- Home
- Entertainment
- Cine World
- ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹುಟ್ಟುಹಬ್ಬಕ್ಕೆ ಸರ್ಪ್ರೈಸ್
ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹುಟ್ಟುಹಬ್ಬಕ್ಕೆ ಸರ್ಪ್ರೈಸ್
ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್. ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಸಿನಿಮಾ ತಂಡ ಜುಲೈ 7ಕ್ಕೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದೆ. ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಚಿತ್ರತಂಡ ನೀಡುತ್ತಿರುವುದೇನು?

ರಿಷಬ್ ಶೆಟ್ಟಿ ಕಾಂತಾರಾ ಸಿನಿಮಾ ಬಳಿಕ ತೆರೆ ಮೇಲೆ ಮತ್ತೊಂದು ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕಾಂತಾರಾ ಚಾಪ್ಟರ್ 1 ಸದ್ಯ ನಿರ್ಮಾಣ ಹಂತದಲ್ಲಿದೆ. ಇದರ ಜೊತೆಗೆ ರಿಷಬ್ ಶೆಟ್ಟಿ ಅಭಿನಯದ ಕೆಲ ಸಿನಿಮಾಗಳು ಶೂಟಿಂಗ್ ಹಾಗೂ ನಿರ್ಮಾಣ ಹಂತದಲ್ಲಿದೆ. ಈ ಪೈಕಿ ಬಾಲಿವುಡ್ ಸಿನಿಮಾ ಜೈ ಹನುಮಾನ್ ಮಹತ್ವದ ಘೋಷಣೆ ಮಾಡಿದೆ. ರಿಷಬ್ ಶೆಟ್ಟಿ ಹುಟ್ಟು ಹಬ್ಬದ ದಿನ ಅಂದರೆ ಜುಲೈ 7 ರಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಿದೆ.
ರಿಷಬ್ ಶೆಟ್ಟಿ ಅಭಿನಯದ ಜೈ ಹನುಮಾನ್ ಸಿನಿಮಾ ಹಿಂದಿ , ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪೌರಾಣಿಕ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಜೈ ಹನುಮಾನ್ ನಿರ್ದೇಶಕ ಪ್ರಶಾಂತ್ ವರ್ಮಾ ಇದೀಗ ಜುಲೈ 7 ರಂದು ಜೈ ಹನುಮಾನ್ ಸಿನಿಮಾದ ವಿಶೇಷ ವಿಡಿಯೋ ಒಂದು ಬಿಡುಗಡೆ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಹುಟ್ಟು ಹಬ್ಬದ ದಿನ ಈ ವಿಡಿಯೋವನ್ನು ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲಾಗುತ್ತಿದೆ.
ರಿಷಬ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಈ ವಿಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಇದು ಜೈ ಹನುಮಾನ್ ಸಿನಿಮಾದ ಟ್ರೇಲರ್‌ಗಿಂತ ಒಂದು ಹೆಜ್ಜೆ ಮುಂದಿರುವ ವಿಡಿಯೋ ಎಂದು ಚಿತ್ರ ತಂಡ ಹೇಳಿದೆ. ಜೈ ಹನುಮಾನ್ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಮೇಲೂ ಭಾರಿ ನಿರೀಕ್ಷೆ ಇದೆ. ಪ್ರಮುಖವಾಗಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣ ಕುತೂಹಲಗಳು ಹೆಚ್ಚಾಗಿದೆ.
ಕಾಂತಾರ ಮೂಲಕ ಗ್ರಾಮೀಣ ಹಾಗೂ ಸ್ಥಳೀಯ ದೈವಾರಾಧನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ರಿಷಬ್ ಶೆಟ್ಟಿ ಇದೀಗ ಜೈ ಹನುಮಾನ್ ಸಿನಿಮಾ ಮೂಲಕ ಹಿಂದೂ ಆರಾಧ್ಯ ದೇವರ ಪೌರಾಣಿಕ ಕತೆಯನ್ನು ತೆರೆ ಮೇಲೆ ಹೇಳುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಕುರಿತು ಜುಲೈ 7 ರಂದೇ ದಿನಾಂಕ ಹೊರಬೀಳುವ ಸಾಧ್ಯತೆ ಇದೆ.
ಜೈ ಹನುಮಾನ್ ಪ್ಯಾನ್ ಇಂಡಿಯಾ ಸಿನಿಮಾ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಕೆಲ ಪೋಸ್ಟರ್‌ಗಳು ಬಿಡುಗಡೆಯಾಗಿದೆ. ಜೊತೆಗೆ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಇದೀಗ ವಿಡಿಯೋಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಿಷಬ್ ಶೆಟ್ಟಿ ಹುಟ್ಟು ಹಬ್ಬಕ್ಕೆ ಕೆಲ ದಿನ ಮಾತ್ರ ಬಾಕಿ. ಹೀಗಾಗಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ.
ಇನ್ನು ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರಾ ಚಾಪ್ಟರ್ 1 ಸಿನಿಮಾ ಕೂಡ ನಿರ್ಮಾಣಗೊಳ್ಳುತ್ತಿದೆ. ಶೂಟಿಂಗ್ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅಕ್ಟೋಬರ್ 2 ರಂದು ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಯಾಗುತ್ತಿದೆ. ಕಾಂತಾರ ಸಿನಿಮಾ ದೇಶಾದ್ಯಂತ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಕೇವಲ 16 ಕೋಟಿ ಬಜೆಟ್ ಮೂಲಕ ನಿರ್ಮಾಣವಾದ ಸಿನಿಮಾ 400 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು.