11:06 PM (IST) Jul 02

Karnataka News Live 2nd july 2025 ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗ, ಬೇಡಿಕೆ ಡಬಲ್

ಹೆಚ್ಚು ಸುರಕ್ಷತೆ ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಜನಪ್ರಿಯ ಟೊಯೋಟಾ ಇನ್ನೋವಾ ಹೈಕ್ರಾಸ್ ಕಾರಿನ ಸುರಕ್ಷತಾ ರೇಟಿಂಗ್ ಬಹಿರಂಗವಾಗಿದೆ. ಈ ವರದಿ ಬಹಿರಂಗವಾಗುತ್ತಿದ್ದಂತೆ ಕಾರಿನ ಬೇಡಿಕೆ ಹೆಚ್ಚಾಗುತ್ತಿದೆ.

Read Full Story
10:50 PM (IST) Jul 02

Karnataka News Live 2nd july 2025 ರಕ್ಷಿಸಿದ ನಾಯಿ ಮರಿ ಕಚ್ಚಿ ಕಬಡ್ಡಿ ಪಟುವಿಗೆ ತೀವ್ರಗೊಂಡ ರೇಬಿಸ್, ನರಳಾಡಿ ಪ್ರಾಣಬಿಟ್ಟ ಬೃಿಜೇಶ್

ಒಂದು ತಿಂಗಳ ಮೋರಿಯಿಂದ ರಕ್ಷಿಸಿದ್ದ ನಾಯಿ ಮರಿಯನ್ನು ಕಚ್ಚಿ ರಾಜ್ಯ ಕಬಡ್ಡಿ ಪಟು ರೇಬಿಸ್‌ನಿಂದ ಮೃತಪಟ್ಟ ಘಟನೆ ನಡೆದಿದೆ. ಸಣ್ಣ ಹಲ್ಲಿನ ಗಾಯ ಎಂದು ಲಸಿಕೆ ಪಡೆಯದ ಕಬಡ್ಡಿ ಪಟು ಅಂತಿಮ ಕ್ಷಣದಲ್ಲಿ ನರಳಾಡಿ ಪ್ರಾಣ ಬಿಟ್ಟ ದುರಂತ ಘಟನೆ ನಡೆದಿದೆ.

Read Full Story
10:33 PM (IST) Jul 02

Karnataka News Live 2nd july 2025 Hassan Heart Attack Deaths - ಹಾಸನದಲ್ಲಿ ಹೃದಯಾಘಾತದಿಂದ ಮತ್ತೊಂದು ಸಾವು!

ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವುಗಳ ಸರಣಿ ಮುಂದುವರೆದಿದ್ದು, ಇತ್ತೀಚೆಗೆ ಸಂಪತ್ ಕುಮಾರ್ (53) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಳೆದ 42 ದಿನಗಳಲ್ಲಿ 28 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ నెలకొಂಡಿದೆ.
Read Full Story
10:08 PM (IST) Jul 02

Karnataka News Live 2nd july 2025 ರಾಯಚೂರು - ಅಪ್ರಾಪ್ತೆಗೆ ಲೈ*ಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ!

ಸಿಂಧನೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತೆಗೆ 7.5 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
Read Full Story
10:03 PM (IST) Jul 02

Karnataka News Live 2nd july 2025 ಕರ್ನಾಟಕದಲ್ಲಿ ಹೆಚ್ಚಾದ ಮಳೆ ಅಬ್ಬರ, ನಾಳೆ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ನಾಳೆ (ಜು.02) ರಾಜ್ಯದ 2 ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Read Full Story
09:55 PM (IST) Jul 02

Karnataka News Live 2nd july 2025 ಕೊಟ್ಟಿಯೂರು ಶಿವನ ದೇಗುಲದಲ್ಲಿ ನಟ ಜಗ್ಗೇಶ್​ - ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಇದರ ವಿಶೇಷತೆ ನೋಡಿ...

ಕೊಟ್ಟಿಯೂರು ದೇಗುಲಕ್ಕೆ ನಟ, ಸಂಸದ ಜಗ್ಗೇಶ್​ ಭೇಟಿ ನೀಡಿದ್ದಾರೆ. ವರ್ಷದಲ್ಲಿ 28 ದಿನ ಮಾತ್ರ ತೆರೆಯುವ ಈ ದೇವಾಲಯದ ವಿಶೇಷತೆ ಏನು?

