ಭಾರತ ವಿಶ್ವದ 4ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಹೆಚ್ಚು ದಿನ ಬೇಕಿಲ್ಲ.  ವರದಿ ಪ್ರಕಾರ ಇದೇ ವರ್ಷ ಜಾಗತಿಕ 4ನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2027ರ ವೇಳೆಗೆ ಭಾರತ 3ನೇ ಸ್ಥಾನಕ್ಕೇರಲಿದೆ ಎಂದಿದೆ. 

ನವದೆಹಲಿ(ಮೇ.05) ಭಾರತದ ವಿಶ್ವದಲ್ಲಿ ಸದ್ಯ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಆದರೆ ಇದೇ ವರ್ಷ ಭಾರತ ಜಪಾನ್ ಹಿಂದಿಕ್ಕಿ 4ನೇ ಅತೀ ದೊಡ್ಡ ಆರ್ಥಿಕತೆಯಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (IFM) ವರ್ಲ್ಡ್ ಇಕನಾಮಿಕ್ ಔಟ್‌ಲುಕ್ ಏಪ್ರಿಲ್ 2025ರ ವರದಿಯಲ್ಲಿ ಹೇಳಿದೆ. 2025 (ಹಣಕಾಸು ವರ್ಷ 26) ರಲ್ಲಿ ಭಾರತದ ಜಿಡಿಪಿ 4,187.017 ಬಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ, ಇದು ಜಪಾನ್‌ನ ಸಂಭಾವ್ಯ 4,186.431 ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. 

IMF ನ ಏಪ್ರಿಲ್ 2025 ರ ವರದಿಯ ಪ್ರಕಾರ, ಭಾರತ 2025 ರಲ್ಲಿ ಜಪಾನ್‌ ಅನ್ನು ಮೀರಿಸಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. 2025 ರ ಹಣಕಾಸು ವರ್ಷಕ್ಕೆ ಭಾರತದ GDP $4,187.017 ಶತಕೋಟಿಯಾಗಲಿದೆ ಎಂದಿದೆ. 2024 ರವರೆಗೆ ಭಾರತ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ಈ ವರ್ಷ ನಾಲ್ಕನೇ ಸ್ಥಾನಕ್ಕೆ ಏರಲಿದೆ. ವರದಿ ಪ್ರಕಾರ, 2028ರಲ್ಲಿ ಭಾರತ ಜರ್ಮನಿಯನ್ನು ಮೀರಿಸಿ ಮೂರನೇ ಸ್ಥಾನಕ್ಕೆ ಏರಲಿದೆ ಎಂದು ಅಂದಾಜಿಸಿದೆ.2028 ರ ವರೆಗೆ ಭಾರತದ ಜಿಡಿಪಿ $5,584.476 ಬಿಲಿಯನ್ ಆಗುವ ನಿರೀಕ್ಷೆಯಿದೆ.

GST Collection: ಏಪ್ರಿಲ್‌ನಲ್ಲಿ ಭರ್ಜರಿ ಜಿಎಸ್‌ಟಿ ಕಲೆಕ್ಷನ್‌, ದೇಶದ ಖಜಾನೆ ಭರ್ತಿ!

