11:29 PM (IST) Jun 04

Karnataka News Live 4th June 2025ಶಿಕ್ಷಣ, ಅನ್ನ, ಆರೋಗ್ಯ ನಮ್ಮ ಸರ್ಕಾರದ ಆದ್ಯತೆ - ಸಿಎಂ ಸಿದ್ದರಾಮಯ್ಯ

ಶಿಕ್ಷಣ, ಅನ್ನ, ಆರೋಗ್ಯಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Read Full Story
11:17 PM (IST) Jun 04

Karnataka News Live 4th June 202518 ವರ್ಷದ ನಿರೀಕ್ಷೆ, 18 ಗಂಟೆಯಲ್ಲಿ ದುಃಖ - 11 ಜೀವಗಳ ಬಲಿಗೆ ಹೊಣೆ ಯಾರು?

ಅಭಿಮಾನಿಗಳು ಎಷ್ಟು ಸಂಖ್ಯೆಯಲ್ಲಿ ಸೇರಬಹುದು ಅನ್ನೋ ಅಂದಾಜು ಮಾಡಲೂ ಆಗದಂತಾ ದರಿದ್ರ ಸ್ಥಿತಿಗೆ ಬಂದುಬಿಟ್ಟಿದೆಯಾ ಪೊಲೀಸ್ ಇಲಾಖೆ..? ಒಂದು ರೂಟ್ ಮ್ಯಾಪ್ ಇಲ್ಲ, ಎಂಟ್ರಿ-ಎಕ್ಸಿಟ್ ಸ್ಪಷ್ಟತೆಯಿಲ್ಲ, ತುರ್ತು ಸ್ಥಿತಿ ಎದುರಿಸಲು ಆ್ಯಂಬ್ಯುಲೆನ್ಸ್ ವ್ಯವಸ್ಥೆಯಿಲ್ಲ.

Read Full Story
10:37 PM (IST) Jun 04

Karnataka News Live 4th June 2025ಟಾಟಾ ಹ್ಯಾರಿಯರ್ ಇವಿ ಅನಾವರಣ, ಹೊಸ ಕಾರ್‌ನ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ..

21.49 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್.ev, 14.53-ಇಂಚಿನ ನಿಯೋ QLED ಇನ್ಫೋಟೈನ್‌ಮೆಂಟ್ ಸಿಸ್ಟಮ್, 540-ಡಿಗ್ರಿ ಸರೌಂಡ್ ವ್ಯೂ ಮತ್ತು ಇ-ವ್ಯಾಲೆಟ್ ಪ್ಯಾಕೇಜ್‌ನಂತಹ ವಿಭಾಗ-ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.

Read Full Story
10:08 PM (IST) Jun 04

Karnataka News Live 4th June 2025ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ಗೆ ಇನ್ನು ಆಧಾರ್‌ ವೆರಿಫಿಕೇಶನ್‌ ಕಡ್ಡಾಯ - ಭಾರತೀಯ ರೈಲ್ವೇಸ್‌

ಭಾರತೀಯ ರೈಲ್ವೆ ಈ ತಿಂಗಳ ಕೊನೆಯಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್‌ಗಳಿಗೆ ಕಡ್ಡಾಯ ಇ-ಆಧಾರ್ ದೃಢೀಕರಣವನ್ನು ಪ್ರಾರಂಭಿಸಲಿದೆ. ಇದರಿಂದಾಗಿ ಐಆರ್‌ಸಿಟಿಸಿ ಅಕೌಂಟ್‌ ದುರುಪಯೋಗ ಮತ್ತು ವಂಚನೆಯನ್ನು ಕಡಿಮೆ ಮಾಡಲು ಮತ್ತು ನಿಜವಾದ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್‌ ಬುಕ್‌ ಮಾಡುವುದು ಸುಲಭವಾಗಲಿದೆ.
Read Full Story
10:02 PM (IST) Jun 04

Karnataka News Live 4th June 2025ನನಗೆ 10 ಮಕ್ಕಳು ಬೇಕು ಎಂದ ನಟಿ ಸನಾ ಖಾನ್ - ನೆಟ್ಟಿಗರಿಂದ ತರಾಟೆ

ಇತ್ತೀಚೆಗೆ ಕೆಲವು ನಟಿಯರು ವಿಚಿತ್ರ ಹೇಳಿಕೆಗಳನ್ನು ನೀಡುವ ಮೂಲಕ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಸಾಲಿಗೆ ಸೇರಿದವರು ಸನಾ ಖಾನ್. 10 ಮಕ್ಕಳನ್ನು ಹೊಂದಬೇಕೆಂಬ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Read Full Story
09:44 PM (IST) Jun 04

Karnataka News Live 4th June 2025ಪ್ರಚಾರದಿಂದ ಮಾತ್ರ ದೇಶ ಸುಧಾರಣೆ ಕಾಣುವುದಿಲ್ಲ - ಸಚಿವ ಸಂತೋಷ್‌ ಲಾಡ್‌

ನೂತನ ತಾಲೂಕಿನ ಆಡಳಿತ ಭವನ ಪ್ರಜಾಸೌಧ ಕಟ್ಟಡಕ್ಕೆ ಶಂಕುಸ್ಥಾಪನೆ, ನಾಡ ಕಚೇರಿ ಕಟ್ಟಡ ಉದ್ಘಾಟನೆ ಸೇರಿದಂತೆ ಸುಮಾರು ₹15 ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಚಾಲನೆ ನೀಡಿದರು.

Read Full Story
09:27 PM (IST) Jun 04

Karnataka News Live 4th June 2025ಜೂ.11ರಂದು ಕುಸುಮ್- ಸಿ ಯೋಜನೆಗೆ ಚಾಲನೆ - ಇಂಧನ ಸಚಿವ ಕೆ.ಜೆ.ಜಾರ್ಜ್

ಇದೇ ತಿಂಗಳ 11ರಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಗ್ರಾಮದಲ್ಲಿ ಕುಸುಮ್- ಸಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

Read Full Story
09:21 PM (IST) Jun 04

Karnataka News Live 4th June 2025ವಿಜಯ್ ಮಲ್ಯ ಆರ್‌ಸಿಬಿ ಗೆಲುವಿನ ಸಂಭ್ರಮ, ಚಿನ್ನಸ್ವಾಮಿ ದುರಂತದ ಶೋಕದಲ್ಲಿ ಭಾಗಿ

ಆರ್‌ಸಿಬಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿ ಗೆದ್ದಾಗ ವಿಜಯ್‌ ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆಯೂ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಆರ್‌ಸಿಬಿ ತಂಡ ಮತ್ತು ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Read Full Story
09:16 PM (IST) Jun 04

Karnataka News Live 4th June 2025ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದು ಗಳಿಸಿದ್ದು ₹20 ಕೋಟಿ, ಸರ್ಕಾರ ಎಣ್ಣೆ ಮಾರಿ ಗಳಿಸಿದ್ದು ₹158 ಕೋಟಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025 ಟ್ರೋಫಿ ಗೆಲುವಿನ ಸಂಭ್ರಮದಲ್ಲಿ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿದೆ. ಒಂದೇ ದಿನ ₹158.54 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು.
Read Full Story
08:58 PM (IST) Jun 04

Karnataka News Live 4th June 2025ಕೇವಲ ₹12 ಸಾವಿರ ಬಾಡಿಗೆಗೆ 500 ಗಿಡಗಳುಳ್ಳ ಮನೆ; ಇದು ನಮ್ಮ ಒರಿಜಿನಲ್ ಬೆಂಗಳೂರು!

