- Home
- Entertainment
- TV Talk
- Amruthadhaare: ಮಧ್ಯರಾತ್ರಿ ಎದ್ದ ಗೌತಮ್ ನಿಗೂಢ ನಡೆ- ಯಾರ ಫೋನದು? ಕಾರಿನ ಒಳಗೆ ನಡೆದಿದ್ದೇನು?
Amruthadhaare: ಮಧ್ಯರಾತ್ರಿ ಎದ್ದ ಗೌತಮ್ ನಿಗೂಢ ನಡೆ- ಯಾರ ಫೋನದು? ಕಾರಿನ ಒಳಗೆ ನಡೆದಿದ್ದೇನು?
ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದೆ. ಮಗಳ ಕಿಡ್ನ್ಯಾಪ್ ವಿಷಯ ಮುಚ್ಚಿಟ್ಟಿದ್ದಕ್ಕೆ ಭೂಮಿಕಾ ದೂರವಾಗಿದ್ದಾಳೆಂದು ಗೌತಮ್ ಭಾವಿಸಿದ್ದರೆ, ಗೌತಮ್‌ಗೆ ಮಧ್ಯರಾತ್ರಿ ಬಂದ ಕರೆಯೊಂದು ಹೊಸ ರಹಸ್ಯಕ್ಕೆ ಕಾರಣವಾಗಿದೆ. ಇವರಿಬ್ಬರ ಈ ಅಗಲಿಕೆಯ ಸತ್ಯವೇನು ಎನ್ನುವುದು ಸಸ್ಪೆನ್ಸ್ ಮೂಡಿಸಿದೆ.

ಕುತೂಹಲದ ತಿರುವು
ಅಮೃತಧಾರೆ (Amruthadhaare) ಇದೀಗ ಯಾರೂ ಊಹಿಸದ ತಿರುವಿನತ್ತ ಸಾಗುತ್ತಿದೆ. ಗೌತಮ್ನಿಂದ ಭೂಮಿಕಾ ದೂರ ಇರುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವ ಹಿಂದಿರೋ ಕಹಿ ಸತ್ಯ ಬೇರೆಯದ್ದೇ ಇದ್ದು, ಅದು ಗೌತಮ್‌ಗೆ ತಿಳಿದಿಲ್ಲ. ಕಿಡ್ನ್ಯಾಪ್ ಆಗಿರೋ ಮಗಳ ವಿಷಯ ಮುಚ್ಚಿಟ್ಟಿರುವುದಕ್ಕೆ ಭೂಮಿಕಾ ಸಿಟ್ಟು ಮಾಡಿಕೊಂಡಿದ್ದಾಳೆ ಎಂದುಕೊಂಡಿದ್ದಾನೆ.
ನಿಗೂಢ ನಡೆ
ಇದರ ನಡುವೆಯೇ ಇದೀಗ ನಿಗೂಢ ಘಟನೆ ನಡೆದಿದೆ. ಅದೇನೆಂದರೆ, ಮಧ್ಯರಾತ್ರಿ ಗೌತಮ್‌ಗೆ ಕರೆ ಬಂದಿದೆ. ಅದನ್ನು ರಿಸೀವ್ ಮಾಡುತ್ತಲೇ ಮಗಳನ್ನು ಮಲಗಿಸಿ ಹೊರಕ್ಕೆ ಹೋಗಿದ್ದಾನೆ.
ನಡುರಾತ್ರಿ ಗೌತಮ್...
ಆ ನಡುರಾತ್ರಿಯಲ್ಲಿ ಕಾರಿನ ಒಳಗೆ ಹೋದ ಗೌತಮ್ ಕಂಪ್ಯೂಟರ್ ಆನ್ ಮಾಡಿಕೊಂಡು ಫೋನಿನಲ್ಲಿಯೇ ಮಾತನಾಡುತ್ತಾ ಏನೋ ನಿಗೂಢ ಕೆಲಸ ಮಾಡಿದ್ದಾನೆ. ಅದೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಮಗಳ ಸತ್ಯ
ಇದೇ ಹೊತ್ತಿನಲ್ಲಿ ವಾಪಸ್ ಮನೆಗೆ ಬಂದ ಗೌತಮ್, ಭೂಮಿಕಾ ಇರುವ ಮನೆಯನ್ನು ನೋಡಿ ನಿಮಗೆ ಮಗಳ ಬಗ್ಗೆ ಸತ್ಯ ಮುಚ್ಚಿಟ್ಟಿರುವುದಕ್ಕೆ ಕೋಪ ಬಂದಿದೆ ಎನ್ನುವುದು ತಿಳಿದಿದೆ. ಮಗಳನ್ನು ಆದಷ್ಟು ಬೇಗ ಹುಡುಕಿ ನಿಮ್ಮ ಕೋಪ ಕಡಿಮೆ ಮಾಡುತ್ತೇನೆ ಎಂದಿದ್ದಾನೆ.
ಭೂಮಿಕಾ ಹೇಳಿದ್ದೇನು?
ಆದರೆ, ನಡುರಾತ್ರಿ ಎದ್ದಿರೋ ಭೂಮಿಕಾ ನೀವು ಚೆನ್ನಾಗಿ ಇರಬೇಕು ಎಂದರೆ ನಾನು ಈ ನಿರ್ಧಾರ ತೆಗೆದುಕೊಳ್ಳಲೇಬೇಕು. ನಿಮಗೆ ಇದರಿಂದ ಎಷ್ಟು ನೋವಾಗಿದೆ ಎನ್ನುವುದು ನನಗೆ ಗೊತ್ತಿದೆ ಎಂದಿದ್ದಾಳೆ.
ಎಲ್ಲವೂ ಸಸ್ಪೆನ್ಸ್
ಒಟ್ಟಿನಲ್ಲಿ ಇಬ್ಬರೂ ಸಿಕ್ಕಾಪಟ್ಟೆ ಪ್ರೀತಿಸ್ತಾ ಇದ್ದರೂ ಸಂದರ್ಭಕ್ಕೆ ಕಟ್ಟುಬಿದ್ದು ದೂರದೂರವಿದ್ದಾರೆ. ಇದರ ನಡುವೆಯೇ ಭೂಮಿಕಾ ಮಾತು ಹಾಗೂ ಗೌತಮ್ನ ಈ ನಡೆ ಎಲ್ಲವೂ ಸಸ್ಪೆನ್ಸ್ ಆಗಿಯೇ ವೀಕ್ಷಕರನ್ನು ಕುತೂಹಲಕ್ಕೆ ಎಡೆ ಮಾಡಿಕೊಡುತ್ತಿದೆ.