11:06 PM (IST) Jun 05

Karnataka News Live 5th June 2025ಸೀಮಂತ್ ಕುಮಾರ್ ಸಿಂಗ್ ಬೆಂಗಳೂರಿನ ನೂತನ ಕಮೀಷನರ್‌!

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ದುರಂತದ ನಂತರ, ಬೆಂಗಳೂರಿನ ಪೊಲೀಸ್‌ ಕಮೀಷನರ್‌ ಬಿ.ದಯಾನಂದ್‌ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ. ಸೀಮಂತ್‌ ಕುಮಾರ್‌ ಸಿಂಗ್‌ ಅವರನ್ನು ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ.
Read Full Story
10:50 PM (IST) Jun 05

Karnataka News Live 5th June 2025ನಿಮ್ಮ ಐಆರ್‌ಸಿಟಿಸಿ ಅಕೌಂಟ್‌ ಕ್ಲೋಸ್‌ ಆಗಬಹುದು, ವೆರಿಫೈ ಮಾಡೋದನ್ನ ಮರೀಬೇಡಿ!

ಭಾರತೀಯ ರೈಲ್ವೆ ತನ್ನ ಆನ್‌ಲೈನ್ ತತ್ಕಾಲ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಆಧಾರ್ ಪರಿಶೀಲನೆ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ಮೂಲಕ ದುರುಪಯೋಗವನ್ನು ತಡೆಯುವ ಗುರಿ ಹೊಂದಿದೆ.
Read Full Story
10:18 PM (IST) Jun 05

Karnataka News Live 5th June 2025ಬೆಂಗಳೂರು ನಗರ ಉಸ್ತುವಾರಿ, ಗೃಹ ಸಚಿವ, ಡಿಸಿಎಂ ತಲೆದಂಡ ಯಾವಾಗ? ಜನರ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಆರ್‌ಸಿಬಿ ವಿಜಯೋತ್ಸವ ದುರಂತದಲ್ಲಿ 11 ಜನರ ಸಾವಿಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿದೆ. ಹೈಕೋರ್ಟ್‌ ತನಿಖೆಗೆ ಆದೇಶಿಸಿದ ಬಳಿಕ ಸರ್ಕಾರವು ತನಿಖೆಗೆ ಆದೇಶಿಸಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. 

Read Full Story
09:58 PM (IST) Jun 05

Karnataka News Live 5th June 2025ಚಿರತೆಗಳ ಜೊತೆ ಹೊಂದಾಣಿಕೆ ಅನಿವಾರ್ಯ ಪರಿಸ್ಥಿತಿ - ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ

ಮನುಷ್ಯರು ಚಿರತೆ ಜೊತೆ ಹೊಂದಿಕೊಂಡು ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಬೀದಿ ನಾಯಿಗಳಿಗಿಂತ ಚಿರತೆಗಳೇ ಹೆಚ್ಚಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

Read Full Story
09:50 PM (IST) Jun 05

Karnataka News Live 5th June 2025ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ, ವಿದ್ಯುತ್ ಸಮಸ್ಯೆ ಬಗೆಹರಿಸಿ - ಸಚಿವ ಕೆ.ಜೆ.ಜಾರ್ಜ್

ಇಂಧನ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಲೈನ್‌ ಮೆನ್ ಗಳು ರೈತರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ವಿದ್ಯುತ್ ಸಮಸ್ಯೆಗಳನ್ನು ನಿಗದಿತ ಅವಧಿಯೊಳಗೆ ಬಗೆಹರಿಸಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸೂಚಿಸಿದರು.

Read Full Story
09:21 PM (IST) Jun 05

Karnataka News Live 5th June 2025ಕಲ್ಯಾಣಮಂಟಪದಲ್ಲಿ ವಿದ್ಯುತ್ ಶಾಕ್ - 4 ವರ್ಷದ ಮಗು ಬಲಿ, ತಾಯಿಗೂ ಶಾಕ್

ಬೆಂಗಳೂರಿನ ವಿವಾಹ ಸಮಾರಂಭವೊಂದರಲ್ಲಿ 4 ವರ್ಷದ ಬಾಲಕನೊಬ್ಬ ಎಲೆಕ್ಟ್ರಿಕ್ ಶಾಕ್‌ನಿಂದ ಮೃತಪಟ್ಟಿದ್ದಾನೆ. ಏರ್ ಕೂಲರ್‌ಗೆ ಸ್ಪರ್ಶಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಕಲ್ಯಾಣ ಮಂಟಪದ ಮಾಲೀಕ ಮತ್ತು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story
09:16 PM (IST) Jun 05

