪುಟ ವಿಸ್ತರಣೆ ನಡೆದರೆ ಉತ್ತಮ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಇನ್ನೂ ಹಲವು ಸ್ಥಾನಗಳು ಖಾಲಿ ಇದ್ದು, ಅವುಗಳನ್ನು ಹೆಚ್ಚು ದಿನ ಖಾಲಿ ಇಡಲು ಸಾಧ್ಯವಿಲ್ಲ. ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನೀತಿಯನ್ನು ಅನುಸರಿಸುವ ಪ್ರಯತ್ನ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಚಿವ ಸ್ಥಾನ ಎರಡನ್ನೂ ಒಬ್ಬರಿಗೆ ನೀಡುವ ಸಾಧ್ಯತೆ ಕಡಿಮೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗಿದೆ ಎಂದರು. ಇದೇ ವೇಳೆ ಬೆಳಗಾವಿ ಜಿಲ್ಲೆಗೆ ಮತ್ತಷ್ಟು ಸಚಿವ ಸ್ಥಾನಗಳು ದೊರೆಯುವ ವಿಶ್ವಾಸವಿದೆ ಎಂದರು.
ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಕುರಿತು ಉತ್ತರಿಸಿದ ಅವರು, ಈ ಕುರಿತು ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಹಾಗೂ ಪಕ್ಷದ ಸಂಘಟನೆಗೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ಅಸಮಾಧಾನಗಳು ಸಹಜ. ಆದರೆ, ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅವುಗಳನ್ನು ಬಗೆಹರಿಸುವ ಶಕ್ತಿ ಸರ್ಕಾರಕ್ಕಿದೆ ಎಂದರು.
Karnataka News Live 8 June 2026 ಪ್ರಯಾಣಿಕರಿಗೆ ಶಾಕ್, ನಾಳೆಯಿಂದ ಖಾಸಗಿ ಬಸ್ ಟಿಕೆಟ್ ದರ ಏರಿಕೆ, ಶೇ.8ರ ವರೆಗೆ ಬೆಲೆ ಪರಿಷ್ಕರಣೆ
Karnataka News Live 8 June 2026 ಬಳ್ಳಾರಿಯಲ್ಲಿ ಯುವಕನ ಭೀಕರ ಹ*ತ್ಯೆ - ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಯುವಕನನ್ನು ಹ*ತ್ಯೆಗೈದು ದುಷ್ಕರ್ಮಿಗಳು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಮೃತ ದೇಹವನ್ನು ಬರೋಬ್ಬರಿ 13 ಕಿಲೋಮೀಟರ್ ದೂರದವರೆಗೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
Karnataka News Live 8 June 2026 ಬೆಂಗಳೂರಿನ ದೇವನಹಳ್ಳಿಯಲ್ಲಿ ಎಮ್ವಿ ಗ್ರೂಪ್ ಮೆಗಾ ಪ್ಲಾನ್ - ಸೋಲಾರ್ ಗಿಗಾಫ್ಯಾಕ್ಟರಿಗಾಗಿ ₹5,500 ಕೋಟಿ ಭಾರಿ ಹೂಡಿಕೆ!
ಬೆಂಗಳೂರು ಮೂಲದ ಎಮ್ವಿ ಗ್ರೂಪ್, ದೇವನಹಳ್ಳಿಯಲ್ಲಿ 5,500 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಬೃಹತ್ 'ಗಿಗಾಫ್ಯಾಕ್ಟರಿ' ಸ್ಥಾಪಿಸುತ್ತಿದೆ. ಈ ಯೋಜನೆಯು ಕಂಪನಿಯ ಸೋಲಾರ್ ಮಾಡ್ಯೂಲ್ ಮತ್ತು ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಹಲವು ಪಟ್ಟು ಹೆಚ್ಚಿಸಲಿದೆ.
Karnataka News Live 8 June 2026 ಸಂಪ್‌ಗೆ ಬಿದ್ದು 18 ತಿಂಗಳ ಮಗು ಸಾವು - ಮೃತದೇಹವನ್ನು ಉಪ್ಪಿನಲ್ಲಿಟ್ಟು, ಕುರಾನ್ ಪಠಿಸಿ ಬದುಕಿಸಲು ಯತ್ನಿಸಿದ ಪೋಷಕರು!
Karnataka News Live 8 June 2026 ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ, ಮಹತ್ವದ ಹೆಜ್ಜೆಗೆ ಸಕಾರಾತ್ಮಕ ಫಲಿತಾಂಶ!
Karnataka News Live 8 June 2026 ಈ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆ - ಜಿಲ್ಲಾಧಿಕಾರಿ ಸ್ಪಷ್ಟನೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಚುರುಕಾಗಿದ್ದು, ಮುಂದಿನ ಮೂರು ದಿನಗಳವರೆಗೆ ಆರೆಂಜ್ ಹಾಗೂ ರೆಡ್ ಅಲರ್ಟ್ ಘೋಷಣೆ..
Karnataka News Live 8 June 2026 ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ ಏನೂ ಬೇಡ, ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರೆಯುವೆ - ರಾಮಲಿಂಗಾರೆಡ್ಡಿ ಯೂ ಟರ್ನ್
ಈ ಹಿಂದೆ ಖಾತೆ ಹಂಚಿಕೆಯಿಂದ ಮುನಿಸಿಕೊಂಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ, ಇದೀಗ ತಮ್ಮ ನಿಲುವನ್ನು ಬದಲಿಸಿದ್ದಾರೆ. ತಮಗೆ ನೀಡಲಾದ ಜಲಸಂಪನ್ಮೂಲ ಇಲಾಖೆಯಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದು, ಬೆಂಗಳೂರು ಉಸ್ತುವಾರಿ ಸೇರಿದಂತೆ ಬೇರೆ ಯಾವುದೇ ಖಾತೆಯೂ ಬೇಡವೆಂದು ಖಡಾಖಂಡಿತವಾಗಿ ಹೇಳಿದ್ದಾರೆ.
Karnataka News Live 8 June 2026 ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ - ಧಾರವಾಡದ ಯುವಕರ ಐತಿಹಾಸಿಕ ಸಾಧನೆ
ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.
Karnataka News Live 8 June 2026 ಡಿಕೆಶಿ ಎರಡು ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ - ಸಿಎಂ ಪರ ಆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ!
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಭಿಕ್ಷ ಆಡಳಿತ ಹಾಗೂ ರಾಜ್ಯದ ಜನರ ಒಳಿತಿಗಾಗಿ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದ ಸಮೀಪ ಇರುವ ಬಡಮಖಾನ್ ದರ್ಗಾದಲ್ಲಿಮುಸ್ಲಿಂ ಮುಖಂಡರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
Karnataka News Live 8 June 2026 ಮುಡಾ ಹಗರಣ - ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ನುಡಿ, ವಿಚಾರಣೆ ಜುಲೈಗೆ ಮುಂದೂಡಿಕೆ
Karnataka News Live 8 June 2026 'ಸಂತೂರ್ ಸೋಪ್..' ಅಂದಿದ್ದಕ್ಕೆ ವರ್ತೂರ್ ಸಂತೋಷ್ ಕ್ಷಮೆ ಕೇಳಿದ ರಕ್ಷಿತಾ, ಆಕೆಯ ಮನಸ್ಸು ಬಂಗಾರ ಎಂದ ನೆಟ್ಟಿಗರು!
ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ, ವರ್ತೂರು ಸಂತೋಷ್ ಅವರ ಹಸುವಿನ ಸೀಮಂತ ಕಾರ್ಯಕ್ರಮದಲ್ಲಿ, ಈ ಹಿಂದೆ ಅವರನ್ನು 'ಸಂತೂರ್' ಎಂದು ಕರೆದಿದ್ದಕ್ಕೆ ವೇದಿಕೆಯಲ್ಲೇ ಕ್ಷಮೆಯಾಚಿಸಿದರು. ರಕ್ಷಿತಾ ಅವರ ಈ ಮುಗ್ದ ನಡೆ ಮತ್ತು ವಿನಯವಂತಿಕೆಗೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Karnataka News Live 8 June 2026 ನಾಲ್ಕು ಗೋಡೆಗಳೊಳಗೆ ದಂಪತಿಯ ಜಾತಿ ನಿಂದನೆ, ಎಸ್‌ಸಿ/ಎಸ್‌ಟಿ ಕಾಯ್ದೆ ಅನ್ವಯಿಸದು - ಹೈಕೋರ್ಟ್
Karnataka News Live 8 June 2026 ಕರ್ನಾಟಕದಲ್ಲಿ ಮುಂಗಾರು ಅಬ್ಬರ - ಕರಾವಳಿಗೆ ರೆಡ್ ಅಲರ್ಟ್, ಬೆಂಗಳೂರು ಸೇರಿ ಹಲವೆಡೆ 7 ದಿನ ಭಾರೀ ಮಳೆ ಎಚ್ಚರಿಕೆ!
ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
Karnataka News Live 8 June 2026 ಉತ್ತರ ಕನ್ನಡಕ್ಕೆ ರೆಡ್ ಅಲರ್ಟ್ - ಗೋಕರ್ಣ ಮಹಾಬಲೇಶ್ವರ ದೇವಾಲಯಕ್ಕೂ ಜಲಕಂಟಕ, ಆತ್ಮಲಿಂಗ ಸ್ಪರ್ಶ ದರ್ಶನ ಸ್ಥಗಿತ
Karnataka News Live 8 June 2026 ವರದಕ್ಷಿಣೆ, ಟಾರ್ಚರ್, ಅನುಮಾನ - ಪವಿತ್ರಾ ಲೋಕೇಶ್ ಮೊದಲ ಮದುವೆಯ ರಹಸ್ಯ ಬಿಚ್ಚಿಟ್ಟ ತಾಯಿ!
ನಟಿ ಪವಿತ್ರಾ ಲೋಕೇಶ್ ಅವರ ತಾಯಿ ಪಾರ್ವತಿ ಲೋಕೇಶ್, ತಮ್ಮ ಮಗಳ ಮೊದಲ ಮದುವೆಯ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಪವಿತ್ರಾಳ ಮೊದಲ ಮದುವೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ನಡೆದಿತ್ತು ಮತ್ತು ಅದು ಕೇವಲ ಎರಡು ತಿಂಗಳಲ್ಲೇ ಮುರಿದುಬಿದ್ದಿತ್ತು ಎಂದು ಅವರು ತಿಳಿಸಿದ್ದಾರೆ.
Karnataka News Live 8 June 2026 ಜೈಲಿನಿಂದ Darshan Thoogudeepa ರಿಲೀಸ್ ಆಗೋ ವಿಷಯ; ಮಹತ್ವದ ಹೇಳಿಕೆ ಕೊಟ್ಟ ಹೊಸ CM ಡಿಕೆ ಶಿವಕುಮಾರ್!
Actor Darshan Thoogudeepa: ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿದ್ದಾರೆ. ಈಗ ಕನಕಪುರದ ಕುರುಬರಹಳ್ಳಿಗೆ ಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದರು. ಆ ವೇಣೆ ದರ್ಶನ್ ಅಭಿಮಾನಿಗಳು ‘ಡಿ ಬಾಸ್’, ‘ಡಿ ಬಾಸ್’ ಎಂದು ಕೂಗಿ, ಮನವಿ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Karnataka News Live 8 June 2026 ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚರ್ಚೆಯೇ ಆಗಿಲ್ಲ, ಸುಮಲತಾಗೆ ಮುಂದೆ ಒಳ್ಳೆಯ ಸ್ಥಾನಮಾನ - ವಿಜಯೇಂದ್ರ
ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳ ಅಭ್ಯರ್ಥಿ ಆಯ್ಕೆಯು ಸಂಪೂರ್ಣವಾಗಿ ಹೈಕಮಾಂಡ್ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ದೇವೇಗೌಡರ ಸ್ಪರ್ಧೆ ಹಾಗೂ ಸುಮಲತಾ ಅವರಿಗೆ ಟಿಕೆಟ್ ತಪ್ಪಿದ ಬಗ್ಗೆ ಮಾತನಾಡಿ ವರಿಷ್ಠರ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.
Karnataka News Live 8 June 2026 ನಾನು ಮೂರು ವಿಷಯಗಳಲ್ಲಿ ಸಿಕ್ಕಾಪಟ್ಟೆ ವೀಕ್; ಬಿಗ್‌ಬಾಸ್‌ಗೆ ಹೋಗಲ್ಲ ಎಂದ ಜಿಮ್ ಸೀನ
ಕನ್ನಡ ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಗಳ ಲಿಸ್ಟ್‌ನಲ್ಲಿ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ಸುಷ್ಮಿತ್ ಜೈನ್ ಹೆಸರು ಕೇಳಿಬಂದಿದೆ. ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಮೂರು ಕಾರಣಗಳಿಂದ ಶೋಗೆ ಹೋಗುವುದಿಲ್ಲ ಎಂದಿದ್ದಾರೆ.