11:57 PM (IST) Apr 28

ತಮ್ಮ ಗುರುವಿನ ಮನಗೆದ್ದ ವೈಭವ್ ಸೂರ್ಯವಂಶಿ; ನಾನಂತೂ ಆನಂದಿಸಿದೆ ಎಂದ ಲಾರಾ!

ಕೇವಲ 14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್, ಕೇವಲ 35 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದರು.

ಪೂರ್ತಿ ಓದಿ
11:27 PM (IST) Apr 28

ಒಂದೇ ಮ್ಯಾಚ್‌ನಲ್ಲಿ ಮೂರು ಅಪರೂಪದ ದಾಖಲೆ ಬರೆದ 14 ವರ್ಷದ ವೈಭವ್!

14 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಸಿಡಿಸಿ ಹೊಸ ಮೈಲಿಗಲ್ಲು. ಈ ಆವೃತ್ತಿಯ ಐಪಿಎಲ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ಸಾಧನೆ.

ಪೂರ್ತಿ ಓದಿ
11:16 PM (IST) Apr 28

ವೈಭವ್‌ ಸೂರ್ಯವಂಶಿ 35 ಎಸೆತದ ಶತಕ, ಇನ್ನೂ 25 ಎಸೆತ ಬಾಕಿ ಇರುವಂತೆ 212 ಚಚ್ಚಿದ ರಾಜಸ್ಥಾನ!

14 ವರ್ಷದ ವೈಭವ್ ಸೂರ್ಯವಂಶಿ ಅವರ ಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ ಸತತ 5 ಸೋಲುಗಳ ನಂತರ ಜಯ ಸಾಧಿಸಿದೆ. ಗುಜರಾತ್ ತಂಡವು ಗಳಿಸಿದ್ದ 212 ರನ್‌ಗಳ ಗುರಿಯನ್ನು ರಾಜಸ್ಥಾನ್ ಕೇವಲ 15.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಲುಪಿತು.

ಪೂರ್ತಿ ಓದಿ
10:57 PM (IST) Apr 28

11 ಕಿ.ಮೀಗೆ ಕೇವಲ 166 ರೂ: ಪ್ರಾಮಾಣಿಕ ಆಟೋ ಚಾಲಕನಿಗೆ ಪ್ರಯಾಣಿಕನ ಸಲಾಂ!

ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು 11 ಕಿ.ಮೀ. ಪ್ರಯಾಣಕ್ಕೆ ಕೇವಲ ₹166 ಮಾತ್ರ ಪಡೆದಿದ್ದಾರೆ. ಇದು ಸಾಮಾನ್ಯವಾಗಿ ಹೆಚ್ಚಿನ ದರಗಳನ್ನು ವಿಧಿಸುವ ಆಟೋ ಚಾಲಕರಿಂದ ಭಿನ್ನವಾಗಿದೆ. ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪೂರ್ತಿ ಓದಿ
10:38 PM (IST) Apr 28

ವೈಭವ ತಾಂಡವ, ಟಿ20 ಇತಿಹಾಸ ಬರೆದ 14 ವರ್ಷದ ಸೂರ್ಯವಂಶಿ, ಕೇವಲ 35 ಎಸೆತಗಳಲ್ಲಿ ಶತಕ!

14 ವರ್ಷದ ವೈಭವ್‌ ಸೂರ್ಯವಂಶಿ ಐಪಿಎಲ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ, ಟಿ20 ಇತಿಹಾಸದಲ್ಲೂ ಕಿರಿಯ ಶತಕವೀರ ಎನಿಸಿಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್‌ ಪರ ಆಡಿದ ಅವರು 4 ಬೌಂಡರಿ ಹಾಗೂ 11 ಸಿಕ್ಸರ್‌ಗಳೊಂದಿಗೆ 101 ರನ್ ಬಾರಿಸಿದರು.

ಪೂರ್ತಿ ಓದಿ
10:21 PM (IST) Apr 28

8ನೇ ಕ್ಲಾಸ್‌ ಹುಡುಗನಿಂದ ಐಪಿಎಲ್‌ನಲ್ಲಿ ಫಿಫ್ಟಿ, ಇತಿಹಾಸ ಬರೆದ ವೈಭವ್‌ ಸೂರ್ಯವಂಶಿ!