ಬೆಂಗಳೂರಿನಲ್ಲಿ ₹12,000 ಬಾಡಿಗೆಯ ಒಂದು ಬೆಡ್‌ರೂಮ್ ಮನೆಯಲ್ಲಿ ಯುವಕನೊಬ್ಬ 500 ಗಿಡಗಳನ್ನು ಬೆಳೆಸಿದ್ದಾನೆ. ಈ ಹಸಿರು ಪೆಂಟ್‌ಹೌಸ್ ನಗರದ ಗದ್ದಲದ ನಡುವೆ ಶಾಂತ ವಾತಾವರಣವನ್ನು ಸೃಷ್ಟಿಸಿದೆ.
Read Full Story
08:56 PM (IST) Jun 04

Karnataka News Live 4th June 2025ಕಾಲ್ತುಳಿತ ನಿಭಾಯಿಸೋಕು ಪೊಲೀಸ್‌ ಇಲಾಖೆಯಲ್ಲಿ ಬಲವಿಲ್ಲ, ಖಾಲಿ ಇದೆ 15 ಸಾವಿರ ಜಾಬ್ಸ್‌!

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬೆನ್ನಲ್ಲೇ, ರಾಜ್ಯ ಪೊಲೀಸ್ ಇಲಾಖೆಯಲ್ಲಿ 15 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದು ಬೆಳಕಿಗೆ ಬಂದಿದೆ. 1,11,330 ಮಂಜೂರಾದ ಹುದ್ದೆಗಳಿಗೆ ಹೋಲಿಸಿದರೆ, ಪೊಲೀಸ್ ಪಡೆಯು ಶೇ. 16.69 ರಷ್ಟು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ.
Read Full Story
08:20 PM (IST) Jun 04

Karnataka News Live 4th June 2025ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತದಲ್ಲಿ ಮೃತಪಟ್ಟ 11 ಜನರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ; ಸಿಎಂ ಸಿದ್ದರಾಮಯ್ಯ!

ಐಪಿಎಲ್ 2025ರಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಒದಗಿಸುವುದಾಗಿ ತಿಳಿಸಿದ್ದಾರೆ.
Read Full Story
07:56 PM (IST) Jun 04

Karnataka News Live 4th June 2025ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಮೋದಿ ಸಂತಾಪ, ಇದು ಹೃದಯವಿದ್ರಾವಕ ಎಂದ ಪ್ರಧಾನಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಸಾವು. ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ, ಸರ್ಕಾರದ ವಿರುದ್ಧ ಜನಾಕ್ರೋಶ.
Read Full Story
07:56 PM (IST) Jun 04

Karnataka News Live 4th June 2025ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಬಲಿಯಾದ 11 ಜನರ ಮಾಹಿತಿ ಬಹಿರಂಗ; ಸಾವಿನ ಕಾರಣ ಬಿಚ್ಚಿಟ್ಟ ವೈದ್ಯರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ 2025ರ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಮೃತರ ಹೆಸರು ಮತ್ತು ವಿವರಗಳು ಬಹಿರಂಗಗೊಂಡಿವೆ.
Read Full Story
07:46 PM (IST) Jun 04

Karnataka News Live 4th June 2025ಕ್ರಷರ್‌ ಬಂದ್‌ಗೆ ಜನಾಭಿಪ್ರಾಯ ಮುಖ್ಯ - ಶಾಸಕ ಪ್ರದೀಪ್ ಈಶ್ವರ್

ನನ್ನ ಕ್ಷೇತ್ರ ವ್ಯಾಪ್ತಿಯ 366 ಹಳ್ಳಿಗಳ ಪೈಕಿ ಇದುವರೆಗೂ 152 ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನತೆಯ ಸಮಸ್ಯೆಗಳ ಅರಿತಿದ್ದು, ಸಾಧ್ಯವಾದಷ್ಟೂ ಮಟ್ಟಿಗೆ ಪರಿಹರಿಸಿದ್ದೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

Read Full Story
07:38 PM (IST) Jun 04

Karnataka News Live 4th June 2025ಅಪಾಯದ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಸ್ಥಳಾಂತರಕ್ಕೆ ಸೂಚಿಸಿದ ಮಡಿಕೇರಿ ನಗರಸಭೆ!

