11:25 PM (IST) May 05

ದೇಶ ವಿರೋಧಿ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್‌ ನಿಷೇಧಕ್ಕೆ ಸಂಸದೀಯ ಸಮಿತಿ ಆಗ್ರಹ

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ರಾಷ್ಟ್ರೀಯ ಹಿತಾಸಕ್ತಿಗಳ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಾಹಿತಿ ಮತ್ತು ಪ್ರಸಾರ ಹಾಗೂ ಐಟಿ ಸಚಿವಾಲಯಗಳಿಂದ ಕ್ರಿಯಾ ಯೋಜನೆಯನ್ನು ಸಂಸದೀಯ ಸಮಿತಿ ಕೋರಿದೆ.

ಪೂರ್ತಿ ಓದಿ
10:57 PM (IST) May 05

ಇದೇ ವರ್ಷ ಜಪಾನ್ ಹಿಂದಿಕ್ಕಿ 4ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಭಾರತ, ವರದಿ

ಭಾರತ ವಿಶ್ವದ 4ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಹೆಚ್ಚು ದಿನ ಬೇಕಿಲ್ಲ. ವರದಿ ಪ್ರಕಾರ ಇದೇ ವರ್ಷ ಜಾಗತಿಕ 4ನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2027ರ ವೇಳೆಗೆ ಭಾರತ 3ನೇ ಸ್ಥಾನಕ್ಕೇರಲಿದೆ ಎಂದಿದೆ.

ಪೂರ್ತಿ ಓದಿ
10:29 PM (IST) May 05

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ 41 ಎಕರೆ ಭೂಮಿ ಹಸ್ತಾಂತರ!

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ 41 ಎಕರೆ ಜಮೀನು ಹಸ್ತಾಂತರ. ಕೆಐಎಡಿಬಿ ಮೂಲಕ ಒದಗಿಸಲಾದ ಜಮೀನಿನ ಸ್ವಾಧೀನ ಪತ್ರವನ್ನು ಕೆ.ಎಸ್.ಸಿ.ಎಗೆ ಸಚಿವ ಎಂ ಬಿ ಪಾಟೀಲರು ನೀಡಿದರು. ಹೆಚ್ಚುವರಿಯಾಗಿ 6.5 ಎಕರೆ ಖರಾಬು ಜಮೀನು ನೀಡುವಂತೆ ಕೆಎಸ್ಸಿಎ ಮನವಿ ಸಲ್ಲಿಸಿದೆ.

ಪೂರ್ತಿ ಓದಿ
09:59 PM (IST) May 05

ಸೋನು ನಿಗಮ್ ಕ್ಷಮೆ: ಕನ್ನಡಿಗರ ಮೇಲಿನ ಪ್ರೀತಿ ದೊಡ್ಡದು

ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಸಿದ್ದಕ್ಕೆ ಗಾಯಕ ಸೋನು ನಿಗಮ್ ಕ್ಷಮೆಯಾಚಿಸಿದ್ದಾರೆ. ಕ್ಷಮಿಸಿ ಕನ್ನಡಿಗರೇ, ನಿಮ್ಮ ಮೇಲಿನ ನನ್ನ ಪ್ರೀತಿ, ನನ್ನ ಅಹಂಕಾರಕ್ಕಿಂತ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.

ಪೂರ್ತಿ ಓದಿ
09:30 PM (IST) May 05

ಹಳದಿ ಸೆರಮನಿ ಡ್ಯಾನ್ಸ್ ವೇಳೆ ವಧುವಿಗೆ ಹೃದಯಾಘಾತ, ಮದ್ವೆಗೆ ಒಂದೇ ದಿನ ಮೊದಲು ದುರಂತ

ಮದುವೆಗೆ ಎಲ್ಲಾ ತಯಾರಿ ನಡೆದಿತ್ತು. ಮದುವೆ ಮೊದಲಿನ ದಿನ ಹಳದಿ ಸೆರೆಮನಿ. ಸಂಭ್ರಮದಿಂದ ಡ್ಯಾನ್ಸ್ ಮಾಡಿದ ವಧುವಿಗೆ ಹೃದಯಾಘಾತವಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಪೂರ್ತಿ ಓದಿ
08:43 PM (IST) May 05

ಬೆಂಗಳೂರು ಜನತೆಗೆ ಬಿಬಿಎಂಪಿ ಎಚ್ಚರ; ಮಳೆ ಬಂದರೆ 43 ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿ!