ಎಂಟನೇ ತರಗತಿ ವಿದ್ಯಾರ್ಥಿ ವೈಭವ್‌ ಸೂರ್ಯವಂಶಿ ಐಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಪೂರ್ತಿ ಓದಿ
10:12 PM (IST) Apr 28

ಲಕ್ಷಾಂತರ ಮಂದಿ ಪ್ರಾಣ ಕಾಪಾಡಿದ್ದ ಭಾರತಕ್ಕೇ ಉಲ್ಟಾ ಹೊಡೆದ ಟರ್ಕಿ! ಪಾಕ್​ಗೆ ಶಸ್ತ್ರಾಸ್ತ್ರ ಪೂರೈಕೆ...

ಭೂಕಂಪದ ಸಮಯದಲ್ಲಿ ಟರ್ಕಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾದಾಗ ಭಾರತ ನೆರವಿಗೆ ಧಾವಿಸಿ ಲಕ್ಷಾಂತರ ಮಂದಿ ಜೀವ ಕಾಪಾಡಿತ್ತು. ಆದರೆ ಅದೀಗ ಪಾಕ್​ ಪರವಾಗಿ ನಿಂತಿದೆ! ಏನಿದು ಸ್ಟೋರಿ? 

ಪೂರ್ತಿ ಓದಿ
10:07 PM (IST) Apr 28

ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ

2025 ರ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. 71 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಲಾಯಿತು. ಉಳಿದವರಿಗೆ ಶೀಘ್ರದಲ್ಲೇ ಪ್ರತ್ಯೇಕ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಪೂರ್ತಿ ಓದಿ
08:35 PM (IST) Apr 28

ಪಾಕಿಸ್ತಾನ ನಮಗಿಂತ ಅರ್ಧ ಗಂಟೆ ಅಲ್ಲ, ಅರ್ಧ ದಶಕ ಹಿಂದೆ ಇದೆ: ಅಸಾದುದ್ದೀನ್‌ ಓವೈಸಿ!

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವನ್ನು ಓವೈಸಿ ತೀವ್ರವಾಗಿ ಟೀಕಿಸಿದ್ದಾರೆ. ಪಾಕಿಸ್ತಾನ ಭಾರತಕ್ಕಿಂತ 50 ವರ್ಷ ಹಿಂದಿದೆ ಮತ್ತು ಅದರ ಬಜೆಟ್ ಭಾರತದ ಮಿಲಿಟರಿ ಬಜೆಟ್‌ಗೆ ಸಮನಾಗಿರುವುದಿಲ್ಲ ಎಂದು ಹೇಳಿದ್ದಾರೆ.

ಪೂರ್ತಿ ಓದಿ
08:10 PM (IST) Apr 28

ಐಪಿಎಲ್‌ನ ಲೀಗ್‌ ಹಂತದಲ್ಲಿ ಒಮ್ಮೆ ಮಾತ್ರವೇ ಟೇಬಲ್‌ ಟಾಪರ್‌ ಆಗಿತ್ತು ಆರ್‌ಸಿಬಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್‌ನಲ್ಲಿ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಆಡಿದ ಆರು ಪಂದ್ಯಗಳಲ್ಲೂ ಗೆಲುವು ಸಾಧಿಸಿರುವುದು ಗಮನಾರ್ಹ. 2011ರ ನಂತರ ಮೊದಲ ಬಾರಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ
07:34 PM (IST) Apr 28

'ಉಗ್ರರನ್ನು ಕ್ಷಮಿಸುವುದು ದೇವರಿಗೆ ಬಿಟ್ಟದ್ದು, ಆದರೆ ಅವರನ್ನು ಆತನ ಬಳಿಗೆ ಕಳುಹಿಸುವುದು ನನಗೆ ಸೇರಿದ್ದು!'