Read Full Story
09:47 PM (IST) Jul 02

Karnataka News Live 2nd july 2025 Car Battery Care Tips - ಮಳೆಗಾಲದಲ್ಲಿ ಕಾರಿನ ಬ್ಯಾಟರಿ ಸೇಫ್ ಇರಲು ಇಷ್ಟು ಮಾಡಿ ಸಾಕು!

ಮಳೆಗಾಲದಲ್ಲಿ ಕಾರ್ ಬ್ಯಾಟರಿ ಮೇಂಟೆನೆನ್ಸ್ ಮುಖ್ಯ. ಬ್ಯಾಟರಿ ಕ್ಲೀನ್ ಮಾಡಿ, ಸರಿಯಾಗಿ ಫಿಕ್ಸ್ ಮಾಡಿ, ಕಾರನ್ನ ನೆರಳಲ್ಲಿ ಪಾರ್ಕ್ ಮಾಡಿ, ಆಗಾಗ್ಗೆ ಚೆಕ್ ಮಾಡಿ.

Read Full Story
09:33 PM (IST) Jul 02

Karnataka News Live 2nd july 2025 ಭಾರಿ ಮಳೆಯಿಂದ ಈ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ನಾಳೆ ರಜೆ ಘೋಷಣೆ

ರಾಜ್ಯದ ಕೆಲ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಕೆಲ ಜಿಲ್ಲೆಯ ತಾಲೂಕುಗಳ, ಹೋಬಳಿಗೆ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ

Read Full Story
09:25 PM (IST) Jul 02

Karnataka News Live 2nd july 2025 ಗಂಡ-ಮಕ್ಕಳ ವಿಷ್ಯದಲ್ಲಿ ಬಹುತೇಕ ಮಹಿಳೆಯರು ಮಾಡುತ್ತಿದ್ದಾರೆ ಈ ಬಹುದೊಡ್ಡ ತಪ್ಪು! ವೈದ್ಯೆ ಮಾತು ಕೇಳಿ...

ಬೇಡದ್ದೆಲ್ಲಾ ತಿನ್ನದಿದ್ದರೂ, ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದ್ದರೂ ಬಹುತೇಕ ಮಹಿಳೆಯರಿಗೆ ಅನಾರೋಗ್ಯ ಉಂಟಾಗಲು ಕಾರಣವೇನು? ಅವರು ಮಾಡ್ತಿರೋ ತಪ್ಪೇನು? ಖ್ಯಾತ ವೈದ್ಯೆ ಮಾತು ಕೇಳಿ...

Read Full Story
09:06 PM (IST) Jul 02

Karnataka News Live 2nd july 2025 ಪಾಕಿಸ್ತಾನಿಯರ ಯೂಟ್ಯೂಬ್, ಸೋಶಿಯಲ್ ಮೀಡಿಯಾ ನಿಷೇಧ ತೆರವು, ಹಲವರ ಆಕ್ರೋಶ

ಪೆಹಲ್ಗಾಂ ದಾಳಿ ಬಳಿಕ ಪಾಕಿಸ್ತಾನಿಯರ ಹಲವು ಯೂಟ್ಯೂಬ್, ಸೋಶಿಯಲ್ ಮೀಡಿಯಾ ಖಾತೆಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿತ್ತು. ಇದೀಗ ಈ ನಿಷೇಧ ತೆರವುಗೊಳಿಸಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story
08:16 PM (IST) Jul 02

Karnataka News Live 2nd july 2025 ನಮ್ಮ ಕಾಂಗ್ರೆಸ್ ಸೇರಿ 8 ಪಕ್ಷಗಳ ಮಾನ್ಯತೆ ರದ್ದುಗೊಳಿಸಲು ನೊಟೀಸ್ ಜಾರಿಗೊಳಿಸಿದ ಚುನಾವಣಾ ಆಯೋಗ!

