ಚಾಮರಾಜನಗರ ಜಿಲ್ಲೆಯಲ್ಲಿ ಯುವಕ ಮತ್ತು ವಿಚ್ಛೇಧಿತ ಮಹಿಳೆ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಾತ್ರಿ ಎಣ್ಣೆ ಪಾರ್ಟಿ ವೇಳೆ ಭಿನ್ನಾಭಿಪ್ರಾಯ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಹಿಳೆಯ ತಾಯಿ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರದಿ - ಪುಟ್ಟರಾಜು.ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ (ಆ.31): ಆತ 28 ವರ್ಷದ ಯುವಕ. ತನಗಿಂತ ಐದಾರು ವರ್ಷ ದೊಡ್ಡವಳಾದ ವಿಚ್ಛೇಧಿತ ಮಹಿಳೆಯನ್ನು ಪ್ರೀತಿಸುತ್ತಾ ಆಕೆಯೊಂದಿಗೆ ಸಂಬಂಧ ಇಟ್ಕೊಂಡಿದ್ದ. ರಾತ್ರಿ ಇಬ್ಬರೂ ಕೂತು ಎಣ್ಣೆ ಪಾರ್ಟಿ ಮಾಡ್ತಾ ಇದ್ದಾಗ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರೂ ಇರುವುದು ಬೇಡ ಅಂತ ಕೃಷಿ ಹೊಂಡ ಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಯುವಕನಿಗೆ 28 ವರ್ಷವಾದರೂ ಮದುವೆಯಾಗಿರಲಿಲ್ಲ. ಸ್ಥಿತಿವಂತರ ಕುಟುಂಬದ ಈ ಯುವಕ ತಮ್ಮ ತೋಟಕ್ಕೆ ಬರುತ್ತಿದ್ದ ವಿಚ್ಚೇಧಿತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದನು. ಬರೀ ಪ್ರೀತಿಯಲ್ಲ ಈಕೆಯ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದನು. ಆದರೆ, ಆಕೆಗಾಗಲೇ ಮೊದಲ ಗಂಡನಿಂದ ಪಡೆದ 2 ಹೆಣ್ಣುಮಕ್ಕಳೂ ಇದ್ದು, ಅವುಗಳನ್ನು ಸಾಕುವ ಜವಾಬ್ದಾರಿ ಕೂಡ ಆ ಮಹಿಳೆ ಮೇಲಿತ್ತು. ಆದರೆ, ಹರೆಯದ ವಯಸ್ಸಿನಲ್ಲಿಯೇ ಗಂಡನಿಂದ ದೂರವಾದ ಈ ಮಹಿಳೆಗೆ ಗಂಡಸಿನ ಆಸರೆಯೂ ಕೂಡ ಸಾಮಾಜಿಕವಾಗಿ ಭದ್ರತೆಯನ್ನು ತಂದುಕೊಟ್ಟಿತ್ತು. ಇದೀಗ ಇಬ್ಬರೂ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣವನ್ನೇ ಬಿಟ್ಟಿದ್ದಾರೆ.

ಈ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೋಕಿನ ಒಡೆಯರಪಾಳ್ಯದ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ರವಿ ಎಂಬ ಯುವಕನಿಗೆ ತಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದ ಅದೇ ಗ್ರಾಮದ ಅನ್ಯಜಾತಿಯ ಮೀನಾಕ್ಷಿ ಎಂಬ ಮಹಿಳೆಯೊಬ್ಬಳ ಜೊತೆಗೆ ಸಂಬಂಧವಿತ್ತು. ಆದರೆ, ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ಸಹ ಇದ್ದಾರೆ. ರಾಮಾಪುರಕ್ಕೆ ಮದುವೆಯಾಗಿದ್ದ ಈಕೆ ನಾಲ್ಕೈದು ವರ್ಷಗಳ ಹಿಂದೆ ಗಂಡನನ್ನು ತ್ಯಜಿಸಿ ಒಡೆಯರಪಾಳ್ಯಕ್ಕೆ ಬಂದಿದ್ದಳು.

29 ವರ್ಷಗಳಿಂದ ಎಂಜಿನ್ ಆಯಿಲ್ ಕುಡಿದು ಬದುಕುವ ಅಯ್ಯಪ್ಪ ಭಕ್ತ! ವೈದ್ಯಲೋಕಕ್ಕೇ ಸವಾಲಾದ ಮೈಸೂರಿನ ವ್ಯಕ್ತಿ ಯಾರು?

