'ಸೀತಾರಾಮ' ಖ್ಯಾತಿಯ ನಟ ಗಗನ್ ಚಿನ್ನಪ್ಪ ಅವರು ಕೋಪ ನಿಯಂತ್ರಣಕ್ಕಾಗಿ ಯೋಗ ಮಾಡಲು ಹೋಗಿ ಪೇಚಿಗೆ ಸಿಲುಕಿದ ತಮಾಷೆಯ ವಿಡಿಯೋ ಹಂಚಿಕೊಂಡಿದ್ದಾರೆ. ಯೋಗ ಮ್ಯಾಟ್ ಸರಿಪಡಿಸಲಾಗದೆ ಕೋಪಗೊಂಡು ಒದ್ದಿರುವ ಈ ವಿಡಿಯೋ ವೈರಲ್ ಆಗಿದೆ. ಈ ಲೇಖನವು ಅವರ ನಟನಾ ವೃತ್ತಿಜೀವನದ ಬಗ್ಗೆಯೂ ಬೆಳಕು ಚೆಲ್ಲುತ್ತದೆ.

ಸೀತಾರಾಮ ಸೀರಿಯಲ್​ (Seetha Rama Serial) ಮುಗಿದು ಹಲವು ತಿಂಗಳುಗಳೇ ಕಳೆದರೂ, ರಾಮ್​ ಪಾತ್ರಧಾರಿಯಾಗಿರುವ ಗಗನ್​ ಚಿನ್ನಪ್ಪ ಅವರು ಇಂದಿಗೂ ರಾಮ್​ ಎಂದೇ ಜನರು ಗುರುತಿಸುತ್ತಿದ್ದಾರೆ. ಅತ್ತ ಸೀತಾ ಪಾತ್ರಧಾರಿಯಾಗಿರುವ ವೈಷ್ಣವಿ ಗೌಡ ಅವರು ಮದುವೆಯಾಗಿ ಲೈಫ್​ ಎಂಜಾಯ್ ಮಾಡುತ್ತಿದ್ದರೆ, ಇತ್ತ ರಾಮ್​ ಪಾತ್ರಧಾರಿ ಗಗನ್​ ಅವರು ವಿವಿಧ ರೀತಿಯ ರೀಲ್ಸ್​ ಮಾಡುತ್ತಾ, ಜನರನ್ನು ನಕ್ಕು ನಗಿಸುತ್ತಿದ್ದಾರೆ. ಈ ಹಿಂದೆಯೂ ಹಲವು ರೀತಿಯ ರೀಲ್ಸ್​ ಮಾಡಿ ತಮಾಷೆ ಮಾಡಿದ್ದರು ಗಗನ್​.

ಕೋಪ ನಿಯಂತ್ರಣ

ಈಗ ಅವರು ಕೋಪ ನಿಯಂತ್ರಣಕ್ಕೆಂದು ಯೋಗಾಭ್ಯಾಸ ಮಾಡಲು ತಯಾರಿ ನಡೆಸಿರುವ ತಯಾರಿಯ ಬಗ್ಗೆ ತಮಾಷೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಟಿವಿಯಲ್ಲಿ ಯೋಗಾಭ್ಯಾಸದ ತರಬೇತಿ ಇರುವ ದೃಶ್ಯವನ್ನು ಕಾಣಬಹುದು. ಬಳಿಕ ಗಗನ್​ ಅವರು ಯೋಗದ ಮ್ಯಾಟ್​ ತಂದು ರೆಡಿಯಾಗಲು ಹೊರಟಿದ್ದಾರೆ. ಆದರೆ ಆ ಮ್ಯಾಟ್​ ಸುರುಳಿಯಾಗಿರುವ ಇರುವ ಕಾರಣ, ಏನು ಮಾಡಿದ್ರೂ ಸರಿಯಾಗಿ ಫಿಕ್ಸ್​ ಆಗಲಿಲ್ಲ. ಹಲವು ಬಾರಿ ಪ್ರಯತ್ನಪಟ್ಟರೂ ಅದು ಸಾಧ್ಯವಾಗದಿದ್ದ ಕಾರಣ, ಕೋಪ ತಡೆದುಕೊಳ್ಳಲಾಗದೇ ಅದನ್ನು ಝಾಡಿಸಿ ಒದ್ದಿದ್ದಾರೆ ಗಗನ್​. ಹೀಗೆ ಕೋಪ ನಿಯಂತ್ರಣಕ್ಕೆ ಯೋಗದ ಪ್ರಾಕ್ಟೀಸ್​ ಮಾಡುವ ಪೂರ್ವದಲ್ಲಿಯೇ ಹೀಗೆ ಆಯ್ತು ಎಂದು ಹೇಳಿದ್ದಾರೆ.

