ಕಾಂತಾರಾ 1 ಭಾರಿ ದುಡ್ಡು ಮಾಡಿದೆಯಂತೆ, ಬಿಡುವು ಮಾಡಿ ಸಿನ್ಮಾ ನೋಡ್ತೇನೆ ಎಂದ ಸಿದ್ದರಾಮಯ್ಯ, ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂತಾರಾ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ನೋಡುತ್ತೇನೆ ಎಂದಿದ್ದಾರೆ. 

ಮೈಸೂರು (ನ.03) ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರಾ ಚಾಪ್ಟರ್ 1 ಸಿನಿಮಾ ಹಲವು ದಾಖಲೆ ಬರೆದಿದೆ. 800 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ದೇಶ ವಿದೇಶಗಳಲ್ಲಿ ಕಾಂತಾರಾ 1 ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 2018 ಮತ್ತು 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂತಾರಾ ಚಾಪ್ಟರ್ 1 ಸಿನಿಮಾ ನೋಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯದ ಅಭಾವದಿಂದ ಕಾಂತಾರ ಸಿನಿಮಾ ಇನ್ನೂ ನೋಡಲು ಸಾಧ್ಯವಾಗಿಲ್ಲ. ಕಾಂತಾರಾ ಸಿನಿಮಾ ಚೆನ್ನಾಗಿದೆ ಅಂತ ಹೇಳುತ್ತಿದ್ದಾರೆ. ಜೊತೆಗೆ ಬಹಳ ದುಡ್ಡೂ ಕೂಡ ಗಳಿಸಿಸಿದೆಯಂತೆ. ಸಮಾಜದ ಮೇಲೆ ಪ್ರಭಾವ ಬೀರುತ್ತಿದೆ ಎಂದಿದ್ದಾರೆ. ಸಮಯ ಮಾಡಿಕೊಂಡು ಕಾಂತಾರಾ 1 ಸಿನಿಮಾ ನೋಡಿಯೋ ನೋಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ

ಹಿಂದಿನ ಸರ್ಕಾರದವರು ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಿಲ್ಲ. ನಾವು ಎರಡು ವರ್ಷ ವಿಳಂಬ ಮಾಡಿದ್ದೇವು. ಕೆಲವೇ ದಿನಗಳಲ್ಲಿ ಶೀಘ್ರವಾಗಿ 2020 ಮತ್ತು 2021 ನೇ ಚಲನ ಚಿತ್ರ ಪ್ರಶಸ್ತಿ ಪ್ರದಾನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೂ ಮುಂದೆ ಆಯಾ ಆಯಾ ವರ್ಷದ್ದು ವರ್ಷವೇ ಪ್ರಶಸ್ತಿ ಪ್ರದಾನ ಮಾಡಿಯೆ ಮಾಡುತ್ತೇವೆ. ಆಯಾ ವರ್ಷದ ಪ್ರಶಸ್ತಿ ಪ್ರದಾನ ಆಯಾ ವರ್ಷವೇ ಮಾಡಿದರೆ ಪ್ರಶಸ್ತಿ ಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಪ್ರಶಸ್ತಿ ಗೆ ಅರ್ಥ ಬರಲ್ಲ. ಸೂಕ್ತ ಸಮಯದಲ್ಲಿ ಪ್ರಶಸ್ತಿ ನೀಡಿದರೆ ಅದಕ್ಕೆ ಗೌರವ ಹಾಗೂ ಬೆಲೆ. ಪ್ರಶಸ್ತಿ ಪ್ರದಾನ ಆದ ಮೇಲೆ ನನ್ನ ಮಾತು ಯಾರು ಕೇಳದೆ ಹೋಗಬಹುದು. ಹೀಗಾಗಿ ಮೊದಲು ನಾನು ಭಾಷಣ ಮಾಡಿ ನಂತರ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ನಾನು ಪ್ರತಿ ದಿನ ಸಿನಿಮಾ ನೋಡುತ್ತಿದ್ದೆ