ಇನ್ನು ಮಕ್ಕಳನ್ನು ಸಾಕುವುಯದಕ್ಕೆ ಹಾಗೂ ಹೊಟ್ಟೆ ಹೊರೆಯಲಿಕ್ಕೆ ಕೂಲಿ ಕೆಲಸಕ್ಕೆಂದು ಗುಳ್ಳದ ಬಯಲು ಬಳಿ ಇರುವ ರವಿ ಅವರ ತೋಟಕ್ಕೆ ಹೋಗುತ್ತಿದ್ದಳು. ದಿನ ಕಳೆಯುತ್ತಾ ಗಂಡನಿಲ್ಲದ ಮಹಿಳೆಗೆ ಮೊದಲು ಕನಿಕರ ತೋರಿಸುತ್ತಾ ಆಕೆಯನ್ನು ಪ್ರೀತಿಯ ಬಲೆಯಲ್ಲಿ ಬೀಳಸಿಕೊಂಡು, ಅಕ್ರಮ ಸಂಬಂಧವನ್ನೂ ಇಟ್ಟುಕೊಂಡಿದ್ದಾರೆ. ಇವರಿಬ್ಬರು ನಿನ್ನೆ ರಾತ್ರಿ ತೋಟದಲ್ಲಿ ಒಟ್ಟಿಗೆ ಕೂತು ಎಣ್ಣೆ ಪಾರ್ಟಿ ಮಾಡಿದ್ದಾರೆ. ಕುಡಿದ ನಶೆಯಲ್ಲಿದ್ದ ಇಬ್ಬರ ನಡುವೆ ಭಿನಾಭಿಪ್ರಾಯ ಉಂಟಾಗಿ ಕೊನೆಗೆ ಇಬ್ಬರೂ, ನಾವು ಭೂಮಿ ಮೇಲೆ ಬದುಕಿರುವುದೇ ಬೇಡವೆಂದು ತೀರ್ಮಾನಿಸಿ ತೋಟದಲ್ಲೇ ಇದ್ದ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹ*ತ್ಯೆಗೆ ಶರಣಾಗಿದ್ದಾರೆ.

ಮೀನಾಕ್ಷಿ ತನ್ನ ಇಬ್ಬರು ಹೆಣ್ಣು ಮಕ್ಕಳು ಮಲಗುತ್ತಿದ್ದಂತೆ ಮನೆಯಿಂದ ಗುಳ್ಳದಬಯಲು ಸಮೀಪ ಇರುವ ರವಿಯ ತೋಟಕ್ಕೆ ಹೋಗಿದ್ದಳು. ಮಕ್ಕಳಿಗೆ ಎಚ್ಚರವಾದಾಗ ತಾಯಿ ಇಲ್ಲದ್ದನ್ನು ಕಂಡು ಗಾಬರಿಯಾಗಿ ಅಕ್ಕ ಪಕ್ಕದವರಿಗೆ ತಿಳಿಸಿದ್ದಾರೆ. ಕೆಲವರಿಗೆ ಅನುಮಾನ ಬಂದು ಆಕೆ ಕೂಲಿ ಕೆಲಸಕ್ಕೆ ಹೋಗ್ತಿದ್ದ ರವಿಯ ತೋಟಕ್ಕೆ ಹೋಗಿ ನೋಡೋಣ ಎಂದು ಹುಡುಕಾಟ ನಡೆಸಿದ್ದಾರೆ. ರವಿ ಹಾಗೂ ಮೀನಾಕ್ಷಿಯ ಶವಗಳು ಕೃಷಿ ಹೊಂಡದಲ್ಲಿ ಬಿದ್ದಿರುವುದನ್ನು ನೋಡಿ ಹನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗೌರಿ ಗಣೇಶ ಹಬ್ಬಕ್ಕೆ ತವರು ಮನೆಗೆ ಕರೆದಿಲ್ಲ ಅಂತಾ ಗೃಹಿಣಿ ಆತ್ಮಹ*ತ್ಯೆ!

'ಇಬ್ಬರೂ ಆತ್ಮಹ*ತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಮೀನಾಕ್ಷಿಯ ತಾಯಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದು ತನಿಖೆ ಎಂದು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ತಿಳಿಸಿದ್ದಾರೆ. ವಿಚ್ಚೇಧಿತ ಮೀನಾಕ್ಷಿಯೇನೋ ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಸಾವಿಗೆ ಶರಣಾಗಿದ್ದಾಳೆ. ಆದರೆ, ಈಕೆಯ ಇಬ್ಬರು ಮಕ್ಕಳು ಅತ್ತ ತಂದೆಯೂ ಇಲ್ಲದೆ, ಇತ್ತ ತಾಯಿಯೂ ಇಲ್ಲದೆ ತಬ್ಬಲಿಗಳಾಗಿದ್ದಾರೆ.