ಥೈಲ್ಯಾಂಡ್‌ನಲ್ಲಿ ಒಂದು ಕಾಡಾನೆ ಅಂಗಡಿಗೆ ನುಗ್ಗಿ ಕುರುಕಲು ತಿಂಡಿಗಳನ್ನು ಎತ್ತಿಕೊಂಡು ಹೋದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಆನೆ ಯಾರನ್ನೂ ಏನೂ ಮಾಡದೆ, ಅಕ್ಕಿ ತಿಂಡಿ ಪ್ಯಾಕೆಟ್‌ಗಳನ್ನು ಟಾರ್ಗೆಟ್ ಮಾಡಿ ತಿಂದು, ಕೆಲವು ಪ್ಯಾಕೆಟ್‌ಗಳನ್ನು ತನ್ನ ಸೊಂಡಿಲಲ್ಲಿಟ್ಟುಕೊಂಡು ಹೋಯಿತು.

ಕಾಡಾನೆಗಳು ಜನವಸತಿ ಪ್ರದೇಶಗಳು, ಗ್ರಾಮಗಳು ಹಾಗೂ ಮನೆಗಳಿಗೆ ನುಗ್ಗಿ ದಾಂಧಲೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ, ಈ ಆನೆ ಮಾತ್ರ ತುಂಬಾ ಡಿಫರೆಂಟ್ ಆಗಿದೆ. ಈ ಒಂಟಿ ಸಲಗ ಹೊಟ್ಟೆ ಹಸಿವಿನಿಂದ ಜನವಸತಿ ಪ್ರದೇಶಗಳಿಗೆ ನುಗ್ಗದೇ, ಬಾಯಿ ಚಪಲಕ್ಕೆ ಕುರುಕಲು ತಿಂಡಿ ತಿನ್ನುವುದಕ್ಕೆ ಅಂಗಡಿಗೆ ನುಗ್ಗಿ ತಿಂಡಿ ಎತ್ತಿಕೊಂಡು ಹೋಗುತ್ತದೆ.

ಹೌದು, ಕಾಡಾನೆಗಳು ಊರಿಗೆ ಬಂದ್ರೆ ಜನರಿಗೆ ಆತಂಕ ಶುರುವಾಗುತ್ತದೆ. ಜನವಸತಿ ಪ್ರದೇಶಗಳಲ್ಲಿ ನಾಶ ಮಾಡೋದು ಸಾಮಾನ್ಯ. ಆದರೆ ಈ ಕಾಡಾನೆ ಮಾತ್ರ ಡಿಫರೆಂಟ್. ಥೈಲ್ಯಾಂಡ್‌ನಲ್ಲಿ ನಡೆದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಆನೆ ಯಾರನ್ನೂ ಏನೂ ಮಾಡ್ಲಿಲ್ಲ, ಅಂಗಡಿಗೆ ನುಗ್ಗಿ ತಿಂಡಿ ತಗೊಂಡು ಹೋಯ್ತು. ನಾವು ಹೇಳುವುದು ಕೇಳಿದರೆ ನೀವು ನಿಜಕ್ಕೂ ನಂಬೋದಿಲ್ಲ. ಅದಕ್ಕೆಂದಲೇ ನಿಮಗೆ ಈ ವಿಡಿಯೋ ತೋರಿಸುತ್ತಿದ್ದೇವೆ ನೋಡಿ.. ಈ ವಿಡಿಯೋ ನೋಡಿದರೆ ನೀವು ನಂಬಲೇಬೇಕು.

ಥೈಲ್ಯಾಂಡ್‌ನ ಖಾವೋ ಯಾಯ್ ಪ್ರದೇಶದ ಅಂಗಡಿಗೆ ಈ ಆನೆ ನುಗ್ಗಿ, ಅಕ್ಕಿ ತಿಂಡಿ ಪ್ಯಾಕೆಟ್‌ಗಳನ್ನೇ ಟಾರ್ಗೆಟ್ ಮಾಡಿ ಹೊಟ್ಟೆತುಂಬಾ ಅಕ್ಕಿ ತಿಂದು ಕುರುಕಲು ತಿಂಡಿಗಳನ್ನು ಎತ್ತಿಕೊಂಡು ಹೊರಟು ಹೋಯಿತು. ಆನೆ ಕಾಡಿಗೆ ಮರಳುವ ಮುನ್ನ ತನಗೆ ಎಷ್ಟಾಗುತ್ತದೆಯೋ ಅಷ್ಟು ತಿಂಡಿ ಪ್ಯಾಕೆಟ್‌ಗಳನ್ನು ತನ್ನ ಸೊಂಡಿಲಲ್ಲಿಟ್ಟುಕೊಂಡು ಹೊರಟುಹೋಗಿದೆ. ಆನೆ ಅಂಗಡಿಗೆ ನುಗ್ಗಿದಾಗ ಜನ ಭಯಗೊಂಡರು, ಅಂಗಡಿಗೂ ಸ್ವಲ್ಪ ಹಾನಿಯಾಯಿತು. 

ಆದರೆ, ಯಾರನ್ನೂ ಏನೂ ಮಾಡದೆ ಆನೆ ಹೋಯ್ತು. ಈ ವಿಡಿಯೋ ನೋಡಿ ಜನ ನಕ್ಕಿದ್ದಾರೆ. ಖಾವೋ ಯಾಯ್ ರಾಷ್ಟ್ರೀಯ ಉದ್ಯಾನವನದ ಪ್ಲಾಯ್ ಬಿಯಾಂಗ್ ಲೆಕ್ ಎಂಬ ಕಾಡಾನೆ ಇದೆಂದು ಗುರುತಿಸಲಾಗಿದೆ. @bangkokcommunityhelp ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.

View post on Instagram