ಮೊದಲು ಕಡಿಮೆ ಸಂಖ್ಯೆಯ ನಟ, ನಟಿ, ನಿರ್ದೇಶಕರು, ನಿರ್ಮಾಪಕರು ಇದ್ದರು. ಈ ವೇಳೆ ಸಿನಿಮಾ ಬಿಡುಗಡೆ ಕೂಡ ಕಡಿಮೆ ಇರುತಿತ್ತು. ಹೀಗಾಗಿ ಬಿಡುಗಡೆಯಾಗುತ್ತಿದ್ದ ಬಹುತೇಕ ಸಿನಿಮಾಗಳನ್ನು ನೋಡುತ್ತಿದ್ದೇವು. ನಾನು ವಿದ್ಯಾರ್ಥಿಯಾಗಿದ್ದಾಗ ಪ್ರತಿ ದಿನ ಸಿನಿಮಾ ನೋಡುತ್ತಿದ್ದೆ. ಆದರೆ ಈಗ ಸಿನಿಮಾ ಹೆಚ್ಚಾಗಿದೆ. ಪ್ರತಿ ದಿನ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹೀಗಾಗಿ ನಾನು ಸಿನಿಮಾ ನೋಡುವುದನ್ನೇ ಬಿಟ್ಟೆ. ಮೌಲ್ಯಯುತ, ಸಾಮಾಜಿಕ ಕಳಕಳಿ ಸಿನಿಮಾ ಕಡಮೆ ಆಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುಬ್ಬಯ್ಯ ನಾಯ್ಡು ಪ್ರಶಸ್ತಿ

  • ರಾಘವೇಂದ್ರ ರಾಜಕುಮಾರ್.

ಅತ್ಯುತ್ತಮ ನಟಿ

  • ಮೇಘನಾ ರಾಜ್

ಅತ್ಯುತ್ತಮ ಪೋಷಕ ನಟ,

  • ಕೆ.ಎಸ್ ಅಶ್ವಥ್ ಪ್ರಶಸ್ತಿ
  • ಬಾಲಾಜಿ ಮನೋಹರ್

ಅತ್ಯುತ್ತಮ ಪೋಷಕ ನಟಿ

  • ವೀಣಾ ಸುಂದರ್

ಅತ್ಯುತ್ತಮ ಕಥೆ

  • ಹರೀಶ್ ಎಸ್.

ಅತ್ಯುತ್ತಮ ಚಿತ್ರ ಕಥೆ.

  • ಪಿ.ಶೇಷಾದ್ರಿ.

ಅತ್ಯುತ್ತಮ ಸಂಭಾಷಣೆ

  • ಶರೀಫ್ ಜೋಷಿ
  • ಅತ್ಯುತ್ತಮ ಛಾಯಾಗ್ರಹಣ

ನವೀನ್ ಕುಮಾರ್.ಐ

ಅತ್ಯುತ್ತಮ ಸಂಗೀತ ನಿರ್ದೇಶನ

  • ರವಿ ಬಸ್ರೂರ್

ಅತ್ಯುತ್ತಮ ಸಂಕಲನ

  • ಸುರೇಶ್ ಆರ್ಮುಗಂ

ಅತ್ಯುತ್ತಮ ಬಾಲ ನಟ

  • ಮಾಸ್ಟರ್ ಅ್ಯರೆನ್

ಅತ್ಯುತ್ತಮ ಬಾಲ ನಟಿ

ಬೇಬಿ ಸಿಂಚನ

ಅತ್ಯುತ್ತಮ ಕಲಾ ನಿರ್ದೇಶನ

ಶಿವಕುಮಾರ್ ಜೆ

ಅತ್ಯುತ್ತಮ ಗೀತರಚನೆ

ಡಾ.ಬರಗೂರು ರಾಮಚಂದ್ರಪ್ಪ

ಅತ್ಯುತ್ತಮ ಹಿನ್ನಲೆ ಗಾಯಕ

ಸಿದ್ಧಾರ್ಥ ಬೆಳ್ಮಣ್ಣು

ಅತ್ಯುತ್ತಮ ಹಿನ್ನೆಲೆಗಾಯಕಿ

ಕಲಾವತಿ ದಯಾನಂದ

ತೀರ್ಪುಗಾರರ ವಿಶೇಷ ಪ್ರಶಸ್ತಿ

ಅನಂತರಾಯಪ್ಪ

ತೀರ್ಪುಗಾರರ ವಿಶೇಷ ಪ್ರಶಸ್ತಿ

ವಿಭಾಗ: ನಿರ್ಮಾಣ ನಿರ್ವಾಹಕ

ವಿ‌.ಥಾಮಸ್.