ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ , ಸ್ಕ್ಯಾನಿಂಗ್ ಮಾಡಿಸಲು ಮಗುವನ್ನು ಹಿಡಿದು ನಗರದಲ್ಲಿ ಸಂಚರಿಸಿ ಪರೀಕ್ಷೆ ನಡೆಸಿದ ಮಹಾತಾಯಿಗೆ ರಾಜ್ಯವೇ ಸಲಾಂ ಹೇಳಿದೆ. ಯಾರು ಈ ತಾಯಿ, ಏನಿದು ಘಟನೆ?
- Home
- News
- State
- Karnataka Latest News Live: ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ
Karnataka Latest News Live: ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ

ಚಿಕ್ಕಬಳ್ಳಾಪುರ: ಹಿಂದೂ ಸಂಸ್ಕೃತಿ ಬೆಳೆಯಬೇಕಾದರೆ ವಾಲ್ಮೀಕಿ ಕಾರಣ, ಹಿಂದೂ ಸಂಸ್ಕೃತಿಯವರು ಮೊದಲು ವಾಲ್ಮೀಕಿಗೆ ಜೈ ಎನ್ನಬೇಕು, ಆ ಮೇಲೆ ಜೈ ಶ್ರೀರಾಮ ಎನ್ನಬೇಕು ಎಂದು ಮಾಜಿ ಸಚಿವ ರಾಜನರಸಿಂಹನಾಯಕ (ರಾಜುಗೌಡ) ಹೇಳಿದರು. ನಗರದಲ್ಲಿ ಮದಕರಿ ನಾಯಕ ಜಯಂತಿ ಉದ್ಘಾಟಿಸಿ ಮಾತನಾಡಿದರು. ನಮ್ಮವರಿಗೆ ರಾಜಕೀಯ ವಿಷ ಕೊಟ್ಟು ಸಾಯಿಸುತ್ತಿದ್ದಾರೆ, ಆದರೆ ನಾವು ವಾಲ್ಮೀಕಿ ಸಮಾಜದವರು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ರಾಜುಗೌಡ ಹೇಳಿದರು.
Karnataka News Live 3 November 2025ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ
Karnataka News Live 3 November 2025Bigg Boss 12 - ಸೂಟ್‌ಕೇಸ್ ಹಿಡಿದುಕೊಂಡು ಬಿಗ್‌ಬಾಸ್ ಮನೆಯಿಂದ ಹೊರಬಂದ ಅಶ್ವಿನಿ ಗೌಡ
Bigg Boss Kannada surprise elimination: ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುವ ನಡುವೆ, ಅನಿರೀಕ್ಷಿತವಾಗಿ ಅಶ್ವಿನಿ ಗೌಡ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಇದು ನಿಜವಾದ ಎಲಿಮಿನೇಷನ್ನೇ ಅಥವಾ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದೆಯೇ ಎಂಬ ಕುತೂಹಲ ಮೂಡಿದೆ.
Karnataka News Live 3 November 2025ಅಪಘಾತದಿಂದ ಕೋಮಾಗೆ ಜಾರಿದ್ದ ಅಪೂರ್ವ ಭಟ್ ನಿಧನದ ಬೆನ್ನಲ್ಲೇ ಗಾಯಾಳು ತಂದೆಯೂ ನಿಧನ
ಅಪಘಾತದಿಂದ ಕೋಮಾಗೆ ಜಾರಿದ್ದ ಅಪೂರ್ವ ಭಟ್ ನಿಧನದ ಬೆನ್ನಲ್ಲೇ ಗಾಯಾಳು ತಂದೆಯೂ ನಿಧನ, ಮೇ 27ರಂದು ನಡೆದ ಅಫಘಾತದಲ್ಲಿ ಗಾಯಗೊಂಡ ಅಪೂರ್ವ 130 ದಿನ ಕೋಮಾದಲ್ಲಿದ್ದು ಮೃತಪಟ್ಟಿದ್ದರು. ಇದೀಗ ಇದೇ ಅಪಘಾತದಲ್ಲಿ ಗಾಯಗೊಂಡ ತಂದೆ ನಿಧನ.
