ಆರ್‌ಸಿಬಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿ ಗೆದ್ದಾಗ ವಿಜಯ್‌ ಮಲ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ದುರಂತದ ಬಗ್ಗೆಯೂ ಮಲ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಆದರೆ ಆರ್‌ಸಿಬಿ ತಂಡ ಮತ್ತು ಆಟಗಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೆಂಗಳೂರು (ಜೂ.4): ಅದೇನೋ ಗೊತ್ತಿಲ್ಲ. ಇಡೀ ದೇಶಕ್ಕೆ ವಿಜಯ್‌ ಮಲ್ಯ ಮೋಸಗಾರನಾಗಿ ಕಂಡಿದ್ದರೂ, ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ವಿಜಯ್‌ ಮಲ್ಯ ಬೆಂಗಳೂರು ಅನ್ನೋ ಊರಿಗೆ ಐಪಿಎಲ್‌ನ ಹುಚ್ಚು ತಂದುಕೊಟ್ಟವರು. ಹಾಗಾಗಿ ಆರ್‌ಸಿಬಿ 18 ವರ್ಷಗಳ ಬಳಿಕ ಐಪಿಎಲ್‌ ಟ್ರೋಫಿ ಗೆದ್ದಾಗ ಎಲ್ಲರೂ ಕಂಡಿದ್ದು, ವಿಜಯ್‌ ಮಲ್ಯ ಏನು ಹೇಳ್ತಾರೆ ಅನ್ನೋದರ ಬಗ್ಗೆ.

ಆದರೆ, ವಿಜಯ್‌ ಮಲ್ಯ ಕೇವಲ ಆರ್‌ಸಿಬಿ ಸಂಭ್ರಮದಲ್ಲಿ ಮಾತ್ರವಲ್ಲ, ಚಿನ್ನಸ್ವಾಮಿಯಲ್ಲಿ ಸಂಭವಿಸಿದ ಕಾಲ್ತುಳಿತದ ಶೋಕದಲ್ಲೂ ಭಾಗಿಯಾಗಿದ್ದಾರೆ. ದೂರದ ಲಂಡನ್‌ನಲ್ಲಿರುವ ವಿಜಯ್‌ ಮಲ್ಯಗೆ ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳ ಕಾಲ್ತುಳಿತದ ಸುದ್ದಿ ಗೊತ್ತಾದರೂ, ಆರ್‌ಸಿಬಿ ಫ್ರಾಂಚೈಸಿಗಾಗಲಿ, ಕಪ್‌ ಗೆದ್ದ ಪ್ಲೇಯರ್ಸ್‌ ಆಗಲಿ ಕನಿಷ್ಠ ಸಂತಾಪದ ಟ್ವೀಟ್‌ಅನ್ನು ಈವರೆಗೂ ಮಾಡಿಲ್ಲ.

Scroll to load tweet…

'ಬೆಂಗಳೂರಿನಲ್ಲಿ ಸಂಭವಿಸಿದ ಜೀವಹಾನಿ ಮತ್ತು ಗಾಯಗಳ ಬಗ್ಗೆ ಕೇಳಿ ತುಂಬಾ ದುಃಖವಾಯಿತು. ಐಪಿಎಲ್ ಚಾಂಪಿಯನ್‌ಗಳನ್ನು ಸಂಭ್ರಮಿಸಲು ಬಂದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಅವರು ಪಡೆಯದ ದುರಾದೃಷ್ಟ ಎದುರಾಯಿತು. ದುರದೃಷ್ಟಕರ ಸಂತ್ರಸ್ಥ ಕುಟುಂಬಗಳಿಗೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ. ಓಂ ಶಾಂತಿ' ಎಂದು ವಿಜಯ್‌ ಮಲ್ಯ ಟ್ವೀಟ್‌ ಮಾಡಿದ್ದಾರೆ.

ಆದರೆ, ಸಂಜೆ 3 ರಿಂದ 4 ಗಂಟೆಯ ಅವಧಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನ ಎದುರಲ್ಲೇ ಆರ್‌ಸಿಬಿ ಆಟಗಾರರು ಪ್ರಾಣಬಿಟ್ಟರೆ, ಇನ್ನೊಂದೆಡೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಸ್ಟೇಡಿಯಂನ ಒಳಗೆ ಡಿಸಿಎಂ ಡಿಕೆ ಶಿವಕುಮಾರ್‌ ಜೊತೆ ಕಪ್‌ ಎತ್ತಿ ಸಂಭ್ರಮ ಆಚರಿಸುತ್ತಿತ್ತು. ತಂಡದ ಟ್ವಿಟರ್ ಹ್ಯಾಂಡಲ್‌, ಅಗ್ರ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರಜತ್‌ ಪಾಟಿದಾರ್‌ರಿಂದ ಒಂದೇ ಒಂದು ಟ್ವೀಟ್‌ ಕೂಡ ಬಂದಿಲ್ಲ. ಕೆಎಸ್‌ಸಿಎ ಅಧ್ಯಕ್ಷರಾದಿಯಾಗಿ ಯಾರೊಬ್ಬರೂ ಸಂತಾಪ ಸೂಚಿಸಿ ಮಾತನಾಡಿಲ್ಲ.

5 ಲಕ್ಷ ಪರಿಹಾರ ಘೋಷಣೆ ಮಾಡಿದ ಕೆಎಸ್‌ಸಿಎ-ಆರ್‌ಸಿಬಿ: ಇಂದು ಬೆಳಗ್ಗೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಯೋಜಿಸಿದ್ದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ದುರದೃಷ್ಟಕರ ಘಟನೆಯ ಬಗ್ಗೆ RCB - KSCA ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.

ಈ ಘಟನೆಯಲ್ಲಿ ಸಂಭವಿಸಿದ ದುರಂತ ಸಾವು ಮತ್ತು ವ್ಯಕ್ತಿಗಳಿಂದ ಉಂಟಾದ ಗಾಯಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಈ ಘಟನೆಯಿಂದ ಸಂತ್ರಸ್ಥ ಕುಟುಂಬಗಳೊಂದಿಗೆ ನಮ್ಮ ಪ್ರಾರ್ಥನೆಗಳು ಇವೆ. ಈ ದುರಂತಕ್ಕೆ ವಿಷಾದಿಸುತ್ತೇವೆ ಮತ್ತು ಈ ಅತ್ಯಂತ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. RCB - KSCA ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ₹5 ಲಕ್ಷಗಳನ್ನು ಘೋಷಿಸಿದೆ.ಇದು ಅವರ ದುಃಖದ ಸಮಯದಲ್ಲಿ ಸ್ವಲ್ಪ ಬೆಂಬಲ ಮತ್ತು ಸಾಂತ್ವನವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ.