Kartik Purnima : ಇದೇ ನವೆಂಬರ್ 5 ರಂದು ಕಾರ್ತಿಕ ಪೂರ್ಣಿಮೆ ಆಚರಿಸಲಾಗ್ತಿದೆ. ಈ ದಿನ ಸ್ನಾನ, ದಾನಕ್ಕೆ ಮಹತ್ವವಿದೆ. ಮನೆ ಬಾಗಿಲಿಗೆ ಲಕ್ಷ್ಮಿ ಬರಬೇಕು ಅಂದ್ರೆ ಈ ಎರಡು ಕೆಲ್ಸದ ಜೊತೆ ಮಹತ್ವದ ವಸ್ತುವೊಂದನ್ನು ಮನೆಗೆ ತನ್ನಿ.
ವರ್ಷದ ಅತ್ಯಂತ ಶುಭ ಮತ್ತು ಪವಿತ್ರ ದಿನಗಳಲ್ಲಿ ಕಾರ್ತಿಕ ಪೂರ್ಣಿಮೆ (Karthika Purnima) ಕೂಡ ಒಂದು. ಈ ದಿನದಂದು ವಿಷ್ಣುವಿನ ಪೂಜೆ ನಡೆಯುತ್ತದೆ. ಪವಿತ್ರ ನದಿ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳು ಕಳೆದು, ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ಗಂಗೆ ಸ್ನಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಸ್ನಾನದ ನಂತ್ರ ತಾಯಿ ಲಕ್ಷ್ಮಿ ಹಾಗೂ ವಿಷ್ಣುವಿನ ಪೂಜೆ ಮಾಡಬೇಕು. ಸ್ನಾನ, ಪೂಜೆ ನಂತ್ರ ದಾನಕ್ಕೂ ವಿಶೇಷ ಮಹತ್ವವಿದೆ. ಕಾರ್ತಿಕ ಪೂರ್ಣಿಮೆ ದಿನ ಮಾಡುವ ದಾನದಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಈ ದಿನ ಕೆಲ ವಸ್ತುಗಳನ್ನು ಮನೆಗೆ ತರುವುದ್ರಿಂದ ಲಾಭವಿದೆ. ಸಂಪತ್ತು, ಸಂತೋಷ, ಸಮೃದ್ಧಿ ನಿಮ್ಮದಾಗುತ್ತದೆ. ಅದೃಷ್ಟದ ಬಾಗಿಲು ತೆರೆಯುತ್ತದೆ.
ಕಾರ್ತಿಕ ಪೂರ್ಣಿಮೆ ಯಾವಾಗ? :
ಈ ವರ್ಷ ಕಾರ್ತಿಕ ಪೂರ್ಣಿಮೆಯನ್ನು ನವೆಂಬರ್ 5, 2025 ರಂದು ಬುಧವಾರ ಆಚರಿಸಲಾಗುತ್ತಿದೆ. ಈ ದಿನ “ಓಂ ನಮೋ ನಾರಾಯಣಾಯ” ಅಥವಾ “ಓಂ ಲಕ್ಷ್ಮಿಯೇ ನಮಃʼʼ ಮಂತ್ರವನ್ನು ಪಠಿಸಿ. ಅಲ್ಲದೆ ಮಣ್ಣಿನ ವಸ್ತುಗಳನ್ನು ಮನೆಗೆ ತನ್ನಿ. ಜೇಡಿಮಣ್ಣು ಭೂಮಿಯ ಅಂಶವನ್ನು ಸೂಚಿಸುತ್ತದೆ. ಸ್ಥಿರತೆ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಇದು ನೀಡುತ್ತದೆ.
ಈ ದಿನಾಂಕದಂದು ಹುಟ್ಟಿದವರಿಗೆ ನವೆಂಬರ್‌ನಲ್ಲಿ ಮುಟ್ಟಿದ್ದೆಲ್ಲಾ ಬಂಗಾರ
ಕಾರ್ತಿಕ ಪೂರ್ಣಿಮೆ ದಿನ ಈ ವಸ್ತುಗಳನ್ನು ಮನೆಗೆ ತನ್ನಿ :
ಮಣ್ಣಿನ ಪಾತ್ರೆ : ಕಾರ್ತಿಕ ಪೂರ್ಣಿಮೆಯಂದು ಮನೆಗೆ ಮಣ್ಣಿನ ಪಾತ್ರೆಯನ್ನು ತರಬೇಕು. ಮನೆಗೆ ತಂದ ಮಣ್ಣಿನ ಪಾತ್ರೆಗೆ ಶುದ್ಧ ನೀರನ್ನು ತುಂಬಿಸಿ, ಈಶಾನ್ಯ ಮೂಲೆಯಲ್ಲಿ ಇಡಿ. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಮನೆಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಜೊತೆಗೆ ಶಾಮತಿ – ಸಂತೋಷವನ್ನು ಕಾಪಾಡುತ್ತದೆ.
