- Home
- Entertainment
- TV Talk
- Bigg Boss ರಿಷಾ ಗೌಡ ಮನೆಯಲ್ಲಿ ಹೇಗೆ? ಗಿಲ್ಲಿ ಜೊತೆ ಫೈಟಿಂಗ್ ನಡುವೆಯೇ ಅಚ್ಚರಿಯ ವಿಷಯ ರಿವೀಲ್ ಮಾಡಿದ ಅಪ್ಪ
Bigg Boss ರಿಷಾ ಗೌಡ ಮನೆಯಲ್ಲಿ ಹೇಗೆ? ಗಿಲ್ಲಿ ಜೊತೆ ಫೈಟಿಂಗ್ ನಡುವೆಯೇ ಅಚ್ಚರಿಯ ವಿಷಯ ರಿವೀಲ್ ಮಾಡಿದ ಅಪ್ಪ
ಬಿಗ್ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಿಷಾ ಗೌಡ, ಸಹ ಸ್ಪರ್ಧಿ ಗಿಲ್ಲಿ ನಟನ ಮೇಲೆ ಕೈ ಮಾಡಿ ನಿಯಮ ಉಲ್ಲಂಘಿಸಿದ್ದಾರೆ. ಈ ಘಟನೆಯಿಂದ ಅವರು ಎಲಿಮಿನೇಟ್ ಆಗುವ ಸಾಧ್ಯತೆಗಳಿದ್ದು, ಇದರ ನಡುವೆಯೇ ಅವರ ತಂದೆ ಮಗಳ ನಿಜವಾದ ಸ್ವഭാവದ ಬಗ್ಗೆ ಮಾತನಾಡಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ
ಬಿಗ್ಬಾಸ್ (Bigg Boss)ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ರಿಷಾ ಗೌಡ. ಇವರು ತಮ್ಮದಲ್ಲದ ವಿಷಯಕ್ಕೆ ಹೆಚ್ಚಾಗಿ ತಲೆ ಹಾಕುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಇವರ ವಿರುದ್ಧ ಭಾರಿ ಟೀಕೆಗಳು ಕೇಳಿ ಬರುತ್ತಲೇ ಇವೆ.
ಎಲಿಮಿನೇಟ್ ಆಗ್ತಾರಾ ರಿಷಾ?
ಇದರ ನಡುವೆಯೇ, ಗಿಲ್ಲಿ ನಟ ಹಾಗೂ ರಿಷಾ ಗೌಡ ನಡುವೆ ಸಿಕ್ಕಾಪಟ್ಟೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ, ಗಿಲ್ಲಿಯನ್ನ ತಳ್ಳಿ, ಹಲ್ಲೆ ಮಾಡಿದ್ದಾರೆ ರಿಷಾ. ಈ ಮೂಲಕ ʻಬಿಗ್ ಬಾಸ್ʼ ನಿಯಮಗಳ ತಪ್ಪಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ‘ಬಿಗ್ ಬಾಸ್’ ನಿಯಮಗಳ ಅನುಸಾರ, ಯಾರೂ ಯಾರ ಮೇಲೂ ಕೈಮಾಡುವಂತಿಲ್ಲ. ಆದ್ದರಿಂದ ರಿಷಾ ಎಲಿಮಿನೇಟ್ ಆಗ್ತಾರಾ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
ರಿಷಾ ಗೌಡ ತಂದೆ ಹೇಳಿದ್ದೇನು?
ಇದೀಗ ರಿಷಾ ಗೌಡ ಅವರ ಅಪ್ಪ, ಮಗಳ ಬಗ್ಗೆ ನೀಡಿರುವ ಸಂದರ್ಶನವೊಂದು ವೈರಲ್ ಆಗುತ್ತಿದೆ. ಐವಿಆರ್ ಮೀಡಿಯಕ್ಕೆ ನೀಡಿರುವ ಸಂದರ್ಶನದಲ್ಲಿ ರಿಷಾ ತಂದೆ, ನಮ್ಮ ಮಗಳು ಮನೆಯಲ್ಲಿಯೂ ಹಾಗೆಯೇ, ಅವಳು ಹೇಳಿದಂತೆ ಆಗಬೇಕು. ಅವಳು ಹೇಳಿದಂತೆ ಕೇಳಿದರೆ ಖುಷಿಯಿಂದ ಇರುತ್ತಾಳೆ ಎಂದಿದ್ದಾರೆ.
ಹೇಗೋ ಹಾಗೆ
ಅವಳು ನಿಜವಾಗಿಯೂ ಹೇಗಿದ್ದಾಳೋ, ಹಾಗೆಯೇ ಬಿಗ್ಬಾಸ್ನಲ್ಲಿಯೂ ಆಡುತ್ತಿದ್ದಾಳೆ. ನಮಗೂ ವಯಸ್ಸಾಗಿದೆ. ಅವಳು ಹೇಳಿದಂತೆ ಕೇಳಬೇಕಿದೆ ಎಂದಿದ್ದಾರೆ ರಿಷಾ ತಂದೆ.
ಗಿಲ್ಲಿ ನಟನ ಕುರಿತು
ಇದೇ ವೇಳೆ ಗಿಲ್ಲಿ ನಟ ಎಲ್ಲಾ ಸಂದರ್ಭದಲ್ಲಿಯೂ ತಮಾಷೆ ಮಾಡುವುದು ಸರಿಯಲ್ಲ. ಸೀರಿಯಸ್ ವಿಷಯ ಬಂದಾಗ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ಅದ್ಯಾಕೋ ಸರಿ ಕಾಣುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.
ಸ್ನಾನದ ವಿಷ್ಯಕ್ಕೆ ಗಲಾಟೆ
ಅಂದಹಾಗೆ, ಗಿಲ್ಲಿ ಮತ್ತು ರಿಷಾ ನಡುವೆ ಜಗಳ ನಡೆದದ್ದು ಸ್ನಾನದ ವಿಷ್ಯದಲ್ಲಿ. ಸ್ನಾನದ ವಿಷಯಕ್ಕೆ ಇವರಿಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಒಂದ ಹಂತದಲ್ಲಿ ಗಿಲ್ಲಿ ನಟ, ರಿಷಾ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಗಳನ್ನೆಲ್ಲಾ ತಂದು ಬಾತ್‌ರೂಮ್ ಏರಿಯಾಗೆ ಹಾಕಿ ಮತ್ತಷ್ಟು ಕಿಚ್ಚು ಹೊತ್ತಿಸಿದರು. ಈ ಸಂದರ್ಭದಲ್ಲಿ ರಿಷಾ ಗಿಲ್ಲಿಗೆ ಹೊಡೆದಿದ್ದಷ್ಟೇ ಅಲ್ಲ, ಗಿಲ್ಲಿನ ರಿಷಾ ಜೋರಾಗಿ ತಳ್ಳಿದ್ದಾರೆ ಕೂಡ.