11:36 PM (IST) Aug 31

Karnataka News Live 31st August 2025 ಕೈ-ತುತ್ತಿನಲ್ಲಿ ಸಾವು; ಅನ್ನದ ಅಗಳು ಗಂಟಲಿಗೆ ಸಿಲುಕಿ ಉಸಿರೇ ನಿಲ್ಲಿಸಿದ 38ರ ಯುವಕ!

ಕಾರವಾರದಲ್ಲಿ ಊಟ ಮಾಡುವಾಗ ಅನ್ನದ ಅಗಳು ಗಂಟಲಿಗೆ ಸಿಲುಕಿ ಯುವಕ ಸಾವನ್ನಪ್ಪಿದ್ದಾನೆ. ಅಮಿತ್ ಮಾಳಸೇರ್ ಎಂಬ 38 ವರ್ಷದ ಯುವಕನಿಗೆ ಉಸಿರುಗಟ್ಟಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ಕುಟುಂಬದಲ್ಲಿ ದುಃಖ ತಂದಿದೆ.

Read Full Story
11:23 PM (IST) Aug 31

Karnataka News Live 31st August 2025 ಮಿನಿಟ್ರಕ್ ತುಂಬಾ ಅಕ್ರಮ ಗೋಮಾಂಸ ಸಾಗಣೆ; ಬೆಳಗಾವಿಯಲ್ಲಿ ವಾಹನ ಪಲ್ಟಿ, ಚಾಲಕ ಪರಾರಿ

ಬೆಳಗಾವಿ ಜಿಲ್ಲೆಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ವಾಹನ ಪಲ್ಟಿಯಾಗಿ 2,000 ಕೆಜಿಗೂ ಹೆಚ್ಚು ಮಾಂಸ ಪತ್ತೆಯಾಗಿದೆ. ಚಾಲಕ ಪರಾರಿಯಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಅಕ್ರಮ ಗೋಸಾಗಾಟದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story
11:17 PM (IST) Aug 31

Karnataka News Live 31st August 2025 ಸಿಎಂ ಸಿದ್ದರಾಮಯ್ಯರಿಂದ ಎಸ್‌ಐಟಿ ದುರ್ಬಳಕೆ - ನಿಖಿಲ್ ಕುಮಾರಸ್ವಾಮಿ ಆರೋಪ

ಧರ್ಮಸ್ಥಳ ಬುರುಡೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಗೆ ವಹಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

Read Full Story
10:32 PM (IST) Aug 31

Karnataka News Live 31st August 2025 ಧರ್ಮಸ್ಥಳ ಕೇಸಲ್ಲಿ ಮತ್ತೊಂದು FIR - ಮಟ್ಟಣ್ಣನವರ್, ತಿಮರೋಡಿ ಗ್ಯಾಂಗ್‌ಗೆ ಮದನ್ ಬುಗುಡಿ ಸೇರ್ಪಡೆ!

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದ ಮೇಲೆ ಮೂವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು. ಮಾನವ ಹಕ್ಕು ಆಯೋಗದ ಅಧಿಕಾರಿಯೆಂದು ಸುಳ್ಳು ಹೇಳಿ ಧರ್ಮಸ್ಥಳದ ಘನತೆಗೆ ಧಕ್ಕೆ ತಂದ ಆರೋಪ.
Read Full Story
10:23 PM (IST) Aug 31

Karnataka News Live 31st August 2025 ಸದ್ದಿಲ್ಲದೆ ಮದುವೆಯಾಗೋಕೆ ರೆಡಿಯಾದ ಚಿಕ್ಕಣ್ಣ! ಖ್ಯಾತ ಹಾಸ್ಯನಟನ ಬದುಕೀಗ ಪಾವನಾಮಯ! ಹುಡುಗಿ ಯಾರು?

Actor Chikkanna Marriage: ನಟ ಚಿಕ್ಕಣ್ಣ ಬದುಕು ಈಗ ಪಾವನಾಮಯವಂತೆ. ಹೌದು ಸಿಂಗಲ್‌ ಆಗಿದ್ದ ಚಿಕ್ಕಣ್ಣ ಈಗ ಫ್ಯಾಮಿಲಿ ಮ್ಯಾನ್‌ ಆಗೋಕೆ ರೆಡಿಯಾಗಿದ್ದಾರಂತೆ. ಹಾಗಾದರೆ ಹುಡುಗಿ ಯಾರು?