ಕೊಡಗು ಜಿಲ್ಲೆಯಲ್ಲಿ 2018 ರಿಂದ ನಿರಂತರವಾಗಿ ಮೂರು ನಾಲ್ಕು ವರ್ಷಗಳ ಕಾಲ ಭೂಕುಸಿತವಾಗಿದ್ದು ಗೊತ್ತೇ ಇದೆ. ಈ ವರ್ಷವೂ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂಬ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

Read Full Story
07:27 PM (IST) Jun 04

Karnataka News Live 4th June 2025'ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ' ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಐಪಿಎಲ್‌ ಚೇರ್ಮನ್‌ ಮಾತು!

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ಬಗ್ಗೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟೇಡಿಯಂನ ಒಳಗಿದ್ದ ಅಧಿಕಾರಿಗಳಿಗೆ ಹೊರಗೆ ನಡೆದ ದುರ್ಘಟನೆಯ ಅರಿವಿರಲಿಲ್ಲ ಎಂದು ಅವರು ಹೇಳಿದ್ದಾರೆ.

Read Full Story
07:27 PM (IST) Jun 04

Karnataka News Live 4th June 2025ಸ್ಮಾರ್ಟ್ ಮೀಟರ್ ಹಗರಣ - ಬಿಜೆಪಿ, ಜೆಡಿಎಸ್ ನಾಯಕರ ಆರೋಪ ನಿರಾಧಾರ - ಎಂ.ಲಕ್ಷ್ಮಣ್

ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15568 ಕೋಟಿ ರೂ. ಹಗರಣ ನಡೆದಿದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಆರೋಪ ನಿರಾಧಾರ. ಈ ಯೋಜನೆಯ ಒಟ್ಟು ಅನುದಾನವೇ 1568 ಕೋಟಿ ರೂ., 15568 ಕೋಟಿ ರೂ. ಎಲ್ಲಿಂದ ಬಂತು?

Read Full Story
07:13 PM (IST) Jun 04

Karnataka News Live 4th June 2025ಚಾಮರಾಜನಗರದ ಹಸಿರು ಹೀರೋ - ಸಿ.ಎಂ.ವೆಂಕಟೇಶ್‌ಗೆ ರಾಜ್ಯ ಪರಿಸರ ಪ್ರಶಸ್ತಿ ಗೌರವ!

ನಾಳೆ (ಜೂನ್ 6) ವಿಶ್ವ ಪರಿಸರ ದಿನ. ಸಾವಿರಾರು ಗಿಡಗಳನ್ನು ಗಿಡಗಳನ್ನು ನೆಟ್ಟು ರಕ್ಷಿಸಿ ಪೋಷಿಸುತ್ತಿರುವ ಚಾಮರಾಜನಗರದ ಸಿ.ಎಂ. ವೆಂಕಟೇಶ್ 2024-25 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Read Full Story
07:02 PM (IST) Jun 04

Karnataka News Live 4th June 2025ಸೂರ್ಯನಿಂದ ಸಾಯಿವರೆಗೆ - ಟಾಟಾ ಕರ್ವ್ ಕಾರು ಯಾರಿಗೆ? ಇಲ್ಲಿದೆ ಐಪಿಎಲ್ ಅವಾರ್ಡ್ ಕಂಪ್ಲೀಟ್ ಲಿಸ್ಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿದ ಆರ್‌ಸಿಬಿ ಚೊಚ್ಚಲ ಟ್ರೋಫಿ ಗೆದ್ದಿದೆ. ಸೂರ್ಯಕುಮಾರ್ ಯಾದವ್ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿ ವಿಜೇತರಾಗಿದ್ದಾರೆ.

Read Full Story