ಹಿಂದೂಗಳನ್ನು ಗುರಿಯಾಗಿಸಿಕೊಂಡು ಪಹಲ್ಗಾಮ್​ನಲ್ಲಿ ನಡೆಸಿರುವ ನರಮೇಧದ ನಡುವೆಯೇ ರಷ್ಯಾ ಅಧ್ಯಕ್ಷರ ಡೈಲಾಗ್​ ಒಂದು ವೈರಲ್​ ಆಗ್ತಿದೆ. ಏನದು? 

ಪೂರ್ತಿ ಓದಿ
06:54 PM (IST) Apr 28

ಪಹಲ್ಗಾಮ್‌ ಟೆರರಿಸ್ಟ್‌ ದಾಳಿಯ ಮತ್ತೊಂದು ಭಯಾನಕ ವಿಡಿಯೋ ವೈರಲ್‌

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಸ ವಿಡಿಯೋ ವೈರಲ್ ಆಗಿದ್ದು, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದೆ. ಜಿಪ್‌ಲೈನ್ ಸವಾರಿ ಮಾಡುತ್ತಿದ್ದ ವ್ಯಕ್ತಿಯ ದೃಶ್ಯದಲ್ಲಿ ಗುಂಡಿನ ದಾಳಿ ಮತ್ತು ಜನರು ಓಡಿಹೋಗುವುದು ಕಂಡುಬಂದಿದೆ. ಜಿಪ್‌ಲೈನ್ ಆಪರೇಟರ್ “ಅಲ್ಲಾಹು ಅಕ್ಬರ್” ಎಂದು ಕೂಗುತ್ತಿರುವುದು ಕೂಡ ದಾಖಲಾಗಿದೆ.

ಪೂರ್ತಿ ಓದಿ
06:12 PM (IST) Apr 28

ಸೊಂಪಾದ ರೇಷ್ಮೆಯಂತಹ ಹೊಳೆಯುವ ಕೂದಲಿಗಾಗಿ ಬಳಸಿ ಈರುಳ್ಳಿ ಎಣ್ಣೆ: ಇಲ್ಲಿದೆ ರೆಸಿಪಿ

ಕೂದಲು ಉದುರುವ ಅಥವಾ ಒಣ ಕೂದಲ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಬಳಸಿ.

ಪೂರ್ತಿ ಓದಿ
06:02 PM (IST) Apr 28

ಉಕ್ರೇನ್‌ನಲ್ಲಿ ಮೂರು ದಿನಗಳ ಕದನ ವಿರಾಮ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌!

ಎರಡನೇ ಮಹಾಯುದ್ಧದ ವಿಜಯೋತ್ಸವದ ಆಚರಣೆಯೊಂದಿಗೆ ಹೊಂದಿಕೆಯಾಗುವಂತೆ ಮೇ 8 ರಿಂದ ಮೇ 11 ರವರೆಗೆ ರಷ್ಯಾ ಉಕ್ರೇನ್‌ನಲ್ಲಿ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿದೆ. "ಮಾನವೀಯ ಪರಿಗಣನೆಗಳ" ಆಧಾರದ ಮೇಲೆ ಕದನ ವಿರಾಮ ಘೋಷಿಸಲಾಗಿದೆ ಎಂದು ಕ್ರೆಮ್ಲಿನ್ ಹೇಳಿದೆ.

ಪೂರ್ತಿ ಓದಿ
05:43 PM (IST) Apr 28

ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಗೆ ಒಲವು ತೋರುತ್ತಿದ್ದೆ ಆದರೆ ಈಗ : ಫಾರುಕ್ ಅಬ್ದುಲ್ಲಾ ಹೇಳಿದ್ದೇನು?

 ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲಾ, ಕಾಶ್ಮೀರಿಗಳು 1947 ರಲ್ಲೇ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದರು.

ಪೂರ್ತಿ ಓದಿ
05:43 PM (IST) Apr 28

ಶಾಸಕ ವಿನಯ್ ಕುಲಕರ್ಣಿಗೂ ಉಂಟು, ಬಂಗಾರದ ವಂಚಕಿ ಐಶ್ವರ್ಯ ಗೌಡ ನಂಟು!

