MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ: ಧಾರವಾಡದ ಯುವಕರ ಐತಿಹಾಸಿಕ ಸಾಧನೆ

ಒಂದೇ ಶಾಲೆಯ 17 ವಿದ್ಯಾರ್ಥಿಗಳು ಅಗ್ನಿವೀರರಾಗಿ ಆಯ್ಕೆ: ಧಾರವಾಡದ ಯುವಕರ ಐತಿಹಾಸಿಕ ಸಾಧನೆ

ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ.

2 Min read
Author : Govindaraj S
Published : Jun 08 2026, 05:58 PM IST
Share this Photo Gallery
  • FB
  • TW
  • Linkdin
  • Whatsapp
13
ಶಿಕ್ಷಕರಿಂದ ಅಭಿನಂದನೆ
Image Credit : Asianet News

ಶಿಕ್ಷಕರಿಂದ ಅಭಿನಂದನೆ

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜೂ.08): ಅಚಲ ನಿರ್ಧಾರ, ಸೈನ್ಯಕ್ಕೆ ಸೇರ್ಪಡೆ ಆಗಲೇಬೇಕು ಎಂಬ ತವಕ, ನಿರಂತರ ಪರಿಶ್ರಮ ದೇಹ ದಂಡನೆ ಈ ಎಲ್ಲ ಪ್ರಯತ್ನಕ್ಕೂ ಆ ವಿದ್ಯಾರ್ಥಿಗಳಿಗೆ ಇದೀಗ ಪ್ರತಿಫಲ ಸಿಕ್ಕಿದೆ. ಒಂದೇ ಶಾಲೆಯಲ್ಲಿ ಕಲಿತ ಒಟ್ಟು 17 ಜನ ಯುವಕರು ಇದೀಗ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇಷ್ಟಕ್ಕೂ ಈ ಯುವಕರು ಯಾವ ಗ್ರಾಮದವರು? ಯಾವ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ತಮ್ಮ ಶಿಕ್ಷಕರಿಂದ ಅಭಿನಂದನೆ ಪಡೆದುಕೊಳ್ಳುತ್ತಿರುವ ಈ ಯುವಕರು ಉಪ್ಪಿನ ಬೆಟಗೇರಿ ಕಲ್ಲೂರು ಹಾಗೂ ಹನುಮನಹಾಳ ಗ್ರಾಮದವರು ಈ ಎಲ್ಲ ಯುವಕರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪೂರ್ಣಗೊಳಿಸಿದ್ದು, ಉಪ್ಪಿನ ಬೆಟಗೇರಿ ಗ್ರಾಮದ ಎಸ್‌ಜಿವಿ ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಇದೇ ಶಾಲೆಯಲ್ಲಿ ಕಲಿತ ಈ ಯುವಕರಿಗೆ ಭಾರತೀಯ ಸೇನೆ ಸೇರಬೇಕು ಎಂಬ ಆಸೆ ಇತ್ತು. ಆ ಆಸೆ ಹೊತ್ತುಕೊಂಡೇ ತಮ್ಮ ಗುರಿ ಸಾಧಿಸಲು ಪ್ರಯತ್ನ ಆರಂಭಿಸಿದ್ದರು. ನಿರಂತರ ಪರಿಶ್ರಮದ ಫಲವಾಗಿ ಇದೀಗ 17 ಜನ ಯುವಕರು ಭಾರತೀಯ ಸೇನೆಗೆ ಅಗ್ನಿವೀರರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಓರ್ವ ಯುವಕ ವಾಯುಸೇನೆಯ ಅಗ್ನಿವೀರನಾಗಿ ಆಯ್ಕೆಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ʻಅಗ್ನಿವೀರ’ರಾಗಿ ಆಯ್ಕೆ
Image Credit : Asianet News

ʻಅಗ್ನಿವೀರ’ರಾಗಿ ಆಯ್ಕೆ

ಉಪ್ಪಿನಬೆಟಗೇರಿಯ ಶಂಕರ ಕುರಗುಂದ, ಶಿವಾನಂದ ಮಸೂತಿ, ನಿರಂಜನ ಹುಟಗಿ, ಕಲೀಂ ಮುಜಾವರ, ಈರಣ್ಣ ಮಸೂತಿ, ಗಂಗಾಧರ ಅಂಬಣ್ಣವರ, ಶಬ್ಬೀರ್ ನದಾಫ್ ಸೇರಿದಂತೆ ಒಟ್ಟು 7 ಯುವಕರು ಹಾಗೂ ಕಲ್ಲೂರಿನ ಅಭಿಷೇಕ ಚಿಕ್ಕಮಠ, ಪ್ರದೀಪ ಮರೇದ, ಕುಮಾರ ಬುಡರಕಟ್ಟಿ, ಈರಣ್ಣ ಮರೇದ, ಪ್ರದೀಪ ಶಿವಳ್ಳಿ, ಅಮೀತಪೀರ್ ಸೈಯದನವರ ಸೇರಿದಂತೆ ಒಟ್ಟು 6 ಯುವಕರು ಮತ್ತು ಹನುಮನಾಳ ಗ್ರಾಮದ ಗೋಪಾಲ ಅಂಗಡಿ, ಸೋಮಲಿಂಗ ಅಂಗಡಿ, ಗೋಪಾಲ ಗಬ್ಬೂರ ಮೆಳೆಪ್ಪ ಅಂಗಡಿ ಸೇರಿದಂತೆ ಒಟ್ಟು 4 ಯುವಕರು ಹೀಗೆ ಉಪ್ಪಿನಬೆಟಗೇರಿಯ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆಯಲ್ಲಿ ಕಲಿತ ಒಟ್ಟು 17 ಯುವಕರು ʻಅಗ್ನಿವೀರ’ರಾಗಿ ಆಯ್ಕೆಯಾಗಿದ್ದಾರೆ.