ನಟನ ಕುರಿತು...

ಇನ್ನು ರಾಮ್​ ಪಾತ್ರಧಾರಿ ಗಗನ್​ ಚಿನ್ನಪ್ಪ ಕುರಿತು ಹೇಳುವುದಾದರೆ, ಕೊಡಗು ಮೂಲದ ಗಗನ್​, ಬಣ್ಣ ಲೋಕಕ್ಕೆ ಎಂಟ್ರಿ ಕೊಡುವ ಮೊದಲದು ಎರಡು ವರ್ಷ ಓಮನ್‌ ದೇಶದಲ್ಲಿ ಅದಾದ ಬಳಿಕ ಒಂದು ವರ್ಷ ಅಬುದಾಬಿಯಲ್ಲಿ ಕೆಲಸ ಮಾಡಿದ್ದರು. ಶಿಕ್ಷಣ ಮುಗಿಸಿದ ಬಳಿಕ ಕೆಲಸಕ್ಕೆ ಸೇರಿದ್ದವರು. ವಿದೇಶಗಳಲ್ಲಿ ಕೆಲಸ ಮಾಡಿದ ಸಂದರ್ಭದಲ್ಲಿ ಅವರ ಒಂದು ಫೋಟೋಶೂಟ್​ ಅವರನ್ನು ಬಣ್ಣದ ಲೋಕಕ್ಕೆ ಬರುವಂತೆ ಮಾಡಿತು. 2014 ರಲ್ಲಿ ಫೋಟೋಶೂಟ್​ ಮಾಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದರು. ಆಗ ಅವರಿಗೆ ಚಿತ್ರವೊಂದಕ್ಕೆ ಆಫರ್​ ಬಂದಿತ್ತು. ಬಣ್ಣದ ಲೋಕದ ಸೆಳೆತದಿಂದ ಅಬುದಾಬಿ ಬಿಟ್ಟು ಬೆಂಗಳೂರಿಗೆ ಬಂದರು.

ರಿಲೀಸ್ ಆಗದ ಚಿತ್ರ

ಚಿತ್ರದಲ್ಲಿ ನಟಿಸಿದರೂ ಅದು ರಿಲೀಸ್​ ಆಗಲೇ ಇಲ್ಲ. ಸೀರಿಯಲ್​ಗಳಲ್ಲಿ ಆಡಿಷನ್​ ಕೊಟ್ಟರೂ ಭಾಷೆ ಸರಿಯಿಲ್ಲವೆಂದು ರಿಜೆಸ್ಟ್​ ಆಗುತ್ತಿದ್ದಂತೆ. ನಂತರ ಬಣ್ಣದ ಲೋಕ ಬೇಡ ಎಂದು ಮಾರ್ಕೆಟಿಂಗ್‌ ಮ್ಯಾನೇಜರ್‌ ಆಗಿ ಕೆಲಸ ಶುರು ಮಾಡಿದರು. ಆದರೆ ಬಣ್ಣದ ಲೋಕದ ಸೆಳೆತ ಇದ್ದೇ ಇದ್ದು. ಮಂಗಳಗೌರಿ ಮದುವೆ ಸೀರಿಯಲ್‌ನಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿಯಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮಿನಿ ಬಿಗ್ ಬಾಸ್​ಗೂ ಎಂಟ್ರಿ ಕೊಟ್ಟು ಈಗ ಸೀತಾರಾಮ ಸೀರಿಯಲ್​ ಮೂಲಕ ಕನ್ನಡ ಧಾರಾವಾಹಿ ಲೋಕದಲ್ಲಿ ಪೂರ್ಣಪ್ರಮಾಣದ ನಾಯಕರಾಗಿ ಮಿಂಚುತ್ತಿದ್ದಾರೆ. ತೆಲುಗು ಕಿರುತೆರೆಗೂ ಕಾಲಿಟ್ಟಿರೋ ಗಗನ್​ ಅವರು, ‘ಕೃಷ್ಣ ಮುಕುಂದ ಮುರಾರಿ’ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವವರು ಮುರಾರಿ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಪ್ರೇರಣಾ ಕಂಬಮ್, ಯಶ್ಮಿ ಗೌಡ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಗಗನ್​ ಚಿನ್ನಪ್ಪ ಅವರ ವಿಡಿಯೋ ನೋಡಲು ಇದರ ಮೇಲೆ ಕ್ಲಿಕ್​ ಮಾಡಿ