ಐಶ್ವರ್ಯ ಗೌಡ ವಿನಯ್ ಕುಲಕರ್ಣಿ ಸೇರಿದಂತೆ ಹಲವು ರಾಜಕಾರಣಿಗಳ ಜೊತೆ ಕೋಟಿ ಕೋಟಿ ಹಣದ ವ್ಯವಹಾರ ಮಾಡಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನು ಟ್ರ್ಯಾಪ್ ಮಾಡಿದ್ದಲ್ಲದೆ, ಕೇವಲ 3 ವರ್ಷಗಳಲ್ಲಿ 75 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದರೂ ಸರ್ಕಾರಕ್ಕೆ ತೆರಿಗೆ ಕಟ್ಟಿಲ್ಲ.

ಪೂರ್ತಿ ಓದಿ
05:32 PM (IST) Apr 28

ಅಫ್ರಿದಿ ಮೇಲೆ ತಿರುಗಿಬಿದ್ದ ಅಸಾದುದ್ದೀನ್ ಒವೈಸಿ! ಅವನೊಬ್ಬ ಜೋಕರ್ ಎಂದ AIMIM ಮುಖ್ಯಸ್ಥ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಶಾಹಿದ್ ಅಫ್ರಿದಿ ಭಾರತದ ಸೇನೆಯ ಮೇಲೆ ಆರೋಪಿಸಿದ್ದಾರೆ. ಈ ಹೇಳಿಕೆಗೆ ಅಸಾದುದ್ದೀನ್ ಒವೈಸಿ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಒವೈಸಿ, ಅಫ್ರಿದಿಯನ್ನು 'ಜೋಕರ್' ಎಂದು ಕರೆದಿದ್ದಾರೆ.

ಪೂರ್ತಿ ಓದಿ
05:18 PM (IST) Apr 28

ತಹವ್ವೂರ್ ರಾಣಾ ಕಸ್ಟಡಿ 12 ದಿನ ವಿಸ್ತರಣೆ

26/11 ಭಯೋತ್ಪಾದನಾ ದಾಳಿಯ ಆರೋಪಿ ತಹವ್ವೂರ್ ರಾಣಾ ಅವರ ಕಸ್ಟಡಿಯನ್ನು ಎನ್‌ಐಎ ನ್ಯಾಯಾಲಯವು 12 ದಿನಗಳವರೆಗೆ ವಿಸ್ತರಿಸಿದೆ. ರಾಣಾ ಅವರನ್ನು ಹೆಚ್ಚಿನ ದಾಖಲೆಗಳೊಂದಿಗೆ ಎದುರಿಸಲು ಎನ್‌ಐಎಗೆ ಹೆಚ್ಚಿನ ಸಮಯ ಬೇಕಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.

ಪೂರ್ತಿ ಓದಿ
05:13 PM (IST) Apr 28

ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿ ನೀರು ನಿಲ್ಲಿಸಲು ಮೋದಿಗೆ ಸಾಧ್ಯವಿಲ್ಲ; ರಹೀಂ ಖಾನ್

ಸಚಿವ ರಹೀಂ ಖಾನ್ ಅವರು ಪ್ರಧಾನಿ ಮೋದಿ ಅವರಿಂದ ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಅವರು, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೇಂದ್ರ ಸರ್ಕಾರ ಸಮುದಾಯಗಳನ್ನು ಇಬ್ಭಾಗ ಮಾಡುತ್ತಿದೆ ಎಂದು ಆರೋಪಿಸಿದರು.

ಪೂರ್ತಿ ಓದಿ
04:55 PM (IST) Apr 28

ಪಾಕ್ ಡಿಸೈನರ್‌ ಜೊತೆ ಪೋಸ್: ನಟಿ ಕರೀನಾ ಕಪೂರ್ ದುಬೈ ಫೋಟೋಶೂಟ್‌ಗೆ ಭಾರಿ ಆಕ್ರೋಶ

ಪಹಲ್ಗಾಮ್ ದಾಳಿಯ ನಂತರ ದುಬೈನಲ್ಲಿ ಪಾಕಿಸ್ತಾನ ಮೂಲದ ಡಿಸೈನರ್ ಜೊತೆ ಫೋಟೋಗೆ ಪೋಸ್ ನೀಡಿದ ಕರೀನಾ ಕಪೂರ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಪೂರ್ತಿ ಓದಿ