ಬೆಂಗಳೂರಿನಲ್ಲಿ 209 ಪ್ರವಾಹ ಪೀಡಿತ ಪ್ರದೇಶಗಳ ಪೈಕಿ 166ರಲ್ಲಿ ಸಮಸ್ಯೆ ಪರಿಹರಿಸಲಾಗಿದೆ. ಆದರೆ ಉಳಿದ 43 ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುನ್ನ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಡಳಿತಾಧಿಕಾರಿಗಳು ಸೂಚಿಸಿದ್ದಾರೆ. ದುರಸ್ತಿಯಾಗಿರುವ ಕಾಲುವೆಗಳ ಪಟ್ಟಿ ಸಿದ್ಧಪಡಿಸಿ ಸಂಬಂಧಪಟ್ಟ ಇಲಾಖೆಗಳಿಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ.

ಪೂರ್ತಿ ಓದಿ
08:34 PM (IST) May 05

ಫಸ್ಟ್‌ನೈಟ್‌ ದಿನ ವಿಡಿಯೋ ಮಾಡಿದ ಪತಿ; ಇದೆಲ್ಲ ಬೇಕಾ? ಎಂಬ ಪತ್ನಿ ಪ್ರಶ್ನೆಗೆ ನೀಡಿದ ಉತ್ತರವೀಗ ಭಾರೀ ವೈರಲ್!‌

ಸಜ್ಜಾದ್ ಚೌಧರಿ ದಂಪತಿಯ ಮದುವೆ ರಾತ್ರಿ ವಿಡಿಯೋ ವೈರಲ್ ಆಗಿದೆ. ಹೆಂಡತಿಯ ಖಾಸಗಿ ವಿಷಯಗಳನ್ನು ಜನರಿಗೆ ತೋರಿಸುತ್ತೀಯಾ ಎಂಬ ಪ್ರಶ್ನೆಗೆ ಗಂಡನ ಉತ್ತರ ಮತ್ತು ಹೆಂಡತಿಯ ನಗು ವಿಡಿಯೋದ ಹೈಲೈಟ್.

ಪೂರ್ತಿ ಓದಿ
08:15 PM (IST) May 05

ಕಿರುತೆರೆ ನಟಿ ಗೌತಮಿ ಕಹಿ ಘಟನೆ ಬಹಿರಂಗ; 'ಹಿಂದಿನಿಂದ ಒಬ್ಬ ವ್ಯಕ್ತಿ ಪ್ಯಾಂಟ್ ಒಳಗೆ ಕೈ ಹಾಕಿಬಿಟ್ಟ'

ಪ್ರಸಿದ್ಧ ಕಿರುತೆರೆ ನಟಿ ಗೌತಮಿ ಕಪೂರ್ ಬಸ್ಸಿನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾದ ಘಟನೆಯನ್ನು ಬಹಿರಂಗಪಡಿಸಿದ್ದಾರೆ. 'ಒಬ್ಬ ವ್ಯಕ್ತಿ ನನ್ನ ಹಿಂದಿನಿಂದ ಪ್ಯಾಂಟಿನ ಒಳಗೆ ಕೈ ಇಟ್ಟ', ಆರಂಭದಲ್ಲಿ ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ....

ಪೂರ್ತಿ ಓದಿ
08:13 PM (IST) May 05

ಯುದ್ಧ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ ಬಿಗ್ ಶಾಕ್, 4.2 ತೀವ್ರತೆಯ ಭೂಕಂಪ

ಭಾರತ ಪೆಹಲ್ಗಾಂ ಉಗ್ರ ದಾಳಿಗೆ ಪ್ರತೀಕಾರ ತೀರಿಸಲು ಸಜ್ಜಾಗಿದೆ. ಭಾರತ ಟಾರ್ಗೆಟ್ ಉಗ್ರರು. ಆದರೆ ಪಾಕಿಸ್ತಾನ ಈಗಾಗಲೇ ತನ್ನ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಯುದ್ಧ ತಾಲೀಮು ನಡೆಸುತ್ತಿದೆ. ಇದರ ನಡುವೆ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ. ಪಾಕಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪನವಾಗಿದೆ.

ಪೂರ್ತಿ ಓದಿ
08:09 PM (IST) May 05

ಬೈಕ್‌ನಲ್ಲಿ 'ಸಾರೀ ಗರ್ಲ್ಸ್‌' ಬರಹ: ಪೊಲೀಸರ ಪ್ರಶ್ನೆಗೆ ಉತ್ತರಿಸಲಾಗದೆ ಮಜುಗರಪಟ್ಟು, ನಾಚಿಕೊಂಡ ಹುಡುಗ!

ಆಂಧ್ರಪ್ರದೇಶದಲ್ಲಿ ಬೈಕ್‌ನ ನಂಬರ್‌ ಪ್ಲೇಟ್‌ನಲ್ಲಿ 'ಸಾರೀ ಗರ್ಲ್ಸ್‌, ಮೈ ಸಿಸ್ಟರ್‌ ಈಸ್‌ ವೆರಿ ಸ್ಟ್ರಿಕ್ಟ್‌' ಎಂದು ಬರೆದಿದ್ದ ಯುವಕನನ್ನು ಪೊಲೀಸರು ತಡೆದ ಘಟನೆ ನಡೆದಿದೆ. ಈ ಬರಹದ ಬಗ್ಗೆ ಪೊಲೀಸರು ಪ್ರಶ್ನಿಸಿದಾಗ, ಯುವಕ ಉತ್ತರಿಸಲಾಗದೆ ನಾಚಿಕೆಪಟ್ಟಿದ್ದಾನೆ.

ಪೂರ್ತಿ ಓದಿ
08:03 PM (IST) May 05

ಬದಲಾಗಬೇಕಿರುವುದು ಮನೋಸ್ಥಿತಿಯೋ, ಮನೆಸ್ಥಿತಿಯೋ? 

ಗಾಂಧೀಜಿಯವರ ಸ್ವಾತಂತ್ರ್ಯದ ಕಲ್ಪನೆಯನ್ನು ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಿತಿಯೊಂದಿಗೆ ಹೋಲಿಸಿ, ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಲಾಗಿದೆ. ಕಾನೂನುಗಳನ್ನು ಮೀರಿ ವ್ಯಕ್ತಿಯ ಮನಸ್ಥಿತಿಯೇ ಬದಲಾಗಬೇಕೆಂಬುದು ಲೇಖನದ ಪ್ರಮುಖ ಅಂಶ.

ಪೂರ್ತಿ ಓದಿ
07:20 PM (IST) May 05

ಮುರ್ಷಿದಾಬಾದ್‌ನಲ್ಲಿ ಗಲಭೆಯನ್ನು ಬಿಎಸ್ಎಫ್ ತಲೆಗೆ ಕಟ್ಟಿದ ಮಮತಾ ಬ್ಯಾನರ್ಜಿ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುರ್ಷಿದಾಬಾದ್‌ನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಬಿಜೆಪಿ ಮತ್ತು ಬಿಎಸ್ಎಫ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರವು ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದೆ ಮತ್ತು ಗಲಭೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಹೇಳಿದ್ದಾರೆ.

ಪೂರ್ತಿ ಓದಿ
07:15 PM (IST) May 05

ಜೆನ್ ಝಡ್ ಮತ್ತು ಆಲ್ಫಾ ಮಕ್ಕಳ ಪಾಲನೆಗೆ 7-7-7 ಸೂತ್ರ ಬಳಸಿ; ಉತ್ತಮ ಭವಿಷ್ಯ ರೂಪಿಸಿ

ಜೆನ್ ಝಡ್ ಮತ್ತು ಆಲ್ಫಾ ಪೀಳಿಗೆಯ ಮಕ್ಕಳನ್ನು ಬೆಳೆಸಲು ಪರದಾಡುವ ಪೋಷಕರಿಗೆ 7-7-7 ಸೂತ್ರವು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಈ ಸೂತ್ರವು ಮಕ್ಕಳೊಂದಿಗೆ ದಿನಕ್ಕೆ ಮೂರು ಬಾರಿ 7 ನಿಮಿಷಗಳನ್ನು ಕಳೆಯುವುದನ್ನು ಒಳಗೊಂಡಿದೆ: ಬೆಳಿಗ್ಗೆ, ಸಂಜೆ ಮತ್ತು ರಾತ್ರಿ.