Karnataka News Live 3 November 2025ಗಿಲ್ಲಿ ನಟ - ರಿಷಾ ಗೌಡ ಜಗಳಕ್ಕೆ ಕಾರಣವೇನು? ಕ್ಯಾಪ್ಟನ್ ಮುಂದೆ ಅಸಲಿ ವಿಷಯ ಬಿಚ್ಚಿಟ್ಟ ಕಾವ್ಯಾ
ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವಿನ ಜಗಳಕ್ಕೆ ಬಕೆಟ್ ಬಿಸಿನೀರು ಕಾರಣವಾಗಿದೆ. ರಿಷಾ ಸ್ನಾನಕ್ಕೆ ಹೋದಾಗ ಗಿಲ್ಲಿ ನಟ ಆಕೆಯ ಬಟ್ಟೆಗಳನ್ನು ಬಾತ್‌ರೂಮ್‌ಗೆ ಎಸೆದಿದ್ದು, ಈ ಸಂಪೂರ್ಣ ಘಟನೆಯನ್ನು ಕಾವ್ಯಾ ಅವರು ಕ್ಯಾಪ್ಟನ್ ಧನುಷ್ ಮುಂದೆ ವಿವರಿಸಿದ್ದಾರೆ.
Karnataka News Live 3 November 2025ಸಿಎಂ ಮಾತಿಗೂ ಬೆಲೆ ಇಲ್ಲ, ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ನ.10ಕ್ಕೆ ಮುಂದೂಡಿಕೆ
ಸಿಎಂ ಮಾತಿಗೂ ಬೆಲೆ ಇಲ್ಲ, ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ನ.10ಕ್ಕೆ ಮುಂದೂಡಿಕೆ ಮಾಡಲಾಗಿದೆ. ನವೆಂಬರ್ 3ರೊಳಗೆ ಗುಂಡಿ ಮುಚ್ಚಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದರು.
Karnataka News Live 3 November 2025ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿದ್ದರಾಮಯ್ಯ ಹೇಳಿದ್ದು ಯಾರಿಗೆ?
ಹೀರೋ ತೆರೆ ಮೇಲೆ ಇದ್ದಂಗೆ ನಿಜ ಜೀವನದಲ್ಲೂ ಇದ್ದರೆ ಒಳ್ಳೇದು, ಸಿಎಂ ಸಿದ್ದರಾಮಯ್ಯ ಹೇಳಿದ್ದು ಯಾರಿಗೆ? 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದ ಭಾಷಣದಲ್ಲಿ ಆಡಿದ ಮಾತುಗಳು ಇದೀಗ ಚರ್ಚೆಯಾಗುತ್ತಿದೆ.
Karnataka News Live 3 November 2025Bigg Boss ಆಫರ್ ರಿಜೆಕ್ಟ್ ಮಾಡಿದ್ದೇಕೆ ನಟಿ ಜ್ಯೋತಿ ರೈ? ಶಾಕಿಂಗ್ ಹೇಳಿಕೆ ಕೊಟ್ಟ ಹಾಟ್ ಬ್ಯೂಟಿ
Karnataka News Live 3 November 2025'ಓಳು ಬಿಡೋ ಸುಂದರಿ' ಹಾಡಿಗೆ ಚಿಂದಿ ಉಡಾಯಿಸಿದ Brahmagantu- Naa Ninna bidalaare ನಟಿಯರು!
Karnataka News Live 3 November 2025ಕಾಂತಾರಾ 1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡಿ ಸಿನ್ಮಾ ನೋಡ್ತೇನೆ ಎಂದ ಸಿದ್ದರಾಮಯ್ಯ
ಕಾಂತಾರಾ 1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡಿ ಸಿನ್ಮಾ ನೋಡ್ತೇನೆ ಎಂದ ಸಿದ್ದರಾಮಯ್ಯ, ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂತಾರಾ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನೋಡುತ್ತೇನೆ ಎಂದಿದ್ದಾರೆ.
Karnataka News Live 3 November 2025ಬಾಡಿಹೋದ ಮುಖ, ಆತಂಕದ ಕಣ್ಣು.. ಜೈಲಲ್ಲಿ ಸೊರಗಿ ಸುಣ್ಣವಾದ ದಾಸ!
Actor Darshan First Look After 81 Days ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 81 ದಿನಗಳ ಬಳಿಕ ನಟ ದರ್ಶನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ದೋಷಾರೋಪವನ್ನು ನಿರಾಕರಿಸಿದ ದರ್ಶನ್ ಮತ್ತು ಇತರ ಆರೋಪಿಗಳ ವಿಚಾರಣೆಯನ್ನು ನ.10 ರಿಂದ ಆರಂಭಿಸಲು ನ್ಯಾಯಾಲಯ ಆದೇಶಿಸಿದೆ.
