ಆರ್‌ಸಿಬಿ ಗೆಲುವಿನ ಖುಷಿಯಲ್ಲಿ ಅಭಿಮಾನಿಯೊಬ್ಬರು ತಮ್ಮ ಕಚೇರಿಯಲ್ಲಿ ಸಿಹಿ ಜೊತೆಗೆ ಬರ್ನಲ್ ಮುಲಾಮನ್ನು ಹಂಚಿದ್ದಾರೆ. ಟ್ರೋಲ್ ಮಾಡಿದ್ದವರಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ. 

ಆರ್‌ಸಿಬಿ ಕಪ್ಪು ಗೆದ್ದಿದ್ದು ಆಯ್ತು, 18 ವರ್ಷಗಳ ಕಾಯುವಿಕೆಯ ನಂತರ ಬಂದ ಈ ಗೆಲುವನ್ನು ಸ್ವಾಗತಿಸಲು ಹೋಗಿ 11 ಜನ ಆರ್‌ಸಿಬಿ ಅಭಿಮಾನಿಗಳು ಜೀವ ತೆತ್ತಿದ್ದು ಆಯ್ತು. ಕ್ರೀಡಾ ಇತಿಹಾಸದಲ್ಲಿ ಅತೀಹೆಚ್ಚು ಟ್ರೋಲ್‌ಗೆ ಒಳಗಾದವರು ಎಂದರೆ ಆರ್‌ಸಿಬಿ ತಂಡ ಹಾಗೂ ಅದರ ಅಭಿಮಾನಿಗಳು ಅದರ ನಿರಂತರ 17 ವರ್ಷಗಳ ಸೋಲಿನಿಂದಾಗಿ ಹಲವು ಮೀಮ್ಸ್‌ಗಳು ಕ್ರಿಯೇಟ್ ಆಗಿದ್ದು ಗೊತ್ತೆ ಇದೆ. ಸೋಶಿಯಲ್ ಮೀಡಿಯಾ ತೆರೆದರೆ ಇಂತಹ ಸಾಕಷ್ಟು ಟ್ರೋಲ್‌ಗಳು ಕಾಣ ಸಿಗುತ್ತವೆ. ಆದರೆ ಈ ಬಾರಿ ಆರ್‌ಸಿಬಿಯ ಗೆಲುವು ಹೀಗೆ ಟ್ರೋಲ್‌ಗಳಿಂದ ಬೇಸತ್ತು ಹೋಗಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಹೊಸ ಜೀವ ನೀಡಿದೆ.

ಸೋಲಿನ ಕಾರಣಕ್ಕೆ ತಮ್ಮನ್ನು ಇಷ್ಟುದಿನ ನಿರಂತರ ಟ್ರೋಲ್ ಮಾಡುತ್ತಿದ್ದ ಇತರರನ್ನು ವಿಭಿನ್ನ ರೀತಿಯಲ್ಲಿ ಆರ್‌ಸಿಬಿ ಅಭಿಮಾನಿಗಳು ಉರಿಸಲು ಹೊರಟಿದ್ದಾರೆ. ಹೀಗೆ ಆರ್‌ಸಿಬಿ ಅಭಿಮಾನಿಯೊಬ್ಬಳು ಬೇರೆಯವರ ಹೊಟ್ಟೆಯುರಿಸುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಹಾಗಿದ್ರೆ ವೀಡಿಯೋದಲ್ಲಿ ಏನಿದೆ ನೋಡಿ

ಯುವತಿ, ಅಪ್ಪಟ ಆರ್‌ಸಿಬಿ ಅಭಿಮಾನಿಯೊಬ್ಬಳು ಆರ್‌ಸಿಬಿ ಗೆದ್ದ ಖುಷಿಗೆ ತನ್ನ ಇಡೀ ಕಚೇರಿಗೆ ಸಿಹಿ ಹಂಚಿದ್ದಾಳೆ. ಆಕೆ ಕೇವಲ ಸಿಹಿಯನ್ನಷ್ಟೇ ಹಂಚಿಲ್ಲ, ಸಿಹಿಯ ಜೊತೆ ಸುಟ್ಟ ಗಾಯದ ಉರಿ ಶಮನಗೊಳಿಸಲು ಹಾಕುವುದಕ್ಕೆ ಫೇಮಸ್ ಆಗಿರುವ ಬರ್ನಲ್ ಮುಲಾಮನ್ನು ಕೂಡ ಆಕೆ ನೀಡಿದ್ದು, ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತನ್ನನ್ನು ಇಷ್ಟು ದಿನ ಆರ್‌ಸಿಬಿ ಸೋಲಿನ ಕಾರಣಕ್ಕೆ ಟ್ರೋಲ್ ಮಾಡಿದ್ದ ತನ್ನ ಸಹೋದ್ಯೋಗಿಗಳಿಗೆ ಆಕೆ ಕಂಗ್ರಾಜ್ಯುಲೇಷನ್ ಹೇಳುತ್ತಾ ಸಿಹಿಯ ಜೊತೆ ಬರ್ನಲ್‌ ಕೂಡ ಕೊಟ್ಟಿದ್ದು, ಹಚ್ಚಿಕೊಳ್ಳುವಂತೆ ಮನವಿ ಮಾಡಿದ್ದಾಳೆ.