ಬೆಂಗಳೂರು ನಗರ ಜಿಲ್ಲೆಯಲ್ಲಿ ನೋಂದಣಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸದ ನಮ್ಮ ಕಾಂಗ್ರೆಸ್ ಸೇರಿ 8 ರಾಜಕೀಯ ಪಕ್ಷಗಳನ್ನು ನೋಂದಣಿ ಪಟ್ಟಿಯಿಂದ ತೆಗೆದುಹಾಕಲು ಚುನಾವಣಾ ಆಯೋಗ ನಿರ್ಧರಿಸಿದೆ. ಜುಲೈ 18, 2025 ರಂದು ವಿಚಾರಣೆ ನಡೆಸಿ, ಪಕ್ಷಗಳಿಗೆ ತಮ್ಮ ಹೇಳಿಕೆ ದಾಖಲಿಸಲು ಅವಕಾಶ ನೀಡಲಾಗುವುದು.

Read Full Story
08:11 PM (IST) Jul 02

Karnataka News Live 2nd july 2025 ಅಲುಗಾಡುತ್ತಿದೆಯಾ ಐಟಿ ಕ್ಷೇತ್ರ? ಮೈಕ್ರೋಸಾಫ್ಟ್‌ನಲ್ಲಿ 9 ಸಾವಿರ ಉದ್ಯೋಗ ಕಡಿತ

ಮೈಕ್ರೋಸಾಫ್ಟ್‌ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವಾಗುತ್ತಿದೆ. ಈ ಬಾರಿ 9,000 ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ಇದೀಗ ಐಟಿ ಕ್ಷೇತ್ರದಲ್ಲಿ ಮತ್ತೆ ಆತಂಕ ಮನೆ ಮಾಡುತ್ತಿದೆ.

Read Full Story
07:49 PM (IST) Jul 02

Karnataka News Live 2nd july 2025 ಮಂಡ್ಯದಲ್ಲಿ ಒಂದೇ ಸೀರೆಗೆ ಕೊರಳೊಡ್ಡಿದ ತಾಯಿ-ಮಗಳು; ಡೆತ್ ನೋಟ್‌ನಲ್ಲಿ ಬಯಲಾಯ್ತು ಸತ್ಯ!

ಮಂಡ್ಯದಲ್ಲಿ ತಾಯಿಯೊಬ್ಬಳು 9 ವರ್ಷದ ಮಗಳನ್ನು ನೇಣು ಹಾಕಿ ಕೊಂದು, ತಾನೂ ಅದೇ ಸೀರೆಗೆ ಕೊರಳೊಡ್ಡಿ ಸಾವಿಗೆ ಶರಣಾದ ಘಟನೆ ನಡೆದಿದೆ. ಅವರ ಪಕ್ಕದಲ್ಲಿ ಸಿಕ್ಕಿದ ಡೆತ್ ನೋಟ್‌ನಲ್ಲಿ ಗಂಡನ ಕಿರುಕುಳದ ಬಗ್ಗೆ ಮಹಿಳೆ ಬರೆದಿಟ್ಟಿದ್ದಾಳೆ.

Read Full Story
07:45 PM (IST) Jul 02

Karnataka News Live 2nd july 2025 ನೂರಾರು ಪ್ರವಾಸಿಗರ ಕೈಬೀಸಿ ಸೆಳೆಯುತ್ತಿದೆ ಹಯಸಿಂಥ್ ಕಿಲ್ಲರ್ ಹೂವು!

ಕೊಡಗಿನ ಕುಶಾಲನಗರದ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡ ಹರಡಿ ಲಕ್ಷಾಂತರ ಹೂವುಗಳು ಅರಳಿವೆ. ಇದು ನೋಡುಗರನ್ನು ಆಕರ್ಷಿಸುತ್ತಿದ್ದರೂ, ನೀರಿನ ಗುಣಮಟ್ಟ ಹಾಳುಮಾಡುವ ಅಪಾಯಕಾರಿ ಗಿಡವಾಗಿದೆ.
Read Full Story
07:33 PM (IST) Jul 02

Karnataka News Live 2nd july 2025 ಬೀರ್ ಕುಡಿಯುತ್ತಲೇ ಆನ್‌ಲೈನ್ ವಿಚಾರಣೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ಭಾಗಿ - ವೀಡಿಯೋ

ಗುಜರಾತ್ ಹೈಕೋರ್ಟ್‌ನ ಆನ್‌ಲೈನ್ ವಿಚಾರಣೆಯಲ್ಲಿ ಹಿರಿಯ ವಕೀಲರೊಬ್ಬರು ಬಿಯರ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನ್ಯಾಯಾಲಯವು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.
Read Full Story
07:22 PM (IST) Jul 02

Karnataka News Live 2nd july 2025 ಸಿಂಗಲ್ಲಾಗಿದ್ದೀನಿ ಬಾ ಅಂತ, ಮನೆಗೆ ಕರೆಸಿಕೊಂಡು ಪ್ರೇಮಿಯ ಖಾಸಗಿ ಭಾಗ ಕತ್ತರಿಸಿ ಕಳಿಸಿದ ಪ್ರೇಯಸಿ!

ಉತ್ತರ ಪ್ರದೇಶದಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಯ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರೇಮಿಯನ್ನು ಕರೆಸಿಕೊಂಡ ಯುವತಿ, ಜಗಳದ ಬಳಿಕ ಈ ಕೃತ್ಯ ಎಸಗಿದ್ದಾಳೆ. ಗಂಟೆಗಳ ಕಾಲ ರಕ್ತಸ್ರಾವವಾಗಿದ್ದು, ಪ್ರೇಮಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
Read Full Story
07:13 PM (IST) Jul 02

Karnataka News Live 2nd july 2025 ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹುಟ್ಟುಹಬ್ಬಕ್ಕೆ ಸರ್ಪ್ರೈಸ್

ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್. ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಸಿನಿಮಾ ತಂಡ ಜುಲೈ 7ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದೆ. ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರತಂಡ ನೀಡುತ್ತಿರುವುದೇನು?

Read Full Story
07:10 PM (IST) Jul 02

Karnataka News Live 2nd july 2025 ಮೇಡ್‌ ಇನ್ ಚೀನಾ ಗೊಬ್ಬರ ಚೀಲಗಳ ಮೇಲೆ ಮೋದಿ ಫೋಟೋ - ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ!

ಚೀನಾದಿಂದ ರಸಗೊಬ್ಬರ ಪೂರೈಕೆ ನಿಂತಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Read Full Story
06:58 PM (IST) Jul 02

Karnataka News Live 2nd july 2025 ಜುಟ್ಟುಜುಟ್ಟು ಹಿಡಿದು ಕಿತ್ತಾಡಿದ ಮಹಿಳೆಯರು - ಮುಂಬೈ ಲೋಕಲ್ ರೈಲಿನಲ್ಲಿ ನಾರಿಶಕ್ತಿ ಅನಾವರಣ!

ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
06:47 PM (IST) Jul 02

Karnataka News Live 2nd july 2025 ಹೆಸರಿಗೆ ಬ್ರಹ್ಮಗಂಟು ಆದ್ರೆ, ಅಣ್ಣ-ತಂಗಿ ಸಂಬಂಧಕ್ಕೆ ಬೆಲೆನೇ ಇಲ್ವೇ! ಚಿರು-ಸಂಜನಾ ರೊಮ್ಯಾನ್ಸ್‌ಗೆ ಆಕ್ರೋಶ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರು ಮತ್ತು ಸಂಜನಾ ನಡುವಿನ ರೊಮ್ಯಾನ್ಸ್ ದೃಶ್ಯಗಳು ವಿವಾದಕ್ಕೆ ಕಾರಣವಾಗಿವೆ. ವರಸೆಯಲ್ಲಿ ಅಣ್ಣ-ತಂಗಿ ಆಗಿದ್ದರೂ ಕೆಲ ದೃಶ್ಯಗಳು ಸಂಪ್ರದಾಯ ಗಡಿ ಮೀರಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಚಿರು ಮತ್ತು ಸಂಜನಾ ರೊಮ್ಯಾನ್ಸ್ ದೃಶ್ಯ ಸಂಪ್ರದಾಯಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story