ಬದೌನ್‌ನಲ್ಲಿ ಮದುವೆ ಹಿಂದಿನ ಹಳದಿ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ೨೨ ವರ್ಷದ ವಧು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಸಂಭ್ರಮದ ವಾತಾವರಣ ಶೋಕಸಾಗರವಾಯಿತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಲಖನೌ(ಮೇ.05) ವಿವಾಹ ಮಹೋತ್ಸವದ ಹಿಂದಿನ ದಿನ ಹಳದಿ ಸೆರಮನಿಯಲ್ಲಿ ಸಂಭ್ರಮದಿಂದ ಡ್ಯಾನ್ಸ್ ಮಾಡಿದ ವಧು ತೀವ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಮದುವೆ ಹಿಂದಿನಿಂದ ಆಯೋಜಿಸಿದ್ದ ಹಳದಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಎಲ್ಲರೂ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ವಧು ಕೂಡ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ತೀವ್ರ ಹೃದಯಾಘಾತದಿಂದ ದುರಂತ ಸಂಭವಿಸಿದೆ. ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದ ವಧುವನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
22 ವರ್ಷದ ಯುವತಿಯ ದುರಂತ ಅಂತ್ಯ
22 ವರ್ಷದ ಯುವತಿ ದಾರುಣ ಅಂತ್ಯಕಂಡಿದ್ದಾರೆ. ಕೆಲ ತಿಂಗಳ ಹಿಂದೆ ಯುವತಿಯ ಮದುವೆ ನಿಗಧಿಯಾಗಿತ್ತು. ನಿಶ್ಚಿತಾರ್ಥವೂ ನಡೆದಿತ್ತು. ಕಳದ ಒಂದು ತಿಂಗಳಿನಿಂದ ಮದುವೆಗೆ ತಯಾರಿಗಳು ನಡೆದಿತ್ತು. ಕುಟುಂಬಸ್ಥರು, ಆಪ್ತರಿಗೆ ಲಗ್ನ ಪತ್ರಿಕೆ ನೀಡಿ ಆಹ್ವಾನ ನೀಡಲಾಗಿತ್ತು. ಮದುವೆಗೆ ಯುವತಿ ಕುಟುಂಬಸ್ಥರು ತಮ್ಮ ಕೈಲಾದಂತೆ ತಯಾರಿ ಮಾಡಿಕೊಂಡಿದ್ದರು. ಪ್ರತಿ ದಿನ ಮದುವೆ ಮನಯೆಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರು ಆಗಮಿಸಿದ್ದರು.
ಹೃದಯಾಘಾತಕ್ಕೆ 21 ವರ್ಷದ MBBS ವಿದ್ಯಾರ್ಥಿ ಬಲಿ: ಇದ್ದೊಬ್ಬ ಮಗನ ಸಾವಿನಿಂದ ಪ್ರಜ್ಞಾಶೂನ್ಯಳಾದ ತಾಯಿ
ಹಳದಿ ಸೆರಮನಿ ಕಾರ್ಯಕ್ರಮದಲ್ಲಿ ವಧು ಡ್ಯಾನ್ಸ್
ಮದುವೆಗೂ ಮೊದಲು ಹಳದಿ ಕಾರ್ಯಕ್ರಮ ಉತ್ತರ ಭಾರತದಲ್ಲಿ ಜನಪ್ರಿಯ. ಇದೀಗ ದಕ್ಷಿಣ ಭಾರತದಲ್ಲೂ ಹಳದಿ ಕಾರ್ಯಕ್ರಮ ಇಲ್ಲದೆ ಮದುವೆ ಸಾಗುತ್ತಿಲ್ಲ. ಹಳದಿ ಕಾರ್ಯಕ್ರಮದಲ್ಲಿ ಸಂಪ್ರಾದಾಯಿಕ ಕಾರ್ಯಮಗಳು ನಡೆದಿದೆ. ಬಳಿಕ ಕುಟುಂಬಸ್ಥರೆಲ್ಲರು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತ ಯುವತಿ ಕೂಡ ತನ್ನ ಮದುವೆ ಸಂಭ್ರಮದಲ್ಲಿ ಹೆಜ್ಜೆ ಹಾಕಿದ್ದಾಳೆ. ಆದರೆ ಕೆಲ ಹೊತ್ತು ನಗು ಮುಖದ, ಚಪ್ಪಾಳೆ ತಟ್ಟುತ್ತಾ ಡ್ಯಾನ್ಸ್ ಮಾಡಿದ ಯುವತಿ ತೀವ್ರ ಅಸ್ವಸ್ಥಗೊಂಡಿದ್ದಾಳೆ.
ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದ ಯುವತಿ
ಹಳದಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರ ಜೊತೆ ಯುವತಿ ಡ್ಯಾನ್ಸ್ ಮಾಡಿದ್ದಾಳೆ. ಆದರೆ ಡ್ಯಾನ್ಸ್ ಮಾಡುತ್ತಲೇ ಯುವತಿ ಅಸ್ವಸ್ಥರಾಗಿದ್ದಾರೆ. ಕೆಲವೇ ಕ್ಷಣದಲ್ಲಿ ಯುವತಿ ಕುಸಿದು ಬಿದ್ದಿದ್ದಾಳೆ. ತಕ್ಷಣವೇ ಕುಟುಂಬಸ್ಥರು ನೆರವಿಗೆ ಧಾವಿಸಿದ್ದಾರೆ. ಯುವತಿಯನ್ನು ಎತ್ತಿ ಬೆಡ್ ಮೇಲೆ ಮಲಗಿಸಿದ್ದಾರೆ. ಗಾಳಿಯಾಡಲು ಸ್ಥಳವಕಾಶ ಮಾಡಿದ್ದಾರೆ, ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಯುವತಿಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣವೇ ಆಸ್ಪತ್ರೆ ಸಾಗಿಸಲಾಗಿದೆ.
ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ವೈದ್ಯರು ಯುವತಿ ಪರೀಕ್ಷಿಸಿದ್ದಾರೆ. ಈ ವೇಳೆ ಯುವತಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಯುವತಿ ಉಳಿಸಿಕೊಳ್ಳಲು ಕುಟುಂಬಸ್ಥರು ಎಲ್ಲಾ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಇತ್ತ ಸಂಭ್ರಮದ ಮನೆ ಶೋಕ ಸಾಗರದಲ್ಲಿ ಮುಳುಗಿದೆ. ಮನೆಯಲ್ಲಿ ಕುಟುಂಬಸ್ಥರು, ಆಪ್ತರಿಗೆ ಹಲವು ಬಗೆಯ ಆಹಾರ ಖಾದ್ಯಗಳನ್ನು ತಯಾರಿಸಲಾಗಿತ್ತು. ಈ ಘಟನೆಯಿಂದ ಈ ಸಂಭ್ರಮ ಮರೆಯಾಗಿದೆ.
ಯುವತಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಮಾಹಿತಿ ತಿಳಿದು ವರನ ಕುಟುಂಬಸ್ಥರು ಆಗಮಿಸಿದ್ದಾರೆ. ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರು ಗೋಳಾಗುತ್ತಿದ್ದಾರೆ. ಕುಟುಂಬಸ್ಥರು, ಆಪ್ತರಿಂದ ತುಂಬಿ ತುಳುಕುತ್ತಿದ್ದ ಮದುವೆ ಸಮಾರಂಭದಲ್ಲಿ ನೀರವ ಮೌನ ಆವರಿಸಿದೆ.
ನನ್ನ ಗೆಳತಿ ನನ್ನ ಗೆಳತಿ ಹಾಡಿನ ರಚನೆ-ಗಾಯಕ ಮಂಜುನಾಥ್ ಸಂಗಳದ ಹೃದಯಾಘಾತಕ್ಕೆ ಬಲಿ