ಪೂರ್ತಿ ಓದಿ
07:02 PM (IST) May 05

ದೇಶದ ಮೇಲೆ ಯುದ್ಧದ ಕಾರ್ಮೋಡ, ಮಾಕ್‌ ಡ್ರಿಲ್ಸ್‌ ನಡೆಸಲು ರಾಜ್ಯಗಳಿಗೆ ಸೂಚನೆ ನೀಡಿದ ಕೇಂದ್ರ!

ಭಾರತ ಸರ್ಕಾರವು ಮೇ 7 ರಂದು ರಾಷ್ಟ್ರವ್ಯಾಪಿ ಅಣಕು ಕಸರತ್ತುಗಳನ್ನು ನಡೆಸಲು ಹಲವಾರು ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಈ ಕಾರ್ಯಕ್ರಮವು ವಾಯುದಾಳಿ ಎಚ್ಚರಿಕೆಗಳನ್ನು ಪರೀಕ್ಷಿಸುವುದು, ನಾಗರಿಕರಿಗೆ ತರಬೇತಿ ನೀಡುವುದು ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ಪೂರ್ವಾಭ್ಯಾಸ ಮಾಡುವುದನ್ನು ಒಳಗೊಂಡಿರುತ್ತದೆ.

ಪೂರ್ತಿ ಓದಿ
06:52 PM (IST) May 05

ಬ್ರಿಟಿಷರ ಕಾಲಕ್ಕಿಂತಲೂ ಹಳೆಯದಾದ ಭಾರತದ 5 ಈಜುಕೊಳಗಳಿವು

ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಈಜು ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ, ಬೇಸಿಗೆಯಲ್ಲಿ ಶಾಲೆಗಳು ಅಥವಾ ಫಿಟ್‌ನೆಸ್ ಕೇಂದ್ರಗಳಲ್ಲಿ ಮಕ್ಕಳು ಮತ್ತು ವಯಸ್ಕರಿಂದ ಈಜುಕೊಳಗಳು ತುಂಬಿ ಹೋಗಿರುವುದು ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಆದರೆ ಈಜುಗಾರಿಕೆಯೂ ನಮ್ಮ ದೈನಂದಿನ ದಿನಚರಿಯ ಭಾಗವಾಗುವುದಕ್ಕೂ ಮೊದಲೇ ಭಾರತದಲ್ಲಿ ನಿರ್ಮಾಣವಾದ ಬಹಳ ಹಳೆಯ ಈಜುಕೊಳಬಗ್ಗೆ ನಾವಿಲ್ಲಿ ಹೇಳ ಹೊರಟಿದ್ದೇವೆ. 

ಪೂರ್ತಿ ಓದಿ
06:47 PM (IST) May 05

ಶನಿವಾರ ರಜೆ ಇಲ್ಲಾಂದ್ರೆ ನಂಗೆ ಉದ್ಯೋಗವೇ ಬೇಡ, 25ರ ಹುಡುಗಿಯಿಂದ ಜಾಬ್ ರಿಜೆಕ್ಷನ್!

ವೈರಲ್ ಲಿಂಕ್ಡ್‌ಇನ್ ಪೋಸ್ಟ್: ಒಬ್ಬ ಜೆನ್ ಝಡ್ ಅಭ್ಯರ್ಥಿ ಶನಿವಾರ ಕೆಲಸ ಮಾಡಲು ನಿರಾಕರಿಸಿ ಕೆಲಸ ತಿರಸ್ಕರಿಸಿದ್ದಾರೆ. HR ವೃತ್ತಿಪರರು ಈ ಘಟನೆಯನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ, ಇದರ ನಂತರ ಕೆಲಸ-ಜೀವನ ಸಮತೋಲನದ ಬಗ್ಗೆ ಬಳಕೆದಾರರ ನಡುವೆ ಚರ್ಚೆ ನಡೆಯಿತು. HR ನ ವೈರಲ್ ಪೋಸ್ಟ್ ನೋಡಿ.