Read Full Story
10:04 PM (IST) Aug 31

Karnataka News Live 31st August 2025 ಶ್ರಮಿಕರಿಗೆ ಶಕ್ತಿ ತುಂಬಿದ್ದೇ ಅಂದಿನ ಭಾಗ್ಯಗಳು, ಇಂದಿನ ಗ್ಯಾರಂಟಿಗಳು - ಸಿಎಂ ಸಿದ್ದರಾಮಯ್ಯ

ಶೂದ್ರ ಶ್ರಮಿಕ ವರ್ಗಗಳಿಗೆ ಆರ್ಥಿಕ ಚೈತನ್ಯ ನೀಡಲು ಭಾಗ್ಯಗಳು ಮತ್ತು ಗ್ಯಾರಂಟಿಗಳು ವರದಾನವಾಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ನೋಡದೆ ಎಲ್ಲ ಜಾತಿಗಳ ಅಭಿವೃದ್ಧಿಯೇ ಸರ್ಕಾರದ ಗುರಿ. ದಾರ್ಶನಿಕರು ಮತ್ತು ಮಹನೀಯರ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದೆ.
Read Full Story
09:43 PM (IST) Aug 31

Karnataka News Live 31st August 2025 ಗಡಿ ತಾಲೂಕಿಗೆ ಆರೋಗ್ಯ ರಕ್ಷೆ - ಭಾಗ್ಯನಗರದಲ್ಲಿ ಸೆ.1ಕ್ಕೆ ಸಾಯಿ ಸ್ವಾಸ್ಥ್ಯ ವೆಲ್‌ನೆಸ್‌ ಸೆಂಟರ್ ಉದ್ಘಾಟನೆ

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಈ ಆರೋಗ್ಯ ಕೇಂದ್ರವನ್ನು ನಿರ್ವಹಿಸಲಿದೆ. ಈ ಆರೋಗ್ಯ ಕೇಂದ್ರವು 'ಒಂದು ಜಗತ್ತು ಒಂದು ಕುಟುಂಬದ ಸಾಯಿ ಸ್ವಾಸ್ಥ್ಯ ಚಿಕಿತ್ಸಾಲಯ' ಸಮೂಹದ ಭಾಗವಾಗಲಿದೆ.

Read Full Story
09:29 PM (IST) Aug 31

Karnataka News Live 31st August 2025 ಸಿದ್ದರಾಮಯ್ಯ ಸರ್ಕಾರದಿಂದ ತೆರಿಗೆ ಭಯೋತ್ಪಾದನೆ - ಶಾಸಕ ಸುನೀಲ್ ಕುಮಾರ್ ಆಕ್ರೋಶ

ರಾಜ್ಯ ಕಾಂಗ್ರೆಸ್ ಸರ್ಕಾರ ಚಂಬಲ್ ಕಣಿವೆಯ ದರೋಡೆಕೋರರನ್ನು ಮೀರಿಸುವಂತೆ ಜನಸಾಮಾನ್ಯರ ಸುಲಿಗೆಗೆ ಮುಂದಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
09:14 PM (IST) Aug 31

Karnataka News Live 31st August 2025 ಕೆ.ಎನ್. ರಾಜಣ್ಣ ಭೇಟಿಯಾದ ಮಠಾಧೀಶರು; ಸಚಿವ ಸ್ಥಾನ ವಾಪಸ್ ಕೊಡಿಸಲು ಹೈಕಮಾಂಡ್ ಭೇಟಿಗೆ ತೀರ್ಮಾನ!

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಹಲವು ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೀಗ ರಾಜಣ್ಣ ಅವರನ್ನು ಪುನಃ ರಾಜ್ಯದ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.