ಸಿಹಿ ಹಾಗೂ ಬರ್ನಲ್ ಎರಡನ್ನೂ ಜೊತೆ ಜೊತೆಗೆ ಹೊತ್ತು ತರುವ ಆಕೆ ಕಚೇರಿಯಲ್ಲಿ ಆರ್‌ಸಿಬಿ ಸೋತಾಗಲೆಲ್ಲಾ ಯಾರು ತನ್ನ ಹೊಟ್ಟೆ ಉರಿಸಿದ್ದಾರೋ ಅವರಿಗೆಲ್ಲ ಸಿಹಿಯ ಜೊತೆ ಬರ್ನಲ್ ಕೂಡ ನೀಡಿದ್ದಾಳೆ. ಈ ವೇಳೆ ಕೆಲವರು ತಾವು ಆರ್‌ಸಿಬಿಗೂ ಬೆಂಬಲಿಸಿದ್ದಾಗಿ ಹೇಳಿದ್ದು, ಹೇಯ್ ಸುಳ್ಳು ಹೇಳಬೇಡಿ, ವೀಡಿಯೋ ಇದೆ ನನ್ನ ಬಳಿ ಎಂದು ಹೇಳಿದ್ದಾಳೆ. ಈಕೆ ಬರ್ನಲ್ ನೀಡಲು ಬರುತ್ತಿದ್ದ ವೇಳೆ ಕೆಲವರು ಓಡುವುದನ್ನು ಕೂಡ ವೀಡಿಯೋದಲ್ಲಿ ನೋಡಬಹುದಾಗಿದೆ. ನಿಮಗಾಗಿ ನಾನು ಸುಮಾರು ಹಣ ವೆಚ್ಚ ಮಾಡಿ ಬರ್ನಲ್ ತಂದಿದ್ದೇನೆ. ದಯವಿಟ್ಟು ಹಚ್ಚಿಕೊಳ್ಳಿ ಎಂದು ಆಕೆ ಹೇಳುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಸಾವಿರಾರು ಜನ ಈ ವೀಡಿಯೋ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ.

ಈಕೆ ಹೀಗೆ ಮಾಡಬೇಕಾದ್ರೆ, ಅಂಕಲ್ ಮಕ್ಳು ಆಕೆಯನ್ನು ಅದೆಷ್ಟು ಉರಿಸಿರ್ಬೇಡ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸೂಪರ್ ರೀವೇಂಜ್ ಸೂಪರ್ ಸೆಲೆಬ್ರೇಷನ್ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ ಹಿನ್ನೆಲೆ ಅನೇಕರು ಈಕೆಯ ಕ್ರಮವನ್ನು ಟೀಕಿಸಿದ್ದಾರೆ. ನಿನ್ನೆ ಕಾಲ್ತುಳಿತದಲ್ಲಿ ಮಡಿದವರಿಗೆ ಆರ್‌ಸಿಬಿಯವರು ಗೆದ್ದ ಹಣ ನೀಡುತ್ತಾರಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

ನಮ್ ಜನಕ್ಕೆ ಯಾವಾಗ ಬುದ್ಧಿ ಬರುತ್ತೋ ಗೊತ್ತಿಲ್ಲ ಈ ಅಭಿಮಾನನ ಮನೆಯವರಿಗೋಸ್ಕರ ತೋರಿಸಿದರೆ ಇನ್ನು ಎಷ್ಟೋ ಚೆನ್ನಾಗಿರುತ್ತೆ ಅಲ್ವಾ ಯಾರು ಯಾರಿಗೂ ನೀವು ಬನ್ನಿ ಬನ್ನಿ ಅಂತ ಕರ್ದಿರಲ್ಲ ನಾವು ಮಾಡಿಕೊಳ್ಳುವ ತಪ್ಪಿಗೆಆರ್‌ಸಿಬಿ ಟೀಮ್ ಆಗ್ಲಿ ಗವರ್ನಮೆಂಟ್ ಆಗ್ಲಿ ಹೊಣೆ ಆಗುವುದಿಲ್ಲ ಎಷ್ಟು ಪರಿಹಾರ ಕೊಟ್ರು ಆ ಜೀವನ ಬದುಕಿಸೋಕೆ ಯಾರ್ ಕೈಯಲ್ಲೂ ಸಾಧ್ಯ ಇಲ್ಲ ನಾವು ಜನ ಎಚ್ಚೆತ್ಕೊಬೇಕು ಯಾವುದನ್ನ ಎಷ್ಟು ಸಂಭ್ರಮಿಸಬೇಕು ಅನ್ನೋದನ್ನ ನಾವು ತಿಳ್ಕೊಂಬೇಕು. ಅದು ಯಾವಾಗ ತಿಳ್ಕೊಂತಿವಿ ನಮಿಗೇ ಗೊತ್ತಿಲ್ಲ ತಿಳ್ಕೊಂಡಿ ದಿವ್ಸ ನಿಜವಾದ ಜನಗಳು ಆಗ್ತೀವಿ ನಾವು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.