ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೆಟ್ರೋ ರೈಲುಗಳು ಸೇರಿದಂತೆ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ವಾಹನಗಳು ಪ್ರಯಾಣಕ್ಕಿಂತ ಕೆಲವೊಮ್ಮೆ ಬೇರೆಯದ್ದೇ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತವೆ. ಅದೇ ರೀತಿ ಈಗ ಮುಂಬೈ ಲೋಕಲ್ ರೈಲೊಂದು ಹೆಣ್ಮಕ್ಕಳ ಕಿತ್ತಾಟದ ಕಾರಣಕ್ಕೆ ಸುದ್ದಿಯಾಗಿದೆ. ಮಹಿಳೆಯ ಬೋಗಿಯಲ್ಲೇ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಮಹಿಳೆಯರು ಪರಸ್ಪರರ ಕೂದಲನ್ನು ಹಿಡಿದು ಎಳೆದಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮಹಿಳೆಯರು ಕೆಟ್ಟ ಭಾಷೆಯಲ್ಲಿ ಪರಸ್ಪರ ಬೈದಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಸ್ಟೇಷನ್ ಕಡೆಗೆ ಹೋಗುತ್ತಿದ್ದ ಮುಂಬೈ ಲೋಕಲ್ ರೈಲಿನ ಮಹಿಳಾ ಭೋಗಿಯಲ್ಲಿ ಈ ಘಟನೆ ನಡೆದಿದೆ. ಉಪನಗರ ರೈಲ್ವೆ ಉಪನಗರ ರೈಲ್ವೆ ಪ್ರಯಾಣಿಕರ ಸಂಘದ ಅಧ್ಯಕ್ಷೆ ಲತಾ ಅರ್ಗಡೆ ಅವರ ಪ್ರಕಾರ, ರೈಲು ಡೊಂಬಿವ್ಲಿಯನ್ನು ದಾಟಿದ ನಂತರ ಜಗಳ ಮಹಿಳೆಯರ ಮಧ್ಯೆ ಜಗಳ ಆರಂಭವಾಗಿದೆ. ಬೆಳಿಗ್ಗೆ ಎಂಟೂವರೆ ಗಂಟೆಗೆ ರೈಲು ಡೊಂಬಿವ್ಲಿಯನ್ನು ತಲುಪಿದಾಗ ರೈಲಿನ ಬೋಗಿ ಆಗಲೇ ಸಂಪೂರ್ಣವಾಗಿ ಪ್ರಯಾಣಿಕರಿಂದ ತುಂಬಿತ್ತು. ಈ ನಡುವೆ ಮತ್ತಷ್ಟು ಪ್ರಯಾಣಿಕರು ರೈಲನ್ನು ಏರುವ ಪ್ರಯತ್ನ ಮಾಡಿದ್ದು, ಜನದಟ್ಟಣೆಯಿಂದಾಗಿ, ಪ್ರಯಾಣಿಕರು ಪರಸ್ಪರ ತಳ್ಳಾಡಲು ಪ್ರಾರಂಭಿಸಿದರು, ಇದು ಅಂತಿಮವಾಗಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ. ಆದರೆ ಮಹಿಳೆಯ ಈ ಕಿತ್ತಾಟಕ್ಕೆ ಸಂಬಂಧಿಸಿದಂತೆ ರೈಲ್ವೆ ಪ್ರತಿಕ್ರಿಯೆ ನೀಡಿಲ್ಲ.

ಇತ್ತೀಚಿನ ದಿನಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಕೆಲವು ದಿನಗಳ ಹಿಂದೆ ಚರ್ಚ್‌ಗೇಟ್-ವಿರಾರ್ ಸ್ಥಳೀಯ ರೈಲಿನಲ್ಲಿಯೂ ಇದೇ ರೀತಿಯ ವಾಗ್ವಾದ ನಡೆದ ಬಗ್ಗೆ ವರದಿಯಾಗಿತ್ತು. ಆ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮಹಿಳಾ ಪ್ರಯಾಣಿಕರಿಗೆ ಮಾತ್ರ ಮೀಸಲಾದ ಬೋಗಿಯಲ್ಲಿ ಮಹಿಳೆಯರೇ ಪರಸ್ಪರ ಹೊಡೆದಾಟ ನಡೆಸಿದ್ದರು.

ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಪ್ರಯಾಣಿಕರ ಸುರಕ್ಷತೆ, ಶಿಸ್ತು ಮತ್ತು ಪ್ರಯಾಣಿಕರು ಎದುರಿಸುವ ದೈನಂದಿನ ಸವಾಲುಗಳ ಬಗ್ಗೆ ಗಂಭೀರ ಆತಂಕವನ್ನು ಹುಟ್ಟುಹಾಕಿದೆ. ಸ್ಥಳೀಯ ರೈಲುಗಳಲ್ಲಿ ವಿಶೇಷವಾಗಿ ಪೀಕ್ ಅವರ್‌ನಲ್ಲಿ ಜನದಟ್ಟಣೆ ಯಾವಾಗಲೂ ಹೆಚ್ಚಿರುತ್ತದೆ. ಹೀಗಾಗಿ ರೈಲ್ವೆ ಏನಾದರೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು ಹಾಗೂ ಜಾಗೃತಿ ಮೂಡಿಸಬೇಕು ಎಂದು ಮುಂಬೈ ಮುಲುಂದ್ ನಿವಾಸಿ ರೂಪಾಲಿ ಶಾ ಹೇಳುತ್ತಾರೆ.

View post on Instagram