ಮಣ್ಣಿನ ದೀಪಗಳು : ನೀವು ಕಾರ್ತಿಕ ಪೂರ್ಣಿಮೆ ದಿನ ಮಣ್ಣಿನ ಪಾತ್ರೆ ಮಾತ್ರವಲ್ಲ ಮಣ್ಣಿನ ದೀಪವನ್ನು ಕೂಡ ಮನೆಗೆ ತರಬಹುದು. ಇದು ಮನೆಗೆ ಬೆಳಕು ನೀಡುತ್ತದೆ. ಅದೃಷ್ಟ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ನೀವು ಈ ದಿನ ತಂದ ಮಣ್ಣಿನ ದೀಪಕ್ಕೆ ತುಪ್ಪವನ್ನು ಹಾಕಿ, ಸಂಜೆ ತುಳಸಿ ಗಿಡದ ಮುಂದೆ ಹಚ್ಚಬೇಕು. ಇದರಿಂದ ಕುಟುಂಬದಲ್ಲಿ ಅದೃಷ್ಟ ಹೆಚ್ಚಾಗುತ್ತದೆ.
ಮಣ್ಣಿನ ಆಟಿಕೆಗಳು : ಮಣ್ಣಿನಿಂದ ಮಾಡಿದ ಆಟಿಕೆ, ಮೂರ್ತಿಗಳನ್ನು ನೀವು ಮನೆಗೆ ತರಬಹುದು. ಇದನ್ನು ಶುಭವೆಂದು ಪರಿಗಣಿಸಲಾಗಿದೆ. ಮನೆಯ ಉತ್ತರ ದಿಕ್ಕಿನ ಉತ್ತರ ದಿಕ್ಕಿನಲ್ಲಿ ಆಟಿಕೆಗಳನ್ನು ಇರಿಸಿ. ಹಾಗೆ ಮಾಡುವುದರಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ.
ಈ ದಿನಾಂಕದಲ್ಲಿ ಹುಟ್ಟಿದವರಿಗೆ 2026 ರಲ್ಲಿ ಅದೃಷ್ಟವೋ ಅದೃಷ್ಟ, ಬಂಪರ್ ಲಾಟರಿ
ಮಣ್ಣಿನ ಮಡಿಕೆ : ಕಾರ್ತಿಕ ಪೂರ್ಣಿಮೆ ದಿನ ನೀವು ಮಣ್ಣಿನ ಮಡಿಕೆಯನ್ನು ಮನೆಗೆ ತರಬಹುದು. ಮಡಿಕೆಯಲ್ಲಿ ಹಾಲು ಅಥವಾ ನೀರನ್ನು ಹಾಕಿ, ಕುಡಿಯಿರಿ. ಇದು ಮಂಗಳ ಗ್ರಹದ ದುಷ್ಪರಿಣಾಮಗಳನ್ನು ದೂರ ಮಾಡುತ್ತದೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ತರುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಧೈರ್ಯ, ಸಕಾರಾತ್ಮಕ ಚಿಂತನೆಯನ್ನು ಹೆಚ್ಚಿಸುತ್ತದೆ.
ಮಣ್ಣಿನ ಆನೆ : ಮಣ್ಣಿನ ಆನೆಯನ್ನು ತಂದು ಮನೆಯ ಉತ್ತರ ದಿಕ್ಕಿನಲ್ಲಿ ಇಡಿ. ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.
ಕಾರ್ತಿಕ ಪೂರ್ಣಿಮೆ ದಿನ ಈ ವಸ್ತುಗಳನ್ನು ದಾನ ಮಾಡಿ : ನೀವು ಕಾರ್ತಿಕ ಪೂರ್ಣಿಮೆ ದಿನ ಆಹಾರ ಧಾನ್ಯಗಳು, ಬಟ್ಟೆ ಅಥವಾ ಸಿಹಿತಿಂಡಿಗಳು, ಅಗತ್ಯವಿರುವವರಿಗೆ ಆಹಾರ, ದೀಪಗಳು, ಎಣ್ಣೆ ಅಥವಾ ತುಪ್ಪ, ತುಳಸಿ ಗಿಡ, ಲೋಹ ಅಥವಾ ಮಣ್ಣಿನ ಪಾತ್ರೆಗಳನ್ನು ದಾನ ಮಾಡಬೇಕು.