Karnataka News Live 5th June 2025Breaking - ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆ, ಬೆಂಗಳೂರು ಪೊಲೀಸ್‌ ಕಮೀಷನರ್‌ ತಲೆದಂಡ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಘಟನೆಯ ಬಗ್ಗೆ ರಾಜ್ಯ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮಾಜಿ ಹೈಕೋರ್ಟ್ ನ್ಯಾಯಾಧೀಶ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲಾಗುವುದು. ಆರ್‌ಸಿಬಿ, ಡಿಎನ್‌ಎ ಮತ್ತು ಕೆಎಸ್‌ಸಿಎ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
Read Full Story
09:01 PM (IST) Jun 05

Karnataka News Live 5th June 2025ತಿಂಡಿಪೋತ ಕಾಡಾನೆ; ಕಾಡಿನಿಂದ ಬಂತು, ಅಂಗಡಿಗೆ ನುಗ್ಗಿತು, ತಿಂಡಿ ಎತ್ತಿಕೊಂಡು ಹೋಯ್ತು!

ಥೈಲ್ಯಾಂಡ್‌ನಲ್ಲಿ ಒಂದು ಕಾಡಾನೆ ಅಂಗಡಿಗೆ ನುಗ್ಗಿ ಕುರುಕಲು ತಿಂಡಿಗಳನ್ನು ಎತ್ತಿಕೊಂಡು ಹೋದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆನೆ ಯಾರನ್ನೂ ಏನೂ ಮಾಡದೆ, ಅಕ್ಕಿ ತಿಂಡಿ ಪ್ಯಾಕೆಟ್‌ಗಳನ್ನು ಟಾರ್ಗೆಟ್ ಮಾಡಿ ತಿಂದು, ಕೆಲವು ಪ್ಯಾಕೆಟ್‌ಗಳನ್ನು ತನ್ನ ಸೊಂಡಿಲಲ್ಲಿಟ್ಟುಕೊಂಡು ಹೋಯಿತು.

Read Full Story
08:47 PM (IST) Jun 05

Karnataka News Live 5th June 2025ನಾಳೆ ಲೋಕಾರ್ಪಣೆಯಾಗಲಿದೆ ಚೆನಾಬ್‌ ರೈಲ್ವೆ ಬ್ರಿಜ್‌, ದಾಖಲೆ ಸೃಷ್ಟಿಸಿದ ಸೇತುವೆಯ ವಿಹಂಗಮ ಚಿತ್ರಗಳು!

ಪ್ರಧಾನಿ ಮೋದಿ ಉದ್ಘಾಟಿಸುವ ಮುನ್ನ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಚೆನಾಬ್ ಮತ್ತು ಅಂಜಿ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸೇತುವೆಗಳು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
Read Full Story
08:45 PM (IST) Jun 05

Karnataka News Live 5th June 2025ರಾಜ್ಯದಲ್ಲಿ 100 ವಿದ್ಯುತ್ ಉಪ ಕೇಂದ್ರ ಸ್ಥಾಪನೆ - ಇಂಧನ ಸಚಿವ ಕೆ.ಜೆ.ಜಾರ್ಜ್

ವಿದ್ಯುತ್ ಪ್ರಸರಣಾ ವ್ಯವಸ್ಥೆಯನ್ನು ಸುಗಮಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 100 ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಕಾಲಮಿತಿಯಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

Read Full Story
08:43 PM (IST) Jun 05

Karnataka News Live 5th June 2025ಸರ್ಜಾಪುರ–ಹೆಬ್ಬಾಳ ಭಾರತದ ಅತ್ಯಂತ ದುಬಾರಿ ಮೆಟ್ರೋ ಮಾರ್ಗಕ್ಕೆ, ಕೇಂದ್ರದಿಂದ ಪರಿಶೀಲನೆ ಕೊಕ್ಕೆ!