Read Full Story
08:48 PM (IST) Aug 31

Karnataka News Live 31st August 2025 ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಕಾರ್ಖಾನೆ ಸ್ಪಂದಿಸಲಿ - ಶಾಸಕ ಆರ್.ವಿ.ದೇಶಪಾಂಡೆ

ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಬೇಕು. ರೈತರ ಹಿತರಕ್ಷಣೆ ಮರೆಯಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

Read Full Story
07:39 PM (IST) Aug 31

Karnataka News Live 31st August 2025 ಗಣೇಶ ಮೆರವಣಿಗೆಯಲ್ಲಿ ಕುಣಿಯುತ್ತಲೇ ಕುಸಿದುಬಿದ್ದ ಭಕ್ತ, ಪ್ರಾಣ ಹೊತ್ತೊಯ್ದ ಜವರಾಯ!

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ನೃತ್ಯ ಮಾಡುತ್ತಿದ್ದ ಲಕ್ಷ್ಮೀಪತಿ (40) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

Read Full Story
06:47 PM (IST) Aug 31

Karnataka News Live 31st August 2025 ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ 'ಅನ್ನಪೂರ್ಣ ಯೋಜನೆ' - ನಾಳೆ ಸ್ಮಾರ್ಟ್ ಕಾರ್ಡ್‌ ವಿತರಣೆ

ಬೆಂಗಳೂರು ಜಲಮಂಡಳಿ 'ಜಲಮಂಡಳಿ ಅನ್ನಪೂರ್ಣ ಯೋಜನೆ'ಯಡಿ 700+ ನೈರ್ಮಲ್ಯೀಕರಣ ಕಾರ್ಮಿಕರಿಗೆ ಉಪಹಾರಕ್ಕಾಗಿ ಮಾಸಿಕ ₹1500 ಒದಗಿಸುತ್ತಿದೆ. ಈ ಯೋಜನೆಯು ಕಾರ್ಮಿಕರ ಆರೋಗ್ಯ ಮತ್ತು ಗೌರವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
Read Full Story
06:33 PM (IST) Aug 31

Karnataka News Live 31st August 2025 ಕರ್ನಾಟಕದಲ್ಲಿ ಮುಂದಿನ ಏಳು ದಿನ ಭಾರಿ ಮಳೆ, ಹವಾಮಾನ ಇಲಾಖೆಯಿಂದ ಹೈ ಅಲರ್ಟ್!

ಕರ್ನಾಟಕದಲ್ಲಿ ಮುಂದಿನ ಏಳು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿಯೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
Read Full Story
06:19 PM (IST) Aug 31

Karnataka News Live 31st August 2025 ಚಾಮುಂಡಿ ಚಲೋ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ - ಆರ್.ಅಶೋಕ್ ಘೋಷಣೆ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ತಿಳಿದುಕೊಂಡು ಮಾಧ್ಯಮಕ್ಕೆ ತಿಳಿಸುತ್ತೇನೆ. ಚಾಮುಂಡಿ ಚಲೋ ಮಾಡುವ ಚಿಂತನೆಯಿದೆ. ರಾಜ್ಯಾದ್ಯಂತ ಎಲ್ಲಾ ಹಿಂದೂ ಸಂಘಟನೆಗಳು ಈ ಚಲೋದಲ್ಲಿ ಸೇರಲಿದ್ದಾರೆ.

Read Full Story
06:12 PM (IST) Aug 31

Karnataka News Live 31st August 2025 ನಿಮ್ಮ ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯುವ ಸುವರ್ಣಾವಕಾಶ, ಅರ್ಜಿ ಸಲ್ಲಿಸೋದು ಹೇಗೆ?

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಮನೆಯ ಮೇಲ್ಚಾವಣಿಯಲ್ಲಿ ಸೌರ ಘಟಕ ಅಳವಡಿಸಿ 20 ವರ್ಷ ಉಚಿತ ವಿದ್ಯುತ್ ಪಡೆಯಿರಿ. ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸಿ, ಸರ್ಕಾರದ ಸಬ್ಸಿಡಿ ಪಡೆದು ಖರ್ಚು ಕಡಿಮೆ ಮಾಡಿ.
Read Full Story
05:57 PM (IST) Aug 31

Karnataka News Live 31st August 2025 ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ ಸರ್ಕಾರಕ್ಕೆ ಶೀಘ್ರ ಶಿಫಾರಸು - ಸಚಿವ ಸಂತೋಷ್ ಲಾಡ್

ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ನಿಯಮಾನುಸಾರ ಪರಿಹಾರ ನೀಡುತ್ತದೆ. ಪರಿಹಾರ ಕಾರ್ಯಗಳಲ್ಲಿ ಯಾವುದೇ ಲೋಪದೋಷಗಳಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು.