ಪೂರ್ತಿ ಓದಿ
06:43 PM (IST) May 05

ಬೆಂಗಳೂರಿನ ಸುರಂಗ ರಸ್ತೆ ಯೋಜನೆಯ ಟೋಲ್ ಶುಲ್ಕ ₹330?

ಬೆಂಗಳೂರಿನ ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ಗಳನ್ನು ಸಂಪರ್ಕಿಸುವ ಪ್ರಸ್ತಾವಿತ ಅವಳಿ-ಟ್ಯೂಬ್ ಸುರಂಗ ರಸ್ತೆಗೆ ಕಾರುಗಳಿಗೆ ₹330ರಷ್ಟು ಟೋಲ್ ಶುಲ್ಕ ವಿಧಿಸಲು ಉದ್ದೇಶಿಸಲಾಗಿದ್ದು, ಇದು ವಾರ್ಷಿಕವಾಗಿ ಶೇ.5ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಯೋಜನೆಯ ಡಿಪಿಆರ್‌ನಲ್ಲಿ ದೋಷಗಳು ಕಂಡುಬಂದಿದ್ದು, ಬಿಬಿಎಂಪಿಯು ಸಲಹಾ ಸಂಸ್ಥೆಗೆ ದಂಡ ವಿಧಿಸಿದೆ.

ಪೂರ್ತಿ ಓದಿ
06:39 PM (IST) May 05

ಆರ್ಥಿಕ ಸಂಕಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು

ಬೆಳಗಾವಿ, ವಿಜಯಪುರ ಮತ್ತು ಇಂಡಿ ತಾಲ್ಲೂಕಿನ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ಒದಗಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಯೋಜನೆ ರೂಪಿಸಲು ಹಣಕಾಸು ಇಲಾಖೆಗೆ ಸೂಚಿಸಿದ್ದಾರೆ.

ಪೂರ್ತಿ ಓದಿ
06:32 PM (IST) May 05

ವಿಮಾನ ನಿಲ್ದಾಣದ ತಪಾಸಣೆ ವೇಳೆ ಸರ್ಪ್ರೈಸ್ ಕೊಟ್ಟ ಕೊಳಲು ವಾದಕ, ವಿಡಿಯೋ 44 ಮಿಲಿಯನ್ ಹಿಟ್ಸ್

ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ವೇಳೆ ಕೊಳಲು ವಾದಕ ನೀಡಿದ ಸರ್ಪ್ರೈಸ್‌ಗೆ ಎಲ್ಲರೂ ಮಂತ್ರಮುಗ್ದರಾಗಿದ್ದಾರೆ. ಈತನ ಅದ್ಭುತ ಪ್ರತಿಭೆಗೆ ಜನ ಮರಳಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಕೊಳಲಿನಲ್ಲಿ ಮೋಡಿ ಮಾಡಿದ ಇವರ ವೀಡಿಯೋ 44 ಮಿಲಿಯನ್ ಅಧಿಕ ಹಿಟ್ಸ್ ಪಡೆದಿದೆ. 

ಪೂರ್ತಿ ಓದಿ
06:09 PM (IST) May 05

ಹೈದರಾಬಾದ್‌ಗೆ ಡು ಆರ್‌ ಡೈ ಪಂದ್ಯ: ಇಂದು ಸೋತರೆ ಔಟ್‌! ಸಂಭಾವ್ಯ ತಂಡ ಇಲ್ಲಿದೆ

ಸತತ ಸೋಲಿನಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೆಣಸಲಿದೆ. ಪ್ಲೇ-ಆಫ್‌ ಹಾದಿಯಲ್ಲಿ ಉಳಿಯಲು ಸನ್‌ರೈಸರ್ಸ್‌ಗೆ ಈ ಪಂದ್ಯದ ಗೆಲುವು ಅನಿವಾರ್ಯ.

ಪೂರ್ತಿ ಓದಿ