ಸರ್ಜಾಪುರದಿಂದ ಹೆಬ್ಬಾಳವರೆಗಿನ ಮೆಟ್ರೋ 'ರೆಡ್ ಲೈನ್' ಯೋಜನೆಯ ₹28,405 ಕೋಟಿ ವೆಚ್ಚದ ಕುರಿತು ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸುತ್ತಿದೆ. ಪ್ರತಿ ಕಿ.ಮೀ.ಗೆ ₹776 ಕೋಟಿ ವೆಚ್ಚವಾಗುವ ಈ ಯೋಜನೆ ತಜ್ಞರ ಸಮಿತಿಯಿಂದ ಮರುಮೌಲ್ಯಮಾಪನಕ್ಕೆ ಒಳಪಡಲಿದೆ.
Read Full Story
08:33 PM (IST) Jun 05

Karnataka News Live 5th June 2025ಹೇಮಾವತಿ ನೀರು ತರಲು ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ - ಶಾಸಕ ಎಚ್.ಸಿ.ಬಾಲಕೃಷ್ಣ

ನಮ್ಮ ನೀರು ನಮ್ಮ ಹಕ್ಕು ವಿಚಾರವಾಗಿ ಮರೂರು ಹ್ಯಾಂಡ್‌ಪೋಸ್ಟ್‌ನಲ್ಲಿ ರಸ್ತೆ ತಡೆ ನಡೆಸುತ್ತಿದ್ದು, ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇನೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

Read Full Story
08:24 PM (IST) Jun 05

Karnataka News Live 5th June 2025ಕಾಲ್ತುಳಿತ ಪ್ರಕರಣ - ಆಫೀಸ್‌ನ ಟೇಬಲ್ ಮೇಲೆ ಲ್ಯಾಪ್‌ಟಾಪ್‌, ಬ್ಯಾಗ್‌ ಹಾಗೆಯೇ ಇದೆ.. ಆದ್ರೆ ಆಕೆಯೇ ಇಲ್ಲ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಬುಧವಾರ) ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ತಮಿಳುನಾಡು ಮೂಲದ ದೇವಿ ಎಂಬ ಟೆಕ್ಕಿ ಸಾವನಪ್ಪಿದರು.

Read Full Story
07:58 PM (IST) Jun 05

Karnataka News Live 5th June 2025ಭಾರತ-ಚೀನಾ ಬಾಹ್ಯಾಕಾಶ ಪೈಪೋಟಿ - ಉಪಗ್ರಹಗಳ ಮೂಲಕ ನಡೆದಿತ್ತು ಯುದ್ಧ!

ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಮುಖಾಮುಖಿಯಲ್ಲಿ ಬಾಹ್ಯಾಕಾಶ ಆಧಾರಿತ ವಿಚಕ್ಷಣದ ಪಾತ್ರವನ್ನು ಇಲ್ಲಿದೆ. ಚೀನಾ ತನ್ನ ಉಪಗ್ರಹ ಸಮೂಹದ ಮೂಲಕ ಪಾಕಿಸ್ತಾನಕ್ಕೆ ನೀಡಿದ ಬೆಂಬಲ ಇಲ್ಲಿದೆ.

Read Full Story
07:42 PM (IST) Jun 05

Karnataka News Live 5th June 2025ರಣಬೀರ್ ಕಪೂರ್ 'ಧೂಮ್ 4' ಸಿನಿಮಾಗೆ ಕನ್ನಡತಿ ಸೇರಿ ಈ 7 ನಾಯಕಿಯರೇ ಬೆಸ್ಟ್!

ರಣಬೀರ್ ಕಪೂರ್ 'ಧೂಮ್ 4' ಚಿತ್ರಕ್ಕೆ ನಾಯಕಿಯರ ಹೆಸರುಗಳು ಚರ್ಚೆಯಲ್ಲಿವೆ. ದೀಪಿಕಾ ಪಡುಕೋಣೆಯಿಂದ ಹಿಡಿದು ಶ್ರದ್ಧಾ ಕಪೂರ್ ವರೆಗೆ, ಯಾರು ರಣಬೀರ್ ಜೊತೆ ನಟಿಸಬಹುದು?

Read Full Story
07:31 PM (IST) Jun 05

Karnataka News Live 5th June 2025ಅಮಿತಾಬ್ ಜೊತೆ ಸಮಯ ಕಳೆಯೋದಕ್ಕೆ ಒಪ್ಪಿಕೊಂಡ ಸಿನಿಮಾನೆ ಕೈ ಬಿಟ್ಟಿದ್ರಾ ರೇಖಾ?

ನಟ ಅಮಿತಾಬ್ ಬಚ್ಚನ್ ಜೊತೆ ಸಂಜೆ ಕಳೆಯೋದಕ್ಕಾಗಿ ಕರಣಮಾ ಸಿನಿಮಾದಿಂದಲೇ ನಟಿ ರೇಖಾ ಹೊರ ಬಂದಿದ್ದರಂತೆ. ಅಷ್ಟೊಂದು ಲವ್ ಮಾಡ್ತಿದ್ರು ರೇಖಾ.