Related Articles

Related image1
ತೀವ್ರ ವಿರೋಧದ ಬೆನ್ನಲ್ಲೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ಮತ್ತೆ ರದ್ದು
Related image2
ವಾಯುಭಾರ ಕುಸಿತ ಮುಂದಿನ 2 ದಿನ ಭಾರಿ ಮಳೆ! ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಣೆ!
33
ಯುದ್ಧಕ್ಕೂ ಹೆದರುವ ಮಾತಿಲ್ಲ
Image Credit : Asianet News

ಯುದ್ಧಕ್ಕೂ ಹೆದರುವ ಮಾತಿಲ್ಲ

ಒಂದೇ ಶಾಲೆಯಲ್ಲಿ ಕಲಿತು ಒಟ್ಟಿಗೇ ಭಾರತೀಯ ಸೇನೆಗೆ ಸೇರಿದ ಈ ಯುವಕರು ಉಳಿದ ಮಕ್ಕಳಿಗೂ ಪ್ರೇರಣೆಯಾಗಲಿ ಎಂದು ಎಸ್‌ಜಿವಿ ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಕರು ಆ ಯುವಕರನ್ನು ಶಾಲೆಗೆ ಕರೆಯಿಸಿ ಅವರಿಂದ ಪ್ರೇರಣಾದಾಯಕ ಮಾತುಗಳನ್ನಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಶಾಲೆಯಲ್ಲೇ ಕಲಿತ ಮಕ್ಕಳು ಇದೀಗ ಭಾರತೀಯ ಸೇನೆಗೆ ಆಯ್ಕೆಯಾಗಿರುವುದಕ್ಕೆ ಶಿಕ್ಷಕರು ಕೂಡ ಹೆಮ್ಮೆಪಡುವುದರ ಜೊತೆಗೆ ಇದೇ ಶಾಲೆಯಿಂದ ಇನ್ನಷ್ಟು ಮಕ್ಕಳು ಭಾರತೀಯ ಸೇನೆಗೆ ಸೇರುವಂತಾಗಲಿ ಎಂದಿದ್ದಾರೆ ಒಟ್ಟಾರೆ ಒಂದೇ ಶಾಲೆಯಲ್ಲಿ ಕಲಿತು ಇದೀಗ ಒಂದೇ ಬಾರಿಗೆ ಭಾರತೀಯ ಸೇನೆಗೆ ಆಯ್ಕೆಯಾದ ಈ ವಿದ್ಯಾರ್ಥಿಗಳು, ಸೇನೆಗೆ ಆಯ್ಕೆಯಾಗಿದ್ದೇವೆ ಎಂದರೆ ಯುದ್ಧಕ್ಕೂ ಹೆದರುವ ಮಾತಿಲ್ಲ. ತಾಯಿ ಭಾರತಿಗೆ ನಾವು ಸೇನೆಯಲ್ಲಿ ಇರುವಷ್ಟು ದಿನ ಸೇವೆ ಸಲ್ಲಿಸಿ ಬರುತ್ತೇವೆ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ. ಇವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ನಾವೂ ಹಾರೈಸೋಣ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಧಾರವಾಡ
ವಿದ್ಯಾರ್ಥಿ
ಸುದ್ದಿ
ಭಾರತೀಯ ಸೇನೆ
Latest Videos
Recommended Stories
Recommended image1
ಡಿಕೆಶಿ ಎರಡು ವರ್ಷ ಪೂರ್ಣಾವಧಿ ಅಧಿಕಾರ ನಡೆಸಲಿ: ಸಿಎಂ ಪರ ಆ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ!
Recommended image2
ಮುಡಾ ಹಗರಣ: ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ನುಡಿ, ವಿಚಾರಣೆ ಜುಲೈಗೆ ಮುಂದೂಡಿಕೆ
Recommended image3
ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿಗೆ ರೆಡ್ ಅಲರ್ಟ್, ಬೆಂಗಳೂರು ಸೇರಿ ಹಲವೆಡೆ 7 ದಿನ ಭಾರೀ ಮಳೆ ಎಚ್ಚರಿಕೆ!
Related Stories
Recommended image1
ತೀವ್ರ ವಿರೋಧದ ಬೆನ್ನಲ್ಲೇ ಧಾರವಾಡ ಆಕಾಶವಾಣಿ ಪ್ರಾದೇಶಿಕ ಸುದ್ದಿ ವಿಭಾಗ ಸ್ಥಳಾಂತರ ಮತ್ತೆ ರದ್ದು
Recommended image2
ವಾಯುಭಾರ ಕುಸಿತ ಮುಂದಿನ 2 ದಿನ ಭಾರಿ ಮಳೆ! ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಿಗೆ 'ಯಲ್ಲೋ ಅಲರ್ಟ್' ಘೋಷಣೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved