Actor Chikkanna Marriage: ನಟ ಚಿಕ್ಕಣ್ಣ ಬದುಕು ಈಗ ಪಾವನಾಮಯವಂತೆ. ಹೌದು ಸಿಂಗಲ್ ಆಗಿದ್ದ ಚಿಕ್ಕಣ್ಣ ಈಗ ಫ್ಯಾಮಿಲಿ ಮ್ಯಾನ್ ಆಗೋಕೆ ರೆಡಿಯಾಗಿದ್ದಾರಂತೆ. ಹಾಗಾದರೆ ಹುಡುಗಿ ಯಾರು?
ಕಾಮಿಡಿ ಶೋನಲ್ಲಿ ನಿರೂಪಣೆ ಮಾಡುತ್ತಿದ್ದ ಅನುಶ್ರೀ ಎರಡು ದಿನಗಳ ಹಿಂದೆ ಮದುವೆಯಾದರು. ಈಗ ಅದೇ ಕಾಮಿಡಿ ಶೋನಲ್ಲಿ ಸ್ಪರ್ಧಿಯಾಗಿದ್ದ ಈಗ ಕನ್ನಡದ ಖ್ಯಾತ ಹಾಸ್ಯನಟ ಕೂಡ ಸದ್ದಿಲ್ಲದೆ ಮದುವೆ ತಯಾರಿ ಮಾಡಿಕೊಂಡಿದ್ದಾರೆ. ಹೌದು, ಕನ್ನಡ ಚಿತ್ರರಂಗದಲ್ಲಿ ಆರಂಭದಲ್ಲಿ ಕಾಮಿಡಿ ಶೋಗಳಲ್ಲಿ ಭಾಗಿಯಾಗುತ್ತಿದ್ದ ನಟ ಚಿಕ್ಕಣ್ಣ ( Actor Chikkanna ) ಈಗ ಸ್ಟಾರ್ ಕಾಮಿಡಿಯನ್. ಅಂದಹಾಗೆ ಚಿಕ್ಕಣ್ಣಗೆ ಈಗ 41 ವರ್ಷ ವಯಸ್ಸು ಎನ್ನಲಾಗಿದೆ.
ಚಿಕ್ಕಣ್ಣನ ಮನಸ್ಸು ಕದ್ದ ಹುಡುಗಿ ಯಾರು?
ಕನ್ನಡದ ಸ್ಟಾರ್ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ನಟಿಸುತ್ತಿರುವ ಚಿಕ್ಕಣ್ಣ ಈಗ ಮದುವೆ ಆಗಲು ರೆಡಿಯಾಗಿದ್ದಾರೆ. ಬಹಳ ಗುಟ್ಟಾಗಿ ಮದುವೆ ತಯಾರಿ ಮಾಡಿಕೊಂಡಿದ್ದಾರೆ. ಮಂಡ್ಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಹಸಮಣೆ ಏರಲಿದ್ದಾರೆ. ಮಹದೇವಪುರ ಗ್ರಾಮದ ಪಾವನಾ ಎಂಬ ಯುವತಿಯ ಜೊತೆ ಚಿಕ್ಕಣ್ಣ ಮ್ಯಾರೇಜ್ ನಡೆಯಲಿದೆ. ಈಗಾಗಲೇ ಎರಡು ಮನೆಯವರು ಹೂ ಮುಡಿಸುವ ಶಾಸ್ತ್ರ ನೇರವೇರಿಸಿಕೊಂಡಿದ್ದಾರೆ.
ನಿಶ್ಚಿತಾರ್ಥ, ಮದುವೆ ಯಾವಾಗ?
ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಮುಂದಿನ ವಾರ ನಿಗದಿ ಮಾಡಲಿದ್ದಾರಂತೆ. ಇದು ಲವ್ ಅಥವಾ ಅರೇಂಜ್ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ. ಈ ಬಗ್ಗೆ ಚಿಕ್ಕಣ್ಣ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಯಾವಾಗ ಮದುವೆ ಎಂದು ಪ್ರಶ್ನೆ ಬಂದಾಗಲೂ ಕೂಡ ಚಿಕ್ಕಣ್ಣ ಅವರು ಆಗೋಣ ಟೈಮ್ ಬಂದಾಗ ಎಂದು ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದರು.
ಪಾವನಾ ಯಾರು?
ಮಂಡ್ಯ ಮೂಲದ ಪಾವನಾ ಕೆಸಿ ಗೌಡ ಎನ್ನುವವರ ಜೊತೆ ನಟ ಚಿಕ್ಕಣ್ಣ ಹಸೆಮಣೆ ಏರಲಿದ್ದಾರಂತೆ. ಪಾವನಾ ಅವರು ಮೈಸೂರಿನಲ್ಲಿ ಪಿಯುಸಿ ಸೇರಿದಂತೆ ಉನ್ನತ ಶಿಕ್ಷಣ ಪೂರೈಸಿದ್ದಾರೆ.
Greenaura Techno Ventures ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿರುವ ಪಾವನಾ ಅವರು ಉದ್ಯಮಿ ಕೂಡ ಹೌದು. ಅಂದಹಾಗೆ ಪಾವನಾ ಅವರು ಮೆಕ್ಯಾನಿಕಲ್ ಇಂಜಿನಿಯರ್ ಎನ್ನಲಾಗಿದೆ. ಪ್ರಾಣಿಗಳು, ಪ್ರಕೃತಿ ಅಂದರೆ ಪಾವನಾಗೆ ತುಂಬ ಇಷ್ಟ. ಇನ್‌ಸ್ಟಾಗ್ರಾಮ್‌ನಲ್ಲಿ ಯಾರೋ ನನ್ನ ಹೃದಯ ಕದ್ದಿದ್ದಾರೆ ಎಂಬ ಟೈಟಲ್ ಅಡಿಯಲ್ಲಿ ಪಾವನಾ ಇನ್‌ಸ್ಟಾಗ್ರಾಮ್ ಪೋಸ್ಟ್ ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ಅವರು ಪಾವನಾರ ಕೈ ಹಿಡಿದುಕೊಂಡು ನಿಂತಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟ!
2011ರಲ್ಲಿ ನಟ ಯಶ್ ಅವರ ಕಿರಾತಕ ಸಿನಿಮಾ ಮೂಲಕ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡ ಚಿಕ್ಕಣ್ಣ ಆಮೇಲೆ ಹಿಂತಿರುಗಿ ನೋಡೇ ಇಲ್ಲ. ‘ರಾಜಾಹುಲಿ’, ‘ಅಧ್ಯಕ್ಷ’, ‘ಉಪಾಧ್ಯಕ್ಷ’ ಮುಂತಾದ ಸಿನಿಮಾಗಳಲ್ಲಿ ಚಿಕ್ಕಣ್ಣನ ಅಭಿನಯ, ಕಾಮಿಡಿಗೆ ಮನಸೋಲದವರೇ ಇಲ್ಲ ಎನ್ನಬಹುದು. ಇಲ್ಲಿಯವರೆಗೆ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಚಿಕ್ಕಣ್ಣ ಅವರು ನಟ ದರ್ಶನ್, ಕಿಚ್ಚ ಸುದೀಪ್, ಯಶ್ ಸೇರಿದಂತೆ ದಿಗ್ಗಜರ ಸಿನಿಮಾಗಳಲ್ಲಿ ಹೀರೋ ಫ್ರೆಂಡ್ ಪಾತ್ರದಲ್ಲಿ ನಟಿಸಿ ನಗಿಸಿದ್ದೇ ಹೆಚ್ಚು ಎನ್ನಬಹುದು.