Read Full Story
05:49 PM (IST) Aug 31

Karnataka News Live 31st August 2025 ಮಡಿಕೇರಿಯಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆಂದು ಇನ್ಸ್ಟಾದಲ್ಲಿ ಪೋಸ್ಟ್ - ಯುವಕನ ಬಂಧನ

ಡೇಟಿಂಗ್‌ಗೆ ಮಡಿಕೇರಿಯಲ್ಲಿ ಹುಡುಗಿಯರು, ಆಂಟಿಯರು ಸಿಗುತ್ತಾರೆ ಎಂದು ಇನ್ಸ್ಟಾಗ್ರಾಂನಲ್ಲಿ ಹಾಕಿ ಜನರನ್ನು ವಂಚಿಸುತ್ತಿದ್ದ ಯುವಕನನ್ನು ಮಡಿಕೇರಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read Full Story
05:35 PM (IST) Aug 31

Karnataka News Live 31st August 2025 ಮಡಿಕೇರಿ ಆಂಟಿಯರ ಸುದ್ದಿಗೆ ಹೋಗಿ ತಗ್ಲಾಕ್ಕೊಂಡ ಭೂಪ! ಹನಿಮೂನ್​ಗೆ ಹೋಗಿ ಜೈಲು ಸೇರಿದ...

ಆಂಟಿಯರು ಬೇಕಾ, ಹುಡುಗಿಯರು ಬೇಕಾ ಎಂದು ವಿವಿಧೆಡೆ ಜಾಹೀರಾತು ನೀಡಿ ಹಲವರಿಗೆ ಟೋಪಿ ಹಾಕಿರುವ ಭೂಪನೊಬ್ಬ ಮಡಿಕೇರಿಯವರ ತಂಟೆಗೆ ಹೋಗಿ ಅರೆಸ್ಟ್​ ಆಗಿದ್ದಾನೆ. ಈತನ ಕುತೂಹಲದ ಸ್ಟೋರಿ ಕೇಳಿ...

Read Full Story
05:32 PM (IST) Aug 31

Karnataka News Live 31st August 2025 ತೋಟದ ಕೆಲಸಕ್ಕೆ ಬಂದ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡ ಯುವ ರೈತ; ಈಗ ಇಬ್ಬರೂ ಕೃಷಿ ಹೊಂಡದಲ್ಲಿ ಹತ!

ಚಾಮರಾಜನಗರ ಜಿಲ್ಲೆಯಲ್ಲಿ ಯುವಕ ಮತ್ತು ವಿಚ್ಛೇಧಿತ ಮಹಿಳೆ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾತ್ರಿ ಎಣ್ಣೆ ಪಾರ್ಟಿ ವೇಳೆ ಭಿನ್ನಾಭಿಪ್ರಾಯ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಹಿಳೆಯ ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story
04:52 PM (IST) Aug 31

Karnataka News Live 31st August 2025 ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್ ಗೆ ನಡೆಯುತ್ತೆ - ಕೇಂದ್ರ ಸಚಿವ ಜೋಶಿ ಕಿಡಿ

ಮೋಹನ್ ಭಾಗವತ್ ಅವರ 'ನಾವಿಬ್ಬರು ನಮಗೆ ಮೂವರು' ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೆಂಬಲ ವ್ಯಕ್ತಪಡಿಸಿದ್ದಾರೆ. ವೋಟ್ ಬಚಾವ್ ಆಂದೋಲನವನ್ನು ನುಸುಳುಕೋರರ ಬಚಾವ್ ಆಂದೋಲನ ಎಂದು ಕರೆದ ಜೋಶಿ, ಕಾಂಗ್ರೆಸ್ ಮತ್ತು ಮಹುವಾ ಮೈತ್ರಾ ವಿರುದ್ಧ ವಾಗ್ದಾಳಿ ನಡೆಸಿದರು.

Read Full Story