ಈ ದಶಕದಲ್ಲಿ ವಿಶ್ವದ ಟಾಪ್-2 ಆರ್ಥಿಕತೆಗಳಾಗಿ ಅಮೆರಿಕ-ಚೀನಾ ಮುಂದುವರಿಯಲಿವೆ
ಅಮೆರಿಕ ಮತ್ತು ಚೀನಾ 2025 ರಲ್ಲೂ ವಿಶ್ವದ ಅಗ್ರ ಎರಡು ಅತಿದೊಡ್ಡ ಆರ್ಥಿಕತೆಗಳಾಗಿ ಮುಂದುವರಿಯಲಿವೆ. IMF ನ ಅಂದಾಜಿನ ಪ್ರಕಾರ, ಈ ದಶಕದಲ್ಲಿ ಅಂದರೆ 2030 ರ ವರೆಗೆ ಅವರು ಈ ಶ್ರೇಯಾಂಕವನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. IMF ವರದಿಯ ಪ್ರಕಾರ, ಅಮೆರಿಕ 30.5 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಮೊದಲ ಸ್ಥಾನದಲ್ಲಿ ಮುಂದುವರಿಯಲಿದೆ, ಆದರೆ ಚೀನಾ 19.2 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ ಎರಡನೇ ಸ್ಥಾನದಲ್ಲಿ ಉಳಿಯಲಿದೆ. 4.74 ಟ್ರಿಲಿಯನ್ ಡಾಲರ್‌ನ ಅಂದಾಜು ಜಿಡಿಪಿಯೊಂದಿಗೆ ಜರ್ಮನಿ ಮೂರನೇ ಸ್ಥಾನದಲ್ಲಿ ಉಳಿಯಲಿದೆ. ನಂತರ ನಾಲ್ಕನೇ ಸ್ಥಾನದಲ್ಲಿ ಭಾರತ ಇರಲಿದೆ, ಇದರ ಅಂದಾಜು ಜಿಡಿಪಿ 4.18 ಟ್ರಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. 4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ಐದನೇ ಸ್ಥಾನದಲ್ಲಿ ಉಳಿಯಲಿದೆ. ನಂತರ ಯುನೈಟೆಡ್ ಕಿಂಗ್‌ಡಮ್ 3.83 ಟ್ರಿಲಿಯನ್‌ನೊಂದಿಗೆ ಆರನೇ ಸ್ಥಾನದಲ್ಲಿ ಉಳಿಯಲಿದೆ. ಫ್ರಾನ್ಸ್ 3.21 ಟ್ರಿಲಿಯನ್‌ನೊಂದಿಗೆ ಏಳನೇ, ಇಟಲಿ 2.42 ಟ್ರಿಲಿಯನ್‌ನೊಂದಿಗೆ ಎಂಟನೇ, ಕೆನಡಾ 2.22 ಟ್ರಿಲಿಯನ್‌ನೊಂದಿಗೆ ಒಂಬತ್ತನೇ ಮತ್ತು ಬ್ರೆಜಿಲ್ 2.12 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಹತ್ತನೇ ಸ್ಥಾನದಲ್ಲಿ ಉಳಿಯಲಿದೆ.

2028 ರ ವರೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಆಗಲಿದೆ
2027 ರ ವರೆಗೆ ಭಾರತ 5 ಟ್ರಿಲಿಯನ್ ಆರ್ಥಿಕತೆಯಾಗಲಿದೆ ಎಂದು ವರದಿ ತಿಳಿಸಿದೆ. ಅದೇ ರೀತಿ, 2028 ರ ವರೆಗೆ ಭಾರತದ ಜಿಡಿಪಿ 5.58 ಟ್ರಿಲಿಯನ್ ಡಾಲರ್‌ಗೆ ತಲುಪಲಿದೆ, ಆದರೆ ಆ ಸಮಯದಲ್ಲಿ ಜರ್ಮನಿಯ ಜಿಡಿಪಿ 5.25 ಟ್ರಿಲಿಯನ್ ಡಾಲರ್ ಆಗಿ ಉಳಿಯಲಿದೆ.

ಅತೀ ದೊಡ್ಡ ಆರ್ಥಿಕತೆ ದೇಶ ಹಾಗೂ ಅದರ ಜಿಡಿಪಿ (US ಡಾಲರ್ ಬಿಲಿಯನ್‌ಗಳಲ್ಲಿ)
ಅಮೆರಿಕ: 30507.217
ಚೀನಾ: 19231.705
ಜರ್ಮನಿ: 4744.804
ಭಾರತ: 4187.017
ಜಪಾನ್: 4186.431
ಯುಕೆ: 3839.18
ಫ್ರಾನ್ಸ್: 3211.292
ಇಟಲಿ: 2422.855
ಕೆನಡಾ: 2225.341
ಬ್ರೆಜಿಲ್: 2125.958

ಚಿನ್ನಕ್ಕೆ ಮುಗಿಬಿದ್ದ RBI, ಕಳೆದ ವರ್ಷ 57 ಟನ್‌ ಗೋಲ್ಡ್‌ ಖರೀದಿ!