Karnataka News Live 3 November 2025ಕೋಪ ನಿಯಂತ್ರಣಕ್ಕೆ ಯೋಗ ಕಲಿಯಲು ಹೋದ 'ಸೀತಾರಾಮ' ರಾಮ್ಗೆ ಹೀಗೆ ಆಗೋದಾ? ವಿಡಿಯೋ ವೈರಲ್
Karnataka News Live 3 November 2025ಬೆಂಗಳೂರಿನಲ್ಲಿ 2BHKಗೆ ಮನೆಯೊಡತಿ ಕೇಳಿದ ಡೆಪಾಸಿಟ್ ಎಷ್ಟು - ಶಾಕ್‌ನಲ್ಲಿ ಬಾಡಿಗೆದಾರ
Bengaluru house rent deposit: ಬೆಂಗಳೂರಿನ ಪ್ರೇಜರ್ ಟೌನ್‌ನಲ್ಲಿ 2BHK ಮನೆಯೊಂದಕ್ಕೆ ಮಾಲೀಕರು 30 ಲಕ್ಷ ರೂಪಾಯಿ ಡೆಪಾಸಿಟ್ ಕೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Karnataka News Live 3 November 2025Bigg Boss ರಿಷಾ ಗೌಡ ಮನೆಯಲ್ಲಿ ಹೇಗೆ? ಗಿಲ್ಲಿ ಜೊತೆ ಫೈಟಿಂಗ್ ನಡುವೆಯೇ ಅಚ್ಚರಿಯ ವಿಷಯ ರಿವೀಲ್ ಮಾಡಿದ ಅಪ್ಪ
ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ, ಸಹ ಸ್ಪರ್ಧಿ ಗಿಲ್ಲಿ ನಟನ ಮೇಲೆ ಕೈ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಈ ಘಟನೆಯಿಂದ ಅವರು ಎಲಿಮಿನೇಟ್ ಆಗುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಅವರ ತಂದೆ ಮಗಳ ನಿಜವಾದ ಸ್ವഭാവದ ಬಗ್ಗೆ ಮಾತನಾಡಿದ್ದಾರೆ.
Karnataka News Live 3 November 2025Amruthadhaare - ಮಧ್ಯರಾತ್ರಿ ಎದ್ದ ಗೌತಮ್ ನಿಗೂಢ ನಡೆ- ಯಾರ ಫೋನದು? ಕಾರಿನ ಒಳಗೆ ನಡೆದಿದ್ದೇನು?
ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದೆ. ಮಗಳ ಕಿಡ್ನ್ಯಾಪ್ ವಿಷಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ದೂರವಾಗಿದ್ದಾಳೆಂದು ಗೌತಮ್ ಭಾವಿಸಿದ್ದರೆ, ಗೌತಮ್‌ಗೆ ಮಧ್ಯರಾತ್ರಿ ಬಂದ ಕರೆಯೊಂದು ಹೊಸ ರಹಸ್ಯಕ್ಕೆ ಕಾರಣವಾಗಿದೆ. ಇವರಿಬ್ಬರ ಈ ಅಗಲಿಕೆಯ ಸತ್ಯವೇನು ಎನ್ನುವುದು ಸಸ್ಪೆನ್ಸ್ ಮೂಡಿಸಿದೆ.
Karnataka News Live 3 November 2025ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ
ನಟ ದರ್ಶನ್ ವಿರುದ್ಧ ದೋಷಾರೋಪ ನಿಗದಿ ದಿನವೇ ಎರಡು ಮಹತ್ವದ ಬೆಳವಣಿಗೆ, ಎರಡು ಘಟನೆಗಳು ದರ್ಶನ್ ಜೈಲುವಾಸದಲ್ಲಿ ಪ್ರಮುಖ ಘಟನೆಯಗಳಾಗಿದೆ. ಕೋರ್ಟ್ ಆವರಣದಲ್ಲಿ ನಡೆದ ಪ್ರಮುಖ ಬೆಳವಣಿಗೆ ಏನು?