Read Full Story
07:15 PM (IST) Jun 05

Karnataka News Live 5th June 2025ಆರ್‌ಸಿಬಿ ವಿಜಯೋತ್ಸವ ಚಿನ್ನಸ್ವಾಮಿ ಕಾಲ್ತುಳಿತ; 19 ಮಂದಿ ವಿರುದ್ಧ ದೂರು ದಾಖಲು!

ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ತಂಡದ ವಿಜಯೋತ್ಸವದಲ್ಲಿ ನಡೆದ ಭೀಕರ ಅವ್ಯವಸ್ಥೆ ಪ್ರಕರಣದಲ್ಲಿ ಕಾನೂನು ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಹೈಕೋರ್ಟ್ ವಕೀಲ ಆರ್.ಎಲ್.ಎನ್. ಮೂರ್ತಿ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೆಸಿಎ ಪದಾಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವು.

Read Full Story
07:11 PM (IST) Jun 05

Karnataka News Live 5th June 2025ಆನೆಗಳನ್ನು ಕೊಂದು ಮಾಂಸವನ್ನು ಜನರಿಗೆ ನೀಡಲು ಮುಂದಾದ ಜಿಂಬಾಬ್ವೆ ಸರ್ಕಾರ!

ಜಿಂಬಾಬ್ವೆ ತನ್ನ ಆನೆಗಳ ಸಂಖ್ಯೆಯನ್ನು ನಿಯಂತ್ರಿಸಲು ಡಜನ್‌ಗಟ್ಟಲೆ ಆನೆಗಳನ್ನು ಕೊಲ್ಲುವ ಯೋಜನೆಯನ್ನು ಹೊಂದಿದೆ. ಈ ಮಾಂಸವನ್ನು ಸ್ಥಳೀಯ ಸಮುದಾಯಗಳಿಗೆ ಆಹಾರವಾಗಿ ವಿತರಿಸಲಾಗುವುದು, ಆದರೆ ದಂತವನ್ನು ಸರ್ಕಾರವು ಇಟ್ಟುಕೊಳ್ಳುತ್ತದೆ.
Read Full Story
07:07 PM (IST) Jun 05

Karnataka News Live 5th June 2025ಅದಾನಿ ಗ್ರೂಪ್‌ನಿಂದ ಒಂದೇ ವರ್ಷದಲ್ಲಿ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ತೆರಿಗೆ ಪಾವತಿ!

ಅದಾನಿ ಗ್ರೂಪ್ 2024-25ರಲ್ಲಿ ₹74,945 ಕೋಟಿ ತೆರಿಗೆ ಪಾವತಿಸಿದ್ದು, ಹಿಂದಿನ ವರ್ಷಕ್ಕಿಂತ 29% ಹೆಚ್ಚಳವಾಗಿದೆ. ಈ ಮೊತ್ತವು ಮುಂಬೈ ಮೆಟ್ರೋ ನಿರ್ಮಾಣ ವೆಚ್ಚಕ್ಕೆ ಸಮನಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಅದಾನಿ ಗ್ರೂಪ್‌ನ ಪಾತ್ರವನ್ನು ಎತ್ತಿ ತೋರಿಸುತ್ತದೆ. 

Read Full Story
06:57 PM (IST) Jun 05

Karnataka News Live 5th June 2025ಆರ್‌ಸಿಬಿ ಅಭಿಮಾನಿಯ ರಿವೇಂಜ್ - ಸಿಹಿಯ ಜೊತೆಗೆ ಬರ್ನಲ್‌ ಹಂಚಿದ ಯುವತಿ - ವೀಡಿಯೋ ಸಖತ್ ವೈರಲ್

ಆರ್‌ಸಿಬಿ ಗೆಲುವಿನ ಖುಷಿಯಲ್ಲಿ ಅಭಿಮಾನಿಯೊಬ್ಬರು ತಮ್ಮ ಕಚೇರಿಯಲ್ಲಿ ಸಿಹಿ ಜೊತೆಗೆ ಬರ್ನಲ್ ಮುಲಾಮನ್ನು ಹಂಚಿದ್ದಾರೆ. ಟ್ರೋಲ್ ಮಾಡಿದ್ದವರಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ. 

Read Full Story