Karnataka News Live 3 November 2025Kartik Purnima 2025 - ಪುಣ್ಯ ಸ್ನಾನ, ದಾನದ ಜೊತೆ ಕಾರ್ತಿಕ ಪೂರ್ಣಿಮೆ ದಿನ ಮರೆಯದೆ ಈ ವಸ್ತು ಮನೆಗೆ ತನ್ನಿ
Kartik Purnima : ಇದೇ ನವೆಂಬರ್ 5 ರಂದು ಕಾರ್ತಿಕ ಪೂರ್ಣಿಮೆ ಆಚರಿಸಲಾಗ್ತಿದೆ. ಈ ದಿನ ಸ್ನಾನ, ದಾನಕ್ಕೆ ಮಹತ್ವವಿದೆ. ಮನೆ ಬಾಗಿಲಿಗೆ ಲಕ್ಷ್ಮಿ ಬರಬೇಕು ಅಂದ್ರೆ ಈ ಎರಡು ಕೆಲ್ಸದ ಜೊತೆ ಮಹತ್ವದ ವಸ್ತುವೊಂದನ್ನು ಮನೆಗೆ ತನ್ನಿ.
Karnataka News Live 3 November 2025ಅರ್ಜುನ್ ಕಪೂರ್ ಬಳಿಕ 33 ವರ್ಷದ ಕೋಟ್ಯಾಧಿಪತಿ ಜೊತೆ 52ರ ಮಲೈಕಾ ಅರೋರಾ ಡೇಟಿಂಗ್!
ಮುಂಬೈನಲ್ಲಿ ನಡೆದ ಎನ್ರಿಕ್ ಇಗ್ಲೇಷಿಯಸ್ ಕನ್ಸರ್ಟ್ ನಲ್ಲಿ ಮಲೈಕಾ ಅರೋರಾ ಹ್ಯಾಂಡ್ಸಮ್ ಹಂಕ್ ಜೊತೆ ಕಾಣಿಸಿಕೊಂಡಿತ್ತು, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ನಿಜಕ್ಕೂ ಇವರಿಬ್ಬರು ಲವ್ ಮಾಡ್ತಿದ್ದಾರೆಯೇ? ಇಲ್ಲಿದೆ ಮಾಹಿತಿ.
Karnataka News Live 3 November 2025ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ
ರೇಣುಕಾಸ್ವಾಮಿ ಕೊಲೆ ಕೇಸ್, ಕೋರ್ಟ್‌ನಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ದ ಆರೋಪ ನಿಗದಿ ಮಾಡಲಾಗಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ನವೆಂಬರ್ 10ರಿಂದ ಆರಂಭಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
Karnataka News Live 3 November 2025ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ 6 ಆರೋಪಿಗಳು ಕೋರ್ಟ್‌ಗೆ ಹಾಜರ್
ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್, ಪವಿತ್ರ ಗೌಡ ಸೇರಿ 6 ಆರೋಪಿಗಳು ಕೋರ್ಟ್‌ಗೆ ಹಾಜರ್, ಭಾರಿ ಭಿಗಿ ಭದ್ರತೆಯೊಂದಿಗೆ 6 ಆರೋಪಿಗಳನ್ನು ಕೋರ್ಟ್‌ಗೆ ಕರೆ ತಂದಿದ್ದಾರೆ. ಕೋರ್ಟ್ ಸುತ್ತಲೂ ಭಿಗಿ ಭದ್ರತೆ ಕಲ್ಪಿಸಲಾಗಿದೆ.
Karnataka News Live 3 November 2025ಕೈಮುಗಿದು ಏರು, ಇದು ಕನ್ನಡದ ತೇರು - ಅಫಜಲಪುರ KKRTC ಬಸ್ ಸಂಪೂರ್ಣ ಕನ್ನಡಮಯ!
ಅಫಜಲಪುರ ಬಸ್ ಘಟಕದ ಚಾಲಕ ನಾಗಪ್ಪ ಉಪ್ಪಿನ, ಕಳೆದ 13 ವರ್ಷಗಳಿಂದ ತಮ್ಮ ಸ್ವಂತ ಖರ್ಚಿನಲ್ಲಿ ಸಾರಿಗೆ ಬಸ್ಸನ್ನು ಕನ್ನಡಮಯಗೊಳಿಸಿ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದಾರೆ. ಬಸ್ಸಿನ ಒಳಗೆ ನಾಡಿನ ಹಿರಿಮೆಯ ಬಗ್ಗೆ ಮಾಹಿತಿ ನೀಡಿ, ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.